ಎ ರ್ಕೋಸ್ ಇನ್ ಜನರಲ್ ಲಿಂಗ್ವಿಸ್ಟಿಕ್ಸ್
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ಲೇಖನದಲ್ಲಿ ಅಗತ್ಯ ಉಲ್ಲೇಖಗಳಿಲ್ಲ. ವಿಕಿಗೆ ಅನುಗುಣವಾಗಿ ಲೇಖನ ತಿದ್ದಬೇಕಿದೆ. |
ಭಾಷಾಶಾಸ್ತ್ರ
[ಬದಲಾಯಿಸಿ]ಎ ಕೋರ್ಸ್ ಇನ್ ಜನರಲ್ ಲಿಂಗ್ವಿಸ್ಟಿಕ್ಸ್(A Course in General Linguistics): ಸ್ವಿಸ್ ದೇಶದ ಭಾಷಾಶಾಸ್ತ್ರಜ್ಞನಾದ ‘’ಫರ್ಡಿನಾಂಡ್ ಡಿ ಸಸ್ಯೂರ್’’ ಅಧುನಿಕ ಭಾಷಾಶಾಸ್ತ್ರದ ಬೆಳವಣಿಗೆಗೆ ಮಹತ್ತರವಾದ ಕೊಡುಗೆಯನ್ನು ನೀಡಿದನು.ಇವನಿಂದ ಬೆಳೆದ ಈ ಭಾಷಾಶಾಸ್ತ್ರವನ್ನು “ಸಂರಚನಾ ಭಾಷಾಶಾಸ್ತ್ರ” ಎಂದು ಸಹ ಕರೆಯಲಾಗಿದೆ. ಭಾಷಾಶಾಸ್ತ್ರದ ಅಧ್ಯಯನಕ್ಕೆ ಒಂದು ಹೊಸ ವಿಧಾನವನ್ನು ತೋರಿಸಿದ ಇವನನ್ನು ಅಧುನಿಕ ಅಥವಾ ಸಂರಚನಾ ಭಾಷಾಶಾಸ್ತ್ರದ ಪಿತಾಮಹ ಎನ್ನಲಾಗಿದೆ.ಸಸ್ಯೂರ್ ಫಿಲಾಲಜಿ (Philology) ಎಂಬ ವಿಷಯದ ಬಗ್ಗೆ ಪ್ಯಾರಿಸ್ ಮತ್ತು ಜಿನೇವಾ ಗಳಲ್ಲಿ ೧೯೦೬,೧೯೦೮ ಮತ್ತು ೧೯೧೦ ರ ವರೆಗೆ ಉಪನ್ಯಾಸಗಳನ್ನು ನೀಡುತ್ತಾನೆ . ಇವನಿಂದ ಪಡೆದ ಎಲ್ಲಾ ಉಪನ್ಯಾಸಗಳನ್ನು ಈತನ ಶಿಷ್ಯರು ಒಂದು ಪುಸ್ತಕದ ರೂಪದಲ್ಲಿ ೧೯೧೬ರಲ್ಲಿ ಫ್ರೆಂಚ್ ಭಾಷೆಯಲ್ಲಿ ಪ್ರಕಟಿಸುತ್ತಾರೆ.
- *Contents:
- 1.Introduction about Sassure’s work” A Course in General Linguistics”
- 2.Diachronic method
- 3. Synchronic method
- 4.Langue
- 5.Parole
- 6. Semiotic system
- Signifier
- Signified
- 7. syntagmatic method
- 8.Paradygmatic method
ಆ ಪುಸ್ತಕವನ್ನು “ಎ ಕೋರ್ಸ್ ಇನ್ ಜನರಲ್ ಲಿಂಗ್ವಿಸ್ಟಿಕ್ಸ್” ಎಂಬ ಶೀರ್ಷಿಕೆಯಲ್ಲಿ ಇಂಗ್ಲೀಶ್ ಭಾಷೆಗೆ ಅನುವಾದ ಮಾಡಲಾಗಿದೆ. ಈ ಕೃತಿಯಲ್ಲಿ ನ ಪ್ರಮುಖವಾದ ವಿಷಯವೆಂದರೆ ಭಾಷೆ ಎನ್ನುವುದು ಹೇಗೆ ಸಾಧ್ಯ?(How language is possible?)ಭಾಷಾಶಾಸ್ತ್ರದ ಅಧ್ಯಯನದ ವಸ್ತು ವಿಷಯ (Object of study) ಯಾವುದು ಎಂಬ ವಿಚಾರ ,ಒಂದು ಭಾಷೆಯನ್ನು ಅಧ್ಯಯನ ಮಾಡುವುದು ಎಂದರೆ ಏನು ಮತ್ತು ಅದರಲ್ಲಿ ಪ್ರತ್ಯೇಕವಾಗಿ ಯಾವ ಅಂಶವನ್ನು ಅಧ್ಯಯನ ಮಾಡಬೇಕು.? ಸಸ್ಯೂರ್ ನ ಪೂರ್ವಿಕರು ಇವರನ್ನು ಭಾಷಾಶಾಸ್ತ್ರಜ್ಞರು ಎನ್ನುವುದಕ್ಕಿಂತ ಫಿಲಾಲಜಿಸ್ಟ್ಸ್ ಎಂದು ಕರೆಯಬಹುದು ಕಾರಣ ಇವರು ಭಾಷೆಯ ಅಧ್ಯಯನವನ್ನು ಫಿಲಾಲಜಿ ಎಂದು ಕರೆಯುತ್ತಿದ್ದರು. ಇವರ ಪ್ರಕಾರ ಭಾಷಾಶಾಸ್ತ್ರದ ಅದ್ಯಯನವೆಂದರೆ ಭಾಷೆಯ ಅಧ್ಯಯನ ಮತ್ತು ಆ ಭಾಷೆಯನ್ನು ಮಾತಾನಾಡುವ ಜನರ ಮಾತಿನ ಅಧ್ಯಯನವಾಗಿತ್ತು . ಜೊತೆಗೆ ಒಂದು ಭಾಷೆಯ ಇತಿಹಾಸ ಮತ್ತು ಹೊಸ ಪದಗಳ ಉತ್ಪತ್ತಿ ಯ ಬಗೆಗೆ ಕಂಡುಕೊಳ್ಳುವುದು ಎಂದು ಅರಿಯಲಾಗಿತ್ತು .ಅಂದರೆ ಒಂದು ಭಾಷೆಯ ಉಗಮ ,ಅದು ಬೆಳೆದು ಬಂದ ರೀತಿ ಮತ್ತು ಹೊಸ ಪದಗಳ ಅಳವಡಿಕೆಯ ಅಧ್ಯಯನ ಇದನ್ನು ಸಸ್ಯೂರ್ ಡೈ ಕ್ರೋನಿಕ್(Diachronic) ಭಾಷಾ ಅಧ್ಯಯನ ವಿಧಾನ ಎನ್ನುತ್ತಾನೆ .ಇವನ ವಾದವೆಂದರೆ ಭಾಷೆಯನ್ನು ಸಿಂಕ್ರೋನಿಕ್ (synchronic)ಕ್ಕಾಗಿ ಅಧ್ಯಯನ ಮಾಡಬೇಕೆ ಹೊರತು ಡೈ ಕ್ರೋನಿಕ್ ಕ್ಕಾಗಿಯಲ್ಲ ಕಾರಣ ಭಾಷೆ ಪ್ರಸ್ತುತ ಹೇಗೆ ಬಳಕೆಯಾಗುತ್ತಿದೆ ,ಸದ್ಯದ ಪರಿಸ್ಥಿತಿಯಲ್ಲಿ ಅದರ ಪಾತ್ರ ಏನು ಎಂಬುದು ಮುಖ್ಯವಾಗುತ್ತದೆ ವಿನಃ ಅದು ಹೇಗೆ ಉಗಮವಾಯಿತು ,ಯಾವ ರೀತಿ ಬೆಳೆದು ಬಂತು ಎಂಬುದಲ್ಲ ಈ ರೀತಿಯ ಅಧ್ಯಯನ ವಿಧಾನವನ್ನು ಈತನು ಸಿಂಕ್ರೋನಿಕ್ ಭಾಷಾ ಅಧ್ಯಯನ ವಿಧಾನ ಎನ್ನುತಾನೆ . ಸಸ್ಯೂರ್ ಪ್ರಕಾರ ಭಾಷಾಶಾಸ್ತ್ರದ ಅಧ್ಯಯನದ ವಸ್ತು ವಿಷಯ ಒಂದು ಭಾಷೆ ಅಥವಾ ಆ ಭಾಷೆಯನ್ನು ಆಡುವ ಜನರ ಮಾತಲ್ಲ ಬದಲಾಗಿ ಮಾತಾನಾಡುವ ಭಾಷೆಯ ಅಥವಾ ಮಾತಿನ ಹಿಂದಿರುವ ಸಂರಚನೆ(structure) . ಜನರ ಭಾಷೆಯ ಹಿಂದೆ ಒಂದು ಸಂರಚನೆ ಇರುತ್ತದೆ ಅದನ್ನು ಈತ ಭಾಷಾಶಾಸ್ತ್ರದ ಅಧ್ಯಯನ ವಸ್ತು ಎಂದು ಕರೆಯುತ್ತಾನೆ. ಇಲ್ಲಿ ಸಂರಚನೆಯೆಂದರೆ ಭಾಷೆಯನ್ನು ಬಳಸಲು ಬೇಕಾದ ನಿಯಮಗಳು, ನಾವು ಮಾತಾನಾಡುವ ಭಾಷೆಯ ಹಿಂದೆ ಕೆಲವೊಂದು ನಿಯಮಗಳಿರುತ್ತವೆ ಆ ನಿಯಮಗಳನ್ನು ಅಧ್ಯಯನ ಮಾಡುವುದೇ ಭಾಷಾಶಾಸ್ತ್ರದ ಅಧ್ಯಯನ ವಸ್ತು .ಭಾಷೆ ಮತ್ತು ನಮ್ಮ ದಿನನಿತ್ಯದ ಮಾತು ಈ ವ್ಯತ್ಯಾಸವನ್ನು ಸಸ್ಯೂರ್ ಲಾಂಗ್(Langue)ಮತ್ತು ಪೆರೋಲ್(parole)ಎಂದು ವಿವರಿಸುತ್ತಾನೆ . ಭಾಷೆಯ ಹಿಂದಿರುವ ಸಂರಚನೆ ಹೇಗೆ ಕಾರ್ಯನಿರ್ವಹಿಸುತ್ತದೆ? ಅದಕ್ಕೆ ಸಸ್ಯೂರ್ ಇದು ಒಂದು ವ್ಯವಸ್ಥೆ (system)ಯಾಗಿ ಕೆಲಸ ಮಾಡುತ್ತದೆ ಎಂದು ಹೇಳುತ್ತಾನೆ . ಇದು ಯಾವ ರೀತಿಯ ವ್ಯವಸ್ಥೆ? ಸಸ್ಯೂರ್ ಸೂಚಿಸುವಂತೆ ಇದು ಸಂಕೇತ ವ್ಯವಸ್ಥೆ(Semiotic system).ಈ ಸಂಕೇತ ವ್ಯವಸ್ಥೆಯೂ ಸೂಚಕ ಮತ್ತು ಸೂಚಿತಗಳಿಂದ ಕೂಡಿದ್ದಾಗಿದೆ. ಭಾಷೆ ಒಂದು ಸಂಕೇತ ವ್ಯವಸ್ಥೆಯಾದರೆ ಅದನ್ನು ಕಲಿಯುವುದು ಹೇಗೆ ?ಇವನು ವಿವರಿಸುವಂತೆ ಭಾಷೆಯನ್ನು ಕಲಿಯುವುದು ಎಂದರೆ ಅರ್ಥವನ್ನು ತಿಳಿಯುವುದು ಎಂಬುದಲ್ಲ ಬದಲಾಗಿ ವ್ಯತ್ಯಾಸವನ್ನು ಮಾಡುವ ಸಾಮರ್ಥ್ಯ ಎಂದರ್ಥ. ಇದನ್ನೇ ಪ್ಯಾರಾಡಿಗ್ ಮ್ಯಾಟಿಕ್ತ್ ಮತ್ತು ಸಿಟ್ಯಾಗ್ ಮ್ಯಾಟಿಕ್ ಎಂದು ಹೇಳುತ್ತಾನೆ. ಸಸ್ಯೂರ್ ಸೂಚಿಸಿದ ಈ ಎಲ್ಲಾ ಮೇಲ್ಕಂಡ ಅಂಶಗಳನ್ನು ಸಂಕ್ಷಿಪ್ತವಾಗಿ ಈ ಕೆಳಕಂಡತೆ ವಿವರಿಸಬಹುದು.
ಭಾಷಾಶಾಸ್ತ್ರವೂ ಸಹ ಒಂದು ವಿಜ್ಞಾನವಾಗಿದೆ
[ಬದಲಾಯಿಸಿ]ಸಸ್ಯೂರ್ ಪ್ರಕಾರ ಭಾಷಾಶಾಸ್ತ್ರವೂ ಸಹ ಒಂದು ವಿಜ್ಞಾನವಾಗಿದೆ. ಇದು ಕೂಡ ಇತರೆ ವಿಜ್ಞಾನಗಳಂತೆ ಭಾಷೆಯನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡುತ್ತದೆ . ಆದರೆ ಇತರೆ ವಿಜ್ಞಾನಗಳಲ್ಲಿ ಅಧ್ಯಯನದ ವಸ್ತು ಪೂರ್ವನಿರ್ಧರಿತವಾಗಿರುತ್ತದೆ, ಆದರೆ ಭಾಷಾಶಾಸ್ತ್ರದಲ್ಲಿ ಪೂರ್ವನಿರ್ಧರಿತವಾಗಿರುವುದಿಲ್ಲ . ಕಾರಣ ಭಾಷೆ ಯಾದೃಚ್ಛಿಕವಾದದ್ದು ,ಭಾಷೆಯನ್ನು ಬಳಸುವಾಗ ಕಾಲ ಮತ್ತು ಸ್ಥಳಕ್ಕನುಗುಣವಾಗಿ ಅರ್ಥ ವ್ಯತ್ಯಾಸವನ್ನು ಕಾಣುತ್ತೇವೆ .ನಾವು ಯಾವುದೇ ಒಂದು ಪದವನ್ನು ಒಂದೇ ಅರ್ಥದಲ್ಲಿ ಬಳಸಲು ಸಾಧ್ಯವಿಲ್ಲ ಉದಾಹರಣೆಗೆ ಕುರ್ಚಿ ಸಾಮಾನ್ಯವಾಗಿ ಕೂತುಕೊಳ್ಳಲು ಎಂಬ ಅರ್ಥದಲ್ಲಿ ಗ್ರಹಿಸುತ್ತೇವೆ.ಅದೇ ಲೋಕಸಭೆ ಅಥವಾ ವಿಧಾನಸಭೆ ಅಥವಾ ರಾಜಕೀಯ ಎಂದರೆ ಕುರ್ಚಿ ಎಂದ ತಕ್ಷಣ ಅಧಿಕಾರ ಎಂದು ಅರ್ಥಮಾಡಿಕೊಳ್ಳುತ್ತೇವೆ .ಈ ಮೇಲಿನ ಉದಾಹರಣೆಯಿಂದ ನಾವು ತಿಳಿಯುವುದೆನೆಂದರೆ ಭಾಷೆ ಬದಲಾವಣೆಗೆ ಒಳಪಡುವಂತದ್ದು ಸ್ಥಿರವಾದದ್ದಲ್ಲ .ಭಾಷಾಶಾಸ್ತ್ರದ ಅಧ್ಯಯನವೆಂದರೆ ಭಾಷೆ or ಭಾಷೆಗಳ ನಡುವಿನ ಸಂಭಂದಗಳ , ಐತಿಹಾಸಿಕ ಬೆಳವಣಿಗೆಯ or ಪದಗಳ ಅರ್ಥ or ಮೂಲವನ್ನು ತಿಳಿಯುವುದಲ್ಲ ಬದಲಾಗಿ ಭಾಷಾಶಾಸ್ತ್ರವೂ ಸಹ ತನ್ನದೇ ಆದ ವಸ್ತು ವಿಷಯವನ್ನು ಹೊಂದಿದೆ.ಆಗಾಗಿ ಭಾಷೆಯ ಹಿಂದಿರುವ ಅಮೂರ್ತವಾದ ಸಂರಚನೆಯನ್ನು ಅಂದರೆ ಭಾಷೆಯ ಹಿಂದಿರುವ ನಿಯಮಗಳನ್ನು ಅದ್ಯಯನ ಮಾಡಬೇಕು.ಒಂದು ಭಾಷೆಯನ್ನು ಕಲಿಯುವುದು ಎಂದರೆ ಭಾಷೆಯ ಕಲಿಕೆ ಎಂದಲ್ಲ ಆ ಭಾಷೆಯ ಹಿಂದಿರುವ ನಿಯಮಗಳ ಅಧ್ಯಯನ ಎಂದರ್ಥ . ಸಸ್ಯೂರ್ ಭಾಷೆಯ ಅಧ್ಯಯನವನ್ನು ಡೈಕ್ರೋನಿಕ್ ಮತ್ತು ಸಿ೦ಕ್ರೋನಿಕ್ (Diachronic and Synchronic)ಎಂದು ಎರಡು ರೀತಿಯಾಗಿ ವಿವರಿಸುತ್ತಾನೆ . ಡೈಕ್ರೋನಿಕ್ ಭಾಷಾಶಾಸ್ತ್ರವೂ ಒಂದು ಭಾಷೆಯ ಇತಿಹಾಸ ಮತ್ತು ವಿಕಸನದ ಬಗ್ಗೆ ಅಧ್ಯಯನ ಮಾಡುವಂತದ್ದು . .ಈತನ ಪ್ರಕಾರ ಡೈಕ್ರೋನಿಕ್ ಎಂಬುದು ಮಾತಿನ ಸಾಮಾಜಿಕ ಚಟುವಟಿಕೆಯಲ್ಲಿ ಹುಟ್ಟಿಕೊಳ್ಳುತ್ತದೆ. ಬದಲಾವಣೆಗಳು ಭಾಷೆಯ ಭಾಗವಾಗುವುದಕ್ಕೆ ಮುಂಚೆ ವ್ಯಕ್ತಿಗಳ ಮಾತುಗಾರಿಕೆಯ ಮಾದರಿಗಳಾಗಿರುತ್ತವೆ. ಮಾತುಗಾರಿಕೆ ಎಂಬುದು ಒಂದು ಚಟುವಟಿಕೆ, ವ್ಯಕ್ತಿಗಳನ್ನು ಮೌಖಿಕ ಮತ್ತು ಶ್ರವ್ಯ ಎರಡು ಸಂವಹನಗಳಲ್ಲಿ ತೊಡಗಿಸುತ್ತದೆ.
ಸಿಂಕ್ರೋನಿಕ್ ವಿಧಾನ
[ಬದಲಾಯಿಸಿ]ಇವನ ಪೂರ್ವಿಕರು ಅಂದರೆ ಫಿಲಾಲಜಿಸ್ಟ್ಸ್ ಮತ್ತು ಇತರೆ ಸಾಂಪ್ರಾದಾಯಿಕ ಭಾಷಾಶಾಸ್ತ್ರಜ್ಞರು ಭಾಷೆಗಳು ಮತ್ತು ಆ ಭಾಷೆಗಳನ್ನು ಇತರೆ ಭಾಷೆಗಳೊಂದಿಗೆ ಹೋಲಿಸುವ ಕ್ರಮವೇ ಭಾಷಾಶಾಸ್ತ್ರದ ಅಧ್ಯಯನದ ವಸ್ತುವೆಂದು ತಿಳಿದಿದ್ದರು. ಇದರ ಜೊತೆಗೆ ಪೂರ್ವಿಕರ ಪ್ರಕಾರ ಭಾಷೆಯೇ ಭಾಷಾಶಾಸ್ತ್ರದ ಅಧ್ಯಯನದ ವಸ್ತು ಏಕೆಂದರೆ ಪ್ರತಿಯೊಂದು ಕಾಲದಲ್ಲೂ,ಪ್ರತಿಯೊಂದು ಸ್ಥಳ ,ಜನಾಂಗ ತನ್ನದೇ ಆದ ಭಾಷೆಯನ್ನು ಹೊಂದಿರುತ್ತದೆ,ಅದು ಬರವಣಿಗೆಯ ರೂಪದಲ್ಲಿರುವ ಭಾಷೆಗಳಾಗಿರಬಹುದು ಅಥವಾ ಮೌಖಿಕ ರೂಪದಲ್ಲಿರುವ ಭಾಷೆಗಳಾಗಿರಬಹುದು. ಭಾಷೆಯೆಂಬುದು ಕಾಲದಿಂದ ಕಾಲಕ್ಕೆ ಬದಲಾವಣೆಯಾಗುತ್ತಿರುತ್ತದೆ.ಸಾಂಸ್ಕೃತಿಕ ಬದಲಾವಣೆಗಳಿಂದ,ಅಧುನಿಕತೆಯಿಂದ ಮತ್ತು ಸಾಮಾಜಿಕ ಅಂಶಗಳು ಇತ್ಯಾದಿ ಕಾರಣಗಳಿಂದ ಬದಲಾವಣೆ ಸಹಜವಾದ ಕ್ರಿಯೆ . ಒಂದು ಭಾಷೆ ಹೇಗೆ ಬದಲಾವಣೆಯಾಗಿದೆ ಅಥವಾ ಭಾಷೆ ಕಾಲದಿಂದ ಕಾಲಕ್ಕೆ ಯಾವ ರೀತಿ ಬದಲಾವಣೆಯಾಗುತ್ತಿದೆ , ಅದಕ್ಕೆ ಕಾರಣಗಳು ಮತ್ತು ಆದರಿಂದುಂಟಾಗುವ ಪರಿಣಾಮಗಳು ಮತ್ತು ಕೇವಲ ಭಾಷೆಯ ಒಳಗಿನ ಅಂಶಗಳಷ್ಟೇ ಅಲ್ಲ ಬಾಹ್ಯ ಅಂಶಗಳಿಂದಾಗುವ ಬದಲಾವಣೆಯನ್ನು ಸಹ ಅಧ್ಯಯನ ಮಾಡುತ್ತದೆ. ಈ ರೀತಿ ಭಾಷೆಯ ಬದಲಾವಣೆಯ ಅಧ್ಯಯನ ಐತಿಹಾಸಿಕ ಭಾಷಾಶಾಸ್ತ್ರಜ್ಞರ ಕಾಳಜಿ .ಅದನ್ನು ಸಸ್ಯೂರ್ ಡೈಕ್ರೋನಿಕ್ ಭಾಷಾ ಅಧ್ಯಯನ ವಿಧಾನ ಎನ್ನುತ್ತಾನೆ .ಈ ಅಧ್ಯಯನ ಭಾಷಾಶಾಸ್ತ್ರದ ಪ್ರಾರಂಭದಿಂದ ಹಿಡಿದು ಈ ಒಂದು ಸಂರಚನಾತ್ಮಕ ಭಾಷಾಶಾಸ್ತ್ರದವರೆಗೆ ಅಧ್ಯಯನವರೆಗೆ ನಡೆದಿದೆ . ಒಂದು ನಿರ್ಧಿಷ್ಟ ಭಾಷೆಯನ್ನು ನಿರ್ಧಿಷ್ಟ ಕಾಲದಲ್ಲಿ ವಿವರಿಸುವಂತಹ ವಿಧಾನವೇ ಸಿಂಕ್ರೋನಿಕ್ ವಿಧಾನ ಅಂದರೆ ಭಾಷೆ ಪ್ರಸ್ತುತ ಹೇಗೆ ಬಳಕೆಯಾಗುತ್ತಿದೆ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಅದನ್ನು ಬಳಸುವ ಕ್ರಮ ಎಂಬುದನ್ನು ಅಧ್ಯಯನ ಮಾಡುವುದು ಎಂಬುದಾಗಿದೆ,. ಒಂದೇ ಸಾಮಾಜಿಕ ಗುಂಪಿನಲ್ಲಿ ವಾಸ ಮಾಡುವ ಯುವಕ ಯುವತಿಯರ ಮಾತಿಗೂ, ಮುದುಕರ ಮಾತಿಗೂ ವ್ಯತ್ಯಾಸವಿರುತ್ತದೆ . ಈ ರೀತಿಯ ವ್ಯತ್ಯಾಸವನ್ನು ಸಹ ಇಲ್ಲಿ ಅಧ್ಯಯನ ಮಾಡಬಹುದು .ಚೆಸ್ ಆಟದಲ್ಲಿ ಚೆಸ್ ಬೋರ್ಡ್ ನಲ್ಲಿ ಬದಲಾವಣೆಯಾಗುತ್ತಾ ಇರುತ್ತದೆ, ಅದೇ ಸಂಧರ್ಭದಲ್ಲಿ ಆ ಆಟದ ಸ್ಥಿತಿ ಅದರಲ್ಲಿ ಕಾಯಿಗಳ ಸ್ಥಾನದಲ್ಲಾಗುವ ಬದಲಾವಣೆಯಿಂದ ವಿವರಿಸಲ್ಪಡುತ್ತದೆ. ಯಾವ ಕಡೆಯಿಂದ ಅಥವಾ ಯಾವ ರೀತಿ ಕಾಯಿಯನ್ನು ನಡೆಸಿ ಒಂದು ಪ್ರತ್ಯೇಕ ಸ್ಥಿತಿಗೆ ತಲುಪುತ್ತಾನೆ ಎಂಬುದು ಮುಖ್ಯವಲ್ಲ ಅದು ಸಿಂಕ್ರೋನಿಕಲಿ ಅದರ ಹಿಂದಿನದನ್ನು ಅನುಕರಿಸಿದೆ ಅದ್ದರಿಂದ ಅದು ಭಾಷೆ .ಆದ್ದರಿಂದ ಸಸ್ಯೂರ್ ವಿವರಿಸುವಂತೆ ಭಾಷೆಯನ್ನು ಸಿಕ್ರೊಂನಿಕಲಿ ಅಧ್ಯಯನ ಮಾಡಬೇಕು . ಲಾಂಗ್ ಮತ್ತು ಪೆರೋಲ್ ಸಸ್ಯೂರ್ ನ ಪ್ರಕಾರ ನಾವು ಅಡುವ ಮಾತಿಗೂಮತ್ತು ಭಾಷೆ ಎಂಬ ವ್ಯವಸ್ಥೆಗೂ ವ್ಯತ್ಯಾಸಗಳಿವೆ ಅವುಗಳನ್ನೇ ಇವನು ಲಾಂಗ್ ಮತ್ತು ಪೆರೋಲ್ ಎಂದು ಕರೆಯುತ್ತಾನೆ . ಇಲ್ಲಿ ಲಾಂಗ್ ಎಂದರೆ ‘”ಭಾಷೆ “ .ಹಲವು ನಿಯಮಗಳಿಂದ ಕೂಡಿರುವಂತಹ ಒಂದು ವ್ಯವಸ್ಥೆ .ಪೆರೋಲ್ ಎಂದರೆ “ಮಾತು “ಎಂದರ್ಥ ಭಾಷೆಯೆಂಬುದು ಒಂದು ರೀತಿ ಈಗಾಗಲೇ ಇರುವಂತದ್ದು ನಮ್ಮೆಲ್ಲರಿಂದಲ್ಲೂ ಸಹ ಬಳಸ್ಪಲ್ಪಡುತ್ತಿರುವಂತದ್ದು. ಇದು ಯಾವುದೋ ಒಂದು ಸಾಂಸ್ಕ್ರುತಿಕ ಗುಂಪಿನಿಂದ ಈಗಾಗಲೇ ಸಿದ್ದವಾಗಿರುವುದು . ಇದನ್ನು ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ರೀತಿಯಲ್ಲಿ ಉಪಯೋಗಿಸುತ್ತಾನೆ ಅದುವೇ ಪೆರೋಲ್. ಪ್ರತಿಯೊಬ್ಬ ವ್ಯಕ್ತಿಯ ಮಾತಿನ ಶೈಲಿಯನ್ನು ಸೂಚಿಸುತ್ತದೆ .ಪ್ರತಿಯೊಬ್ಬ ವ್ಯಕ್ತಿಯ ಮಾತು ಸಹ ಆತನ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ . ಈ ರೀತಿ ಲಾಂಗ್ ಎಂಬ ಭಾಷಾ ವ್ಯವಸ್ಥೆಯಲ್ಲಿ ಪೆರೋಲ್ ಎಂಬ ಭಾಷಾ ಪ್ರಣಾಳಿಕೆ ಸೇರಿ ಒಂದು ಭಾಷೆ ಹೊರಬರುತ್ತದೆ . ಒಂದು ಭಾಷಾ ವ್ಯವಸ್ಥೆಯ ಅಸ್ತಿತ್ವ ಯಾವಾಗ ಸಾದ್ಯವೆಂದರೆ ಲಾಂಗ್ ಆ ಭಾಷಾ ಪ್ರಣಾಳಿಕೆಯಿಂದ ರಚನೆಯಾದಾಗ ಮಾತ್ರ ಸಾಧ್ಯ ಎಂಬುದು ಸಸ್ಯೂರ್ ನ ವಾದ .ಆದ್ದರಿಂದ ಭಾಷೆಯೆಂಬುದು ನಿಂತ ನೀರಲ್ಲ ಅದು ಬೆಳೆಯುತ್ತದೆ ,ಬದಲಾವಣೆಯಾಗುತ್ತದೆ . ಆದರೆ ಭಾಷಾ ವ್ಯವಸ್ಥೆ ಮಾತ್ರ ಸ್ಥಿರ ವಾಗಿರುತ್ತದೆ ಎಂದಿಗೂ ಬದಲಾವಣೆ ಹೊಂದುವುದಿಲ್ಲ .ಲಾಂಗ್ ಮತ್ತು ಪೆರೋಲ್ ಗಳನ್ನು ಈ ಕೆಳಕಂಡತೆ ಉದಾಹರಣೆಸಹಿತ ವಿವರಿಸಬಹುದು .
ಪೆರೋಲ್
[ಬದಲಾಯಿಸಿ]ಪೆರೋಲ್ ಅಂದರೆ ಪ್ರತಿಯೊಬ್ಬ ವ್ಯಕ್ತಿ ಮಾತಾನಾಡುವ ರೀತಿ , ಒಬ್ಬ ವ್ಯಕ್ತಿಗೆ ಸಂಬಂಧಪಟ್ಟದ್ದು . ಸಾಮಾನ್ಯವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನತೆ ಇರುತ್ತದೆ ಅದೇ ರೀತಿ ಒಬ್ಬ ವ್ಯಕ್ತಿಯ ಮಾತಿಗೂ ಮತ್ತೊಬ್ಬ ವ್ಯಕ್ತಿಯ ಮಾತಿಗೂ ಭಿನ್ನತೆ ಇರುತ್ತದೆ ಅದುವೇ ಪೆರೋಲ್ . ಉದಾಹರಣೆಗೆ ಶಿಕ್ಷಿತರು ಮಾತಾನಾಡುವ ರೀತಿಗೂ , ಅಶಿಕ್ಷಿತರು ಮಾತಾನಾಡುವ ಮಾತಿಗೂ ವ್ಯತ್ಯಾಸವಿದೆ.ಅದೇ ರೀತಿ ಮಕ್ಕಳ ಮಾತಿಗೂ .ಯುವಕ ಯುವತಿಯರ ಮಾತಿಗೂ ಮತ್ತು ಮುದುಕ ಮುದುಕಿಯರ ಮಾತಿಗೂ ವಿಭಿನ್ನತೆಯನ್ನು ಕಾಣುತ್ತೇವೆ .ಈ ರೀತಿಯಾಗಿ ಮಾತು ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತದೆ .
ಲಾಂಗ್
[ಬದಲಾಯಿಸಿ]ಲಾಂಗ್ ಒಂದು ಭಾಷಾ ವ್ಯವಸ್ಥೆ. ಇದು ಅರ್ಮೂತ ಸ್ವರೂಪದ್ದಾಗಿದೆ . ಎಲ್ಲಾ ವ್ಯಕ್ತಿಗಳ ಮಾತುಗಳ ಹಿಂದಿರುವ ಒಂದು ವ್ಯವಸ್ಥೆಯೇ ಲಾಂಗ್ ... ನಾವು ಆಡುವ ಮಾತುಗಳು ಅಂದರೆ ಮಕ್ಕಳು ,ಯುವಕರು ಯುವತಿಯರು ,ಮುದುಕರು ,ಸುಶಿಕ್ಷಿತರು ಅಶಿಕ್ಷಿತರು ಇತ್ಯಾದಿಯಾಗಿ ಎಲ್ಲರೂ ಆಡುವ ಮಾತುಗಳ ಹಿಂದೆ ಒಂದು ಕಣ್ಣಿಗೆ ಕಾಣದ ವ್ಯವಸ್ಥೆ ಇದೆ ಅದನ್ನೆ ಇವನು ಲಾಂಗ್ ಎಂದು ಕರೆಯುತ್ತಾನೆ .ಇದು ಒಂದು ರೀತಿಯಾದ ಶಬ್ದಭಂಡಾರವಿದ್ದಂತೆ ಎಲ್ಲರಿಗೂ ಸ್ವಾಭಾವಿಕವಾಗಿ ಇರುವಂತದ್ದು. ಅದ್ದರಿಂದ ಲಾಂಗ್ ಎಂಬುದು ಒಂದು ಭಾಷಾ ಸಮುದಾಯದಲ್ಲಿ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾದ ಭಾಷಾ ವ್ಯವಸ್ಥೆ ಮತ್ತು ಹಲವು ನಿಯಮಗಳ ಸಂಗ್ರಹ.ಆಗಾಗಿ ಭಾಷಾಶಾಸ್ತ್ರದಲ್ಲಿ ಲಾಂಗ್ ನ್ನು ಅಧ್ಯಯನ ಮಾಡಬೇಕು.ಉದಾಹರಣೆಗೆ ಅವಳು ಬೇಗ ಹೋದಳು.ಅವಳು ಚೆನ್ನಾಗಿ ಹಾಡುತ್ತಾಳೆ .ಈ ರೀತಿಯಾದ ಎರಡು ವಾಕ್ಯಗಳನ್ನು ಹೇಳಿಕೊಡುವುದರ ಮೂಲಕ ನಮ್ಮ ತಲೆಯಲ್ಲಿ ಒಂದು ಸಂರಚನೆ ಬರುತ್ತದೆ .ಆ ಒಂದು ಸಂರಚನೆ ನಮಗೆ ಹೊಸ ಹೊಸ ವಾಕ್ಯಗಳನ್ನು ರಚಿಸಲು ಸಹಾಯ ಮಾಡುತ್ತದೆ . ಈ ರೀತಿ ಸಹಾಯ ಮಾಡುವ ವ್ಯವಸ್ಥೆಯೇ ಲಾಂಗ್ .ಇದನ್ನು ಅದ್ಯಯನ ಮಾಡುವುದರ ಮೂಲಕ ಭಾಷೆ ಹೇಗೆ ಸಾಧ್ಯ ಎಂಬುದನ್ನು ತಿಳಿಯಬಹುದು . ಭಾಷೆ ಎಂಬುದು ಭಾಷೆಯ ಹಿಂದಿರುವ ಸಂರಚನೆಯಿಂದ ಸಾದ್ಯ.ನಾವು ಕ್ರಿಕೆಟ್ ಅಧ್ಯಯನ ಮಾಡುವುದು ಎಂದರೆ ಯಾವುದೋ ಕೆಲವೊಂದು ಮ್ಯಾಚ್ ಗಳ ಅದ್ಯಯನವಲ್ಲ ಬದಲಾಗಿ ಆ ಕ್ರಿಕೆಟ್ ಆಟದ ಹಿಂದಿರುವ ಸಂರಚನೆಯ ಅಧ್ಯಯನ .ಮತ್ತೊಂದು ಉದಾಹರಣೆ ನೋಡೊಣ ಇಟ್ಟಿಗೆ(bricks)ಗಳ ಬಗೆಗಿನ ಅದ್ಯಯನವೆಂದರೆ ಕೆಲವೊಂದು ಇಟ್ಟಿಗೆಗಳ ಅದ್ಯಯನವಲ್ಲ ಬದಲಾಗಿ ಆ ಇಟ್ಟಿಗೆಯ ಹಿಂದಿರುವ ಸಂರಚನೆಯ ಅಧ್ಯಯನ ಎಂದರ್ಥ . ಅ ಇಟ್ಟಿಗೆ ಎಂಬ ವಸ್ತುವಿಗೆ ಒಂದು ಪ್ರತ್ಯೇಕ ವಿನ್ಯಾಸವನ್ನು ನೀಡಿದ ಸಂರಚನೆಯನ್ನು ಅಧ್ಯಯನ ಮಾಡಬೇಕು .ಅದ್ದರಿಂದ ಭಾಷೆಯ ಅದ್ಯಯನವೆಂದರೆ ಪೆರೋಲ್ ನ ಅದ್ಯಯನವಲ್ಲ ಬದಲಾಗಿ ಲಾಂಗ್ ನ ಅಧ್ಯಯನ .ಅದ್ದರಿಂದ ಲಾಂಗ್ ಭಾಷಾಶಾಸ್ತ್ರದ ಅಧ್ಯಯನದ ವಸ್ತು ಎಂಬುದು ಸಸ್ಯೂರ್ ನ ವಾದ .
ಮಾತು ಮಾತು ಮಾತು ಮಾತು ಭಾಷೆ
ಈ ಮೇಲ್ಕಂಡ ರೇಖಾಚಿತ್ರವು ಭಾಷೆ ಮತ್ತು ಮಾತಿನ ನಡುವಿನ ಭಿನ್ನತೆಯನ್ನು ತಿಳಿಸುತ್ತದೆ .ಅಂದರೆ ಲಾಂಗ್ ಮತ್ತು ಪೆರೋಲ್ ಗಳ ನಡುವಿನ ವ್ಯತ್ಯಾಸ . ಲಾಂಗ್ ಪೆರೋಲ್ 1 ಸಾಂಸ್ಥಿಕರಣಗೊಂಡಿದೆ ವೈಯುಕ್ತಿಕವಾದದ್ದಾಗಿದೆ 3 ಸ್ಥಿರವಾಗಿರುತ್ತದೆ ಸ್ಥಿರವಾಗಿರುವುದಿಲ್ಲ 4 ಕ್ರಿಯಾತ್ಮಕವಾದದ್ದಲ್ಲ ಕ್ರಿಯಾತ್ಮಕವಾದದ್ದು 5 ಒಂದು ಜನಾಂಗದಿಂದ ಮತ್ತೊಂದು ಜನಾಂಗಕ್ಕೆ ವರ್ಗಾಯಿಸಬಹುದು ಇಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನತೆ ಇರುತ್ತದೆ ಅದ್ದರಿಂದ ವರ್ಗಾಯಿಸಲು ಸಾಧ್ಯವಿಲ್ಲ . 6 ಕೆಲವೊಂದು ಮಿತಿಗಳಿರುತ್ತವೆ ಯಾವುದೇ ಮಿತಿಗಳಿರುವುದಿಲ್ಲ 7 ವ್ಯೆಜ್ಞಾನಿಕ ಅಧ್ಯಯನ ಇಲ್ಲಿ ಸಾಧ್ಯ ವೈಜ್ಞಾನಿಕ ಅಧ್ಯಯನ ಸಾಧ್ಯವಿಲ್ಲ 8 ಖಚಿತವಾಗಿರುತ್ತದೆ ಖಚಿತವಾಗಿರುವುದಿಲ್ಲ
ಸೆಮಿಯಾಟಿಕ್ಸ್(Semiotics Or Semiology)
[ಬದಲಾಯಿಸಿ]ಫರ್ಡಿನೆಂಡ್ ಡಿ ಸಸ್ಯೂರ್ ಪ್ರಕಾರ ಭಾಷಾಶಾಸ್ತ್ರದ ಅದ್ಯಯನವೆಂದರೆ ಭಾಷಾ ವ್ಯವಸ್ಥೆಯ ಅದ್ಯಯನ .ಅದು ಎಂತಹ ವ್ಯವಸ್ಥೆ? ಭಾಷೆ ಒಂದು ಸಾಂಕೇತಿಕ ವ್ಯವಸ್ಥೆ . ಸಂಕೇತಗಳು ಆಥವಾ ಸಂಜ್ಞೆಗಳು ಒಂದು ಭಾಷೆಯಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತವೆ ಎನ್ನುವುದರ ಬಗ್ಗೆ ಅಧ್ಯಯನ ಮಾಡುವುದೇ ಸೆಮಿಯಾಟಿಕ್ಸ್ ಅಥವಾ ಸೆಮಿಯಾಲಜಿ. ಇದನ್ನು ಮೊದಲಿಗೆ ಅನ್ವಯಿಕ ಭಾಷಾಶಾಸ್ತ್ರದಲ್ಲಿ ಬಳಸಲಾಗುತ್ತಿತ್ತು. ಈ ಸೆಮಿಯಾಟಿಕ್ಸ್ ಗಳ ಬಗ್ಗೆ ಮೊದಲಿಗೆ ಪ್ರಾಣಿಗಳ ಮೇಲೆ ಸಂಜ್ಞೆ ಗಳನ್ನು ಗಳನ್ನು ಬಳಸುವುದು ಹಾಗೂ ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಪ್ರಯೋಗ ಮಾಡಲಾಯಿತು, ಈ ರೀತಿಯಾಗಿ ಸೆಮಿಯಾಟಿಕ್ಸ ನ ಅಧ್ಯಯನ ಪ್ರಾರಂಭವಾಯಿತು.ಒಟ್ಟಿನಲ್ಲಿ ಸೆಮಿಯಾಟಿಕ್ಸ್ ಎಂದರೆ ಸಂಜ್ಞೆ ಗಳನ್ನು ಕುರಿತಾದ ಅಧ್ಯಯನ .ನಾವು ಪ್ರತಿ ನಿತ್ಯವೂ ಕೂಡ ಸಂಜ್ಞೆ ಗಳಿಂದಲೇ ಸಂವಹನ ನಡೆಸುತ್ತೇವೆ .ನಾವು ನಡೆಯುವ ಭಂಗಿ ,ಉಡುಪು ಧರಿಸುವ ಶ್ಯೆಲಿ ,ನಮ್ಮ ಆಚರಣೆ ಗಳು ಮತ್ತು ಸಂಪ್ರದಾಯಗಳು ,ನಾವು ಇತರರೊಂದಿಗೆ ವ್ಯವಹರಿಸುವ ರೀತಿ ಇತ್ಯಾದಿಯಾಗಿ ಎಲ್ಲವೂ ಏನನ್ನೋ ಸೂಚಿಸುತ್ತವೆ .ಇದನ್ನು ಸಹ ಸೆಮಿಯಾಟಿಕ್ಸ್ ಅಧ್ಯಯನ ಮಾಡುತ್ತದೆ . ನಂತರ ಸಂಕೇತಗಳನ್ನು ಭಾಷೆಯನ್ನು ವೈಜ್ಞಾನಿಕವಾಗಿ, ವ್ಯವಸ್ಥಿತವಾಗಿ ಅರ್ಥಮಾಡಿಕೊಳ್ಳಲು ಹಾಗೂ ಆ ಸಂಕೇತಗಳ ಪರಿಧಿಯನ್ನು ಗುರುತಿಸಲು ಬಳಸಬೇಕು ಎಂದು ಸಸ್ಯೂರ್ ಹೇಳುತ್ತಾರೆ . ಸಸ್ಯೂರ್ ಭಾಷೆಯು ಸಂಕೇತಗಳಿಂದ ಕೂಡಿರುವಂತಹ ವ್ಯವಸ್ಥೆಯಾಗಿದ್ದು , ಈ ಸಂಕೇತಗಳು ಭಾಷೆಯಲ್ಲಿ ಪರಿಕಲ್ಪನೆಗಳು ಮತ್ತು ಆಲೋಚನೆಗಳ ಬಗ್ಗೆ ತಿಳಿಸುತ್ತವೆ. ಮತ್ತು ಈ ಸಂಕೇತಗಳನ್ನು ವ್ಯವಸ್ಥಿತ ಬರವಣೆಗೆ, ಟ್ರಾಫಿಕ್ ಲೈಟ್ ಗಳಲ್ಲಿ ,ಅಂಗವಿಕಲರು ಮಾತನಾಡುವಂತಹ ಸಂದರ್ಭದಲ್ಲಿ ಕಾಣಬಹುದು. ಅದೇ ರೀತಿ ದಿನನಿತ್ಯ ನಾವು ಸಮಾಜದಲ್ಲಿ ಹಲವಾರು ಸಂಕೇತಗಳನ್ನು ಕಾಣುತ್ತೇವೆ ಅವುಗಳನ್ನು ಭಾಷಾ ಸಂಕೇತಗಳಾಗಿ ಅಧ್ಯಯನ ಮಾಡಬಹುದು . ಭಾಷೆಯ ಅದ್ಯಯನವೆಂದರೆ ಸಂಕೇತಗಳ ಅಧ್ಯಯನ ಎಂಬುದಾಗಿದೆ .ಹಾಗಾಗಿ ಸಂಕೇತಗಳ ಮೂಲಕ ಕಮ್ಯೂನಿಕೆಷನ್ ಸಾದ್ಯವಾಗುತ್ತದೆ .ಪ್ರತಿ ಸಂಕೇತವೂ ಕೂಡಾ ಯಾವುದೋ ಒಂದು ವಸ್ತುವನ್ನೋ ಅಥವಾ ಅಂಶವನ್ನು ಸೂಚಿಸುತ್ತದೆ.
ಸಂಕೇತ ವ್ಯವಸ್ಥೆ (Sign system)
[ಬದಲಾಯಿಸಿ]ಸಸ್ಯೂರ್ ಸಂಕೇತವನ್ನು ಎರಡು ಭಾಗಗಳಾಗಿ ವಿಭಾಗಿಸುತ್ತಾನೆ .ಅವುಗಳೆಂದರೆ:
1.ಸಿಗ್ನಿಪೈರ್ (signifier)-ಸೂಚಕ 2.ಸಿಗ್ನಿಫೈಡ್ (signified) -ಸೂಚಿತ .ಸಂಕೇತವೆಂಬುದು ಯಾವುದೋ ಒಂದು ಚಿತ್ರವನ್ನೋ ಅಥವಾ ವಸ್ತುವನ್ನೋ ಸೂಚಿಸುತ್ತದೆ ಉದಾಹರಣೆಗೆ ಟ್ರಾಫಿಕ್ ಲೈಟ್ ವ್ಯವಸ್ಥೆ .ಅದರಲ್ಲಿರುವ ಒಂದೊಂದು ಲೈಟ್ ಕಲರ್ ಕೂಡ ಒಂದೊಂದನ್ನು ತಿಳಿಸುತ್ತದೆ ಕೆಂಪು ನಿಲ್ಲು ಎಂದು ಸೂಚಿಸುತ್ತದೆ ,ಹಳದಿ ಹೊರಡಲು ಸಿದ್ಧನಾಗು ಮತ್ತು ಹಸಿರು ಹೊರಡು ಎಂಬುದನ್ನು ಸೂಚಿಸುತ್ತವೆ . ನಮಗೆ ಈ ಉದಾಹರಣೆಯು ಸರಿಯಾಗಿ ಅರ್ಥ ವಾದರೆ ಸೂಚಕ ಮತ್ತು ಸಂಕೇತದ ನಡುವಿನ ವ್ಯತ್ಯಾಸ ಸರಿಯಾಗಿ ತಿಳಿಯುತ್ತದೆ. ಇಲ್ಲಿ ಕೆಂಪು,ಹಳದಿ ಮತ್ತು ಹಸಿರು ಸೂಚಕಗಳಾದರೆ ನಿಲ್ಲು ,ಸಿದ್ಧನಾಗು ಮತ್ತು ಹೊರಡು ಸೂಚಿತಗಳು.ಈ ಮೂರು ಸೂಚಕಗಳಿಂದ ಕಮ್ಯೂನಿಕೇಶನ್ ಸಾಧ್ಯವಿದೆ .ಇಲ್ಲಿ ಸಂವಹನ ಹೇಗೆ ಸಾದ್ಯ ಎಂಭ್ದು ಪ್ರಶ್ನೆ .ಈಗಾಗಲೇ ಟ್ರಾಫಿಕ್ ಲೈಟ್ ಎಂಬ ಪರಿಕಲ್ಪನೆ ನಮ್ಮ ತಲೆಯಲ್ಲಿ ಇದೆ ಅದರಿಂದಾಗಿ ಅದನ್ನು ನೋಡಿದ ತಕ್ಷಣ ನಿಲ್ಲು ,ಹೊರಡು ಮತ್ತು ಸಿದ್ಧನಾಗು ಎಂಬುದು ಅರ್ಥವಾಗುತ್ತದೆ . ಅದೇ ಪ್ರಕಾರ ಮತ್ತೊಂದು ಉದಾಹರಣೆಯ ಮೂಲಕ ಸೂಚಕ ಮತ್ತು ಸೂಚಿತಗಳ ನಡುವಿನ ಸಂಬಂಧವನ್ನು ನೋಡುವುದಾದರೆ Ambulance ಮಾಡುವ ಶಬ್ದ .ನಮಗೆ ದಾರಿ ಬಿಡು ಮತ್ತು ತುರ್ತು ಇತ್ಯಾದಿಯಾಗಿ ಅರ್ಥವಾಗುತ್ತದೆ .ನಮ್ಮ ತಲೆಯಲ್ಲಿ ಈಗಾಗಲೇ ಇರುವಂತಹ ambulence ಎಂಬ ಪರಿಕಲ್ಪನೆ ನಮಗೆ ಶಬ್ದವನ್ನು ಕೇಳಿದ ತಕ್ಷಣ ಗ್ರಹಿಸುವಂತೆ ಮಾಡುವುದು .ಈ ಮರದ ಚಿತ್ರವನ್ನು ನೋಡಿ ಮರ ಎಂದ ತಕ್ಷಣವೇ or ನೋಡಿದ ತಕ್ಷಣವೇ ನಮಗೆ ಮರ ಎಂಬ ಪರಿಕಲ್ಪನೆ ಅರ್ಥವಾಗುತ್ತದೆ .ಮರ ಎಂಬ ಪರಿಕಲ್ಪನೆ ಈ ಮೊದಲೇ ನಮ್ಮ ತಲೆಯಲ್ಲಿ ಇದೆ .ಜೊತೆಗೆ ಹೊರಗೆ ಕಾಣುವ ಚಿತ್ರಣ ದಿಂದ ಅದು ನಮಗೆ ಅರ್ಥವಾಗುತ್ತದೆ .
Concept + Sound Image = Sign ಮರ + ಮರ = ಮರ
ಫರ್ಡಿನೆಂಡ್ ಡಿ ಸಸ್ಯೂರ್ ರವರ ಪ್ರಕಾರ ಸಂಕೇತ ವ್ಯವಸ್ಥೆಯ ಬಗ್ಗೆ ಸಂಪೂರ್ಣವಾಗಿ ಅರ್ಥವಾಗಬೇಕಾದರೆ ಈ ಸಂಕೇತ ವ್ಯವಸ್ಥೆಯ ಪ್ರಮುಖವಾದ ಭಾಗವಾಗಿರುವಂತಹ ಸಿಗ್ನಿಫೈರ್ ಮತ್ತು ಸಿಗ್ನಿಫೈಡ ಗಳ ನಡುವಿನ ವ್ಯತ್ಯಾಸ ಹಾಗೂ ಪರಸ್ಪರ ಯಾವ ರೀತಿಯಾಗಿ ಸಂಬಂದವನ್ನು ಹೊಂದಿವೆ ಎಂಬುದನ್ನು ತಿಳಿಯಬೇಕಾಗುತ್ತದೆ .ಭಾಷಾ ಸಂಕೇತ ಯಾವುದೊ ಹೆಸರು or ವಸ್ತುವನ್ನು ಒಂದುಗೂಡಿಸುವುದಿಲ್ಲ ಬದಲಾಗಿ ಒಂದು ಪರಿಕಲ್ಪನೆಯನ್ನು ಮತ್ತು ಒಂದು ಶಬ್ದ ಚಿತ್ರಣವನ್ನು ಒಂದುಗೂಡಿಸುತ್ತದೆ . ಈಗ ಕುರ್ಚಿ ಎಂದಾಗ ನಮ್ಮ ಮನಸ್ಸಿನಲ್ಲಿ ಕುರ್ಚಿ ಎಂಬ ಕಲ್ಪನೆ ಬರುತ್ತದೆ .ನಾವು ಕುರ್ಚಿ ಅನ್ನೋದು ಬೇಡ ಇನ್ನು ಮುಂದೆ ಬೇರೆ ಹೆಸರಲ್ಲಿ ಕರೆಯೋಣ ಎಂದು ಬೇರೆ ಹೆಸರಿನಲ್ಲಿ ಬೇಕಾದರು ಕರೆಯಬಹುದು. ಕುರ್ಚಿ ಅಂದ ತಕ್ಷಣ ಕೂತುಕೊಳ್ಳಲು ಎಂದು ತಿಳಿದರೆ ಅಧಿಕಾರ ಮತ್ತೊಂದು ಕಡೆ ನೆನೆಪಾಗುತ್ತದೆ . ಅಂದರೆ ಕಾಲ ಮತ್ತು ಸ್ಥಳ ಕ್ಕನುಗುಣವಾಗಿ ಅರ್ಥ ವ್ಯತ್ಯಾಸವನ್ನು ಕಾಣುತ್ತೇವೆ . ಪ್ಯಾರಾಡಿಗ್ಮ್ಯಾಟಿಕ್ ಮತ್ತು ಸಿಂಟ್ಯಾಗ್ ಮ್ಯಾಟಿಕ್ (paradigmatic and syntagmatic) ಸಂಕೇತಗಳು ಭಾಷೆಯ ಇತರೆ ಸಂಕೇತಗಳ ಜೊತೆಗೆ ಹಲವಾರು ಸಾಮ್ಯತೆಗಳನ್ನು ಮತ್ತು ವಿಭಿನ್ನತೆಯನ್ನು ಹೊಂದಿದೆ . . ಪ್ಯಾರಾಡಿಗ್ ಮ್ಯಾಟಿಕ್ ಭಾಷಾ ಅಧ್ಯಯನ ವಿಧಾನದಲ್ಲಿ ಸಂಕೇತಗಳು ಸರಪಳಿ ರೂಪದಲ್ಲಿದ್ದರೆ, ಸಿಂಟ್ಯಾಗ್ ಮ್ಯಾಟಿಕ್ ಭಾಷಾ ಅಧ್ಯಯನ ವಿಧಾನದಲ್ಲಿ ಆಯ್ಕೆ ಗಳ ರೂಪದಲ್ಲಿರುತ್ತದೆ. ಆದ್ದರಿಂದ ಭಾಷೆಯೆಂಬುದು ಹಲವಾರು ಆಯ್ಕೆಗಳನ್ನು ಒಂದುಗೂಡಿಸುವ ಸರಪಳಿಯ ರೂಪದಲ್ಲಿರುವ ಸಂಕೇತಗಳಿಂದ ಸಾದ್ಯವಾಗುತ್ತದೆ. ಸಂಜ್ಞೆಗಳನ್ನು ಬಳಸಿ ನಮ್ಮ ಆಲೋಚನೆಗಳನ್ನು ಮತ್ತು ವಿಚಾರಗಳನ್ನು ಎರಡು ರೀತಿಯಾಗಿ ವ್ಯಕ್ತಪಡಿಸಲು ಸಾಧ್ಯವಿದೆ ಅದನ್ನೇ ಸಸ್ಯೂರ್ ಪ್ಯಾರಾಡಿಗ್ಮ್ಯಾಟಿಕ್(paradigmatic) ಮತ್ತು ಸಿಂಟ್ಯಾಗ್ ಮ್ಯಾಟಿಕ್ (syntagmatic) ಎಂದು ಕರೆಯುತ್ತಾನೆ .ಒಂದು ವಾಕ್ಯದಲ್ಲಿ ಪದಗಳನ್ನು ಅನುಕ್ರಮವಾಗಿ ಜೋಡಿಸುವುದೇ ಸಿಂಟ್ಯಾಗ್ ಮ್ಯಾಟಿಕ್ ಸಂಕೇತ ವ್ಯವಸ್ಥೆ .ಒಂದು ವಾಕ್ಯದಲ್ಲಿ ಪದಗಳನ್ನು ಆಯ್ಕೆ ರೂಪದಲ್ಲಿ ಜೋಡಿಸುವುದೆ ಪ್ಯಾರಾಡಿಗ್ಮ್ಯಾಟಿಕ್ ಸಂಕೇತ ವ್ಯವಸ್ಥೆ .
- ಉದಾಹರಣೆ:
೧.ಅವನು ಒಬ್ಬ ಪೋಲಿಸ್ ಮ್ಯಾನ್. ೨.ಅವನು ಒಬ್ಬ ಜೆಂಟಲ್ ಮ್ಯಾನ್ . ೩.ಅವನು ಒಬ್ಬ ಟಾಲ್ ಮ್ಯಾನ್ . ಈ ಉದಾಹರಣೆಯಲ್ಲಿ ಮೊದಲ ವಾಕ್ಯದಲ್ಲಿ ಅವನು ಎಂಬ ಪದವನ್ನು ಅನುಕರಿಸಿ ಒಬ್ಬ ,ಪೋಲೀಸ್ ಮತ್ತು ಮ್ಯಾನ್ ಪದಗಳು ಬಂದಿವೆ ಇದುವೇ ಸಿಂಟ್ಯಾಗ್ ಮ್ಯಾಟಿಕ್ ಭಾಷಾ ಅಧ್ಯಯನ ವಿಧಾನ . ಇಂತಹ ಸಂಕೇತ ವ್ಯವಸ್ಥೆಯಲ್ಲಿ ಕತೃ, ಕರ್ಮ ಮತ್ತು ಕ್ರಿಯಾಪದಗಳು ಒಂದನ್ನೊಂದು ಅನುಕರಿಸಿ ವಾಕ್ಯಗಳು ಅರ್ಥ ಪೂರ್ಣವಾಗುತ್ತವೆ .ಹಾಗೆಯೇ ಇಲ್ಲಿನ ಪ್ರತಿಯೊಂದು ಪದವನ್ನು ಬದಲಾಗಿ ಇನ್ನೊಂದು ಪದವನ್ನು ಬಳಸಲು ಸಾದ್ಯ .ಇಲ್ಲಿ ಪೋಲೀಸ್ ಎಂಬ ಪದಕ್ಕೆ ಪರ್ಯಾಯವಾಗಿ ಜೆಂಟಲ್ ,ಟಾಲ್ ಮತ್ತು ಫ್ಯಾಟ್ ಇತ್ಯಾದಿ ಪದಗಳನ್ನು ಬಳಸಬಹುದು ಇದು ಪ್ಯಾರಾಡಿಗ್ಮ್ಯಾಟಿಕ್. ೧ . ಶೇಕ್ಸ್ ಪಿಯರ್ ಒಬ್ಬ ನಾಟಕಕಾರ . ೨.ಶೇಕ್ಸ್ ಪಿಯರ್ ಒಬ್ಬ ಬರಹಗಾರ . ೩.ಶೇಕ್ಸ್ ಪಿಯರ್ ಒಬ್ಬ ಕವಿ . ಈ ಉದಾಹರಣೆಯಲ್ಲಿ ನಾಟಕಕಾರ ಎಂಬ ಪದ ಶೇಕ್ಸ್ ಪಿಯರ್ ಮತ್ತು ಒಬ್ಬ ಎಂಬ ಎರಡು ಪದಗಳೊಂದಿಗೆ ಸರಪಳಿ ರೂಪದಲ್ಲಿ ದೆ ಇದುವೇ ಸಿಂ ಟ್ಯಾಗ್ ಮ್ಯಾಟಿಕ್ .ಎರಡು ಮತ್ತು ಮೂರನೆಯ ವಾಕ್ಯದಲ್ಲಿ ನಾಟಕಕಾರ ಎಂಬ ಪದಕ್ಕೆ ಬರಹಗಾರ ಮತ್ತು ಕವಿ ಎಂಬ ಪದಗಳನ್ನು ಪರ್ಯಾಯವಾಗಿ ಬಳಸಲಾಗಿದೆ ಇದು ಪ್ಯಾರಾಡಿಗ್ಮ್ಯಾಟಿಕ್. ಪ್ಯಾರಾ ಡಿಗ್ಮ್ಯಾಟಿಕ್ ಮತ್ತು ಸಿಂಟ್ಯಾಗ್ ಮ್ಯಾಟಿಕ್ ಇವುಗಳನ್ನು ಮತ್ತೊಂದು ಉದಾಹರಣೆಯೊಂದಿಗೆ ನೋಡೊಣ.ನಾವು ಯಾವುದೇ ಹೋಟೆಲ್ ಗೆ ಹೋದಾಗ ಮೆನು ಕಾರ್ಡ್ ಕೊಡುತ್ತಾರೆ .ಆ ಮೆನು ಕಾರ್ಡನಲ್ಲಿರುವ ಲಿಸ್ಟ್ ನ್ನು ಸಿಂಟ್ಯಾಗ್ ಮ್ಯಾಟಿಕ್ ಭಾಷಾಶಾಸ್ತ್ರದ ಅಧ್ಯಯನ ವಿಧಾನವೆನ್ನಬಹುದು. ಅದೇ ಮೆನು ಕಾರ್ಡ್ ನಲ್ಲಿರುವ ಖಾದ್ಯವನ್ನು ನಾವು ಆಯ್ಕೆ ಮಾಡುವಂತ ವಿಧಾನವೇ ಪ್ಯಾರಾ ಡಿಗ್ಮ್ಯಾಟಿಕ್ ಅಧ್ಯಯನ ವಿಧಾನವೆನ್ನಬಹುದು.ಈ ರೀತಿಯಾಗಿ ಭಾಷೆಯ ಅಧ್ಯಯನಕ್ಕೆ ಒಂದು ಹೊಸ ವಿಧಾನವನ್ನು ಸಸ್ಯೂರ್ ತನ್ನ ಉಪನ್ಯಾಸಗಳಲ್ಲಿ ಮಂಡಿಸುತ್ತಾನೆ .ಇವನ ಈ ಮೇಲ್ಕಂಡ ಎಲ್ಲಾ ವಿಚಾರಗಳನ್ನು ಒಳಗೊಂಡ ಕೃತಿಯೇ ಎ ಕೋರ್ಸ್ ಇನ್ ಜನರಲ್ ಲಿಂಗ್ವಿಸ್ಟಿಕ್ಸ್ .