ವಿಷಯಕ್ಕೆ ಹೋಗು

ಜಗನ್ಮೋಹನ್ ಅರಮನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಗನ್ಮೋಹನ್ ಅರಮನೆ
Jaganmohan Palace outside
Jaganmohan Art Gallery
Temple Office near Jagmohan Palace

ಮೈಸೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅಲ್ಲಿನ ಪುರಾತನ ಕಟ್ಟಡಗಳ ಪಟ್ಟಿಯಲ್ಲಿ ಒಂದಾದ ಜಗನ್ಮೋಹನ ಅರಮನೆಯನ್ನು ಹೋಗಿ ನೋಡಬಹುದು. ಈ ಸ್ಥಳವನ್ನು ಮೈಸೂರಿನ ಅರಸರು 1861ರಲ್ಲಿ ನಿರ್ಮಿಸಿದರು ಮತ್ತು 1897ರಲ್ಲಿ ಹಳೆಯ ಮರದ ಅರಮನೆಯೂ ಬೆಂಕಿಗಾಹುತಿಯಾದ ಸಂದರ್ಭದಲ್ಲಿ ಹೊಸ ಅರಮನೆಯನ್ನು ಕಟ್ಟುವವರೆಗೂ ಒಂದು ಅರಸ ಕುಟುಂಬದ ನಿವಾಸವಾಗಿತ್ತು.1902ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಈ ಅರಮನೆಯ ಅಧಿಕಾರವನ್ನು ತೆಗೆದುಕೊಂಡರು ಆ ಸಮಯದಲ್ಲಿ ಭಾರತದ ವೈಸ್ರಾಯ್ ಮತ್ತು ರಾಜ್ಯಪಾಲರಾಗಿದ್ದ ಲಾರ್ಡ್ ಕರ್ಜನ್ ರವರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರವಾಸಿಗರು ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕಲ್ಯಾಣ ಮಹೋತ್ಸವದ ಸಂದರ್ಭದಲ್ಲಿ ಸ್ಥಾಪಿಸಲಾದ ಬೃಹತ್ ಕಲ್ಯಾಣ ಮಂಟಪವನ್ನು ಕಾಣಬಹುದು. ಈ ಮಂಟಪವನ್ನು ದರ್ಬಾರ್ ಹಾಲ್ ಎಂದೂ ಪ್ರಸಿದ್ಧವಾಗಿದ್ದು ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದ ಸ್ಥಳವೆಂದು ಪ್ರಖ್ಯಾತಿಯಾಗಿದೆ.ಈ ಒಳಾಂಗಣವನ್ನು ವಿಶೇಷ ಸಂದರ್ಭಗಳಾದ ಸಂಗೀತ ಕಛೇರಿ, ನಾಟಕ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವಕ್ಕಾಗಿ ಬಳಸಲಾಗುತ್ತಿತ್ತು. ಪ್ರಸ್ತುತವಾಗಿ ಈ ಸ್ಥಳವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನ ಮತ್ತು ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುವ ಸಮ್ಮೇಳನಗಳಿಗಾಗಿ ಬಳಸಲಾಗುತ್ತಿದೆ. ಇಲ್ಲಿ ಎರಡು ದೊಡ್ಡ ಮರದ ದ್ವಾರಗಳಿದ್ದು ಅವುಗಳ ಮೇಲೆ ವಿಷ್ಣುವಿನ ದಶಾವತಾರವನ್ನು ಕೊರೆಯಲಾಗಿದ್ದು, ಮುಖ್ಯ ನಿರ್ಮಾಣವು ಮೈಸೂರು ಅರಸರ ವಿವಿಧ ಕಲಾಕೃತಿ ಮತ್ತು ಕರಕುಶಲಗಳನ್ನು ಪ್ರದರ್ಶಿಸುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]

[] [] []

  1. "Jaganmohana Palace". Online webpage of the Mysore district (dtd 20 October 2007). Archived from the original on 13 ಸೆಪ್ಟೆಂಬರ್ 2007. Retrieved 20 ಸೆಪ್ಟೆಂಬರ್ 2016.
  2. https://www.inmysore.com/jaganmohan-palace
  3. https://www.thehindu.com/news/cities/bangalore/jaganmohan-palace-restoration-to-be-completed-in-three-months/article23995133.ece
  4. https://www.mysore.org.uk/royal-buildings/jaganmohan-palace.html