ಒಳಪೊರೆ
ಗೋಚರ
ಒಳಪೊರೆ: ಅಂಗರಚನಾವಿಜ್ಞಾನದಲ್ಲಿ, ಗುಂಡಿಗೆ, ರಕ್ತನಾಳಗಳು, ಹಾಲು ರಸನಾಳಗಳ ಒಳಗಿನ, ಚಪ್ಪಟೆಯಾದ ಸರಳ ಜೀವಕಣಗಳಿಂದಾದ ಪದರ (ಎಂಡೊತೀಲಿಯಂ)ಕ್ಕೆ ಒಳಪೊರೆ ಎನ್ನುತ್ತಾರೆ. ಆದರೆ ಕಣ್ಣಿನ ಮುಂಗೋಣೆ, ಎದೆಗೂಡು, ಗುಂಡಿಗೆಸುತ್ತು ಪೊರೆ, ಒಡಲುಗಳ ಒಳಗಿನ ಪೊಳ್ಳುಗಳ ಒಳಗಿನ ಪೊರೆಗೂ ಒಳಪೊರೆ ಎನ್ನುವುದು ವಾಡಿಕೆ. ಸಾಮಾನ್ಯವಾಗಿ ಇದು ಹಗರಿನ ಮೇಲುಪೊರೆಯನ್ನು (ಸ್ಕ್ವೇಮಸ್ ಎಪಿತೀಲಿಯಂ) ಹೋಲುವುದಾದರೂ ಪಿಂಡದ ವಿಕಾಸದಲ್ಲಿ ಇವೆರಡೂ ಬೇರೆ ಮೂಲಗಳ ಪೊರೆಗಳಿಂದ ಏಳುತ್ತವೆ.
ಕಾರ್ಯ
[ಬದಲಾಯಿಸಿ]ಮೂತ್ರಪಿಂಡದ ಗ್ಲೋಮೆರುಲಸ್, ರಕ್ತನಾಳದ ಟೋನ್, ಹೆಮೋಸ್ಟಾಸಿಸ್, ನ್ಯೂಟ್ರೋಫಿಲ್ ನೇಮಕಾತಿ ಮತ್ತು ಹಾರ್ಮೋನ್ ಸಾಗಣೆ ಮುಂತಾದ ದ್ರವದ ಶೋಧನೆಯನ್ನು ಒಳಗೊಂಡಿರುವ ವಿಶಿಷ್ಟ ಕಾರ್ಯಗಳನ್ನು ಈ ಜೀವಕೋಶಗಳು ಹೊಂದಿವೆ. ಹೃದಯದ ಕೋಣೆಗಳ ಆಂತರಿಕ ಮೇಲ್ಮೈಗಳ ಎಂಡೋಥೀಲಿಯಂ ಅನ್ನು ಎಂಡೋಕಾರ್ಡಿಯಮ್ ಎಂದು ಕರೆಯಲಾಗುತ್ತದೆ.ಒಳಪೊರೆಗಳ ದುರ್ಬಲಗೊಂಡ ಕಾರ್ಯವು ದೇಹದಾದ್ಯಂತ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಉಲ್ಲೇಖಗಳು
[ಬದಲಾಯಿಸಿ]ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: