ವಿಷಯಕ್ಕೆ ಹೋಗು

ಕ್ಲೇರಿಹ್ಯೂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಲೇರಿಹ್ಯೂ- ಪ್ರಾಸಬದ್ಧವಾದ ಎರಡು ದ್ವಿಪದಿಗಳನ್ನೊಳಗೊಂಡ ಒಂದು ಚುಟುಕ ಪದ್ಯಜಾತಿ. ಎಡ್ಮಂಡ್ ಕ್ಲೇರಿಹ್ಯೂ ಬೆಂಟ್ಲೆ (1875-1956) ಎಂಬಾತ ಬಳಕೆಗೆ ತಂದನಾಗಿ ಈ ಪದ್ಯಜಾತಿಗೆ ಅವನ ಹೆಸರೇ ಬಂದಿದೆ. ಮುಖ್ಯವಾಗಿ ಅಣಕ, ಪರಿಹಾಸಗಳೇ ಈ ಚುಟಕಗಳ ಗುರಿ. ಮೊದಲ ಸಾಲಿನಲ್ಲಿ ಒಬ್ಬನ ಹೆಸರು ಬರುತ್ತದೆ. ಅನಂತರ ಅವನನ್ನು ಕುರಿತ ಒಂದು ವಿನೋದ ಪ್ರಸಂಗ ಬರುತ್ತದೆ. ಬೆಂಟ್ಲೆ ಪತ್ರಿಕೋದ್ಯಮಿ. ಕಾದಂಬರಿಕಾರ. ಬೇಸರ ಕಳೆಯುವುದಕ್ಕಾಗಿ ಆಗಾಗ ಚುಟಕ ಪದ್ಯಗಳನ್ನು ಗೀಚಿದನಂತೆ. ಬಯಾಗ್ರಫಿ ಫಾರ್ ಬಿಗಿನರ್ಸ್ (1905), ಮೋರ್ ಬಯಾಗ್ರಫಿ (1929) ಮತ್ತು ಬೇಸ್‍ಲೆಸ್ ಬಯಾಗ್ರಫಿ (1939) ಎಂಬ ಮೂರು ಸಂಕಲನಗಳಲ್ಲಿ ಈತನ ಕ್ಲೇರಿಹ್ಯೂಗಳು ಪ್ರಕಟವಾಗಿವೆ. ಉದಾಹರಣೆಗಾಗಿ ಒಂದು ಪದ್ಯನೋಡಬಹುದು.

ಆಫ್ಟರ್ ಡಿನರ್, ಎರಾಸ್‍ಮಸ್
ಟೋಲ್ಡ್ ಕೋಲೆಟ್ ಟು ಬಿ " ಬ್ಲಾಸ್‍ಮಸ್ "
ಹ್ವಿಚ್ ಕೋಲೆಟ್, ವಿತ್ ಸಮ್ ಹೀಟ್
ರಿಕ್ವೆಸ್ಟೆಡ್ ಹಿಮ್ ಟು ರಿಪೀಟ್.

ಈ ಪದ್ಯಜಾತಿ ಲಿಮರಿಕ್‍ನಷ್ಟೇ ಜನಪ್ರಿಯವಾಯಿತು. ಈಚೆಗೆ ಇಂಥ ಪದ್ಯ ರಚನೆ ಮಾಡುವುದು ಮನೋರಂಜನೆಯ ಆಟವಾಗಿದೆ. ಟೈಮ್ಸ್ ಲಿಟರಲಿ ಸಪ್ಲಿಮೆಂಟಿನಂಥ ಪತ್ರಿಕೆಗಳು ಮೊದಲೆರಡು ಸಾಲುಗಳನ್ನು ಕೊಟ್ಟು ಪದ್ಯ ಪೂರ್ಣಮಾಡುವ ಸ್ಪರ್ಧೆಗಳನ್ನು ಆಗಾಗ ಏರ್ಪಡಿಸಿರುವುದನ್ನು ಇಲ್ಲಿ ನೆನೆಯಬಹುದು. ಜಿ.ಪಿ.ರಾಜರತ್ನಂ ಅವರು ಕನ್ನಡದಲ್ಲಿ ಮಕ್ಕಳಿಗಾಗಿ ಇಂಥ ಚುಟುಕಗಳನ್ನು ಯಶಸ್ವಿಯಾಗಿ ರಚನೆ ಮಾಡಿದ್ದಾರೆ. ದಿನಕರ ದೇಸಾಯಿಯವರ ರಚನೆಗಳು ರಾಜಕೀಯ ವಿಷಯಗಳನ್ನು ಟೀಕಿಸುತ್ತವೆ.

ಕನ್ನಡದಲ್ಲೂ ಕ್ಲೇರಿಹ್ಯೂಗಳನ್ನು ಅಂತರ್ಜಾಲದಲ್ಲಿ ನೋಡಬಹುದಾಗಿದೆ.


ಇವನ್ನೂ ನೋಡಿ

[ಬದಲಾಯಿಸಿ]
  1. ಕನ್ನಡದಲ್ಲಿ ಕ್ಲೇರಿಹ್ಯೂ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: