ವಿಷಯಕ್ಕೆ ಹೋಗು

ಜರಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜರಡಿಯು ಬೇಕಾದ ಪದಾರ್ಥಗಳನ್ನು ಬೇಡವಾದ ಪದಾರ್ಥದಿಂದ ಪ್ರತ್ಯೇಕಿಸುವ ಅಥವಾ ಒಂದು ಮಾದರಿಯ ಕಣ ಗಾತ್ರ ಹಂಚಿಕೆಯ ಗುಣಲಕ್ಷಣಗಳನ್ನು ನಿರ್ಧರಿಸುವ ಸಾಧನ. ಸಾಮಾನ್ಯವಾಗಿ ಇದನ್ನು ಜಾಲರಿ ಅಥವಾ ಜಾಲ ಅಥವಾ ಲೋಹದಂತಹ ಹೆಣೆದ ಪರದೆಯನ್ನು ಬಳಸಿ ಮಾಡಲಾಗುತ್ತದೆ.[] ಅಡುಗೆಯಲ್ಲಿ, ಹಿಟ್ಟಿನಂತಹ ಒಣ ಪದಾರ್ಥಗಳಲ್ಲಿನ ಮುದ್ದೆಗಳನ್ನು ಪ್ರತ್ಯೇಕಿಸಲು ಮತ್ತು ಮುರಿಯಲು, ಜೊತೆಗೆ ಅವುಗಳನ್ನು ಗಾಳಿಗೊಡ್ಡಲು ಹಾಗೂ ಸೇರಿಸಲು ಜರಡಿಯನ್ನು ಬಳಸಲಾಗುತ್ತದೆ. ಸೋಸುಗವು ದ್ರವದಿಂದ ಘನ ಪದಾರ್ಥಗಳನ್ನು ಪ್ರತ್ಯೇಕಿಸಲು ಬಳಸಲಾಗುವ ಒಂದು ಬಗೆಯ ಜರಡಿ.

ಜರಡಿ ಹಿಡಿಯುವುದು ಭಿನ್ನ ಗಾತ್ರಗಳ ಕಣಗಳನ್ನು ಪ್ರತ್ಯೇಕಿಸುವ ಒಂದು ಸರಳ ತಂತ್ರವಾಗಿದೆ. ಹಿಟ್ಟನ್ನು ಜರಡಿ ಹಿಡಿಯಲಾಗಲು ಬಳಸಲಾದಂತಹ ಜರಡಿಯು ಬಹಳ ಚಿಕ್ಕ ರಂಧ್ರಗಳನ್ನು ಹೊಂದಿರುತ್ತದೆ. ಒಂದಕ್ಕೊಂದು ಉಜ್ಜಿ ಅಥವಾ ಪರದೆಯ ರಂಧ್ರಗಳಿಗೆ ಉಜ್ಜಿ ಒರಟಾದ ಕಣಗಳು ಪ್ರತ್ಯೇಕಗೊಳ್ಳುತ್ತವೆ ಅಥವಾ ಮುರಿದು ಚಿಕ್ಕದಾಗುತ್ತವೆ. ಪ್ರತ್ಯೇಕಿಸಬೇಕಾದ ಕಣಗಳ ಪ್ರಕಾರಗಳ ಮೇಲೆ ಅವಲಂಬಿಸಿ, ಭಿನ್ನ ಪ್ರಕಾರಗಳ ರಂಧ್ರಗಳಿರುವ ಜರಡಿಗಳನ್ನು ಬಳಸಲಾಗುತ್ತದೆ. ಮರಳಿನಿಂದ ಕಲ್ಲುಗಳನ್ನು ಪ್ರತ್ಯೇಕಿಸಲು ಕೂಡ ಜರಡಿಗಳನ್ನು ಬಳಸಲಾಗುತ್ತದೆ. ಜರಡಿ ಹಿಡಿಯುವುದು ಆಹಾರದ ಕೈಗಾರಿಕೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲಿ (ಹಲವುವೇಳೆ ಅಲುಗಾಡುವ) ಜರಡಿಗಳನ್ನು ಬಾಹ್ಯ ವಸ್ತುಗಳಿಂದ ಉತ್ಪನ್ನದ ಕಶ್ಮಲೀಕರಣವನ್ನು ತಡೆಯಲು ಬಳಸಲಾಗುತ್ತದೆ. ಇಲ್ಲಿ ಕೈಗಾರಿಕಾ ಜರಡಿಯ ವಿನ್ಯಾಸವು ಪ್ರಮುಖ ಮಹತ್ವದ್ದಾಗಿರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Ruhlman, Michael; Bourdain, Anthony (2007). The Elements of Cooking: Translating the scientific use]. Simon and Schuster. p. 216. ISBN 978-1-4391-7252-0.


"https://kn.wikipedia.org/w/index.php?title=ಜರಡಿ&oldid=859178" ಇಂದ ಪಡೆಯಲ್ಪಟ್ಟಿದೆ