ಗುಣ
ಗೋಚರ
ಗುಣ ಒಬ್ಬ ಮನುಜನ ನೈತಿಕ ಭಾವನೆ ಮತ್ತು ನಡವಳಿಕೆಗಳನ್ನು ಸೂಚಿಸುತ್ತದೆ.
ಗುಣ ಎಂದರೆ 'ದಾರ' ಅಥವಾ 'ಹುರಿ ಅಥವಾ ನೂಲಿನ ಒಂದು ಒಂಟಿ ದಾರ ಅಥವಾ ಎಳೆ'. ಹೆಚ್ಚು ಅಮೂರ್ತ ಬಳಕೆಗಳಲ್ಲಿ, ಅದು ಉಪವಿಭಾಗ, ವರ್ಗ, ಪ್ರಕಾರ, ಗುಣಮಟ್ಟ, ಅಥವಾ ಕಾರ್ಯಾಚರಣೆಯ ತತ್ವ ಅಥವಾ ಪ್ರವೃತ್ತಿಯನ್ನು ಸೂಚಿಸಬಹುದು. ಸಾಂಖ್ಯ ದರ್ಶನದಲ್ಲಿ, ಪ್ರಕೃತಿಯ ಮೂಲಭೂತ ಕಾರ್ಯಾಚರಣಾ ತತ್ವಗಳು ಅಥವಾ ಪ್ರವೃತ್ತಿಗಳಾಗಿ ಕೆಲಸಮಾಡುವ ಮೂರು ಪ್ರಮುಖ ಗುಣಗಳಿವೆ: ಸತ್ವ ಗುಣ, ರಜಸ್ ಗುಣ, ಮತ್ತು ತಮಸ್ ಗುಣ. ಸತ್ತ್ವ ಗುಣವುಳ್ಳವರು ಸಾತ್ತ್ವಿಕರೆಂದೂ, ರಜೋಗುಣದವರು ರಾಜಸಿಕರೆಂದೂ, ತಮೋಗುಣದವರು ತಾಮಸಿಕರೆಂದೂ ಕರೆಯಲ್ಪಡುತ್ತಾರೆ. ಸತ್ತ್ವ ಗುಣವೆಂದರೆ ಮೃದುತನ, ಸಚ್ಚಿಂತನೆ, ಸಹನೆ ಮೊದಲಾದ ಒಳ್ಳೆಯ ಲಕ್ಷಣಗಳು. ರಜೋಗುಣವೆಂದರೆ ರೋಷಾದಿ ಧೀರ ಭಾವ ಹೊಂದಿರುವದು. ಕಪಟ, ವಂಚನೆ, ಅನೀತಿಗಳು ತಾಮಸಿಕರ ಲಕ್ಷಣ.
ಈ ಮೂರೂ ಗುಣಗಳನ್ನು ದಾಟಿದವರು ತ್ರಿಗುಣಾತೀತರು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |