ಕಾಯರುಬಳ್ಳಿ
ಗೋಚರ
ಕಾಯರುಬಳ್ಳಿ ಎಂದರೆ ಒಂದು ವಿಧದ ಬಳ್ಳಿ ಸಸ್ಯ. ಇದರ ಸಸ್ಯಶಾಸ್ತ್ರೀಯ ಹೆಸರು ಸ್ಟ್ರೀಕ್‍ನೋಸ್ ಏನಿಯ ಎಂದು. ಇದು ಪೂರ್ವ ಏಷಿಯಾ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಸಸ್ಯಶಾಸ್ತ್ರೀಯ ವರ್ಗೀಕರಣ
[ಬದಲಾಯಿಸಿ]ಇದು ಲೊಗಾನಿಯೇಸಿ [೧]ಕುಟುಂಬದ ಒಂದು ಪ್ರಭೇದ.ಈ ಕುಟುಂಬದಲ್ಲಿ ನೂರಕ್ಕಿಂತಲೂ ಹೆಚ್ಚು ಸಸ್ಯಗಳಿವೆ.ಈ ಕುಟುಂಬದ ಸಸ್ಯಗಳು ಪ್ರಪಂಚದೆಲ್ಲೆಡೆ ಹರಡಿಕೊಂಡಿದ್ದು, ಬೇರು, ಎಲೆ, ಕಾಂಡದಲ್ಲಿ ವಿಷಯುಕ್ತ ಇಂಡೋಲ್ ಅಲ್ಕಲಾಯ್ಡ್ಸ್ ಗಳನ್ನು ಹೊಂದಿರುವುದರಿಂದ ವಿಶಿಷ್ಟವಾಗಿವೆ.
ಹರಡುವಿಕೆ
[ಬದಲಾಯಿಸಿ]ಇದು ಭಾರತದಲ್ಲಿ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಸುಮಾರು ೧೨೦೦ ಮೀಟರ್ ಎತ್ತರದ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಬಳ್ಳಿಯಾಗಿ ಇತರ ಮರಗಳ ಮೇಲೆ ಹಬ್ಬುತ್ತದೆ.ಇದರ ಪುನರುತ್ಪತ್ತಿ ಹೆಚ್ಚಾಗಿ ಬೀಜಗಳಿಂದಾಗುತ್ತದೆ.
ಉಪಯೋಗಗಳು
[ಬದಲಾಯಿಸಿ]ಈ ಸಸ್ಯವನ್ನು ಇದರಲ್ಲಿರುವ ಅಲ್ಕಲಾಯ್ಡ್ಸ್ ನಿಂದಾಗಿ ಔಷಧಗಳಲ್ಲಿ ಉಪಯೋಗದಲ್ಲಿದೆ. ಜಾನಪದ ಔಷಧ ಪದ್ಧತಿಯಲ್ಲಿ ಹೆಚ್ಚಾಗಿ ಇದನ್ನು ಉಪಯೋಗಿಸುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ [[en:Loganiaceae]
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |