ಕೂದಲು
ಕೂದಲು ಒಳಚರ್ಮ, ಅಥವಾ ಚರ್ಮದಲ್ಲಿ ಕಂಡುಬರುವ ಕೋಶಕಗಳಿಂದ ಬೆಳೆಯುವ ಒಂದು ಪ್ರೋಟೀನ್ ಎಳೆ. ಕೂದಲು ಸಸ್ತನಿಗಳ ನಿರ್ಧಾರಕ ಗುಣಲಕ್ಷಣಗಳಲ್ಲೊಂದು. ಮಾನವ ಶರೀರವು, ರೋಮರಹಿತ ಚರ್ಮ ಪ್ರದೇಶಗಳನ್ನು ಹೊರತುಪಡಿಸಿ, ದಪ್ಪನೆಯ ಅಂತ್ಯ ಹಾಗೂ ನಯವಾದ ವೆಲಸ್ ರೋಮವನ್ನು ಉತ್ಪಾದಿಸುವ ಕೋಶಕಗಳಿಂದ ಮುಚ್ಚಲ್ಪಟ್ಟಿರುತ್ತದೆ.
ತಲೆಯ ಕೂದಲನ್ನು ನೈಸರ್ಗಿಕ ಮೂಲಗಳಿಂದ ಅರೋಗ್ಯಕರವಾಗಿ ಬೆಳೆಯುವಂತೆ ನೋಡಿಕೊಳ್ಳಬಹುದು.ಇದಕ್ಕೆ ಮೂಲವಾಗಿ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ನಿತ್ಯಲೂ ಸೇವಿಸಬೇಕು.ಇತ್ತೀಚಿನ ಯುಗದಲ್ಲಿ ರಾಸಾಯನಿಕ ಶಾಂಪೂ, ಕೇಶ ವಿನ್ಯಾಸ ಎಂದು ಅತಿಹೆಚ್ಚು ಮಂದಿ ತಮ್ಮ ಸೌಂದರ್ಯ ರಹಸ್ಯವನ್ನು ಹಾಳುಗೆಡುವುತ್ತಿದ್ದಾರೆ. ರಾಸಾಯನಿಕ ಪದಾರ್ಥಗಳನ್ನು ಬಳಸುವ ಮೂಲಕೆ ಕೂದಲಿನ ಅರೋಗ್ಯವನ್ನು ಕೆಡೆಸಿಕೊಳ್ಳುತ್ತಿದ್ದೇವೆ.ದೇಹದಲ್ಲಿ ಎಲ್ಲ ಕ್ರಿಯಗಳಿಗು ಕಾರಣವಾಗಿರುವಂತೆಯೆ ಕೂದಲಿನ ಆರೈಕೆ ಮತ್ತು ಅರೋಗ್ಯವನ್ನು ಹಾರ್ಮೋನುಗಳು ನೋಡಿಕೊಳ್ಳುತ್ತದೆ.
ಗುಂಗುರು ಕೂದಲು ಕೂದಲಿನ ತಂತುವಿನ ಆಕಾರದಿಂದ ನಿರ್ಧಾರಿತವಾಗುತ್ತದೆ. ಗುಂಗುರು ಕೂದಲಿಗೆ ಕುಟಿಲಾಳಕ ಪರ್ಯಾಯ ನಾಮ. ಅಂಡಾಕಾರದ ಮತ್ತು ಇತರ ಆಕಾರದ ತಂತುಗಳಿದ್ದರೆ ಗುಂಗುರು ಕೂದಲು ಉಂಟಾಗುತ್ತದೆ. ಈ ಪ್ರಕಾರದ ಕೂದಲು ಸಾಮಾನ್ಯವಾಗಿ ಅಗಾಧ ಪ್ರಮಾಣದಲ್ಲಿದ್ದು, ಹವಾಮಾನವನ್ನು ಅವಲಂಬಿಸಿರುತ್ತದೆ ಮತ್ತು ಹಾನಿಗೊಳಗಾಗುವ ಸಂಭವವಿರುತ್ತದೆ.