ಸದಸ್ಯ:Guru Sharan N
ಜನನ ಮತ್ತು ಹುಟ್ಟೂರು
[ಬದಲಾಯಿಸಿ]ನನ್ನ ಹೆಸರು ಗುರು ಶರಣ್ ನಾಗರಾಜ. ನನ್ನ ಜನ್ಮ ದಿನಾಂಕ ಜುಲೈ ೫, ೧೯೯೭ ನೇ ಇಸಿವಿ. ನನ್ನ ತಂದೆ ಇ ನಾಗರಾಜ ಮತ್ತು ತಾಯಿ ತುಳಸಿ ನಾಗರಾಜ. ನಾನು ಕ್ರೈಸ್ಟ್ ಯೂನಿವರ್ಸಿಟಿ ಬಿಎಸ್ಸಿ- ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಓದುತ್ತಿದ್ದೇನೆ.ನನಗೆ ಗಣಿತ ಬಲು ಇಷ್ಟ. ನಾನು ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬಯಸುತ್ತೇನೆ. ನಾನು ಗಣಿತದ ಉಪನ್ಯಾಸಕ ಆಗ ಬೇಕೆಂಬ ಆಸೆ ಇದೆ. ನನ್ನ ತಂದೆಗೂ ಗಣಿತ ತುಂಬಾ ಇಷ್ಟ.ನನ್ನ ತಾಯಿಯ ಹುಟ್ಟೂರು ಆಂಧ್ರ ಪ್ರದೇಶದ ಮಂತ್ರಾಲಯ. ನನ್ನ ತಂದೆಯ ಊರು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ.ನನ್ನ ಒಬ್ಬ ತಮ್ಮನಿದ್ದನೆ, ಅವನ ಹೆಸರು ವೀರ ಕಿರಣ್. ನಾನು ಹುಟ್ಟಿದ ನಂತರ ನಾವು ಬಂದು ಬೆಂಗಳೂರಿನಲ್ಲಿ ನೆಲೆಸಿದೆವು. ನಾವು ಜೆ ಪಿ ನಗರದಲ್ಲಿ ಒಂದು ಬಾಡಿಗೆ ಮನೆಯಲ್ಲಿ ಇದ್ದೆವು. ಏಳು ವರ್ಷಗಳ ನಂತರ ಜೆ ಪಿ ನಗರದೇ ಆದ ಇನ್ನೊಂದು ಕಡೆ ನಮ್ಮದೇ ಆದ ಸ್ವಂತ ಮನೆಯಲ್ಲಿ ಬಂದು ನಲಸಿದೆವು. ನಮ್ಮ ಮನೆಯ ಹೆಸರು "ತುಳಸಿ ನಿವಾಸ".
ಹವ್ಯಾಸಗಳು
[ಬದಲಾಯಿಸಿ]ನನ್ನ ತಾಯಿಯವರು ಆಂಧ್ರ ಪ್ರದೇಶದವರಾದರು ನಾನು ಚಿಕ್ಕ ವಯಸ್ಸಿನಿಂದ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಕಲಿಯುತ್ತಿದ್ದೇನೆ. ನನಗೆ ಕನ್ನಡ ಭಾಷೆಯ ಬಗ್ಗೆ ಅಪಾರವಾದ ಅಭಿಮಾನವಿದೆ. ನನಗೆ ರಾಜ್ ಕುಮಾರ್ ರವರ ಚಿತ್ರಗಳು ಮತ್ತು ಅವರ ಚಿತ್ರ ಗೀತೆಗಳಾದ "ಜೇನಿನ ಹೊಳೆಯೋ", "ಯಾರು ತಿಳಿಯರು ನಿನ್ನ", "ನಾವಾಡುವ ನುಡಿಯೇ ಕನ್ನಡ ನುಡಿ" ಮುಂತಾವುಗಳು ತುಂಬಾ ಇಷ್ಟ.ನನ್ನ ಬಾಲ್ಯದ ಬಗ್ಗೆ ಹೇಳುವುದಾದರೆ, ಅದು ತುಂಬಾ ಚೆನ್ನಾಗಿ ಇತ್ತು. ಆ ಅದ್ಭುತ ನೆನಪುಗಳು ನನಿಗೆ ಮತ್ತೆ ಮತ್ತೆ ಅನುಭವಿಸಬೇಕು ಎಂದು ಅನಿಸುತ್ತದೆ. ನನ್ನ ಬಾಲ್ಯದ ಸ್ನೇಹಿತರು ನನ್ನ ಜೊತೆ ಇಂದು ಇಲ್ಲ. ನಾನು ಅವರ ಜೊತೆಯಲ್ಲಿ ಕ್ರಿಕೆಟ್, ಲಗೋರಿ, ಬ್ಯಾಡ್ಮಿಂಟನ್, ಕಳ್ಳರು ಮತ್ತು ಪೋಲೀಸರು ಮತ್ತಿತರ ಆಟಗಳನ್ನು ಆಡುತ್ತಿದ್ದೆ. ಒಬ್ಬಿಬ್ಬರನ್ನು ಬಿಟ್ಟು ನನ್ನ ಸ್ನೇಹಿತರು ಈಗ ವಿವಿಧ ಕಡೆ ನೆಲೆಸಿದ್ದಾರೆ.ನನ್ನ ಹಳೆಯ ಸ್ನೇಹಿತರ ನೆನಪುಗಳನ್ನು ನನ್ನ ಹೊಸ ಶಾಲೆಯ ಸ್ನೇಹಿತರು ಮರೆಮಾಡಿದ್ದಾರೆ.ನಾನಗೆ ಎಲ್ಲಾರ ಜೊತೆ ಸಂತೋಷವಾಗಿ ಇರಬೇಕೆಂದು ಆಸೆ. ನಾನು ನನ್ನ ಗೆಳೆಯರಿಗೆ ಎಂದೂ ಒಳ್ಳೆಯ ಗೆಳೆಯನಾಗಿರಲು ಬಯಸುತ್ತೇನೆ.ನನಗೆ ಈಗ ನನ್ನ ತರಗತಿಯಲ್ಲಿ ಒಳ್ಳೆಯ ಗೆಳೆಯರಿದ್ದಾರೆ. ನನಗೆ ಕನ್ನಡ ನಾಟಕ ನೋಡಲು ಮತ್ತು ನಾಟಕದಲ್ಲಿ ಅಭಿನಯಿಸಲು ಬಲು ಬಯಸುತ್ತೇನೆ. ನಾನು ರಾಜ್ ಕುಮಾರ್ ರವರ ಗೀತೆಗಳನ್ನು ಹಾಡಿದ್ದೇನೆ. ನನಗೆ ಕೆಲವು ಮ್ಯಾಜಿಕ್ ಮಾಡಲು ಬರುತ್ತವೆ. ನನಗೆ ಕೀಲಿಪೆಡ್ಡಿಗೆ ನುಡಿಸಲು ಬರುತ್ತದೆ. ಹೀಗೆ ನನಗೆ ವಿವಿಧ ಕಲೆಗಳನ್ನು ಕಲಿಯುವುದು ಆಸೆ.
ಶಾಲಾದಿನಗಳು
[ಬದಲಾಯಿಸಿ]ನಾನು ಐದನೇ ತರಗತಿಯವರೆಗೂ ಪದ್ಮನಾಭ ನಗರದಲ್ಲಿ ಪ್ರಾರ್ಥನ ಶಾಲೆಯಲ್ಲಿ ಓದಿದ್ದೆ. ಆ ಶಾಲೆ ನಮ್ಮ ಮನೆಯಿಂದ ೧೦ ಕಿಲೊಮೀಟರ್ ದೂರ ಇದ್ದ ಕಾರಣ ನಾನು ಖಾಸಗಿ ಆಟೊ ಒಂದರಲ್ಲಿ ಹೋಗಿ ಬರುತ್ತಿದ್ದೆ.ಆ ಸ್ನೇಹಿತರು ಮತ್ತು ಆ ಅನುಭವ ತುಂಬಾ ಸುಂದರವಾಗಿತ್ತು.ನಾನು ಚಿಕ್ಕವನಾಗಿದ್ದ ಕಾರಣ ನನಗೆ ಅವರ ಹೆಸರುಗಳನ್ನು ನೆನಪಿನಲ್ಲಿ ಇಲ್ಲ.ನಂತರ ನಾನು ಕ್ಯಾಪಿಟಾಲ್ ಶಾಲೆ. ಅಲ್ಲಿ ನಾನು ೬ನೇ ತರಗತಿಯಿಂದ ೧೨ನೆ ತರಗತಿಯತನಕ ಸಿಬಿಎಸ್ಇ ಪಟ್ಯಕ್ರಮದಲ್ಲಿ ಓದಿ ಮುಗಿಸಿದೆ. ಅಲ್ಲಿ ನನಗೆ ತುಂಬಾ ಒಳ್ಳೆಯ ಸ್ನೇಹಿತರು ಸಿಕ್ಕಿದರು. ನನಗೆ ೧೦ನೆ ತರಗರತಿಯಲ್ಲಿ ೯೫% ಮತ್ತು ೧೨ನೆ ತರಗತಿಯಲ್ಲಿ ೮೯% ದೊರಕಿತ್ತು. ಅದಾದ ನಂತರ ನಾನು ಕ್ರೈಸ್ಟ್ ವಿಶ್ವವಿಧ್ಯಾಲಯದಲ್ಲಿ ಬಿಎಸ್ಸಿಗೆ ಸೇರಿಕೊಂಡೆ. ನಾನು ೩ ವರ್ಷಗಳ ಕಾಲ ಅಬ್ಯಾಕಸ್ (ಮಣಿ ಚೌಕ)ಅಭ್ಯಸ ಮಾಡಿ ಕಲಿತುಕೊಂಡಿದ್ದೇನೆ.
This user is a member of WikiProject Education in India |