ವಿಷಯಕ್ಕೆ ಹೋಗು

ಜೆ.ಕೆ.ರೌಲಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೆ.ಕೆ.ರೌಲಿಂಗ್
Rowling at the White House Easter Egg Roll, 2010
ಜನನಜೋನ್ ರೌಲಿಂಗ್
೩೧-೦೭-೧೯೬೫
ಇಂಗ್ಲೆಂಡಿನ ಯತೆ, ಘ್ಲೊಚೆಸ್ತೆರ್ಶಿರ್
ಕಾವ್ಯನಾಮ
  • ಜೆ.ಕೆ.ರೌಲಿಂಗ್
  • ರಾಬರ್ಟ್ ಗಾಲ್ಬ್ರೈಟ್
ವೃತ್ತಿಕಾದಂಬರಿಕಾರ್ತಿ,ಚಿತ್ರಕಥೆಗಾರ್ತಿ,ಚಲನಚಿತ್ರ ನಿರ್ಮಾಪಕಿ
ರಾಷ್ಟ್ರೀಯತೆಬ್ರಿಟಿಷ್
ವಿದ್ಯಾಭ್ಯಾಸಬ್ಯಾಚುಲರ್ ಆಫ್ ಆರ್ಟ್ಸ್
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ
ಕಾಲ೧೯೯೭
ಪ್ರಕಾರ/ಶೈಲಿFantasy, drama, young-adult fiction, tragicomedy, crime fiction
ಪ್ರಮುಖ ಕೆಲಸ(ಗಳು)ಹ್ಯಾರಿ ಪಾಟರ್ ಸರಣ್ಣಿ
ಬಾಳ ಸಂಗಾತಿ
  • ಜೋರ್ಜ್ ಆರ್ಯಾಂಟ್ಸ್ (ವಿವಾಹ:1992)

  • ನೀಲ್ ಮೈಕೆಲ್ ಮುರ್ರೆಯ (ವಿವಾಹ:2001)

ಮಕ್ಕಳು

ಪ್ರಭಾವಗಳು

ಸಹಿ

[<span%20class="url">.com jkrowling.com%20jkrowling<wbr/>.com]</span>]

ಜೋನ್ ರೌಲಿಂಗ್ ಅಥವಾ ಜೆ.ಕೆ.ರೌಲಿಂಗ್ ಶ್ರೇಷ್ಠ ಬ್ರಿಟಿಷ್ ಕಾದಂಬರಿಕಾರ್ತಿ.ಚಿತ್ರಕಥೆಗಾರ್ತಿ ಮತ್ತು ಚಲನಚಿತ್ರ ನಿರ್ಮಾಪಕಿಯೂ ಹೌದು.ಅವರ ತಂದೆ ಪೀಟರ್ ಜೇಮ್ಸ್ ರೌಲಿಂಗ್ ಹಾಗು ತಾಯಿ ಆನ್ ರೌಲಿಂಗ್. ರೌಲಿಂಗ್ ಅವರ ತಂದೆಯವರು ರೋಲ್ಸ್-ರಾಯ್ಸ್ ಎಂಜಿನಿಯರ್. ಅವರ ತಾಯಿ ವಿಜ್ಞಾನ ತಂತ್ರಜ್ಞೆ.

ಇವರು ೩೧ನೇ ಜುಲೈ ೧೯೬೫ರಲ್ಲಿ ಇಂಗ್ಲೆಂಡಿನ ಯತೆ, ಘ್ಲೊಚೆಸ್ತೆರ್ಶಿರ್ ನಲ್ಲಿ ಜನಿಸಿದರು.

ಬಾಲ್ಯ

[ಬದಲಾಯಿಸಿ]

ಬಾಲ್ಯದಿಂದಲೇ ರೌಲಿಂಗವರು ಫ್ಯಾಂಟಸಿ ಕಥೆಗಳನ್ನು ಬರೆದು ತಮ್ಮ ಸಹೋದರರಿಗೆ ಓದುತ್ತಿದ್ದರು. ಜೆ.ಕೆ.ರೌಲಿಂಗ್ ಅವರು ತಮ್ಮ ಯವ್ವನವನ್ನು ಅತೃಪ್ತಿಯಿಂದ ಕಳೆದುದ್ದಾಗಿ ಹೇಳಿದ್ದಾರೆ. ಆ ಸಮಯದಲ್ಲಿ ಅವರ ಚಿಕ್ಕಮ್ಮ ನೀಡಿದ ಜೆಸಿಕ್ಕಾ ಮಿಟ್ ಫೋರ್ಡ್ ಅವರ 'ಹೋಂನ್ಸ್ ಮತ್ತು ರೆಬೆಲ್ಸ್' ಎಂಬ ಆತ್ಮ ಚರಿತ್ರೆ ಜೀವನಕ್ಕೆ ಹೊಸ ತಿರುವನ್ನು ನೀಡಿತು.

ವಿದ್ಯಾಭ್ಯಾಸ

[ಬದಲಾಯಿಸಿ]

ಸ್ಟೀವ್ ಎಡ್ದಿಯವರ ಸಹಾಯದಿಂದ ರೌಲಿಂಗವರು ಇಂಗ್ಲಿಷ್ ಭಾಷೆಯನ್ನು ಕಲಿತರು. ಅವರು ಸೆಂಟ್ ಮೈಕಲ್ಸ್ ಶಾಲೆಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ ನಂತರ ವ್ಯೇದೆಯನ್ ವಿದ್ಯಾಸಂಸ್ಥೆಯಲ್ಲಿ ತಮ್ಮ ಪ್ರೌಢ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು.ವಿಶ್ವವಿದ್ಯಾಲಯದಿಂದ ತೇರ್ಗಡೆಯಾದ ಏಳು ವರ್ಷಗಳ ನಂತರ ರೌಲಿಂಗ್ ತಮ್ಮ ಜೀವನದಲ್ಲಿ ವಿಫಲತೆಯನ್ನು ಕಂಡರು. ಆದರೆ ಈ ವೈಫಲ್ಯತೆಯಿಂದ ವಿಮೋಚನೆ ಹೊಂದಿದರೆ ಮಾತ್ರ ತಮ್ಮ ಬರವಣಿಗೆಯ ಮೇಲೆ ಗಮನ ಕೊಡಬಹುದೆಂದು ನಂಬಿದ್ದರು. ೧೯೮೨ರಲ್ಲಿ ರೌಲಿಂಗವರು 'ಆಕ್ಸ್ಪರ್ಡ್ ಯೂನಿವರ್ಸಿಟಿಯಲ್ಲಿ' ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಂಡರು, ಆದರೆ ಅವರಿಗೆ ಅದೇ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಲು ಅವಕಾಶ ನೀಡಲಿಲ್ಲ.ಹೀಗಾಗಿ ಅವರು ಅದೇ ವರ್ಷ ಎಕ್ಸ್ಟರ್ನ್ ಯೂನಿವರ್ಸಿಟಿಯಲ್ಲಿ ಬಿ.ಎ ಫ಼್ರೆಂಚ್ ಪದವಿಯನ್ನು ಆರಂಭಿಸಿ ೧೯೮೬ರಲ್ಲಿ ಪದವಿ ಪಡೆದು ಅಮ್ನೆಸ್ಟಿ ಇಂಟರ್ನ್ಯಾಷನಲ್ ನಲ್ಲಿ ಸಂಶೋಧಕರಾಗಿ ಕೆಲಸ ಮಾಡಲು ಲಂಡನ್ ಗೆ ತೆರಳಿದರು. ೧೯೯೦ರಲ್ಲಿ, ನಾಲ್ಕು ಗಂಟೆ ತಡವಾಗಿದ್ದ ರೈಲ್ಲು ಪ್ರವಾಸದಲ್ಲಿ ಅವರಿಗೆ ಮಾಂತ್ರಿಕ ಶಾಲೆಗೆ ಹೋಗುವ ಬಾಲಕನ ಒಂದು ಕಥೆಯ ಕಲ್ಪನೆ ಮನಸ್ಸಿಗೆ ಬಂದಿತು. ನಂತರ ಈ ಕಥೆಯನ್ನು ಅವರು ಬರೆಯಲು ಆರಂಭಿಸಿದರು. ಇದ್ದಕ್ಕಿದ್ದಂತೆ ಡಿಸೆಂಬರಲ್ಲಿ, ರೌಲಿಂಗವರ ತಾಯಿ ಹತ್ತು ವರ್ಷಗಳಿಂದ ಬಳಲುತ್ತಿರುವ ಅಂಗಾಂಶ ಗಟ್ಟಿಯಾಗುವ ರೋಗದಿಂದ (ಮಲ್ಟಿಪ್ಲ್ ಸ್ಕ್ಲೆರೋಸಿಸ್) ತೀರಿಕೊಂಡರು.ತಾಯಿಯ ಸಾವು ರೌಲಿಂಗವರ ಬರವಣಿಗೆಯ ಮೇಲೆ ಹೆಚ್ಚು ಪ್ರಭಾವ ಬೀರಿತು.

ಮದುವೆ

[ಬದಲಾಯಿಸಿ]

೧೯೯೨ರ ಅಕ್ಟೋಬರ್ ೧೬ರಂದು , ಜೆ.ಕೆ.ರೌಲಿಂಗ್ ಪೋರ್ಚುಗೀಸ್ ಕಿರುತೆರೆ ಪತ್ರಕರ್ತನಾದ ಜೋರ್ಜ್ ಆರ್ಯಾಂಟ್ಸ್ ಅವರನ್ನು ಮದುವೆಯಾದರು.ದುರದೃಷ್ಟಶಾತ್ ಕೆಲವು ವರ್ಷಗಳ ನಂತರ ಅವರು ವಿಚ್ಛೇದನೆ ಪಡೆದರು. ರೌಲಿಂಗವರು ದಾಂಪತ್ಯ ಜೀವನದಲ್ಲಿ ದೌರ್ಜನ್ಯಕ್ಕೆ ಒಳಗಾದವರು ಎಂದು ಜೀವನಚರಿತ್ರಕಾರರು ಹೇಳಿದ್ದಾರೆ. ಡಿಸೆಂಬರ್ ೧೯೯೩ರಲ್ಲಿ, ಅವರ ಮಗಳಾದ ಜೆಸ್ಸಿಕಾ ಇಸಾಬೆಲ್ ರೌಲಿಂಗ್ ಆರ್ಯೂಂಟ್ಸ್ ಜೊತೆ ಸ್ಕಾಟ್ಲೆಂಡಿನಲ್ಲಿರುವ ತಮ್ಮ ಸಹೋದರಿಯ ಬಳಿಗೆ ತೆರಳಿದರು. ೨೦೦೧ರ ಡಿಸೆಂಬರ್ ೨೬ರಂದು , ರೌಲಿಂಗವರು ನೀಲ್ ಮೈಕೆಲ್ ಮುರ್ರೆಯ ಜೊತೆ ಎರಡನೆಯ ಮದುವೆಯಾದರು.ಇವರ ಇಬ್ಬರು ಮಕ್ಕಳು ಡೇವಿಡ್ ಗಾರ್ಡನ್ ರೌಲಿಂಗ್ ಮುರ್ರೆ ಹಾಗು ಮೆಕೆನ್ಜ್ಯ್ ಜೀನ್ ರೌಲಿಂಗ್ ಮುರ್ರೆ. ೨೦೧೪ ಜೂನ್ ತಿಂಗಳಿನಿಂದ ರೌಲಿಂಗವರು ತಮ್ಮ ಕುಟುಂಬದ ಜೊತೆ ಸ್ಕಾಟ್ಲೆಂಡಲ್ಲಿ ನೆಲಸಿದ್ದಾರೆ.

ಪುಸ್ತಕ ಮತ್ತು ಪ್ರಶಸ್ತಿ

[ಬದಲಾಯಿಸಿ]

೧೯೯೫ರಲ್ಲಿ, ಜೆ.ಕೆ.ರೌಲಿಂಗವರು 'ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್' ಎಂಬ ಪುಸ್ತಕವನ್ನು ಬರೆದರು.ಅವರು ಹ್ಯಾರಿ ಪಾಟರ್ ಜನಪ್ರಿಯ ಪುಸ್ತಕದ ಲೇಖಕಿಯಾಗಿ ಖ್ಯಾತಗೊಂಡಿದ್ದಾರೆ. ಈ ಪುಸ್ತಕ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗಿದೆ . ಅವರ ಈ ಪುಸ್ತಕ ಪ್ರಪಂಚದಾದ್ಯಂತ ಗಮನ ಸೆಳೆದಿರುವುದಲ್ಲದೆ, ಹಲವಾರು ಪ್ರಶಸ್ತಿಗಳು ಲಭಿಸಿವೆ. ರೌಲಿಂಗ್ ಅವರು ಕಥೆಗಳನ್ನು ಬರೆಯುವ ಮೊದಲು ಸಂಶೋಧಕರಾಗಿ ಮತ್ತು ದ್ವಿಭಾಷಾ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಐದು ತಿಂಗಳ ನಂತರ ಈ ಪುಸ್ತಕಕ್ಕೆ 'ನೆಸ್ಲೆ ಸ್ಮಾರ್ಟೀಸ್ ಬುಕ್ ಪ್ರೈಸ್' ದೊರಕಿತು. ಇದು ಅವರಿಗೆ ಸಿಕ್ಕ ಮೊದಲ ಪ್ರಶಸ್ತಿ. ಅನಂತರ ಅವರ ಕಾದಂಬರಿಗೆ ' ಬ್ರಿಟಿಷ್ ಬುಕ್ ಅವಾರ್ಡ್' ಹಾಗು 'ಚಿಲ್ದ್ರೆನ್ ಬುಕ್ ಅವಾರ್ಡ್' ಪ್ರಶಸ್ತಿಗಳು ದೊರೆತವು.'ಹ್ಯಾರಿ ಪಾಟರ್ ಅಂಡ್ ದಿ ಪ್ರಿಸನರ್ ಆಫ್ ಅಝ್ಕಬಾನ್',ರೌಲಿಂಗವರ ಪುಸ್ತಕಕ್ಕೆ 'ವಿಟ್ಬ್ರೆಡ್ ಮಕ್ಕಳ ಪುಸ್ತಕ' ಎಂಬ ಪ್ರಶಸ್ತಿ ಸಿಕ್ಕಿದೆ .ರೌಲಿಂಗವರ 'ಹ್ಯಾರಿ ಪಾಟರ್ ಅಂಡ್ ದಿ ಛೇಂಬರ್ ಆಫ್ ಸೀಕ್ರೇಟ್ಸ್' ಹಾಗೂ 'ಹ್ಯಾರಿ ಪಾಟರ್ ಅಂಡ್ ದಿ ಪ್ರಿಸನರ್ ಆಫ್ ಅಝ್ಕಬಾನ್' ಎಂಬ ಪುಸ್ತಕಗಳಿಗೂ ಸ್ಮಾರ್ಟೀಸ್ ಪ್ರಶಸ್ತಿ ಬಂದವು. ಈ ಪ್ರಶಸ್ತಿಯನ್ನು ಮೂರು ಬಾರಿ ಜಯಿಸಿದ ಮೊದಲನೆಯ ವ್ಯಕ್ತಿ ಜೆ.ಕೆ.ರೌಲಿಂಗ್. ಜೆ.ಕೆ.ರೌಲಿಂಗ್ ಅವರ ನಾಲ್ಕನೇ ಪುಸ್ತಕ 'ಹ್ಯಾರಿ ಪಾಟರ್ ಅಂಡ್ ದಿ ಗಾಭ್ಲಿಟ್ ಆಫ್ ಫೈರ್', ಯು.ಎಸ್ ಹಾಗು ಯು.ಕೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಯಿತು. ರೌಲಿಂಗ್ ಅವರನ್ನು ೨೦೦೦ ವರ್ಷದ ಬ್ರಿಟಿಷ್ ಬುಕ್ಕ್ ಅವಾರ್ಡಲ್ಲಿ ಆ ವರ್ಷದ ಲೇಖಕಿ ಎಂದು ಹೆಸರಿಸಲಾಯಿತು. ಜೆ.ಕೆ. ರೌಲಿಂಗವರ ಮುಂದಿನ ಮೂರು ಪುಸ್ತಕಗಳು- 'ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್', 'ಹ್ಯಾರಿ ಪಾಟರ್ ಅಂಡ್ ದಿ ಡೆತ್ಲಿ ಹ್ಯಾಲೋಸ್', 'ಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್' ಬಹಳ ಪ್ರಸಿದ್ಧ ಪುಸ್ತಕಗಳಾಗಿ ಹೊರ ಬಂದಿವೆ. ರೌಲಿಂಗ್ ಅವರ ಹ್ಯಾರಿ ಪಾಟರ್ ಈಗ ಜಾಗತಿಕ ಬ್ರ್ಯಾಂಡ್. ಹಾಗೆಯೇ ಅವರ ಕೊನೆಯ ನಾಲ್ಕು ಪುಸ್ತಕಗಳು ಇತಿಹಾಸದಲ್ಲಿ ವೇಗವಾಗಿ ಮಾರಾಟವಾದ ಪುಸ್ತಕಗಳೆಂದು ದಾಖಲೆಯಾಗಿದೆ. ವಾರ್ನೆರ್ ಬ್ರೋಸ್ ಎಂಬ ವ್ಯಕ್ತಿ ಹ್ಯಾರಿ ಪಾಟರ್ ಚಿತ್ರೀಕರಣ ಮಾಡಲು ಗ್ರಂಥಸ್ವಾಮ್ಯವನ್ನು ಪಡೆದುಕೊಂಡರು. ರೌಲಿಂಗವರ ಆಕಾಂಕ್ಷೆ ಮತ್ತು ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡರು. ನಂತರ ಸ್ಟೀವ್ ಕ್ಲೋವ್ಸ್ ಅವರು ಕೆಲವು ಚಿತ್ರಗಳನ್ನು ಸ್ಕ್ರಿಷ್ಟ್ ಮಾಡುವಾಗ ಜೆ.ಕೆ.ರೌಲಿಂಗವರು ಅವರಿಗೆ ನೆರವು ನೀಡಿದರು. ೨೦೦೪ರಲ್ಲಿ, ಫೋರ್ಬ್ಸ್ ಸಂಸ್ಥೆ ಜೆ.ಕೆ ರೌಲಿಂಗವರ ಬರವಣಿಗೆಯನ್ನು ಗುರುತಿಸಿ ಯು.ಎಸ್-ಡಾಲರ್ ಬಿಲಿಯನಿರ್ಯ್ ಎಂದು ಪರಿಗಣಿಸಿದರು.[] ರೌಲಿಂಗವರು ಇದನ್ನು ಕುರಿತು ತನ್ನ ಬಳಿ ಸಾಕಷ್ಟು ಹಣವಿರಬಹುದು ಆದರೆ ತಾನು ಎಂದಿಗೂ ಬಿಲಿಯನೇರಲ್ಲ ಎಂದು ಜನರಿಗೆ ಹೇಳಿದ್ದಾರೆ. ೨೦೧೩ರಲ್ಲಿ, ರೌಲಿಂಗವರನ್ನು ಯುನೈಟೆಡ್ ಕಿಂಗ್ಡಮಿನ ೧೩ನೇ ಅತ್ಯಂತ ಶಕ್ತಿಶಾಲಿ ಮಹಿಳೆ ಎಂದು ಬಿಬಿಸಿ ರೇಡಿಯೋ ೪ರಲ್ಲಿ ಪ್ರಚುರಪಡಿಸಲಾಯಿತು. ೨೦೦೦ರಲ್ಲಿ, ಜೆ.ಕೆ.ರೌಲಿಂಗವರು ಬಡತನ ಮತ್ತು ಸಾಮಾಜಿಕ ಅಸಮಾನತೆ ಎದುರಿಸಲು ವೊಲೆಂಟ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿದರು. [] ಜೆ.ಕೆ.ರೌಲಿಂಗವರು ಜೀವನದಲ್ಲಿ ಅನೇಕ ಕಠಿಣ ಸಂದರ್ಭಗಳನ್ನು ಎದುರಿಸಿದ್ದರೂ ಬರೆಯುವುದನ್ನು ಬಿಡದೆ ಈ ಸಮಯದಲ್ಲು ತಮ್ಮ ಕನಸು ಮತ್ತು ಪ್ಯಾಶನ್ ಅನುಸರಿಸಲು ಓದುಗರಿಗೆ ಸ್ಫೂರ್ತಿ ನೀಡಿದ್ದಾರೆ.

ಉಲ್ಲೇಖನಗಳು

[ಬದಲಾಯಿಸಿ]