ವಿಷಯಕ್ಕೆ ಹೋಗು

ಅಷ್ಟ ಮದಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಅಷ್ಟ ಮದಗಳು ಮನುಷ್ಯನ ಸ್ವಬಾವದಲ್ಲೇ ಅಂತರ್ಗತವಾಗಿರುತ್ತವೆ. ಇವೆಲ್ಲವೂ ಒಬ್ಬ ವ್ಯಕ್ತಿಯಲ್ಲಿದ್ದಾಗ ಆತ ತುಂಬಿದ ಕೊಡದಂತೆ ಪ್ರಶಾಂತವಾಗಿರಬೇಕು. ಆದರೆ ಒಬ್ಬ ಮನುಷ್ಯ ಹಾಳಾಗಲು ಅಷ್ಟ ಮದಗಳು ಕಾರಣ ಎಂದು ಹಿರಿಯರು ಹೇಳುತ್ತಾರೆ. ಅವೆಂದರೆ:

  1. ಧನ - ಸಂಪತ್ತು
  2. ಕುಲ - ವಂಶ
  3. ವಿದ್ಯೆ - ಶಿಕ್ಷಣ
  4. ರೂಪ - ಸೌಂದರ್ಯ
  5. ಯೌವನ - ಪ್ರಾಯ
  6. ಬಲ - ಶಕ್ತಿ
  7. ಪರಿವಾರ - ಕುಟುಂಬ
  8. ಅಧಿಕಾರ - ನಾಯಕತ್ವ

ಇವುಗಳಲ್ಲಿ ಕೆಲವಿದ್ದರೂ ಅಹಂಕಾರ ಬರುವ ಸಂಭವವುಂಟು. ಮನುಷ್ಯ ಈ ಅಷ್ಟ ಮದಗಳನ್ನು ಬಿಟ್ಟರೆ ಬದುಕನ್ನು ಸುಂದರವಾಗಿಸಿಕೊಳ್ಳಬಹುದು ಎನ್ನುತ್ತಾರೆ ಬಲ್ಲವರು.