ಅಟ್ಟ ಗುಡಿಸುವುದು
ಅಟ್ಟ ಗುಡಿಸುವುದು ಎಂದರೆ ಶಬ್ದಾರ್ಥ ಪ್ರಕಾರ ಹಿಂದಿನ ಕಾಲದ ಹಂಚಿನ ಮನೆಗಳಲ್ಲಿ ಅಟ್ಟ ಅಂತ ಇರುತಿತ್ತು.ಅದನ್ನು ಗುಡಿಸುವುದಕ್ಕೆ ಒಂದು ಕಾಲ ಅಂದರೆ ಆಟಿ ತಿಂಗಳನ್ನು ನಿಗಧಿ ಪಡಿಸುತ್ತಿದ್ದರು.ಅದಕ್ಕೆ ಅಟ್ಟ ಗುಡಿಸುವುದು ಅಥವಾ ತುಳುವಲ್ಲಿ ಆಟಿ ಪಿದಯಿ ಪಾಡುನೆ ಅಂತ ಹೇಳುತ್ತಾರೆ
ನಂಬಿಕೆ
[ಬದಲಾಯಿಸಿ]ಇನ್ನೊಂದು ನಂಬಿಕೆಯ ಪ್ರಕಾರ ಆಷಾಡ ಕಳೆದು ಮತ್ತೆ ಬರುವ ತಿಂಗಳು ಶ್ರಾವಣ ದೇವರ ತಿಂಗಳು ಶುಭಕಾರ್ಯಗಳು ನಡೆಯುವುದು ಜಾಸ್ತಿಯಾಗಿರುತ್ತದೆ.ಆ ದಿಶೆಯಿಂದ ಮನೆಯ ಹಳೆಯ ಕಸ ಧೂಳುಗಳನ್ನು ಗುಡಿಸಿ ಶುಭ ಕಾರ್ಯಕ್ಕೆ ಅಣಿಯಾಗುವುದು ಎಂಬ ನಂಬಿಕೆ.
ಅಟ್ಟ ಗುಡಿಸುವುಡು(ಆಟಿ ಪಿದಯಿ ಪಾಡುನೆ)
[ಬದಲಾಯಿಸಿ]ಆಟಿ ಅಂದೆರೆ ಹಿಂದಿನ ಕಾಲದಲ್ಲಿ ತುಳುನಾಡಿನಲ್ಲಿ ಭಾರಿ ಬರಗಾಲದ ಸಮಯ.ಹಾಗಾಗಿ ಅದಕ್ಕೆ ಬೇಕಾದ ಪೂರ್ವ ತಯಾರಿಯಾಗಿ ಆಹಾರ ವಸ್ತುಗಳನ್ನು ಶೇಖರಿಸಿ ಇಡುವ ಕ್ರಮ ಇತ್ತು.ಅದೆಲ್ಲವು ಖಾಲಿಯಾಗಿ ಬರೆ ಕಸ ಮಾತ್ರ ಅಟ್ಟದಲ್ಲಿ ಉಳಿದಿರುತ್ತದೆ ಅದನ್ನೆಲ್ಲ ಆಟಿ ತಿಂಗಳಲ್ಲಿ ಗುಡಿಸುವುದು ವಾಡಿಕೆ.ಅಟ್ಟ ಗುಡಿಸಲು ಜಾಸ್ತಿ ಜನರ ಸಹಾಯ ಬೇಕಾಗುತ್ತದೆ . ಮನೆಯ ಅಟ್ಟದಲ್ಲಿ ದೊಡ್ಡ ದೊಡ್ಡ ಮಣ್ಣಿನ ಅಥವಾ ಮರದ ಹಂಡೆ ,ಮಡಕೆಗಳು ಇರುತಿತ್ತು ಅದನ್ನು ಆಚಿ ಈಚೆ ಇಡುವ ಸಲುವಾಗಿ ಎಲ್ಲರ ಸಹಾಯ ಬೇಕಾಗುತ್ತದೆ ಆದುದರಿಂದ ಆಟಿ ತಿಂಗಳಿನಲ್ಲಿ ಮಳೆಯ ಅಬ್ಬರಕ್ಕೆ ಕೃಷಿ ಕೆಲಸ ಕಡಿಮೆ ಇರುವ ಕಾರಣ ಮನೆಯ ಎಲ್ಲ ಸದಸ್ಯರು ಬಿಡುವಾಗಿರುತ್ತಾರೆ ಆಗ ಕಸವನ್ನೆಲ್ಲ ಗುಡಿಸಿ ಸ್ವಚ್ಚಗೊಳಿಸುವುದಕ್ಕೆ ಆಟಿ ಪಿದಯಿ ಪಾಡುನೆ ಅಂತ ಹೇಳುತ್ತಾರೆ.
ಬಟ್ಟೆ ಬರೆಗಳ ಒಣಗಿಸುವಿಕೆ
[ಬದಲಾಯಿಸಿ]ಆಟಿ ತಿಂಗಳಿನಲ್ಲಿ ಬಿಸಿಲು ಬರುವಾಗ ನಮ್ಮ ಪೆಟ್ಟಿಗೆ, ಕವಾಟುಗಳಲ್ಲಿ ಇಟ್ಟಿದ್ದ ಪಟ್ಟೆ ಸೀರೆ ಪಂಚೆಗಳನ್ನು ಹೊರಗೆ ಅಂಗಳದಲ್ಲಿ ಚಾಪೆ ಹಾಸಿ ಒಣಗಲು ಹಾಕುವ ವಾಡಿಕೆ ಇದೆ.ಆಷಾಡದಲ್ಲಿ ಬಿಡದೆ ಸುರಿಯುವ ಮಳಗೆ ಪೆಟ್ಟಿಗೆ, ಕವಾಟುಗಳಲ್ಲಿ ಇಟ್ಟಿದ್ದ ಪಟ್ಟೆ ಸೀರೆ,ಪಂಚೆಗಳು ತಣ್ಣಾಗಾಗಿ ಬೂಸುರು ಹಿಡಿಯ ಬಾರದೆಂದು ಬಿಸಿಲಲ್ಲಿ ಒಣಗಿಸಿ ಮಡಚಿ ಇಡುತ್ತಾರೆ .
ಶೇಖರಿಸಿ ಇಡುವ ವಸ್ತುಗಳು
[ಬದಲಾಯಿಸಿ]ಹಲಸಿನ ಬೀಜ ಇಂಜಿರ್ ಸೊಪ್ಪು
[ಬದಲಾಯಿಸಿ]ಹಲಸಿನ ಬೀಜ ಶೇಖರಿಸಿ ಇಡುವಾಗ ಹಲಸಿನ ಬೀಜ ಹಾಳಾಗದಿರಲು ಇಂಜಿರ್ ಸೊಪ್ಪುನ್ನು ಹಲಸಿನ ಬೀಜಕ್ಕೆ ಬೆರೆಸಿ ಇಡುತ್ತಿದ್ದರು ಹಲಸಿನ ಬೀಜ ತೆಗೆಯುವಾಗ ಎಲೆಯ ಕಸವು ಅಟ್ಟದಲ್ಲಿಯೇ ಬಿದ್ದು ಅಲ್ಲೆ ಇರುತ್ತದೆ ಅದನ್ನೆಲ್ಲ ಆಟಿ ಮುಗಿಯುವಾಗ ಗುಡಿಸುವ ಕ್ರಮ.
ಹಲಸಿನ ಬೀಜ ಮಣ್ಣು
[ಬದಲಾಯಿಸಿ]ಹಲಸಿನ ಬೀಜ ಶೇಖರಿಸಿ ಇಡುವಾಗ ಹಲಸಿನ ಬೀಜ ಹಾಳಾಗದಿರಲು ಮಣ್ಣು ಬೆರೆಸಿ ಇಡುತ್ತಿದ್ದರು. ಮಣ್ಣನ್ನು ಸ್ವಲ್ಪ ನೀರ ಹಾಕಿ ಗಟ್ಟಿ ಕಲಸಿ ಅದರಲ್ಲಿ ಹಲಸಿನ ಬೀಜವನ್ನು ಸೇರಿಸಿ ಇಟ್ಟರೆ ಬಹಳ ಸಮಯದ ವರೆಗೆ ಹಾಳಾಗುವುದಿಲ್ಲ ಮಳೆಗಾಲಕ್ಕೆ ಈ ರೀತಿ ಮಾಡಿ ಅಟ್ಟದಲ್ಲಿ ಇಡುವ ಕ್ರಮ.
ಹಪ್ಪಳ
[ಬದಲಾಯಿಸಿ]ಹಫ್ಪಳ ಮಾಡಿ ಅದನ್ನು ಒಂದರ ಮೇಲೊಂದು ಜೋಡಿಸಿ ಬಾಳೆಯ ಹಗ್ಗದಲ್ಲಿ ಸುತ್ತಿ ಕಟ್ಟಿ ಇಡುತ್ತಾರೆ ಈ ಹಗ್ಗ ಹಪ್ಪಳ ತೆಗೆಯುವಾಗ ಕೆಳಗೆ ಬಿದ್ದು ಅಟ್ಟ ಗುಡಿಸುವಾಗ ಹೊರ ಹಾಕಲಾಗುತ್ತದೆ.
ಸಾಂತಾಣಿ
[ಬದಲಾಯಿಸಿ]ಹಲಸಿನ ಬೀಜವನ್ನು ಉಪ್ಪು ಹಾಕಿ ಬೆಯಿಸಿ ಒಣಗಿಸಿ ಮಳೆಗಾಲಕ್ಕೆ ಆಹಾರ ವಸ್ತುವಾಗಿ ಶೇಖರಿಸಿ ಇಡುತ್ತಿದ್ದರು.
ಉಲ್ಲೇಖ
[ಬದಲಾಯಿಸಿ]- ↑ "ಪೆಲಕಯಿ ದಾಂಬೋ ಅಪ್ಪೊ?".
- ↑ "ಪುತ್ತೂರ್ ಅಕ್ಷಯ ಕಾಲೇಜ್ ಡ್". 17 August 2023.