ಎರ್ರಗುಡಿ
ಗೋಚರ
ಎರ್ರಗುಡಿ: ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಪತ್ತಿಕೊಂಡ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. ಗ್ರಾಮದ ಸಮೀಪದ ಕೆಲವು ಬಂಡೆಗಳಲ್ಲಿ ಅಶೋಕನ ಶಾಸನಗಳು ದೊರಕಿವೆ. ಇವುಗಳ ಭಾಷೆ ಆ ಕಾಲದ ಪ್ರಾಕೃತ ಲಿಪಿ ಬ್ರಾಹ್ಮೀ. ಅಶೋಕನ ಗೌಣ ಶಿಲಾಶಾಸನಗಳಲ್ಲಿ ಮೊದಲ ಎರಡೂ ಬೃಹದ್ ಶಿಲಾಶಾಸನಗಳಲ್ಲಿ ಮೊದಲ ಹದಿಮೂರೂ ಇಲ್ಲಿವೆ. ಅಶೋಕನ ದಕ್ಷಿಣ ರಾಜಧಾನಿಗಳಲ್ಲೊಂದಾದ ಸುವರ್ಣಗಿರಿಯೇ ಈ ಎರ್ರಗುಡಿ ಇರಬಹುದೆಂದು ಕೆಲವು ವಿದ್ವಾಂಸರು ಊಹಿಸುತ್ತಾರೆ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: