ವಿಷಯಕ್ಕೆ ಹೋಗು

ಏಡಿಯ ಸಾರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏಡಿಯು ನದಿ , ತೋಡುಗಳಲ್ಲಿ ಸಮುದ್ರಗಳಲ್ಲಿ ಇರುವ ಒಂದು ಜೀವಿ.ತೋಡುಗಳಲ್ಲಿ ಇರುವ ಏಡಿ ಕಲ್ಲಿನ ಎಡೆಯಲ್ಲಿ ಇರುವುದದರಿಂದ ಕಲ್ಲ್ ಡೆಂಜಿ ಎಂದು ಹೇಳುತ್ತಾರೆ.ಇದು ಸಮುದ್ರ ಏಡಿಗಳಿಗಿಂತ ಗಟ್ಟಿಯಾಗಿರುತ್ತದೆ .ಸಾಮಾಆಟಿಯ ಆಹಾರ ಬೇರೆನ್ಯವಾಗಿ ಕಲ್ಲ್ ಡೆಂಜಿಗಳು ಮಳೆಗಾಲದಲ್ಲಿ ಜಾಸ್ತಿಯಾಗಿರುತ್ತದೆ [] .ಮಳೆಗಾಲದಲ್ಲಿ ಊರುಗಳಲ್ಲಿ ರಾತ್ರಿ ಏಡಿ ಹಿಡಯಲು ಹೋಗುವ ಕ್ರಮ ಇದೆ.ಏಡಿ ಒಂದು ಎಲ್ಲಾ ಸಮಯದಲ್ಲು ಉಪಯೋಗಿಸುವ ಆಹಾರ ವಸ್ತು ಆದರೆ ಆಟಿ ತಿಂಗಳಲ್ಲಿ ಕಲ್ಲ್ ಡೆಂಜಿ ಜಾಸ್ತಿ ಸಿಗುವ ಕಾರಣ ಇದೊಂದು ಆಟಿಯ ಆಹಾರ ಅಂತ ಹೇಳಬಹುದು

ಸ್ವರೂಪ

[ಬದಲಾಯಿಸಿ]

ಏಡಿಯ ಹೊರ ಮೈ ಒಂದು ದಪ್ಪದ ಚಿಪ್ಪಿನಿಂದ ಮುಚ್ಚಿರುತ್ತದೆ. ಒಂದು ಜತೆ ಕೊಬಾರ್[ಕೊಂಬ=ಕಾರ್]ಅಂದರೆ ದಪ್ಪವಾಗಿ ಕೋಡಿನ ರೀತಿ ಚೂಪಾದ ಕಾಲು ಇರುತ್ತದೆ. ಅದೆ ರೀತಿ ಎಡ, ಬಲಕ್ಕೆ ನಾಲ್ಕು ನಾಲ್ಕು ಚಿಲ್ಲಿಕಾರ್ ಇರುತ್ತದೆ. ಇದು ಒಂದು ಹತ್ತು ಕಾಲಿನ ಜೀವಿ. ಇದಕ್ಕೆ ಸಂಸ್ಕೃತದಲ್ಲಿ ದಶಪದಿ ಹೇಳುತ್ತಾರೆ. ಏಡಿಗಳು ಸಮುದ್ರದಲ್ಲಿ, ನದಿಯಲ್ಲಿ, ತೋಡುಗಳಲ್ಲಿ, ಕೆರೆಯಲ್ಲಿ, ಬಯಲು ಗದ್ದೆಗಳಲ್ಲಿ , ತೋಟಗಳಲ್ಲಿ ಇರುತ್ತದೆ. ಏಡಿಯ ಗಾತ್ರ ಬೇರೆ ಬೇರೆ ಇರುತ್ತದೆ []. ಬಟಾಣಿ ಕಡ್ಲೆಗಾತ್ರದಿಂದ ಹಿಡಿದು ಅಂಗೈಯಷ್ಟು ದೊಡ್ಡ ಏಡಿಗಳು ಇರುತ್ತದೆ. ಜಪಾನ್‍ನಲ್ಲಿ ಜೇಡನ ಗಾತ್ರದ ಏಡಿಯ ಗಾತ್ರದ ವೈವಿದ್ಯತೆ ಇದೆ.[೨]

ಏಡಿಯ ಆರೋಗ್ಯದ ಉಪಯೋಗಗಳು

[ಬದಲಾಯಿಸಿ]

ಏಡಿಯ ಮಾಂಸದಲ್ಲಿ ಶರೀರಕ್ಕೆ ಬಹಳ ಉಪಯುಕ್ತವಾದ [] ವಿಟಮಿನ್,ಪ್ರೋಟಿನ್,ಒಮೇಗಾ ೩ ಫ಼್ಯಾಟ್ ಏಸಿಡ್ ಎಲ್ಲಾ ಇದೆ.

ಸಾರು ಮಾಡಲು ಬೇಕಾದ ಸಾಮಾನು

[ಬದಲಾಯಿಸಿ]
  • ಏಡಿ
  • ಒಣ ಮೆಣಸಿನ ಕಾಯಿ
  • ಕೊತ್ತಂಬರಿ
  • ಜೀರಿಗೆ
  • ಮೆಂತೆ
  • ಕಾಳು ಮೆಣಸು
  • ಹುಣಸೆ ಹುಳಿ
  • ಬೆಳ್ಳುಳಿ
  • ನೀರುಳ್ಳಿ

ಕಲ್ಲ್ ಡೆಂಜಿ ಸಾರು ಮಾಡುವ ವಿಧಾನ

[ಬದಲಾಯಿಸಿ]

ತೋಡಿನಿಂದ ಹಿಡಿದು ತಂದ ಏಡಿಯ ಕೊಂಬರ್ ಕಾಲು ಸಣ್ಣ ಕಾಲು ಎಲ್ಲವನ್ನು ತುಂಡು ಮಾಡಿ ಅದರ ಹೊಟ್ಟೆಯ ಒಳಭಾಗವನ್ನೆಲ್ಲ ಸ್ವಚ್ಚ ಮಾಡಿ ಇಟ್ಟುಕೊಳ್ಳ ಬೇಕು. ಆಮೇಲೆ ಒಲೆಯಲ್ಲಿ ಒಂದು ಬಾಣಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಹುಣಸೆ ಹುಳಿ ಒಂದನ್ನು ಬಿಟ್ಟು ಉಳಿದ ಎಲ್ಲಾ ಸಾಮಾನುಗಳನ್ನು ಚೆನ್ನಾಗಿ ಹುರಿಯ ಬೇಕು. ಆಮೇಲೆ ತೆಂಗಿನ ತುರಿ ಮತ್ತು ಈರುಳ್ಳಿ ಎಲ್ಲವನ್ನು ಚೆನ್ನಾಗಿ ಕೆಂಪಾಗುವ ತನಕ ಕಾಯಿಸ ಬೇಕು ಆಮೇಲೆ ಹುಣಸೆ ಹುಳಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.ಮಸಾಲೆ ತಯಾರಾದ ಮೇಲೆ ಮಣ್ಣಿನ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಒಲೆಯಲ್ಲಿ ಇಟ್ಟು ಈರುಳ್ಳಿ ಹಾಕಿ ಚೆನ್ನಾಗಿ ಕಾಯಿಸಿ ಮಸಾಲೆ ಹಾಕಿ ಕುದಿಯುವಾಗ ಸ್ವಚ್ಚ ಮಾಡಿಟ್ಟ ಏಡಿಯನ್ನು ಹಾಕ ಬೇಕು .ಏಡಿಯ ಮಾಸ ಬೇಯುವ ವರೆಗೆ ಕುದಿಯಲು ಬಿಡಬೇಕು

ಉಲ್ಲೇಖ

[ಬದಲಾಯಿಸಿ]
  1. "Crab | Marine, Edible & Adaptable Crustacean | Britannica".
  2. "Crab identification and soft-shell crab | Washington Department of Fish & Wildlife".
  3. "Crab: Are There Health Benefits?".