ಕರ್ನಾಟಕ ಲೇಖಕಿಯರ ಸಂಘ
ಗೋಚರ
ಕರ್ನಾಟಕ ಲೇಖಕಿಯರ ಸಂಘವನ್ನು [೧] ಮಹಿಳಾ ಸಾಹಿತ್ಯ ಗಟ್ಟಿಯಾಗಿ ನೆಲೆ ನಿಲ್ಲಲು ೧೯೭೯ ರಲ್ಲಿ ಜಿ.ನಾರಾಯಣ ಅವರ ಬೆಂಬಲದೊಡನೆ,ಹಾಗೂ ಇತರ ಕೆಲವು ಲೇಖಕಿಯರ ಜೊತೆಗೂಡಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಅದು ತನ್ನದೇ ಆದ ರೀತಿಯಲ್ಲಿ ಹಲವಾರು ಸತ್ವಯುತ ಕಾರ್ಯಕ್ರಮಗಳನ್ನು ಯೋಜಿಸಿ ನಡೆಸಿಕೊಂಡು ಬಂದಿದೆ. ಈ ಸದಸ್ಯರು ಜವಾಬ್ದಾರಿಯುತವಾದ ಹುದ್ದೆಗಳನ್ನು ತೆಗೆದುಕೊಂಡು ಲೇಖಕಿಯ ಸಂಘಕ್ಕೆ ಮಹತ್ವದ ದಿಶೆಯನ್ನು ಕೊಡುವಲ್ಲಿ ನೆರವಾಗಿದ್ದಾರೆ.
- ಡಾ. ನಿರುಪಮಾ,
- ಚಿ.ನ.ಮಂಗಳಾ,
- ಎಚ್.ಎಸ್.ಪಾರ್ವತಿ,
- ನಾಗಮಣಿ ಎಸ್ ರಾವ್,
- ಟಿ.ಸುನಂದಮ್ಮ
ಚಟುವಟಿಕೆಗಳು
[ಬದಲಾಯಿಸಿ]- ಮಹಿಳಾ ಸಾಹಿತ್ಯ ಚರಿತ್ರೆ ರಚನೆಯಾಗಬೇಕು; ಮಹಿಳೆಯರ ಸಾಹಿತ್ಯ ಕಾಣಿಕೆಗಳು ಸೂಕ್ತವಾಗಿ ದಾಖಲೆಯಾಗಬೇಕು, ಎಂಬಿತ್ಯಾದಿ ಸಂಘದ ಹಿರಿಯಾಸೆ. ಈ ದಿಕ್ಕಿನಲ್ಲಿ ಪೂರಕ ಸಾಹಿತ್ಯವನ್ನು ಭದ್ರಗೊಳಿಸುವ ಕಾರ್ಯವನ್ನು ಸಂಘವು ತನ್ನ ಇತಿ-ಮಿತಿಗಳಿಗೆ ಒಳಪಟ್ಟು ಮಾಡುತ್ತಾ ಬಂದಿದೆ. ಈಗಾಗಲೇ ಹಲವಾರು ಹಿರಿಯ ಲೇಖಕಿಯರು ಮತ್ತು ಅವರ ಕೃತಿಗಳನ್ನು ಕುರಿತ ಪುಸ್ತಕಗಳನ್ನು ಪ್ರಕಟಿಸಲಾಗಿದೆ.
- ಮಹಿಳೆಯರ ಸಾಹಿತ್ಯ ಕೃತಿಗಳನ್ನು ಪ್ರಕಾಶಪಡಿಸುವದಲ್ಲದೆ, ಲೇಖಕಿಯರ ಆತ್ಮಕತೆಗಳನ್ನೂ ಪ್ರಕಟಿಸಬೇಕೆಂಬ ಉದ್ದೇಶದಿಂದ ಮಹಿಳೆ-ಪರಿಸರ-ಸಾಹಿತ್ಯ ಎಂಬ ಯೋಜನೆಯನ್ನು ಹಮ್ಮಿಕೊಂಡು, ಹಲವಾರು ಲೇಖಕಿಯರನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಲಾಗಿದೆ. ಲೇಖಕಿಯರ ಮಾಹಿತಿಕೋಶ, ಅವರ ಆತ್ಮಕಥನ ರೂಪಕಗಳು, ಅಲ್ಲದೆ ಹಲವಾರು ಕವಯಿತ್ರಿಯರ ಕವನ ಸಂಕಲನಗಳು, ಬೆಳ್ಳಿಹಬ್ಬದ ಸಂಚಿಕೆ, ಮೊದಲಾದವುಗಳನ್ನು ಪ್ರಕಟಿಸಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "ಕರ್ನಾಟಕ ಲೇಖಕಿಯರ ಸಂಘ.ಬೆಂಗಳೂರು'". Archived from the original on 2015-09-26. Retrieved 2015-03-20.