ಜೆಹಾಂಗೀರ್ ಆರ್ಟ್ ಗ್ಯಾಲರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಜೆಹಾಂಗೀರ್‍ ಆರ್ಟ್ ಗ್ಯಾಲರಿ'

"'ಜೆಹಾಂಗೀರ್ ಆರ್ಟ್ ಗ್ಯಾಲರಿ"',[೧] ಮುಂಬಯಿನ ಒಂದು ಪ್ರತಿಷ್ಠಿತ ವರ್ಣಚಿತ್ರ, ಕಲಾಕಾರರ, ಶಿಲ್ಪ ಕಲಾವಿದರ, ಕಲಾರಸಿಕರ, ಹಾಗೂ ಪ್ರತಿಭಾವಂತ, ಉದಯೋನ್ಮುಖ ಕಲಾವಿದರು ತಮ್ಮ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಬಹುದು. ಹಳದಿ ಬಣ್ಣದ ಕಲ್ಲುಗಳಿಂದ ನಿರ್ಮಾಣಮಾಡಿರುವ, ಸಮರ್ಪಕವಾಗಿ, ಅಚ್ಚುಕಟ್ಟಾಗಿ, ಸಜಾವಟ್ಟಾಗಿರುವ, ಈಗಾಗಲೇ ಪ್ರಸಿದ್ಧಿಪಡೆದ ಕಲಾನಿಪುಣರಿಗೆ, ಹಾಗೂ ಚಿತ್ರಕಲೆಯಲ್ಲಿ ಹೆಚ್ಚಿನದನ್ನು ಸಾಧಿಸಿ, ಅದನ್ನು ಕಲಾ-ರಸಿಕರಿಗೆ, ತೋರಿಸಬಯಸುವವರಿಗೆ, "ಕಲಾಕ್ಯಾನ್ ವಾಸ್," ನ್ನು ಮಾರಾಟಮಾಡುವರಿಗೆ, "ಕಲಾಕಾಶಿ" ಎಂದು ಹೆಸರು ಗಳಿಸಿದೆ.

೧೯೫೨ ರಲ್ಲಿ ಸ್ಥಾಪನೆ[ಬದಲಾಯಿಸಿ]

ಇಂತಹ, " ವಿಶ್ವವಿಖ್ಯಾತ-ಕಲಾಪ್ರದರ್ಶನ ಕೇಂದ್ರ ", ದ ಕಲ್ಪನೆ, ಬಂದಿದ್ದು, ಕನ್ನಡದಕಲಾವಿದ 'ಕೆ. ಕೆ. ಹೆಬ್ಬಾರ್‌', ಹಾಗೂ, ಪ್ರಖಾತ ವಿಜ್ಞಾನಿ, ಮತ್ತು ಕಲಾವಿದ, 'ಹೋಮಿ ಜಹಂಗೀರ್ ಭಾಬಾ,'ರವರ ಆಸೆಯ ಕರೆಯಮೇರೆಗೆ 'ಜೆಹಾಂಗೀರ್ ಆರ್ಟ್ ಗ್ಯಾಲರಿ' ಅಸ್ತಿತ್ವಕ್ಕೆ ಬಂತು. 'ಸರ್. ಕವಾಸ್ ಜಿ ಜೆಹಾಂಗೀರ್,' ರವರ ಉದಾರ ಕಲಾಪೋಷಣೆಯ ಸಹಕಾರದಿಂದ, ೧೯೫೨ ರಲ್ಲಿ ಇದು ರೂಪುಗೊಂಡಿತು. ಈ ಪ್ರಖ್ಯಾತ ಕಲಾಮಂದಿರದ ನಿರ್ವಾಹಕರು, " ಬಾಂಬೆ ಆರ್ಟ್ ಸೊಸೈಟಿ,' ಯವರು. 'ಜೆಹಾಂಗೀರ್ ಆರ್ಟ್ ಪ್ರದರ್ಶನಾಲಯ,' ದ ಪೂರ್ಣ ವೆಚ್ಚವನ್ನು 'ಸರ್ ಜೆಹಾಂಗೀರ್ ,' ರವರು ವಹಿಸಿಕೊಂಡರು. 'ಕಾಲಾಘೋಡ,' ಇಲಾಖೆಯಲ್ಲಿ ಸ್ಥಾಪಿಸಲಾದ ಈ "ಕಲಾ-ಪ್ರದರ್ಶನ ತಾಣ" ದಲ್ಲಿ ತಮ್ಮ ಕಲೆಯ ಪರಿಚಯಮಾಡಿಸುವ ಆಸೆಯಿಂದ ಬಂದವರಿಗೆ ಒಳ್ಳೆಯ ಸೌಕರ್ಯಗಳು ಲಭ್ಯವಿವೆ. ಹತ್ತಿರದಲ್ಲಿ ಸುಪ್ರಸಿದ್ಧ"ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯೆಮ್,ಮುಂಬಯಿ" ಇದೆ. "ಜೆಹಾಂಗೀರ್ ಆರ್ಟ್ ಗ್ಯಾಲರಿ" ಮತ್ತು ೪ 'ಎಕ್ಸಿಬಿಶನ್ ಹಾಲ್, ಗಳನ್ನು ಹೊಂದಿದೆ. 'ಭಾರಿ ಕಲೆಯ ಪೋಶಕ ಸಂಸ್ಥೆ,ಯಾದ ಇಲ್ಲಿ 'ಭಾರತೀಯ ಚಿತ್ರಕಲಾ ಪರಂಪರೆ'ಯನ್ನು ಕಾಣಬಹುದು.

ಕಾಲಾಘೋಡಾ ಫೆಸ್ಟಿವಲ್[ಬದಲಾಯಿಸಿ]

30, ಅಕ್ಟೋಬರ್ 1998, ರಲ್ಲಿ ಸ್ಥಾಪಿತವಾದ 'ಕಾಲಾಘೋಡಾ ಅಸೋಸಿಯೇಷನ್' ನವರು ಆಯೋಜಿಸುವ 'ಕಾಲಾಘೋಡಾ ಫೆಸ್ಟಿವಲ್' ಬಹಳ ಮಹತ್ವದ ಫೆಸ್ಟಿವಲ್ ಆಗಿದೆ. 'ಜಹಾಂಗೀರ್ ಆರ್ಟ್ ಗ್ಯಾಲರಿ', ಆ ಸಮಯದಲ್ಲಿ ಬಹಳ ಮಹತ್ವದ ಕಾರ್ಯಗಳನ್ನು ನಿಭಾಯಿಸುತ್ತದೆ. ಮುಂಬಯಿನ ನಾಗರಿಕರಿಗೆ ಮತ್ತು ಕಲಾರಾಧಕರಿಗೆ ಇದು ಒಳ್ಳೆಯ ಸ್ಥಳವಾಗಿದೆ. [೨]

'ಸಮೋವರ್ ಉಪಹಾರ ಗೃಹ'[ಬದಲಾಯಿಸಿ]

'ಸಮೋವರ್,' ಎಂಬ ಅತಿ-ಸುವ್ಯವಸ್ಥಿತ, ಅತ್ಯಂತ ಅಚ್ಚುಕಟ್ಟು, ಹಾಗೂ ಕಲಾವಂತರಿಗೆ, ಕುಳಿತು ಸಮಾಲೋಚಿಸಲು ಅನುಕೂಲಹೊಂದಿದ ಮೆಚ್ಚಿನ 'ಕೆಫೆ,' ಇದೆ. ' ೧೯೭೦ ರ ದಶಕದ,'ಸಮಾಜವಾದ,' ದ ಹೆಜ್ಜೆಯ ಗುರುತುಗಳನ್ನು ನಾವು ಇಲ್ಲಿ ಕಾಣಬಹುದು. ಅತ್ಯಂತ ಸುಪ್ರಸಿದ್ಧ ಕಲಾವಿದರು ಉಪಹಾರ ಗೃಹದಲ್ಲಿ ಚಹಾಸೇವಿಸಲು ಬರುತ್ತಾರೆ. ಇಲ್ಲಿ ಅಂತಹ ಪ್ರತಿಭಾನ್ವಿತ, ಕಲಾರಾಧಕರೆಲ್ಲಾ ಬಂದು, ತಮ್ಮ ಯೋಗದಾನವನ್ನು ಕೊಡುತ್ತಾರೆ. ಇಲ್ಲಿನ ಯಾವ 'ಕಲಾ-ಶಿಲ್ಪಪ್ರದರ್ಶನ,' ಗಳಿಗೂ, 'ಪ್ರವೇಶ ಶುಲ್ಕ'ವಿಲ್ಲ.

ಸಮೋವರ್ ಈಗ ಮುಚ್ಚಲ್ಪಟ್ಟಿದೆ[ಬದಲಾಯಿಸಿ]

'ಜಹಾಂಗೀರ್ ಆರ್ಟ್ ಗ್ಯಾಲರಿ',ಗೆ ಸ್ಥಳದ ಕೊರತೆಯಿಂದಾಗಿ ಸಮೋವರ್[೩] ನ್ನು ಮುಚ್ಚುವ ತೀರ್ಮಾನ ತೆಗೆದುಕೊಳ್ಳಬೇಕಾಯಿತು. ಹೊಸ ಹೊಸ ಪ್ರದರ್ಶನಗಳನ್ನು ಆಯೋಜಿಸಲು ಇರುವಜಾಗವನ್ನು ಅತಿ ಎಚ್ಚರಿಕೆಯಿಂದ ವಿನಿಯೋಗಿಸಲಾಗಿದೆ. ೫೦ ವರ್ಷಗಳ ಹಿಂದೆ ಉಶಾ ಖನ್ನ ಎಂಬ ಯುವತಿಯೊಬ್ಬಳು 'ಸಮೋವರ್ ರೆಸ್ಟಾರೆಂಟ್' ನ್ನು ಪ್ರಾರಂಭಿಸಿದ್ದರು. 'ಉಶಾಖನ್ನ' ಆಗಿನ ಕಾಲದ ಬಾಲಿವುಡ್ ನ ಅತ್ಯಂತ ಮೇರು ನಟನಾಗಿ ಹೆಸರುಗಳಿಸಿದ್ದ ನಟ, ಬಲ್ರಾಜ್ ಸಹಾನಿಯವರ ಅಣ್ಣನ ಮಗಳು. ಜುಹು, ಜಿಲ್ಲೆಯಲ್ಲಿ ವಾಸವಾಗಿರುವ ಉಶಾರವರಿಗೆ, 'ಮಾಳವಿಕಾ ಸಾಂಘ್ವಿ', ಸೇರಿದಂತೆ, ೩ ಚಿಕ್ಕ ಮಕ್ಕಳಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. "Jehangir Art Gallery". Archived from the original on 2016-06-20. Retrieved 2015-02-18.
  2. 'ಕಾಲಾಘೋಡಾ ಅಸೋಸಿಯೇಷನ್', ಮತ್ತು 'ಜಹಾಂಗೀರ್ ಆರ್ಟ್ ಗ್ಯಾಲರಿ' ಯ ಪಾತ್ರ ಬಹಳ ಮುಖ್ಯವಾದದ್ದು
  3. Indian express, 31st March 2015, 'Mumbai's Cafe Samovar Shuts After Five Decades'[ಶಾಶ್ವತವಾಗಿ ಮಡಿದ ಕೊಂಡಿ]