ಆಳ್ವಿಕೆ
ಗೋಚರ
ಆಳ್ವಿಕೆ ಎಂದರೆ ಒಂದು ರಾಷ್ಟ್ರದ (ಉದಾ. ಸೌದಿ ಅರೇಬಿಯಾ, ಬೆಲ್ಜಿಯಮ್), ಅಥವಾ ಜನರ (ಫ಼್ರ್ಯಾಂಕ್ಸ್, ಜ಼ೂಲೂಗಳು) ರಾಜನಾಗಿ/ರಾಣಿಯಾಗಿ ಅಧಿಕಾರದಲ್ಲಿ ಒಬ್ಬ ವ್ಯಕ್ತಿಯ ಅಥವಾ ರಾಜವಂಶದ ಸುಪರ್ದಿನ ಅವಧಿ. ಬಹುತೇಕ ಆನುವಂಶಿಕ ರಾಜಪ್ರಭುತ್ವಗಳಲ್ಲಿ ಮತ್ತು ಕೆಲವು ಚುನಾಯಿತ ರಾಜಪ್ರಭುತ್ವಗಳಲ್ಲಿ ಸಾರ್ವಭೌಮನ ಆಳ್ವಿಕೆಯ ಅಥವಾ ಸ್ಥಾನಿಕತ್ವದ ಅವಧಿಯ ಯಾವುದೇ ಮಿತಿಗಳಿಲ್ಲ, ಅಥವಾ ಅಧಿಕಾರಾವಧಿ ಇಲ್ಲ. ಹಾಗಾಗಿ, ಆಳ್ವಿಕೆಯು ಸಾಮಾನ್ಯವಾಗಿ ರಾಜನು/ರಾಣಿಯು ಮರಣ ಹೊಂದುವವರೆಗೆ ಇರುತ್ತದೆ. ಇದಕ್ಕೆ ಅಪವಾದವೆಂದರೆರಾಜಪ್ರಭುತ್ವವು ರದ್ದುಗೊಂಡಾಗ ಅಥವಾ ರಾಜನು/ರಾಣಿಯು ಸ್ಥಾನವನ್ನು ತೊರೆದರೆ ಅಥವಾ ಆ ಸ್ಥಾನದಿಂದ ಪದಚ್ಯುತಗೊಂಡ ಸಂದರ್ಭದಲ್ಲಿ.
ಚುನಾಯಿತ ರಾಜಪ್ರಭುತ್ವಗಳಲ್ಲಿ, ಅಧಿಕಾರದಲ್ಲಿ ರಾಜನ/ರಾಣಿಯ ನಿಗದಿತ ಕಾಲಾವಧಿ ಇರಬಹುದು (ಉದಾ., ಮಲೇಷ್ಯಾ).
ಗಮನಾರ್ಹ ಆಳ್ವಿಕೆಗಳಲ್ಲಿ ಈ ಮುಂದಿನವು ಸೇರಿವೆ.
- ರಾಣಿ ವಿಕ್ಟೋರಿಯಾ ೧೮೩೭ರಿಂದ ೧೯೦೧ರ ವರೆಗೆ ಆಳ್ವಿಕೆ ನಡೆಸಿದಳು.
- ಥೈಲಂಡ್‍ನ ರಾಜ ಭೂಮಿಬೋಲ್ ಅದುಲ್ಯದೇಜ್ ೧೯೪೬ರಿಂದ ೨೦೧೬ರ ವರೆಗೆ ಆಳ್ವಿಕೆ ನಡೆಸಿದನು.
- ಕಾಮನ್‍ವೆಲ್ತ್ ರಾಷ್ಟ್ರಗಳ ರಾಣಿ ಎರಡನೇ ಎಲಿಜಬೆಥ್ ೧೯೫೨ರಿಂದ ಇಂದಿನವರೆಗೆ ಆಳ್ವಿಕೆ ನಡೆಸುತ್ತಿದ್ದಾಳೆ.
- ಜಪಾನ್‍ನ ಸಾಮ್ರಾಟ ಅಕಿಹಿಟೊ ೧೯೮೯ರಿಂದ ಇಂದಿನವರೆಗೆ ಆಳ್ವಿಕೆ ನಡೆಸುತ್ತಿದ್ದಾನೆ.
- ಗುಪ್ತ ಸಾಮ್ರಾಜ್ಯದ ಚಂದ್ರಗುಪ್ತ ವಿಕ್ರಮಾದಿತ್ಯನು ಕ್ರಿ.ಶ ೩೭೫ರಿಂದ ಕ್ರಿ.ಶ. ೪೧೫ರ ವರೆಗೆ ಆಳ್ವಿಕೆ ನಡೆಸಿದನು
ಆಳ್ವಿಕೆಯು ಮೂರು ರೀತಿಗಳಿಂದ ಅಂತ್ಯವಾಗಬಹುದು: ಮರಣ, ಪದತ್ಯಾಗ, ಅಥವಾ ಅಧಿಕಾರದಿಂದ ಪದಚ್ಯುತಿ.