ವಿಷಯಕ್ಕೆ ಹೋಗು

ಎಮೊಟೈಕನ್ ಎಮೋಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A smiley-face 'ಮುಖದ ಹಾವಭಾವಗಳನ್ನು ತೋರಿಸುವ ಕ್ರಮ'
'ಪೋಲೆಂಡ್ ನಗರದ ರಸ್ತೆಯಲ್ಲಿನ ನಡವಳಿಕೆಯನ್ನು ಸೂಚಿಸುವ ಫಲಕ'

'ಎಮೊಟೈಕನ್ ಎಮೋಜಿ',(/ɨˈmoʊtɨkɒn/) [](short for emotion icon) ಇಂದಿನ ಡಿಜಿಟಲ್ ವಿಶ್ವದ ಗ್ರಾಹಕರ ಆದ್ಯತೆಗಳಾದ ಅತ್ಯಂತ ವೇಗಕಾರಿ ಮತ್ತು ಸಂಕ್ಷಿಪ್ತ ರೂಪದ ಮಾಹಿತಿ ಸಂವಹನದಲ್ಲಿ ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿರುವ ಒಂದು ಉತ್ತಮ ವ್ಯವಸ್ಥೆಯಾಗಿದೆ.[] ಕಂಪ್ಯೂಟರಿನಲ್ಲಿ ಸಂವಹನ ಮಾಡುವಾಗ ನಮ್ಮ ಭಾವನೆಗಳನ್ನು ಅತ್ಯಂತ ಸಂಕ್ಷೇಪವಾಗಿ ಪರದೆಯಮೇಲೆ ಮೂಡಿಸಲು ರೂಪಗೊಂಡ ಆಧುನಿಕ ಸಾಧನವನ್ನು 'ಎಮೊಟೈಕನ್' ಎಂದು ಕರೆಯುತ್ತಾರೆ. 'ಎಮೋಶನ್' ಮತ್ತು 'ಐಕಾನ್' ಪದಗಳನ್ನು ಸೇರಿಸಿ ರೂಪಿಸಿರುವ ಪದವಾಗಿದೆ. 'ಸ್ಕಾಟ್ ಪಾಲ್ಮನ್', ಎಂಬುವರು ಇದನ್ನು ಮೊದಲು ರೂಪಿಸಿದರು. ನಂತರ ಕಾಲಕ್ರಮದಲ್ಲಿ ಬೇರೆ ಬೇರೆ ವಿಧದ 'ಎಮೊಟೈಕನ್' ಗಳು ಮಾರುಕಟ್ಟೆಗಳಲ್ಲಿ ಬಳಕೆಯಲ್ಲಿ ಬರಲಾರಂಭಿಸಿದವು. ಅವುಗಳ ರೂಪರೇಖೆಗಳು ಹೀಗಿವೆ :

  1. ಗಹಗಹಿಸಿ ನಗುವ ಮುಖ []
  2. ಆಶ್ಚರ್ಯದಿಂದ ಬಾಯಿಬಿಡುವ ಮುಖ,
  3. ಕಿಲಾಡಿಯಾಗಿ ತುಂಟತನದಿಂದ ಕಣ್ಣು ಮಿಟುಕಿಸುವ ಮುಖ,
  4. ಕಪ್ಪು ಕನ್ನಡಕ ಧರಿಸಿ 'ಸ್ಮಾರ್ಟ್' ಆಗಿ ಕಾಣಿಸುವ ಮುಖ,
  5. ನಗುಮುಖದ ಮೀಸೆಧಾರಿ,

ಎಮೊಟೈಕನ್ ಗಳ ವ್ಯಾಪ್ತಿ

[ಬದಲಾಯಿಸಿ]

ಇಂತಹ ಸರಳ ವಿನ್ಯಾಸಗಳಿಗಷ್ಠೇ ಅಲ್ಲದೆ ಎಮೊಟೈಲ್ ಗಳ ಕಾರ್ಯವ್ಯಾಪ್ತಿ ವಿಸ್ತಾರವಾಗಿದೆ :

  • ಖುಷಿಯಾಗಿ ಕೈಬೀಸುತ್ತಿರುವ ಮುಖ,
  • ಮುಖಗಂಟಿಟ್ಟುಕೊಂಡು ಮೇಜನ್ನು ಎಸೆಯುತ್ತಿರುವ

ಠಠಬಳಕೆ

[ಬದಲಾಯಿಸಿ]

ಸೃಜನಶೀಲತೆ ಅಸಮ್ಮತಿ ಸೂಚಕ, ಠಠ ಎಂಬ 'ಎಮೊಟೈಕನ್' ನಲ್ಲಿ ಕನ್ನಡದ ಠ ಅಕ್ಷರದ ಬಳಕೆಯಾಗಿದೆ. (ಯೂನಿಕೊಡ್ ಕೃಪೆ) 'ಎಮೊಟೈಕನ್ ಬಳಕೆದಾರರಿಗೆ ೩ ಎನ್ನುವುದು ಹೃದಯದ ಸಂಕೇತವಾಗಿದೆ. ಬೇರೆಯವರು ಯಾವುದೋ ಲೆಖ್ಖವಿರಬಹುದೆಂದು ಭಾವಿಸುತ್ತಾರೆ. ಹಾಗಾಗಿ ಇವು 'ಅಕ್ಷರ ಮತ್ತು ಲೇಖನ ಚಿನ್ಹೆಗಳ ಒಂದು ವ್ಯವಸ್ಥಿತ-ಜೋಡಣೆ', ಎನ್ನಬಹುದು. ಇಂದಿನ ಎಸ್ಸೆಮ್ಮೆಸ್, ವಾಟ್ಸ್ ಅಪ್ ಚಾಟಿಂಗ್ ಮೊದಲಾದವುಗಳೆಲ್ಲಾ ಕಾಣಬರುವ ಪುಟಾಣಿ ಚಿತ್ರಗಳು ಕಾರಣವಾದ ಅಂಶವಾಗಿದೆ.'ಎಮೋಜಿ' ಎಂದು ಸಂಬೋಧಿಸಲಾಗುವ ಈ ಚಿತ್ರಾಕ್ಷರಗಳು 'ಜಪಾನ್ ದೇಶ'ದಲ್ಲಿ ಮೊದಲು ಬೆಳಕಿಗೆ ಬಂದವು. ೧೯೯೦ ರ ದಶಕದ ಕೊನೆಯಲ್ಲಿ 'ಎನ್.ಟಿ.ಟಿ', 'ಡಕೊಮೋ' ಎಂಬ ಕಂಪೆನಿ ಪರಿಚಯಿಸಿತು. ಸ್ಮಾರ್ಟ್ ಫೋನ್, ಮತ್ತು 'ಮೆಸೇಜಿಂಗ್' ಗಳ ಹಾವಳಿ ಹೆಚ್ಚಾಗಿ ಬರಲು ಪ್ರಾರಂಭಿಸಿ, ಈಗ ಎಲ್ಲಾ ಕಡೆಯೂ ಅವು ಮನೆಮಾಡಿವೆ. 'ಜಿ.ಮೇಲ್', 'ಫೇಸ್ಬುಕ್,' ಸೋಶಿಯಲ್ ತಾಣಗಳಲ್ಲಿ ಮತ್ತು ಹಲವೆಡೆ ಟೈಪಿಸುತ್ತಿದ್ದಹಾಗೆಯೇ ತನ್ನಷ್ಟ್ಟಕ್ಕೆ ತಾನೇ ಅವು ಚಿತ್ರಗಳಾಗಿ ಬದಲಾಗುವ ವ್ಯವಸ್ಥೆಯಿದೆ. 'ಯೂನಿಕೊಡ್ ಶಿಷ್ಟತೆ'ಯಲ್ಲೂ, ಈ ಚಿತ್ರಾಕ್ಷರಗಳು ತಮ್ಮ ಜಾಗವನ್ನು ಹೊಂದಿವೆ. ಪಾಶ್ಚಾತ್ಯ ಸಂಸ್ಕೃತಿಗೆ ಹೊಂದಿಕೊಂಡ ಈ ವ್ಯವಸ್ಥೆ, ಈಗ ಸಾರ್ವತ್ರಿಕವಾಗಿ ಬಳಸಬಹುದಾದ ಪರಿಸ್ಥಿತಿಗೆ ಬರುವ ಸಾಧ್ಯತೆಗಳಿವೆ. 'ಎಮೊಟೈಕನ್ ಎಮೋಜಿ'ಗಳ ಕಾರ್ಯ ವ್ಯಾಪ್ತಿ, ಎಸ್ಸೆಮ್ಮೆಸ್, 'ಇ-ಮೇಲ್', 'ಟ್ವಟರ್', 'ವಾಟ್ಸ್ ಅಪ್',ಸಂದೇಶಗಳು, ಅಥವಾ ಯಾವುದೇ ರೂಪದ 'ಡಿಜಿಟಲ್ ಸಂವಹನ'ದಲ್ಲಿ ನೆರವಾಗುತ್ತಿವೆ. ನಾಲ್ಕಾರು ಪದಗಳನ್ನು ಬಳಸಿ ಹೇಳುವುದನ್ನು, ಒಂದೇ ಚಿತ್ರದಲ್ಲಿ ಹೇಳುವುದನ್ನು ಸಾಧಿಸುವ ಪರಿಕ್ರಮದಲ್ಲಿ, ಅದರಲ್ಲೂ ಎಸ್ಸೆಮ್ಮೆಸ್ ನಂತಹ ಸಂಕ್ಷಿಪ್ತ ಭಾಷೆಗಿಂತಲೂ ಕಿರುಶೈಲಿಯಲ್ಲಿ ಬರೆಯುವ ಮಾಧ್ಯಮವಾಗಿ ಎಮೊಟೈಕನ್ ಗಳು, ಹೆಗ್ಗಳಿಕೆಗೆ ಪಾತ್ರವಾಗಿವೆ.

ಸಂವಹನದಲ್ಲಿ ಭಾವನೆಗಳ ಮಹತ್ವ

[ಬದಲಾಯಿಸಿ]

ಸಂವಹನದಲ್ಲಿ ಮಾತಿನಷ್ಟೇ ಮಹತ್ವ, ಅವನ್ನು ವ್ಯಕ್ತಪಡಿಸುವ ಭಾವವೆಗಳಿಗೂ ಇದೆ. ಮುಖಾ-ಮುಖಿ ಸಂವಹನದಲ್ಲಿ ಭಾವನೆಗಳು ಅತಿ ಸುಲಭವಾಗಿ ಜನರನ್ನು ತಲುಪುತ್ತವೆ. ಆದರೆ ಇಂದಿನ ಬಿಡುವಿಲ್ಲದ ಅಂತರಜಾಲ, ಮೊಬೈಲ್, ಮೊದಲಾದ ತಾಣಗಳಲ್ಲಿ ಎಸ್ಸೆಮ್ಮೆಸ್, ಇ-ಮೇಲ್ ಸೋಶಿಯಲ್ ನೆಟ್ವರ್ಕ್ ಗಳಮೂಲಕ ಹೆಚ್ಚುಹೆಚ್ಚು ಭಾವನೆಗಳನ್ನು ಹಂಚಿಕೊಳ್ಳುವ ಸಾಧನವಾಗಿ ಬೆಳೆಯುತ್ತಿದೆ. ೧೯೮೦ ರ ದಶಕದಲ್ಲಿ ಅಮೆರಿಕದ 'ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯ'ದಲ್ಲಿ 'ಕಂಪ್ಯೂಟರ್ ವಿಜ್ಞಾನದ ವಿಭಾಗ'ದಲ್ಲಿ ಒಂದು 'ಮೆಸೆಜ್ ಬೋರ್ಡ್' ಇತ್ತು. ಈ ವ್ಯವಸ್ಥೆಯಿಂದಾಗಿ ಸಮುದಾಯದ ಸದಸ್ಯರ ನಡುವೆ ಇ-ಮೇಲ್ ಮುಖಾಂತರ ಸಂದೇಶ ವಿನಿಮಯ ನಡೆಯುತ್ತಿತ್ತು. 'ಹಲವಾರು ವ್ಯಂಗ್ಯಾತ್ಮಕ ಮೆಸೆಜ್' ಆಗಾಗ ಕಾಣಿಸಿಕೊಳ್ಳುತ್ತಿದ್ದವು. ಆದರೆ ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಿತ್ತು. ಮೇಲಾಗಿ ಇದಕ್ಕೆ ಸ್ಪಂದಿಸಿ ಬರುತ್ತಿದ್ದ ಕಟುವಿಮರ್ಶೆ ಟೀಕೆಗಳು ಹೆಚ್ಚಾದವು. ಈ ವ್ಯಂಗ್ಯ ಕೇವಲ ತಮಾಷೆಗಾಗಿ, ಎಂದು ಪಠ್ಯಾಧಾರಿತ ಮೆಸೆಜ್ ಗಳಲ್ಲಿ ಮುಖಾಮುಖಿ ಸಂವಹನದಲ್ಲಿರುವ ತರಹ ಹಾವಭಾವಗಳನ್ನು ಗುರುತಿಸುವ ವ್ಯವಸ್ಥೆಯಿಲ್ಲದೆ, 'ಅಬಾಧ್ಯತೆ' ಸೂಚಿಸುವ ಆಲೋಚನೆ ನಡೆದಿತ್ತು. ಈ ಚರ್ಚೆಯಲ್ಲಿ ತಮಾಷೆಗಳ ಸಂದೇಶವನ್ನು ಗುರುತಿಸಲು ಉಪಯೋಗಿಸಬಹುದಾದ ಹಲವು ಚಿನ್ಹೆಗಳ ಮಾತು ಎಲ್ಲರ ಗಮನಕ್ಕೆ ಬಂದಿತ್ತು. ಒಟ್ಟಿನಲ್ಲಿ ಈ ಕಾರ್ಯಮುಂದುವರೆಯಲು ಕೆಲವು ತೊಡಕುಗಳು ಕಾಣಿಸಿಕೊಂಡವು. ಸಮುದಾಯದ ಬೆಂಬಲ ದೊರೆಯಲಿಲ್ಲ. ಆಸಮಯದಲ್ಲಿ ವಿಜ್ಞಾನಿ 'ಸ್ಕಾಟ್ ಫಾಲ್ ಮನ್', ಚಿನ್ಹೆಗಳ ಹುಡುಕಾಟದಲ್ಲಿ ವ್ಯಸ್ತವಾಗಿದ್ದರು. ೧೯೮೨ ರ ಸೆಪ್ಟೆಂಬರ್ ೧೯ ರಂದು ಸಮುದಾಯಕ್ಕೆ ಕಳಿಸಿದ ಮೆಸೆಜ್ ನಲ್ಲಿ ತಮಾಷೆಯನ್ನು ಗಂಭೀರ ಸಂದೇಶಗಳನ್ನು ಸೂಚಿಸಲು ಬಳಸಿದರು. ಹೀಗೆ ಎಮೊಟೈಕನ್ ಗಳು ವಿಶ್ವದಾದ್ಯಂತ ಹುಟ್ಟಿಕೊಂಡು ಜನಪ್ರಿಯವಾಗುತ್ತಿವೆ.

ಉಲ್ಲೇಖಗಳು

[ಬದಲಾಯಿಸಿ]
  1. Emoticon English Wikipedia
  2. Emoji
  3. English Wikipedia,'List of emoticons'

ಮೂಲ : ಡಿಜಿಟಲ್ ಲೋಕದ ಅಳು-ನಗು E-ಸಮಯ,ಟಿ.ಜಿ.ಶ್ರೀನಿಧಿ, ಪು.೧೨೬, ತುಷಾರ,ಜನವರಿ, ೨೦೧೫. [] [] []

  1. https://codex.wordpress.org/Emoji
  2. "ಆರ್ಕೈವ್ ನಕಲು". Archived from the original on 2018-08-25. Retrieved 2018-08-27.
  3. http://www.emoji.com/en/[ಶಾಶ್ವತವಾಗಿ ಮಡಿದ ಕೊಂಡಿ]