ಕೊತ್ತಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊತ್ತಳದ ರೇಖಾಚಿತ್ರ

ಕೊತ್ತಳ (ಬುರುಜು) ಫಿರಂಗಿ ರಕ್ಷಣಾ ವ್ಯವಸ್ಥೆಕೂಡು ಗೋಡೆಯಿಂದ ಹೊರಗಡೆ ಚಾಚುವ ಒಂದು ಕೋನೀಯ ರಚನೆ. ಪೂರ್ಣವಾಗಿ ಅಭಿವೃದ್ಧಿಗೊಂಡ ಕೊತ್ತಳ ಎರಡು ಹೊರಮೈಗಳು ಮತ್ತು ಎರಡು ಪಾರ್ಶ್ವಗಳನ್ನು ಹೊಂದಿರುತ್ತದೆ ಮತ್ತು ಪಾರ್ಶ್ವಗಳಿಂದ ಸಿಡಿಗುಂಡು ಕೂಡು ಗೋಡೆ ಮತ್ತು ಪಕ್ಕದ ಕೊತ್ತಳಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ.[೧] ೧೬ನೇ ಶತಮಾನದ ಮಧ್ಯದಿಂದ ೧೯ನೇ ಶತಮಾನದ ಮಧ್ಯದವರೆಗೆ ಪ್ರಧಾನವಾದ ರಕ್ಷಣಾ ವ್ಯವಸ್ಥೆಯ ಶೈಲಿಯಲ್ಲಿ ಇದು ಒಂದು ಅಂಶವಾಗಿದೆ. ಅವು ಬದಲಿಸಿದ ಮಧ್ಯಯುಗದ ರಕ್ಷಣಾ ವ್ಯವಸ್ಥೆಗಳಿಗೆ ಹೋಲಿಸಿದರೆ ಕೊತ್ತಳ ರಕ್ಷಣಾ ವ್ಯವಸ್ಥೆಗಳು ಹೆಚ್ಚಿನ ಪ್ರಮಾಣದ ನಿಷ್ಕ್ರಿಯ ಪ್ರತಿರೋಧವನ್ನು ಮತ್ತು ಮದ್ದು ಫಿರಂಗಿಯ ಕಾಲದಲ್ಲಿ ವ್ಯಾಪ್ತಿಯುತ ರಕ್ಷಣೆಗೆ ಹೆಚ್ಚಿನ ಅವಕಾಶ ಒದಗಿಸುತ್ತವೆ.

ಕೊತ್ತಳಗಳು ಅನೇಕ ವಿಷಯಗಳಲ್ಲಿ ಮಧ್ಯಯುಗದ ಮೇರುವೆಗಳಿಂದ ಬೇರೆಯಾಗಿವೆ. ಕೊತ್ತಳಗಳು ಮೇರುವೆಗಳಿಗಿಂತ ಕಡಿಮೆ ಎತ್ತರ ಹೊಂದಿರುತ್ತವೆ ಮತ್ತು ಸಾಮಾನ್ಯವಾಗಿ ಪಕ್ಕದ ಕೂಡು ಗೋಡೆಯಷ್ಟೆ ಎತ್ತರ ಹೊಂದಿರುತ್ತವೆ. ಮೇರುವೆಗಳ ಎತ್ತರ ಅವನ್ನು ಏರಲು ಕಷ್ಟವಾಗಿಸಿದರೂ, ಫಿರಂಗಿಗಳು ಅವನ್ನು ನೆಲಸಮ ಮಾಡಲು ಸುಲಭವಾಗಿಸಿತು. ಕೊತ್ತಳವು ಸಾಮಾನ್ಯವಾಗಿ ಮುಂದೆ ಒಂದು ಅಗಳನ್ನು ಹೊಂದಿರುತ್ತಿತ್ತು, ಮತ್ತು ಇದರ ಎದುರು ಭಾಗವನ್ನು ಸಹಜ ಮಟ್ಟಕ್ಕಿಂತ ಎತ್ತರಕ್ಕೆ ಕಟ್ಟಲಾಗುತ್ತಿತ್ತು ಮತ್ತು ಕ್ರಮೇಣ ಇಳಿಜಾರಾಗುತ್ತಿತ್ತು. ಈ ಇಳುಕಲು ಕೊತ್ತಳದ ಬಹುತೇಕ ಭಾಗವನ್ನು ಆಕ್ರಮಣಕಾರನ ಫಿರಂಗಿಯಿಂದ ರಕ್ಷಿಸುತ್ತಿತ್ತು ಮತ್ತು ಅಗಳಿನ ಬುಡದಿಂದ ಕೊತ್ತಳದ ಮೇಲ್ತುದಿಗೆ ದೂರ ಅದನ್ನು ಏರಲು ಇನ್ನೂ ಕಷ್ಟವಾಗಿಸುತ್ತಿತ್ತು.

ಮಧ್ಯಯುಗದ ಕೊನೆಯ ಭಾಗದ ಮೇರುವೆಗಳಿಗೆ ವ್ಯತಿರಿಕ್ತವಾಗಿ, ಕೊತ್ತಳಗಳು ಬಾಗಿದ ಬದಿಗಳ ಬದಲು ಚಪ್ಪಟೆ ಬದಿಗಳನ್ನು ಹೊಂದಿರುತ್ತಿದ್ದವು. ಇದು ಸುರಕ್ಷಿತ ಪ್ರದೇಶವನ್ನು ಇಲ್ಲವಾಗಿಸಿ ಕೊತ್ತಳದ ಮುಂದಿನ ಯಾವುದೇ ಬಿಂದುವಿನ ಮೇಲೆ ಗುಂಡು ಹಾರಿಸಲು ರಕ್ಷಕರಿಗೆ ಸಾಧ್ಯವಾಗಿಸುತ್ತಿತ್ತು.

ಉಲ್ಲೇಖಗಳು[ಬದಲಾಯಿಸಿ]

  1. Whitelaw 1846, p. 444
"https://kn.wikipedia.org/w/index.php?title=ಕೊತ್ತಳ&oldid=752991" ಇಂದ ಪಡೆಯಲ್ಪಟ್ಟಿದೆ