ಅಲ್ಲಾಹ್
ಅಲ್ಲಾಹ್ ಎಂಬುದು ಅರಬಿ ಭಾಷೆಯ ಪದ. ಸಕಲ ಜಗತ್ತಿನ ಸೃಷ್ಟಿಕರ್ತನಾದ ಏಕಮೇವ ದೇವನ ಅಂಕಿತನಾಮ. ಇದು ಅರಬಿ ಭಾಷೆಯ ಪದವಾದ್ದರಿಂದ ಅರಬಿಗಳೆಲ್ಲರೂ ಏಕಮೇವ ದೇವನನ್ನು ಅಲ್ಲಾಹ್ ಎಂದೇ ಸಂಬೋಧಿಸುತ್ತಾರೆ. ಅರಬ್ ಭೂಪ್ರದೇಶದಲ್ಲಿರುವ ಕ್ರೈಸ್ತರು ಮತ್ತು ಯಹೂದ್ಯರು ಸಾಮಾನ್ಯವಾಗಿ ದೇವನಿಗೆ ಅಲ್ಲಾಹ್ ಎಂಬ ಪದವನ್ನೇ ಬಳಸುತ್ತಾರೆ. ಕಾಪ್ಟಿಕ್ ಕ್ರೈಸ್ತರು ಉಪಯೋಗಿಸುವ ಅರಬಿ ಬೈಬಲ್ ನಲ್ಲಿ ದೇವನಿಗೆ ಅಲ್ಲಾಹ್ ಎಂಬ ಪದವನ್ನೇ ಬಳಸಲಾಗಿದೆ.[೧] ಕುರ್‌ಆನ್ ಗ್ರಂಥವು ಜಗತ್ತನ್ನು ಸೃಷ್ಟಿಸಿದ ದೇವನ ಅಂಕಿತನಾಮವಾಗಿ ಅಲ್ಲಾಹ್ ಎಂಬ ಪದವನ್ನೇ ಬಳಸಿದೆ.[೨] ಕುರ್‌ಆನ್ ಗಿಂತ ಮುಂಚಿನ ಕಾಲದಲ್ಲೂ ದೇವನನ್ನು ಉಲ್ಲೇಖಿಸಲು ಅಲ್ಲಾಹ್ ಎಂಬ ಪದವನ್ನು ಮುಸ್ಲಿಮರಲ್ಲದ ಸಾಮಾನ್ಯ ಅರಬರು, ಅರಬಿ ಮಾತನಾಡುವ ಕ್ರೈಸ್ತರು, ಅರೇಬಿಯಾದ ಯಹೂದ್ಯರು ಮತ್ತಿತರು ಉಪಯೋಗಿಸುತ್ತಿದ್ದರು. ಅರಬ್ ಮುಸ್ಲಿಮರು ಮತ್ತು ಜಗತ್ತಿನ ಇತರೆಲ್ಲ ಕಡೆಗಲ್ಲಿರುವ ಮುಸ್ಲಿಮರು ಕರ್ತಾರನಾದ ದೇವನನ್ನು ಅಲ್ಲಾಹ್ ಎಂಬ ಅಂಕಿತನಾಮದಿಂದ ಕರೆಯುತ್ತಾರೆ. ಕುರ್‌ಆನ್ ಗ್ರಂಥದ ಮೊದಲ ಆಯತ್ ಅಥವಾ ಮೊದಲ ವಾಕ್ಯದಲ್ಲೇ ಅಲ್ಲಾಹ್ ಎಂಬ ಪದವನ್ನು ಬಳಸಾಲಾಗಿದೆ. [೩]
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "https://www.britannica.com/topic/Allah".
{{cite journal}}
: Cite journal requires|journal=
(help); External link in
(help)|title=
- ↑ "https://en.wikipedia.org/wiki/God_in_Islam#:~:text=According%20to%20the%20Qur'an,afterwards%20is%20exactly%20the%20same".
{{cite journal}}
: Cite journal requires|journal=
(help); External link in
(help)|title=
- ↑ {{cite https://kn.wikipedia.org/wiki/%E0%B2%B8%E0%B3%82%E0%B2%B0_%E0%B2%85%E0%B2%B2%E0%B3%8D_%E0%B2%AB%E0%B2%BE%E0%B2%A4%E0%B2%BF%E0%B2%B9%E0%B2%83#:~:text='%E0%B2%B9%E0%B2%AE%E0%B3%8D%E0%B2%A6%E0%B3%8D'%20%E0%B2%8E%E0%B2%82%E0%B2%AC%20%E0%B2%B8%E0%B2%AE%E0%B2%BE%E0%B2%A8%E0%B3%8D%E0%B2%AF%20%E0%B2%AA%E0%B2%A6%E0%B2%B5%E0%B3%81%20%E0%B2%87%E0%B2%B2%E0%B3%8D%E0%B2%B2%E0%B2%BF,%E0%B2%9C%E0%B3%8A%E0%B2%A4%E0%B3%86%E0%B2%97%E0%B3%86%20%E0%B2%85%E0%B2%B2%E0%B3%8D%E0%B2%B2%E0%B2%BE%E0%B2%B9%E0%B3%8D%20%E0%B2%A8%E0%B2%BF%E0%B2%97%E0%B3%86%20%E0%B2%AE%E0%B2%BE%E0%B2%A4%E0%B3%8D%E0%B2%B0%E0%B2%B5%E0%B3%87%20%E0%B2%AC%E0%B2%B3%E0%B2%B8%E0%B3%81%E0%B2%B5%E0%B2%82%E0%B2%A4%E0%B2%BE%E0%B2%97%E0%B3%81%E0%B2%A4%E0%B3%8D%E0%B2%A4%E0%B2%A6%E0%B3%86.}}