ವಿಷಯಕ್ಕೆ ಹೋಗು

ಕಮರ್ಷಿಯಲ್ ಸ್ಟ್ರೀಟ್, ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳನ್ನು ಈಗಾಗಲೇ ಸುತ್ತಿದ್ದಿರೆಂದರೆ, ನಡೆಯಿರಿ, ಕಮರ್ಷಿಯಲ್ ಸ್ಟ್ರೀಟ್ಸ್ ಗೆ! ಈಗ ಶಾಪಿಂಗ್ ಸಮಯ. ಕಮರ್ಷಿಯಲ್ ಸ್ಟ್ರೀಟ್ಸ್ ಯಾವಾಗಲು ಲೈಟ್ ಖಂಬಗಳು ಮತ್ತು ಅಲಂಕಾರಿಕ ಲೈಟ್ ಎಳೆಗಳಿಂದ ಆವರಿಸಿರುತ್ತದೆ.[] ಬ್ರಿಗೇಡ್ ರೊಡ್ ಮತ್ತು ಕಾಮರಾಜ ರೊಡ್ ಮುಖಾಂತರ ಇದನ್ನು ತಲುಪಬಹುದು. ಇಲ್ಲಿ ದೊಡ್ಡ ದೊಡ್ಡ ಖ್ಯಾತವಾಗಿರುವ ಅಂಗಡಿ ಮುಗ್ಗಟ್ಟುಗಳ ಜೊತೆಗೆ ಬೂಟುಗಳು, ಕಲಾಕೃತಿಗಳು ಹಾಗು ಇತರೆ ಸಾಮಾನ್ಯ ಸಾಮಗ್ರಿಗಳನ್ನು ಮಾರುವ ಅಂಗಡಿಗಳು ಕೂಡಾ ಇವೆ. ಕಮರ್ಷಿಯಲ ಸ್ಟ್ರೀಟ್ ತನ್ನ ಬಣ್ಣ ಬಣ್ಣದ ಅದರಲ್ಲೂ ಮಹಿಳೆಯರ ಉಡುಪುಗಳಿಗಾಗಿ ಜನಪ್ರಿಯವಾಗಿದೆ.[] ಸಾಮಾನ್ಯವಾಗಿ ಇಲ್ಲಿ ಅಂಗಡಿಗಳು ಬೆಳಿಗ್ಗೆ 10.30 ರ ನಂತರ ತೆರೆಯುತ್ತವೆ. ಪ್ಲಾಸ್ಟಿಕ್ ರೂಪದ ದುಡ್ಡುಗಳಾದ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಗಳನ್ನು ಇಲ್ಲಿ ಬಳಸುವುದು ಕಷ್ಟಕರವಾದ್ದರಿಂದ ದುಡ್ಡನ್ನು ತೆಗೆದುಕೊಂಡು ಹೋಗುವುದು ಉತ್ತಮ. ಇಲ್ಲಿ ನೀವು ಸ್ಥಿತಿಗತಿಗಳಿಗನುಸಾರವಾಗಿ ಒಂದು ಮಟ್ಟಕ್ಕೆ ಇಳಿದು ಚೌಕಾಸಿಯಿಂದ ಖರೀದಿ ಮಾಡಬೇಕು. ಇಲ್ಲಿಯ ಬಹುತೇಕ ಅಂಗಡಿಗಳು ಮಹಿಳೆಯರಿಗೇ ಮೀಸಲಾಗಿದ್ದು, ಅಲ್ಲಲ್ಲಿ ಕಾಣಸಿಗುವ ಚಹಾ ಅಂಗಡಿಗಳು,ಹೋಟೆಲ್ ಗಳು ಪುರುಷರಿಗೆ ಆನಂದವನ್ನುಂಟುಮಾಡುತ್ತವೆ. ಶುಚಿತ್ವವನ್ನು ಇಷ್ಟಪಡುವವರು ಕೆ.ಎಫ್.ಸಿ ಮತ್ತು ಪೀಜ್ಜಾ ಹಟ್ ಗಳಿಗೆ ಭೇಟಿ ನೀಡಬಹುದು. ಒಂದು ದಿನದ ಚಟುವಟಿಕೆಯು ನಿಮ್ಮನ್ನು ಹಣ್ಣುಗಾಯಿ ನೀರುಗಾಯಿ ಮಾಡಿದರೂ ಕೂಡ ಇಲ್ಲಿಯ ಮೋಹಕತೆಯು ಇಲ್ಲಿಗೆ ಮತ್ತೆ ಮತ್ತೆ ಬರಲು ಪ್ರೇರೆಪಿಸುತ್ತದೆ[]

ಉಲ್ಲೇಖಗಳು

[ಬದಲಾಯಿಸಿ]
  1. http://www.dnaindia.com/bangalore/report-no-public-toilets-even-on-the-busiest-streets-in-bangalore-1921458
  2. "ಆರ್ಕೈವ್ ನಕಲು". Archived from the original on 2016-07-27. Retrieved 2016-08-27.
  3. .http://www.abplive.in/travel/top-ten-street-shopping-places-in-india-135967

ಗ್ಯಲರಿ

[ಬದಲಾಯಿಸಿ]