ಗೌಡನಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಸಾಮಾನ್ಯ[ಬದಲಾಯಿಸಿ]

"ಗೌಡನಹಳ್ಳಿ" ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಪುಟ್ಟ ಗ್ರಾಮ. ಇದು ದುಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಹಳ್ಳಿ. ಇಂದಿಗೂ ಜನಸಂಪರ್ಕಕ್ಕೆ ಅಷ್ಟಾಗಿ ಸಿಗದಿರುವ ಗ್ರಾಮ.ಇಂದಿಗೂ ಸಾರಿಗೆ ಸಂಪರ್ಕ ಇರದ ಒಂದು ಕುಗ್ರಾಮ.

ಜನಸಂಖ್ಯೆ[ಬದಲಾಯಿಸಿ]

೨೦೧೧ ರ ಜನಗಣತಿಯಂತೆ ಗೌಡನಹಳ್ಳಿಯ ಜನಸಂಖ್ಯೆ ೪೦೩. ಅದರಲ್ಲಿ ೪೯.೪% ಹೆಂಗಸರಿದ್ದಾರೆ. ಅಂದರೆ ೧೯೯ ಹೆಂಗಸರಿದ್ದಾರೆ ಮತ್ತು ೨೦೪ ಗಂಡಸರಿದ್ದಾರೆ. ಹಳ್ಳಿಯಲ್ಲಿ ಒಟ್ಟು ೧೧೯ ಮನೆಗಳಿವೆ. ಹಳ್ಳಿಯ ಸಾಕ್ಷರತೆಯ ಪ್ರಮಾಣ ೫೩.೧% ರಷ್ಟಿದ್ದರೂ, ಹೆಂಗಸರ ಸಾಕ್ಷರತೆ ಕೇವಲ ೨೩.೧% ಆಗಿದೆ [೧]

ಸಾರಿಗೆ[ಬದಲಾಯಿಸಿ]

ರಾಜ್ಯ ರಾಜಧಾನಿ ಬೆಂಗಳೂರಿನಿಂದ ಸುಮಾರು ೧೪೩ ಕಿ.ಮೀ ದೂರದಲ್ಲಿದೆ. ತಾಲೂಕು ಕೇಂದ್ರದಿಂದ ಸುಮಾರು ೧೩ ಕಿಲೋಮೀಟರ್ ದೂರದಲ್ಲಿದೆ. ಬಸ್ ಸಂಪರ್ಕ ಇರದ ಕಾರಣ ಹಳ್ಳಿಗೆ ಹೋಗುವವರು ತಮ್ಮ ವಾಹನದಲ್ಲೇ ಹೋಗಬೇಕು. ಬಸ್ಸಿನಲ್ಲಿ ಬರುವವರು ಚಿಕ್ಕನಾಯಕನಹಳ್ಳಿ ಇಂದ ತಿಪಟೂರು ಹೋಗುವ ರಸ್ತೆಯಲ್ಲಿ ಸುಮಾರು ಏಳು ಕಿಲೋ ಮೀಟರ್ ಗಳ ನಂತರ ಸಿಗುವ ಬಾಚಿಹಳ್ಳಿವರೆಗು ಬಸ್ಸಿನಲ್ಲಿ ಹೋಗಬಹುದು. ಅಲ್ಲಿ ಬಲಕ್ಕೆ ತಿರುಗಿ ಸುಮಾರು ೨ ಕಿಲೋ ಮೀಟರ್ ನಡೆದರೆ ಗೌಡನಹಳ್ಳಿ ಎಂಬ ಪುಟ್ಟ ಊರು ಸಿಗುತ್ತದೆ. ತಮ್ಮದೇ ಗಾಡಿಯಲ್ಲಿ ಹೋಗುವವರು ಚಿಕ್ಕನಾಯಕನಹಳ್ಳಿಯಿಂದ ತಿಪಟೂರು ರಸ್ತೆಯಲ್ಲಿ ಏಳು ಕಿಲೋಮೀಟರ್ ಹೋಗಿ ಬಾಚಿಹಳ್ಳಿಯಲ್ಲಿ ಬಲಕ್ಕೆ ತಿರುಗಿ ಎರಡು ಕಿಲೋಮೀಟರ್ ಹೋಗಬೇಕು ಅಥವಾ ಇನ್ನೂ ಮುಂದೆ ಹೋಗಿ ಶೆಟ್ಟಿಕೆರೆಯಲ್ಲಿ ಬಲಕ್ಕೆ ತಿರುಗಿ ಶೆಟ್ಟಿಕೆರೆ ಕೆರೆ ಏರಿಯ ಮೇಲೆ ಹೋಗಬಹುದು. ಈ ರಸ್ತೆ ಅಷ್ಟು ಚೆನ್ನಾಗಿಲ್ಲ. ಬಾಚಿಹಳ್ಳಿಯಲ್ಲಿ ಬಲಕ್ಕೆ ತಿರುಗಿ ಹೋಗುವುದು ಒಳ್ಳೆಯದು.

ಜನ[ಬದಲಾಯಿಸಿ]

ಊರಿನಲ್ಲಿ ಮುಖ್ಯವಾಗಿ ನೇಕಾರ ಸಮುದಾಯದ ಕುರುಹಿನ ಶೆಟ್ಟಿ ಜನಾಂಗದ ಜನರು ವಾಸವಿದ್ದರೂ ಅದರ ಜೊತೆಗೆ ಬೇರೆ ಬೇರೆ ಜಾತಿಯ ಕೆಲವು ಮನೆಗಳಿವೆ.


ದೇವಾಲಯ ಮತ್ತು ಜಾತ್ರೆ[ಬದಲಾಯಿಸಿ]

ಊರಿನ ದೈವ ಶ್ರೀ ರಂಗನಾಥಸ್ವಾಮಿ. ಇದು ಇನ್ನೂರು ವರ್ಷಕ್ಕೂ ಹಿಂದಿನ ದೇವಾಲಯವಾಗಿದ್ದು, ಇದನ್ನು ೨೦೨೦ರಲ್ಲಿ ನವೀಕರಿಸಲಾಗಿದೆ. ದೇವಾಲಯದ ಮುಂದೆ ದೊಡ್ಡದಾದ ಉಯ್ಯಾಲೆ ಮಂಟಪವಿದ್ದು ದೇವರಿಗೆ ಡೋಲೋತ್ಸವ ನಡೆಸುತ್ತಾರೆ. ಇದರ ಜಾತ್ರೆಯು ಪ್ರತಿವರ್ಷ ಯುಗಾದಿ ಹಬ್ಬವಾದ ಹದಿನೈದು ದಿನಗಳ ನಂತರ ನಡೆಯುತ್ತದೆ. ನಾಲ್ಕೈದು ದಿನಗಳು ನಡೆಯುವ ಜಾತ್ರೆಯ ಸಂಪ್ರದಾಯ ನೋಡುವುದೇ ಒಂದು ಸೊಗಸು. ಇವುಗಳಲ್ಲಿ ತುಂಬಾ ಮುಖ್ಯವಾದ ಆಕರ್ಷಣೆಯೆಂದರೆ ಈಚಲು ಮರ ಹತ್ತುವುದು.

  1. ಉಲ್ಲೇಖ ದೋಷ: Invalid <ref> tag; no text was provided for refs named https://villageinfo.in/karnataka/tumkur/chiknayakanhalli/gowdanahalli.html