ಗೆಟಿಸ್‍ಬರ್ಗ್ ಕದನ
ಗೆಟಿಸ್‍ಬರ್ಗ್ ಕದನ | |||||||
---|---|---|---|---|---|---|---|
Part of ಅಮೇರಿಕದ ಅಂತರ್ಯುದ್ಧ | |||||||
ಗೆಟಿಸ್‍ಬರ್ಗ್ ಕದನ, ತೂರೆ ದೆ ತುಲ್‍ಸ್ತ್ರುಪ್‍ರಿಂದ | |||||||
| |||||||
ಯುದ್ಧಾಕಾಂಕ್ಷಿಗಳು | |||||||
ಅಮೇರಿಕ ಸಂಯುಕ್ತ ಸಂಸ್ಥಾನ | ಟೆಂಪ್ಲೇಟು:Country data CSA | ||||||
ದಂಡನಾಯಕರು ಮತ್ತು ನಾಯಕರು | |||||||
ಜಾರ್ಜ್ ಜಿ. ಮೀಡ್ ಜಾನ್ ಎಫ್. ರೆನಲ್ಡ್ಸ್† | ಟೆಂಪ್ಲೇಟು:Country data CSA ರಾಬರ್ಟ್ ಇ. ಲೀ | ||||||
ಸಂಖ್ಯಾಬಲ | |||||||
93,921[೨] | 71,699[೩] | ||||||
ಸಾವುನೋವುಗಳು ಮತ್ತು ನಷ್ಟಗಳು | |||||||
23,055 | 23,231 |
ಗೆಟಿಸ್‍ಬರ್ಗ್ ಕದನ ಅಮೆರಿಕನ್ ಅಂತರ್ಯುದ್ಧದಲ್ಲಿ ನಿರ್ಧಾರಕ ಘಟ್ಟವೆಂದು ಪರಿಗಣಿತವಾಗಿರುವ, ಅತ್ಯಧಿಕ ಜೀವಹಾನಿಯನ್ನು ದಾಖಲಿಸಿದ ಒಂದು ಕದನ (1863). ಅಮೆರಿಕ ಸಂಯುಕ್ತಸಂಸ್ಥಾನದ ದಕ್ಷಿಣ ಪೆನ್ಸಿಲ್ವೇನಿಯದಲ್ಲಿರುವ ಗೆಟಿಸ್ಬರ್ಗಿನಲ್ಲಿ, ಉತ್ತರದ ರಾಜ್ಯಗಳ (ಒಕ್ಕೂಟ) ಮತ್ತು ಪ್ರತ್ಯೇಕಗೊಂಡಿದ್ದ ದಕ್ಷಿಣದ ರಾಜ್ಯಗಳ (ಪ್ರಸಂಧಿ) ನಡುವೆ ಈ ಕದನ 1863ರ ಜುಲೈ 1-3 ರವರೆಗೆ ನಡೆಯಿತು.
ಕದನದ ವಿವರ
[ಬದಲಾಯಿಸಿ]ಇದೇ ವರ್ಷ ಮೇ ತಿಂಗಳಲ್ಲಿ ವರ್ಜೀನಿಯದ ಚಾನ್ಸೆಲರ್ಸ್‌ವಿಲ್ನಲ್ಲಿ ಒಕ್ಕೂಟ ಪಡೆಗಳಿಗೂ ಪ್ರಸಂಧಿ ಪಡೆಗಳಿಗೂ ನಡೆದ ಕದನದಲ್ಲಿ ಯಶಸ್ಸು ಕಂಡ ಪ್ರಸಂಧಿ ಸೇನೆಯ ಅಧಿಪತಿ ಜನರಲ್ ಲೀ ಮತ್ತೊಮ್ಮೆ ಆಕ್ರಮಣವೆಸಗುವ ಉದ್ದೇಶದಿಂದ ತನ್ನ ಸೈನ್ಯವನ್ನು ಸಾಂದ್ರೀಕರಿಸುತ್ತಿದ್ದ. ಲಾಂಗ್ಸ್ಟ್ರೀಟ್, ಎವೆಲ್ ಮತ್ತು ಹಿಲ್ಗಳ ನಾಯಕತ್ವದಲ್ಲಿದ್ದ ಪಡೆಗಳನ್ನು ಜೂನ್ ತಿಂಗಳಲ್ಲಿ ಮುನ್ನುಗ್ಗಿಸಿದ. ಒಕ್ಕೂಟ ಪಡೆಗಳ ಅಧಿಪತಿ ಜೋಸೆಫ್ ಹೂಕರ್ ಇವರನ್ನು ಅನುಸರಿಸಿ ಸಾಗಿದ. ಲೀಯ ಸೈನ್ಯಕ್ಕೂ ವಾಷಿಂಗ್ಟನ್ನಿಗೂ ನಡುವೆ ತನ್ನ ಸೈನ್ಯ ಇರುವಂತೆ ಹೂಕರ್ ಎಚ್ಚರ ವಹಿಸಿದ. ಜೂನ್ 27ರಂದು ಅಧ್ಯಕ್ಷ ಲಿಂಕನ್ ಹೂಕರನನ್ನು ತೆಗೆದು ಅವನ ಸ್ಥಾನದಲ್ಲಿ ಜಾರ್ಜ್ ಜಿ. ಮೀಡನನ್ನು ಅಧಿಪತಿಯಾಗಿ ನೇಮಿಸಿದ. ಲೀಯ ಕಡೆಯ ಅಶ್ವಪಡೆ ಬೇರೆ ಆಕ್ರಮಣಕಾರ್ಯವೊಂದರಲ್ಲಿ ನಿರತವಾಗಿದ್ದುದರಿಂದ ಸಮಯಕ್ಕೆ ಸರಿಯಾಗಿ ಬರಲಿಲ್ಲ. ಆದ್ದರಿಂದ ತನ್ನ ಶತ್ರುಗಳ ಸ್ಥಾನವನ್ನು ಲೀಗೆ ಅರಿಯಲಾಗಲಿಲ್ಲ. ಇವನ ಪಡೆಗಳು ಗೆಟಿಸ್‍ಬರ್ಗ್ ಬಳಿಗೆ ಧಾವಿಸಿದವು. ಪ್ರಸಂಧಿ ಪಡೆಗಳೂ ಒಕ್ಕೂಟ ಪಡೆಗಳೂ ಗೆಟಿಸ್ಬರ್ಗಿನ ಹೊರಗೆ ಜುಲೈ 1ರಂದು ಪರಸ್ಪರ ಎದುರಾಗಿ ಯುದ್ಧಕ್ಕಿಳಿದವು. ಅಧಿಕ ಸಂಖ್ಯೆಯಲ್ಲಿದ್ದ ಲೀ ಪಡೆಯನ್ನು ತಡೆಗಟ್ಟುವ ಯತ್ನದಲ್ಲಿ ಒಕ್ಕೂಟ ಪಡೆಯ ನಾಯಕ ಜನರಲ್ ರೇನಾಲ್ಡ್‌ಸ್ ಸಾವಿಗೆ ಈಡಾದ. ಜುಲೈ 2 ರ ಮಧ್ಯಾಹ್ನ ಮತ್ತೆ ಕದನ ಮುಂದುವರೆಯಿತು. ಲೀಯ ಪಡೆಗಳು ಒಕ್ಕೂಟ ಪಡೆಗಳನ್ನು ರೌಂಡ್ ಟಾಪ್ ಮತ್ತು ಲಿಟ್ಲ್‌ರೌಂಡ್ ಟಾಪ್ ಎಂಬ ಎರಡು ಗುಡ್ಡಗಳ ಮೇಲಿಂದ ಕದಲಿಸಲು ಯತ್ನಿಸಿದವು: ಒಕ್ಕೂಟ ಪಡೆಗಳಿಂದ ಕಲ್ಪ್‌ಸ್ ಹಿಲ್ ಎಂಬ ಗುಡ್ಡವನ್ನು ವಶಕ್ಕೆ ತೆಗೆದುಕೊಂಡವು. ಆದರೆ ಮರುದಿನ ವಿಜಯದ ಕೈ ಬದಲಾಯಿಸಿತು. ಒಕ್ಕೂಟ ಪಡೆಗಳು ಕಲ್ಪ್‌ಸ್ ಹಿಲ್ಲನ್ನು ಮತ್ತೆ ತಮ್ಮ ವಶಕ್ಕೆ ತೆಗೆದುಕೊಂಡವು. ಅಂದು ಮಧ್ಯಾಹ್ನ ಲೀಯ ಸೇನೆ ಒಕ್ಕೂಟ ಸೇನೆಯ ಮೇಲೆ ಮದ್ದುಗುಂಡುಗಳ ಮಳೆಗರೆಯಿತು. ಒಕ್ಕೂಟ ಸೇನೆ ಇದಕ್ಕೆ ಸಮನಾಗಿ ಹೋರಾಡಿತು. ಲೀಯ ಮದ್ದುದಾಸ್ತಾನು ಮುಗಿದುಹೋದ್ದರಿಂದ ಅಶ್ವಪಡೆಗೆ ಮುನ್ನುಗ್ಗಲು ಆಜ್ಞಾಪಿಸಬೇಕಾಯಿತು. ಜನರಲ್ ಪಿಕೆಟ್ ತನ್ನ 15,000 ಯೋಧರೊಂದಿಗೆ ಫಿರಂಗಿ ಗುಂಡುಗಳ ಸುರಿಮಳೆಯ ನಡುವೆಯೇ ನುಗ್ಗಿದ. ಆದರೆ ಅವನಿಗೆ ಸಾಕಷ್ಟು ಬೆಂಬಲ ಇಲ್ಲದ್ದರಿಂದ ಹಿಂದೆ ಸರಿಯಬೇಕಾಯಿತು. ಪ್ರಸಂಧಿ ಸೇನೆ ಜರ್ಝರಿತವಾಗಿ ಹಿಂದಕ್ಕೆ ಸರಿದು, ಮತ್ತೆ ಮುನ್ನುಗ್ಗಲು ಸಮಯ ಕಾಯುತ್ತಿತ್ತು. ಆದರೆ ಅದು ಸಾಧ್ಯವಾಗಲೇ ಇಲ್ಲ. ಮರುದಿನ ಎರಡೂ ಕಡೆಯ ಸೈನ್ಯಗಳು ಇದಿರುಬದಿರಾಗಿ ನಿಂತೇ ಇದ್ದುವು. ಕದನ ಮುಂದುವರಿಯಲಿಲ್ಲ. ಜುಲೈ 5 ರಂದು ಲೀ ಸೈನ್ಯ ಹಿಂದಕ್ಕೆ ಪೊಟೊಮ್ಯಾಕ್ ಕಡೆಗೆ ಸರಿಯಲಾರಂಭಿಸಿತು. ಲೀಯ ಸೈನ್ಯದ ದುರ್ಬಲ ಸ್ಥಿತಿಯ ಉಪಯೋಗ ಪಡೆದುಕೊಂಡು ಅದರ ಮೇಲೆ ಮೀಡ್ನ ಪಡೆಗಳೇ ಆಕ್ರಮಣ ನಡೆಸಬೇಕಾಗಿತ್ತೆಂದೂ ಅವನು ಹಾಗೆ ಮಾಡದೆ ಹೋದದ್ದು ತಪ್ಪೆಂದೂ ಮೀಡ್ ಟೀಕೆಗೆ ಒಳಗಾದ. ಗೆಟಿಸ್ಬರ್ಗಿನ ಮೂರು ದಿನಗಳ ಕದನದಲ್ಲಿ ಪ್ರಸಂಧಿ ಪಕ್ಷದ ಕಡೆ 28,000 ಸೈನಿಕರೂ ಒಕ್ಕೂಟ ಪಕ್ಷದ ಕಡೆ 23,000 ಸೈನಿಕರೂ ಸತ್ತರು. ಪ್ರಸಂಧಿ ಪಕ್ಷದವರಿಗೆ ಗೆಟಿಸ್‍ಬರ್ಗ್ನ ಕದನದಲ್ಲಿ ಸೋಲಾದ ದಿನವೇ ಅವರಿಗೆ ಮಿಸಿಸಿಪಿ ನದಿಯ ದಂಡೆಯ ಮೇಲೆ ವಿಕ್ಸ್‌ಬರ್ಗ್ನಲ್ಲಿ ನಡೆದ ಕದನದಲ್ಲೂ ಸೋಲುಂಟಾಯಿತು. ಪ್ರಸಂಧಿಯ ಅಂತ್ಯ ಆಗ ಆರಂಭವಾಯಿತೆನ್ನಬಹುದು.
ಛಾಯಾಂಕಣ
[ಬದಲಾಯಿಸಿ]-
ಕದನದ ಮೊದಲನೆಯ ದಿನದ ನಕ್ಷೆ,ಜುಲೈ 1, 1863
-
ಎರಡನೆಯ ದಿನ ಲೀಯ ವ್ಯೂಹ ಜುಲೈ 2, 1863
-
ಮೂರನೆಯ ದಿನದ ರಣಾಂಗಣ,ಜುಲೈ 3, 1863
-
"The Harvest of Death": ರಣಾಂಗಣದ ಚಿತ್ರ, photographed July 5 or July 6, 1863, by Timothy H. O'Sullivan.
ಆ ಕದನದಲ್ಲಿ ಸತ್ತ ಸೈನಿಕರ ರಾಷ್ಟ್ರೀಯ ಸ್ಮಾರಕವಾಗಿ ಗೆಟಿಸ್‍ಬರ್ಗ್ ರಣರಂಗವನ್ನು ರಾಷ್ಟ್ರಕ್ಕೆ ಅರ್ಪಿಸುವ ಸಮಾರಂಭದಲ್ಲಿ (1863 ನವೆಂಬರ್ 19) ಭಾಗವಹಿಸಿದ ಅಬ್ರಹಾಂ ಲಿಂಕನ್ ಮಾಡಿದ ಪುಟ್ಟ ಭಾಷಣ (ಗೆಟಿಸ್‍ಬರ್ಗ್ ಅಡ್ರೆಸ್) ಅತ್ಯುತ್ತಮ ಸಾಹಿತ್ಯವೆಂದೂ ಪ್ರಜಾಪ್ರಭುತ್ವದ ಶ್ರೇಷ್ಠತೆಯ ಅತ್ಯಂತ ಸಮರ್ಥ ಪ್ರತಿಪಾದನೆಯೆಂದೂ ಪ್ರಸಿದ್ಧವಾಗಿದೆ. ಅಮೆರಿಕದ ಪ್ರಖ್ಯಾತ ವಾಗ್ಮಿಯಾಗಿದ್ದ ಎಡ್ವರ್ಡ್ ಎವರೆಟ್ಟನ ಎರಡು ಗಂಟೆಗಳ ಭಾಷಣದ ಅನಂತರ ಮಾಡಿದ ಆ ಭಾಷಣ ಆಗ ಶ್ರೋತೃಗಳ ಗಮನ ಸೆಳೆಯಲಿಲ್ಲ. ಲಿಂಕನನಿಗೂ ಸಮಾಧಾನವೆನಿಸಿರಲಿಲ್ಲ. ಆದರೆ ಅಚ್ಚಾದಾಗ ಅದರ ಪ್ರಭಾವ ಎಷ್ಟೆಂಬುದು ಎಲ್ಲರಿಗೂ ಗೊತ್ತಾಯಿತು. ಎವರೆಟ್ಟನೂ ಅದನ್ನು ಹೊಗಳಿದ. ಲಿಂಕನ್ ಭಾಷಣಮಾಡಿದ ಸ್ಥಳದಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]GettysburgPhotographs.com | |
CivilWar.org maps & photos | |
Gettysburg.edu paintings & photos | |
GettysburgAnimated.com |
- Gettysburg National Military Park (National Park Service)
- Papers of the Gettysburg National Military Park seminars
- U.S. Army's Interactive Battle of Gettysburg with Narratives
- Military History Online: The Battle of Gettysburg
- The Brothers War: The Battle of Gettysburg Archived 2004-09-26 ವೇಬ್ಯಾಕ್ ಮೆಷಿನ್ ನಲ್ಲಿ.
- Gettysburg Discussion Group archives Archived 2009-02-01 ವೇಬ್ಯಾಕ್ ಮೆಷಿನ್ ನಲ್ಲಿ.
- List of 53 Confederate generals at Gettysburg Archived 2008-12-26 ವೇಬ್ಯಾಕ್ ಮೆಷಿನ್ ನಲ್ಲಿ.
- List of 67 US generals at Gettysburg Archived 2008-12-04 ವೇಬ್ಯಾಕ್ ಮೆಷಿನ್ ನಲ್ಲಿ.
- A film clip "Blue and Gray At 75th Anniversary of Great Battle, 1938/07/04 (1938)" is available for free download at the Internet Archive [more]
ಉಲ್ಲೇಖಗಳು
[ಬದಲಾಯಿಸಿ]- ↑ Coddington, p. 573. See the discussion regarding historians' judgment on whether Gettysburg should be considered a decisive victory.
- ↑ Busey and Martin, p. 125: "Engaged strength" at the battle was 93,921.
- ↑ Busey and Martin, p. 260, state that "engaged strength" at the battle was 71,699; McPherson, p. 648, lists the strength at the start of the campaign as 75,000.
- ↑ Busey and Martin, p. 125.
- ↑ Busey and Martin, p. 260. See the section on casualties for a discussion of alternative Confederate casualty estimates, which have been cited as high as 28,000.