ಗುಕೇಶ್ ಡಿ
ದೊಮ್ಮರಾಜು ಗುಕೇಶ್ | |||||||||||
---|---|---|---|---|---|---|---|---|---|---|---|
Born | ಚೆನ್ನೈ, ತಮಿಳುನಾಡು, ಭಾರತ | ೨೯ ಮೇ ೨೦೦೬||||||||||
Title | Grandmaster (2019) | ||||||||||
FIDE rating | 2764 (ಮೇ 2024) | ||||||||||
Peak rating | 2764 (May 2024) | ||||||||||
Ranking | No. 6 (ಮೇ 2024) | ||||||||||
Peak ranking | No. 6 (May 2024) | ||||||||||
ಪದಕ ದಾಖಲೆ
|
ದೊಮ್ಮರಾಜು ಗುಕೇಶ್ ಒಬ್ಬ ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್. ಗುಕೇಶ್ ಅವರು ೨೯ ಮೇ ೨೦೦೬ ರಂದು ಜನಿಸಿದರು. ಇವರನ್ನು ಡಿ ಗುಕೇಶ್ ಎಂದು ಸಹ ಕರೆಯಲಾಗುತ್ತದೆ. ಚೆಸ್ ಪ್ರಾಡಿಜಿಯಲ್ಲಿ, ಇವರು ಗ್ರ್ಯಾಂಡ್ಮಾಸ್ಟರ್ ಪ್ರಶಸ್ತಿಗೆ ಅರ್ಹತೆ ಪಡೆದ ಇತಿಹಾಸದಲ್ಲಿ ಮೂರನೇ-ಕಿರಿಯ ವ್ಯಕ್ತಿಯಾಗಿದ್ದಾರೆ.[೧] ೨೭೦೦ ರ ಚೆಸ್ ರೇಟಿಂಗ್ ಅನ್ನು ತಲುಪಿದ ಮೂರನೇ-ಕಿರಿಯ ವ್ಯಕ್ತಿ, ೨೭೫೦ ರ ರೇಟಿಂಗ್ ತಲುಪಿದ ಕಿರಿಯ ವ್ಯಕ್ತಿ ಮತ್ತು ಎಫ್ಐಡಿಇ(FIDE) ಕ್ಯಾಂಡಿಡೇಟ್ಸ್ ಪಂದ್ಯಾವಳಿಯ ಕಿರಿಯ ವಿಜೇತ.[೨] ಗುಕೇಶ್ ಅವರು ೨೦೨೪ ರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಅನ್ನು ಗೆದ್ದರು.[೩]
೧೬ ಅಕ್ಟೋಬರ್ ೨೦೨೨ ರಂದು, ೧೬ ನೇ ವಯಸ್ಸಿನಲ್ಲಿ, ಇವರು ಪ್ರಸ್ತುತ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ ಅವರನ್ನು ಸೋಲಿಸಿದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. ಇವರು ಏಮ್ಚೆಸ್ ರಾಪಿಡ್ ಟೂರ್ನಮೆಂಟ್ನಲ್ಲಿ ಕಾರ್ಲ್ಸೆನ್ ಅನ್ನು ಸೋಲಿಸಿದರು. [೪]
ಆರಂಭಿಕ ಜೀವನ
[ಬದಲಾಯಿಸಿ]ಗುಕೇಶ್ ಅವರು ೨೯ ಮೇ ೨೦೦೬ ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು.[೫] ಅವರ ತಂದೆಯ ಹೆಸರು ರಜನಿಕಾಂತ್. ಅವರು ಕಿವಿ, ಮೂಗು ಮತ್ತು ಗಂಟಲು ಶಸ್ತ್ರಚಿಕಿತ್ಸಕರು. ಅವರ ತಾಯಿ ಡಾ ಪದ್ಮಕುಮಾರಿ. ಅವರು ಸೂಕ್ಷ್ಮ ಜೀವವಿಜ್ಞಾನದ ಸಹಾಯಕ ಪ್ರಾಧ್ಯಾಪಕರು.[೬][೭]ಗುಕೇಶ್ ಅವರು ಚೆನ್ನೈನ ಮೆಲ್ ಅಯನಂಬಾಕ್ಕಂನ ವೆಲಮ್ಮಾಳ್ ವಿದ್ಯಾಲಯ ಶಾಲೆಯಲ್ಲಿ ಓದಿದರು.[೮]ಇವರು ತಮ್ಮ ಏಳನೇ ವಯಸ್ಸಿನಲ್ಲಿ ಅವರು ಚದುರಂಗವನ್ನು ಆಡಲು ಕಲಿತರು. [೯]
ವೃತ್ತಿ
[ಬದಲಾಯಿಸಿ]೨೦೧೫–೨೦೧೯
[ಬದಲಾಯಿಸಿ]ಗುಕೇಶ್ ಅವರು ೨೦೧೫ ರಲ್ಲಿ ಏಷ್ಯನ್ ಸ್ಕೂಲ್ ಚೆಸ್ ಚಾಂಪಿಯನ್ಶಿಪ್ನ ೯ ವರ್ಷದೊಳಗಿನವರ ವಿಭಾಗವನ್ನು ಗೆದ್ದರು.[೧೦] ೨೦೧೮ ರಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್ಶಿಪ್ಗಳನ್ನು ೧೨ ವರ್ಷದೊಳಗಿನವರ ವಿಭಾಗದಲ್ಲಿ ಗೆದ್ದರು. ಅವರು ೨೦೧೮ ರ ಏಷ್ಯನ್ ಯೂತ್ ಚೆಸ್ ಚಾಂಪಿಯನ್ಶಿಪ್ಗಳಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದರು.[೧೧]
೧೫ ಜನವರಿ ೨೦೧೯ ರಂದು, ೧೨ ನೇ ವಯಸ್ಸಿನಲ್ಲಿ, ಗುಕೇಶ್ ಅವರು ಇತಿಹಾಸದಲ್ಲಿ ಎರಡನೇ-ಕಿರಿಯ ಗ್ರ್ಯಾಂಡ್ಮಾಸ್ಟರ್ ಆದರು.[೧೨] ಗುಕೇಶ್ ಅವರು ಸೆರ್ಗೆಯ್ ಕರ್ಜಾಕಿನ್ ಅವರನ್ನು ಮೀರಿಸಿದರು.[೧೩]
೨೦೨೧
[ಬದಲಾಯಿಸಿ]ಜೂನ್ ೨೦೨೧ ರಲ್ಲಿ, ಗುಕೇಶ್ ಅವರು ಜೂಲಿಯಸ್ ಬೇರ್ ಚಾಲೆಂಜರ್ಸ್ ಚೆಸ್ ಟೂರ್, ಗೆಲ್ಫಾಂಡ್ ಚಾಲೆಂಜ್ ಅನ್ನು ಗೆದ್ದರು. ೧೯ ರಲ್ಲಿ ೧೪ ಅಂಕಗಳನ್ನು ಗಳಿಸಿದರು.[೧೪]
೨೦೨೨
[ಬದಲಾಯಿಸಿ]ಆಗಸ್ಟ್ ೨೦೨೨ ರಲ್ಲಿ, ಗುಕೇಶ್ ಅವರು ೪೪ ನೇ ಚೆಸ್ ಒಲಿಂಪಿಯಾಡ್ ಅನ್ನು ೮/೮ ಪರಿಪೂರ್ಣ ಸ್ಕೋರ್ನೊಂದಿಗೆ ಪ್ರಾರಂಭಿಸಿದರು. ಅವರು ೮ ನೇ ಪಂದ್ಯದಲ್ಲಿ ಯುಎಸ್ ನಂಬರ್ ಒನ್ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸಿದರು.
ಸೆಪ್ಟೆಂಬರ್ ೨೦೨೨ ರಲ್ಲಿ, ಗುಕೇಶ್ ಅವರು ೨೭೨೬ ರ ರೇಟಿಂಗ್ನೊಂದಿಗೆ ಮೊದಲ ಬಾರಿಗೆ ೨೭೦೦ ಕ್ಕಿಂತ ಹೆಚ್ಚು ರೇಟಿಂಗ್ ಅನ್ನು ತಲುಪಿದರು.[೧೫] ಇದು ವೀ ಯಿ ಮತ್ತು ಅಲಿರೆಜಾ ಫಿರೌಜ್ಜಾ ನಂತರ ೨೭೦೦ ದಾಟಿದ ಮೂರನೇ ಅತಿ ಕಿರಿಯ ಆಟಗಾರರಾದರು.[೧೬]
ಅಕ್ಟೋಬರ್ ೨೦೨೨ ರಲ್ಲಿ, ಗುಕೇಶ್ ಅವರು ಏಮ್ಚೆಸ್ ರಾಪಿಡ್ ಪಂದ್ಯಾವಳಿಯಲ್ಲಿ ವಿಶ್ವ ಚಾಂಪಿಯನ್ ಆದರು.[೧೭]
೨೦೨೩
[ಬದಲಾಯಿಸಿ]ಫೆಬ್ರವರಿ ೨೦೨೩ ರಲ್ಲಿ, ಡುಸೆಲ್ಡಾರ್ಫ್ನಲ್ಲಿ ನಡೆದ ಡಬ್ಯ್ಲೂಆರ್(WR) ಮಾಸ್ಟರ್ಸ್ ಪಂದ್ಯಾವಳಿಯ ಮೊದಲ ಆವೃತ್ತಿಯಲ್ಲಿ ಗುಕೇಶ್ ಅವರು ಭಾಗವಹಿಸಿದರು.
ಆಗಸ್ಟ್ ೨೦೨೩ ರ ರೇಟಿಂಗ್ ಪಟ್ಟಿಯಲ್ಲಿ, ಗುಕೇಶ್ ೨೭೫೦ ರ ರೇಟಿಂಗ್ ತಲುಪಿದ ಅತ್ಯಂತ ಕಿರಿಯ ಆಟಗಾರರಾದರು.[೧೮] ಗುಕೇಶ್ ೨೦೨೩ ರ ಚೆಸ್ ವಿಶ್ವಕಪ್ನಲ್ಲಿ ಭಾಗವಹಿಸಿದರು.
೨೦೨೪
[ಬದಲಾಯಿಸಿ]ಜನವರಿ ೨೦೨೪ ರಲ್ಲಿ, ಗುಕೇಶ್ ಅವರು ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ ೨೦೨೪ ರಲ್ಲಿ ಭಾಗವಹಿಸಿದರು. ಅವರು ೧೪ ಪಂದ್ಯಗಳಿಂದ ೯ ಅಂಕಗಳನ್ನು ಗಳಿಸಿದರು (೫ ಗೆಲುವುಗಳು, ೮ ಡ್ರಾಗಳು ಮತ್ತು ೧ ಸೋಲುಗಳು) ೧ ನೇ ಸ್ಥಾನಕ್ಕಾಗಿ ೪-ವೇ ಟೈನಲ್ಲಿ ಮುಗಿಸಿದರು. ೧೨ ನೇ ಸುತ್ತಿನಲ್ಲಿ, ಗುಕೇಶ್ ಅವರು ರಮೇಶ್ಬಾಬು ಪ್ರಗ್ನಾನಂದ ವಿರುದ್ಧ ಪಂದ್ಯಗಳನ್ನು ಗೆದ್ದರು. ಟೈಬ್ರೇಕ್ನಲ್ಲಿ ಅವರು ಸೆಮಿಫೈನಲ್ನಲ್ಲಿ ಅನೀಶ್ ಗಿರಿಯನ್ನು ಸೋಲಿಸಿದರು. ಆದರೆ ಫೈನಲ್ನಲ್ಲಿ ವೈ ಯಿ ವಿರುದ್ಧ ಸೋತರು.[೧೯]
ಏಪ್ರಿಲ್ನಲ್ಲಿ, ಗುಕೇಶ್ ೨೦೨೪ ಅಭ್ಯರ್ಥಿಗಳ ಪಂದ್ಯಾವಳಿಯಲ್ಲಿ ಭಾಗವಹಿಸಿದರು.[೨೦]
ಪ್ರಶಸ್ತಿಗಳು
[ಬದಲಾಯಿಸಿ]- ೨೦೨೩: ಏಷ್ಯನ್ ಚೆಸ್ ಫೆಡರೇಶನ್ನಿಂದ ವರ್ಷದ ಆಟಗಾರ[೨೧]
- ೨೦೨೩: ಸ್ಪೋರ್ಟ್ಸ್ಟಾರ್ ಏಸಸ್ ಪ್ರಶಸ್ತಿಯಿಂದ ಅತ್ಯುತ್ತಮ ಯುವ ಸಾಧಕರು (ಪುರುಷ).
ಉಲ್ಲೇಖಗಳು
[ಬದಲಾಯಿಸಿ]- ↑ Team (CHESScom), Chess com (2019-03-22). "The Youngest Chess Grandmasters In History". Chess.com (in ಅಮೆರಿಕನ್ ಇಂಗ್ಲಿಷ್). Retrieved 2024-04-22.
- ↑ Levin (AnthonyLevin), Anthony (2024-04-21). "Gukesh Youngest Ever To Win Candidates Tournament, Tan Wins Women's By 1.5 Points". Chess.com (in ಅಮೆರಿಕನ್ ಇಂಗ್ಲಿಷ್). Retrieved 2024-04-22.
- ↑ "Candidates Chess: Gukesh becomes youngest winner, to challenge for world title". The Economic Times. 2024-04-22. ISSN 0013-0389. Retrieved 2024-04-22.
- ↑ Watson, Leon (2022-10-16). "Now Gukesh stuns Carlsen! Historic moment as Indian teen breaks record". Meltwater Champions Chess Tour 2022 (in ಅಮೆರಿಕನ್ ಇಂಗ್ಲಿಷ್). Retrieved 2022-10-17.
- ↑ "Who Is D Gukesh, The Indian Chess Prodigy Now Up Against Reigning World Champion Ding Liren". Times Now (in ಇಂಗ್ಲಿಷ್). 2024-04-22. Retrieved 2024-04-22.
Born in May 2006 in Chennai , Gukesh took to chess at the age of seven.
- ↑ "Chennai teen D Gukesh goes down in chess folklore with historic victory, 2nd Indian after legend Anand to win Candidates". Hindustan Times (in ಇಂಗ್ಲಿಷ್). 2024-04-22. Retrieved 2024-04-22.
- ↑ Lokpria Vasudevan (2019-01-17). "D Gukesh: Grit and determination personify India's youngest Grandmaster". India Today. Retrieved 2019-03-18.
- ↑ "Velammal students win gold at World Cadet Chess championship 2018". Chennai Plus. 2018-12-09. Archived from the original on 27 March 2019. Retrieved 2019-03-18.
- ↑ Lokpria Vasudevan (2019-01-17). "D Gukesh: Grit and determination personify India's youngest Grandmaster". India Today. Retrieved 2019-03-18.
- ↑ Shubham Kumthekar; Priyadarshan Banjan (2018). "Gukesh D: The story behind a budding talent". IIFL Wealth Mumbai International Chess Tournament. Archived from the original on 16 April 2019. Retrieved 2018-12-09.
- ↑ "Chess: India Gukesh, Savitha Shri bag gold medals in U-12 World Cadets Championship". scroll.in. 2018-11-16. Retrieved 2018-12-09.
- ↑ Shah, Sagar (2019-01-15). "Gukesh becomes second youngest GM in history". Chess News. ChessBase. Retrieved 2019-01-15.
- ↑ Shah, Sagar (2018-12-09). "Gukesh with 2 GM norms and 2490 Elo is on the verge of becoming world's youngest GM". ChessBase India. Retrieved 2018-12-09.
- ↑ Rao, Rakesh (14 June 2021). "Gritty Gukesh wins Gelfand Challenge". The Hindu. Retrieved 18 June 2021.
- ↑ [https://ratings.fide.com/profile/46616543/chart Gukesh D, Rating Progress Chart, FIDE
- ↑ "Biel: Gukesh becomes third-youngest player to cross the 2700 mark". en.chessbase.com. July 17, 2022.
- ↑ "Gukesh D vs. Carlsen, Magnus | Aimchess Rapid | Prelims 2022". chess24.com (in ಇಂಗ್ಲಿಷ್). Retrieved 2022-10-16.
- ↑ Gukesh Breaks Record: Youngest Player To Cross 2750 Rating, chess.com, July 21, 2023.
- ↑ Rao, Rakesh (2024-01-29). "TATA Steel Chess 2024: Gukesh finishes joint second in Masters, Mendonca wins Challenger". Sportstar (in ಇಂಗ್ಲಿಷ್). Retrieved 2024-01-31.
- ↑ Magnus Predictions, chess.com, April 18, 2024
- ↑ "Gukesh won the "Player of the Year" and "Best Young Achievers Male" awards". chessarena.com.