ಗೋರ್, ಕ್ಯಾಥರೀನ್ ಗ್ರೇಸ್, ಫ್ರಾನ್ಸಸ್
ಗೋಚರ
ಕ್ಯಾಥರೀನ್ ಗ್ರೇಸ್, ಫ್ರಾನ್ಸಸ್ ಗೋರ್, (1799-1861) ಈಕೆ ಆಂಗ್ಲ ಕಾದಂಬರಿಗಾರ್ತಿ.
ಬದುಕು
[ಬದಲಾಯಿಸಿ]ಹುಟ್ಟಿದ್ದು ನಾಟಿಂಗ್ಹಂಷೈರಿನ ರೆಟ್ಫರ್ಡ್ನಲ್ಲಿ. ತಂದೆ ಮದ್ಯ ವ್ಯಾಪಾರಿ. ಗಂಡ ಕ್ಯಾಪ್ಟನ್ ಗೋರ್. ಈಕೆ ತನ್ನ ಬರೆವಣಿಗೆಯಿಂದಲೇ ಜೀವನವನ್ನು ಸಾಗಿಸಿದಳು.
ಕಾದಂಬರಿಗಳು
[ಬದಲಾಯಿಸಿ]1824 ರಿಂದ 1861 ರವರೆಗೆ ಈಕೆಯ 70 ಕೃತಿಗಳು ಹೊರಬಿದ್ದವು. ಅವುಗಳಲ್ಲಿ ಬಹುತೇಕ ಕಾದಂಬರಿಗಳು ಆಂಗ್ಲರ ಸೊಗಸು ಜೀವನವನ್ನು ಚಿತ್ರಿಸುತ್ತವೆ. ಮ್ಯಾನರ್ಸ್ ಆಫ್ ದಿ ಡೇ (1830), ಸೆಸಿಲ್ ಆರ್ ದಿ ಅಡ್ವೆಂಚರ್ಸ್ ಆಫ್ ಎ ಕಾಕ್ಸ್‌ಕೂರಾನ್ (1841), ದಿ ಬ್ಯಾಂಕರ್ಸ್ ವೈಫ್ (1843) ಈ ಕಾದಂಬರಿಗಳು ಹೆಸರಿಸತಕ್ಕವು.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: