ಕ್ಲೌನ್ ಮೀನು
ಅನಿಮೋನ್ ಮೀನು (ಕ್ಲೌನ್ ಮೀನು) | |
---|---|
Ocellaris clownfish, Amphiprion ocellaris | |
Scientific classification | |
Genera | |
ಕ್ಲೌನ್ ಮೀನು (ಆಂಫಿಪ್ರಿಯನ್ಆಸಿಲೇರಿಸ್) ಅಥವಾ ಅನೆಮೋನ್ ಮೀನುಗಳು ಸಮುದ್ರದ ಮೀನುಗಳಲ್ಲೊ೦ದು ವಿಧ. ಕ್ಲೌನ್ ಮೀನಿನ 30 ಪ್ರಭೇದಗಳು ಪರಿಸರದಲ್ಲಿ ಗುರುತಿಸಲ್ಪಟ್ಟಿವೆ. ಇವುಗಳು ಉಭಯಾವಲಂಭೀ ಜೀವಿಗಳಾಗಿವೆ. ಕ್ಲೌನ್ ಮೀನುಗಳು ಸಾಮಾನ್ಯವಾಗಿ ಹಳದಿ , ಕಿತ್ತಳೆ, ಕೆಂಪು ಅಥವಾ ಕಪ್ಪುಬಣ್ಣ ಮತ್ತು ಹಲವು ಬಿಳಿ ಪಟ್ಟಿಗಳನ್ನು ಹೊಂದಿರುತ್ತವೆ. ಇವುಗಳಲ್ಲಿ ಅತ್ಯಂತ ಉದ್ದದ ವಿಧದವು 15 – 16 cm ( 5.9 – 6.3 in ) ಆಗಿದ್ದು, ಅತ್ಯ೦ತ ಚಿಕ್ಕವು 7.8 ( 2.8 – 3.1 in ) ಉದ್ದ ಬೆಳೆಯಬಲ್ಲವು.
ವಿಂಗಡನೆ ಮತ್ತು ಆವಾಸಗಳು
[ಬದಲಾಯಿಸಿ]ಕ್ಲೌನ್ ಮೀನುಗಳು ಬೆಚ್ಚನೆಯ ನೀರಿಗೆ ಹೊಂದಿಕೊಂಡಿವೆ ಹಾಗಾಗಿ ಇವುಗಳು ಹಿಂದೂಮಹಾಸಾಗರ, ಫೆಸಿಫಿಕ್ ಮಹಾಸಾಗರ, ದೊಡ್ಡ ಹವಳದಬಂಡೆ ಮತ್ತು ಕೆಂಪು ಸಾಗರಗಳಲ್ಲಿ ಕಂಡುಬರುತ್ತವೆ. ಕ್ಲೌನ್ ಮೀನುಗಳು ಆಳವಿಲ್ಲದ ಸಮುದ್ರದ ತಳಗಳಲ್ಲಿ ಹವಳದ ಬಂಡೆಗಳ ನಡುವೆ ಜೀವಿಸುತ್ತವೆ. ಅಂಟ್ಲಾಟಿಕ್ ಸಾಗರಗಳಲ್ಲಿ ಯಾವುದೇ ಕ್ಲೌನ್ ಮೀನುಗಳು ಕಂಡುಬಂದಿಲ್ಲ.[೧]
ಪರಿಶತ್ತು
[ಬದಲಾಯಿಸಿ]ಕ್ಲೌನ್ ಮೀನುಗಳು ಮಿಶ್ರಹಾರಿ. ಇವುಗಳು ಸಮುದ್ರದ ಅನಿಮೊನ್ -ಗಳೊಂದಿಗೆ ಉಭಯಾವಲಂಬಿ ಜೀವನ ನಡೆಸುತ್ತವೆ. ಇದರ ಮಲ ಅನಿಮೊನ್ ಗೆ ಗೊಬ್ಬರದಂತೆ ಪೋಷಕಾ೦ಶವನ್ನು ನೀಡುತ್ತದೆ ಮತ್ತು ಅನಿಮೊನ್-ಗಳನ್ನು ಮತ್ತು ಅನಿಮೊನ್ ನ ಮಲವನ್ನು ಕ್ಲೌನ್ ಮೀನುಗಳು ಆಹಾರವಾಗಿ ಸೇವಿಸುತ್ತವೆ. ಕ್ಲೌನ್ ಮೀನುಗಳ ಪ್ರಾರ೦ಭದಲ್ಲಿ ಸೀಗ್ಡಿಯನ್ನು ಸೇವಿಸುತ್ತವೆ .[೨] [೩]
ಸಂತಾನೊತ್ಪತ್ತಿ
[ಬದಲಾಯಿಸಿ]ಕ್ಲೌನ್ ಮೀನುಗಳ ಗುಂಪಿನಲ್ಲಿನ-ಮೀನುಗಳು ಒಂದು ನಿರ್ದಿಷ್ಟ ಕ್ರಮ-ಶ್ರೇಣೀಕರಣಕ್ಕೆ ಒಳಪಟ್ತಿರುತ್ತವೆ. .ಶ್ರೇಣಿಯಲ್ಲಿ ಅತ್ಯಂತ ಪ್ರಮುಖವಾದದ್ದು ಹೆಣ್ಣು ಕ್ಲೌನ್ ಮೀನು ಅದರನಂತರದ ಸ್ಥಾನದಲ್ಲಿ ಸಂತಾನೋತ್ಪತ್ತಿಯಲ್ಲಿ ಭಾಗವಹಿಸುವ ಗಂಡು ಪ್ರಮುಖ ವಾಗಿರುತ್ತದೆ . ಗುಂಪಿನಲ್ಲಿ ಪ್ರಮುಖ ಗಂಡು ಮತ್ತು ಪ್ರಮುಖ ಹೆಣ್ಣು ಮಾತ್ರ ಸಂತಾನೋತ್ಪತ್ತಿಯಲ್ಲಿ ತೊಡಗಲು ಸಾಧ್ಯ. ಅದು ಬಾಹ್ಯ ಫಲೀಕರಣದ ಮೂಲಕ ನಡೆಯುತ್ತದೆ. ಕ್ಲೌನ್ ಮೀಗಳು ಲಿಂಗ ಬದಲಾವಣೆಗೊಳ್ಳಬಲ್ಲವು. ಹುಟ್ಟಿನಲ್ಲಿ ಎಲ್ಲ ಕ್ಲೌನ್ ಮೀನುಗಳು ಗಂಡುಗಳಾಗಿ ಹುಟ್ಟುತ್ತವೆ. ಒಂದು ಗುಂಪಿನಲ್ಲಿನ ಹೆಣ್ಣು ಕ್ಲೌನ್ ಮೀನು ಸತ್ತುಹೋದರೆ ಅಥವಾ ಗುಂಪಿನಿಂದ ಕಳೆದುಹೋದರೆ ಅತ್ಯಂತ ದೊಡ್ಡ ಗಂಡು ಕ್ಲೌನ್ ಮೀನು ಹೆಣ್ಣಾಗಿ ಲಿಂಗ ಪರಿವರ್ತನೆಯಾಗುತ್ತದೆ . ಉಳಿದ ಗಂಡುಗಳ ಸ್ಥಾನವು ಶ್ರೇಣಿಯಲ್ಲಿ ಒಂದುಮಟ್ಟ ಹೆಚ್ಚುತ್ತದೆ . ಕ್ಲೌನ್ ಮೀನುಗಳು ತಮ್ಮ ಮೊಟ್ಟೆಗಳನ್ನು ಸಮತಟ್ಟದ ಮತ್ತು ತಮ್ಮ ವಾಸಸ್ಥಾನದ ಸಮೀಪದಲ್ಲಿಡುತ್ತವೆ . ಹುಣ್ಣಿಮೆಯ ದಿನದಲ್ಲಿ ಕ್ಲೌನ್ ಮೀನುಗಳು ಸಂತಾನೊತ್ಪತ್ತಿ ನಡೆಸುತ್ತವೆ . ಅವುಗಳ ಪ್ರಭೇದಗಳ ಅನುಸಾರವಾಗಿ ಅವುಗಳು 100 ರಿಂದ 1000 ಮೊಟ್ಟೆಗಳನ್ನಿಡಬಹುದು . ಗಂಡು ಕ್ಲೌನ್ ಮೀನು ಮೊಟ್ಟೆಗಳನ್ನು ರಕ್ಷಿಸುತ್ತವ ಹೊಣೆ ಹೊತ್ತಿರುತ್ತವೆ. 6 – 10 ದಿನಗಳಲ್ಲಿ ಮೊಟ್ಟೆ ಗಳು ಮುಸ್ಸಂಜೆಯ ನಂತರದ 2 ಗಂಟೆಗಳಲ್ಲಿ, ಕತ್ತಲಲ್ಲಿ ಒಡೆಯತ್ತವೆ.[೪]
ರೂಪವಿಜ್ಞಾನದಲೀನ ವೈವಿದ್ಯತೆ
[ಬದಲಾಯಿಸಿ]-
A. percula (ಪರ್ಕ್ಯುಲಾ ಕ್ಲೌನ್ ಮೀನು) ಸಾದಾರಣ ಕಿತ್ತಳೆ ಹಾಗು ಕಪ್ಪು ವಿಭಿನ್ನತೆಯಲ್ಲಿ.
-
A. clarkii (ಕ್ಲಾರ್ಕ್ ಕ್ಲೌನ್ ಮೀನು)
-
A. polymnus (ಕ್ಲಾರ್ಕ್ ಕ್ಲೌನ್ ಮೀನು)
-
A. ephippium (ಕೆಂಪು ಸ್ಯಾಡೆಲ್ ಬೆನ್ನಿನ ಕ್ಲೌನ್ ಮೀನು)
-
A. perideraion (ತೆಳು ಕೆ೦ಪು ಬಣ್ಣದ ಕ್ಲೌನ್ ಮೀನು)
-
ಗಂಡು P. biaculeatus (ತೆಳು ನೇರಳೆ ಬಣ್ಣದ ಕ್ಲೌನ್ ಮೀನು ) (ಪಾಪುವ ನ್ಯುಗಿನಿ)Papua New Guinea
Notes
[ಬದಲಾಯಿಸಿ]References
[ಬದಲಾಯಿಸಿ]- ↑ Society, National Geographic. "Clown Anemonefish, Clown Anemonefish Pictures, Clown Anemonefish Facts - National Geographic". Archived from the original on 2010-01-13. Retrieved 2018-07-24.
- ↑ Porat, D.; Chadwick-Furman, N.E. (2005). "Effects of anemonefish on giant sea anemones: Ammonium uptake, zooxanthella content and tissue regeneration" (PDF). Marine and Freshwater Behaviour and Physiology. 29 (1): 43–51. doi:10.1080/10236240500057929. Archived from the original (PDF) on 11 ಮೇ 2016. Retrieved 18 April 2013.
- ↑ Fautin, D.G.; Guo, C.; Hwang, J.S. (1995). "Costs and benefits of the symbiosis between the anemoneshrimp Periclimenes brevicarpalis and its host Entacmaea quadricolor". Marine Ecology Progress Series. 129: 77–84. doi:10.3354/meps129077.
- ↑ http://eol.org/pages/24566/overview Archived 2018-02-16 ವೇಬ್ಯಾಕ್ ಮೆಷಿನ್ ನಲ್ಲಿ. Amphiprion — OverviewAnemonefishes and Clownfishes