ವಿಷಯಕ್ಕೆ ಹೋಗು

ಓಟ (ಭೂ ವಿಜ್ಞಾನದಲ್ಲಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಓಟ (ಭೂ ವಿಜ್ಞಾನದಲ್ಲಿ): ಶಿಲಾ ಬಂಡೆಗಳು ಅಥವಾ ಪ್ರಸ್ತರಗಳು ನೆಲದ ಮೇಲೆ ಹರಡಿರುವ ಉದ್ದ (ಸ್ಟ್ರೀಕ್). ಜಾಡು ಪರ್ಯಾಯ ಪದ. ಇದನ್ನು ಶಿಲಾಪ್ರಸ್ತರ ಅಥವಾ ಶಿಲೆಯ ಹೊರಜಾಡು ಸಮತಲವಾದ ನೆಲಮಟ್ಟವನ್ನು ಛೇದಿಸುವ ರೇಖೆ ಎಂದು ವಿವರಿಸಬಹುದು. ಪ್ರಸ್ತರಗಳು ಸಮತಟ್ಟಾಗಿರದೆ ನೆಲಮಟ್ಟದಿಂದ ಓರೆಯಾಗಿದ್ದಲ್ಲಿ ಓಟವನ್ನು ಸುಲಭವಾಗಿ ಗುರುತಿಸಬಹುದು. ಶಿಲೆಯ ಓಟ ಮತ್ತು ಓಲಿಕೆ ಪರಸ್ಪರ ಲಂಬವಾಗಿರುತ್ತವೆ. ಓಟವನ್ನು ಉತ್ತರ ದಿಕ್ಕಿಗೆ ಅನುಗುಣವಾಗಿ ಗುರುತಿಸಬೇಕು. ಓಲಿರುವ ಶಿಲಾಪ್ರಸ್ತರಗಳನ್ನು + 600 ಚಿಹ್ನೆಯಿಂದಲೂ (ಅಂದರೆ ಶಿಲೆಯ ಓಟ ಉತ್ತರ-ದಕ್ಷಿಣ ಓಲಿಕೆ 600 ಎಂದರ್ಥ). ಮಟ್ಟಸವಾಗಿರುವ ಪ್ರಸ್ತರಗಳನ್ನು Å ಚಿಹ್ನೆಯ ಮೂಲಕವೂ ಮತ್ತು ಊಧರ್ವ್‌ವಾಗಿರುವ (ವರ್ಟಿಕಲ್) ಪ್ರಸ್ತರಗಳನ್ನು † ಚಿಹ್ನೆಯಿಂದಲೂ ಗುರುತಿಸುತ್ತಾರೆ. ಶಿಲೆಯ ಓಟವನ್ನು ಅಳೆಯಲು ಪ್ರವಣಮಾಪಕ (ಕಂಪಾಸ್ ಕ್ಲೈನೊಮೀಟರ್) ಎಂಬ ಉಪಕರಣವನ್ನು ಬಳಸಬೇಕು. ಉತ್ತರ-ದಕ್ಷಿಣ ರೇಖೆಗೆ ಅನುಗುಣವಾಗಿ ಇದನ್ನು ಅಳೆದು ನಿರ್ಧರಿಸಬೇಕು. ಉತ್ತರ-ದಕ್ಷಿಣ ಅಕ್ಷರೇಖೆಯಿಂದ ಪುರ್ವ ಅಥವಾ ಪಶ್ಚಿಮದ ಕಡೆಗೆ ಎಷ್ಟು ಡಿಗ್ರಿ ವ್ಯತ್ಯಾಸವಿದೆ ಎಂಬ ಮೂಲಕ ಜಾಡನ್ನು ಗುರುತಿಸಬೇಕು. ಉದಾಹರಣೆಗೆ ಉ600ಪ ಅಂದರೆ ಉತ್ತರ ದಿಕ್ಕಿನಿಂದ ಪಶ್ಷಿಮದತ್ತ 600 ಗಳಷ್ಟು ಸರಿದಲ್ಲಿ ಶಿಲೆಯ ಜಾಡು ಪ್ರಾರಂಭವಾಗುತ್ತದೆ ಎಂದರ್ಥ. ಇದನ್ನು ಭೂವಿಜ್ಞಾನಿಗಳು ಉ600 ಪ-ದ 600ಪು ಎಂದು ವಿವರಿಸುತ್ತಾರೆ. ಇದನ್ನು ನಿರ್ಧರಿಸುವ ರೀತಿಯನ್ನು ಚಿತ್ರದಲ್ಲಿ ತೋರಿಸಿದೆ. ಪ್ರವಣಮಾಪಕದಲ್ಲಿ ಗುರುತಿಸುವ ಓ-S (ಉತ್ತರ-ದಕ್ಷಿಣ) ರೇಖೆಯನ್ನು ಶಿಲಾಪ್ರಸ್ತರದ ಉದ್ದಕ್ಕೆ (ಅಗಲಕ್ಕಲ್ಲ ಎಂಬುದನ್ನು ನೆನಪಿನಲ್ಲಿಡುವುದು ಬಹು ಮುಖ್ಯ) ಸಮಾಂತರವಾಗಿಟ್ಟು ಉಪಕರಣಗಳನ್ನು ಮಟ್ಟಸವಾಗಿ ಹಿಡಿಯಬೇಕು. ಆಗ ಪ್ರವಣಮಾಪಕದ ದಿಕ್ಸೂಚಿಯ ಉತ್ತರದ ತುದಿಯಿಂದ ಮುದ್ರಿಸಿರುವ ಓ-S ರೇಖೆಗೆ ಇರುವ ಅಂತರವನ್ನೂ (ಡಿಗ್ರಿಗಳಲ್ಲಿ) ದಿಕ್ಕನ್ನೂ ನಿರ್ಧರಿಸಬೇಕು. ಇದೇ ಶಿಲೆಯ ಓಟ ಅಥವಾ ಜಾಡು.