ಸದಸ್ಯ:Yashmitha Bangera
ಡಾ. ಪ್ರಹ್ಲಾದ ಅಗಸನಕಟ್ಟೆ
ಡಾ.ಪ್ರಹ್ಲಾದ ಅಗಸನಕಟ್ಟೆ ಯವರು ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ ಹಾಗೂ ಪಿ.ಎಚ್.ಡಿ ಪಡೆದಿದ್ದಾರೆ. ಪತ್ರಕರ್ತರಾಗಿ, ಉಪನ್ಯಾಸಕರಾಗಿ ಕೆಲಸ ಮಾಡಿ ಸದ್ಯ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ. ನನ್ನ ಧಣಿಗೆ ನನ್ನ ದನಿ, ಗಲ್ಲುಗಳಲ್ಲಿ ಗುಲಾಬಿ, ಸಂತೆ ಮುಗಿವ ಸಮಯ ದೀಪಾವಾರಿದ ಮೇಲೆ ಮುಂತಾದ ಕಾವ್ಯ ಸಂಕಲನಗಳು, ಸಾವಿನೊಳಗಿನ ಸಾವು, ಕಾಲ ದೇವರ ಸವಾಲು, ಪ್ರಕ್ಷಬ್ದ ಅಲೆಗಳು, ಮನದ ಮುಂದಣ, ಮಾಯೆ, ಕಾಯಕ್ಕೆ ನೆರಳಾಗಿ ಮುಂತಾದ ಕಥಾ ಸಂಕಲನಗಳು.
ಬಂಧಿಖಾನೆ, ಅವಾಂತರ ಎಂಬ ಕಾದಂಬರಿಗಳು, ಎದುರು ಬದರು, ಕುತೂಹಲ, ಕಳಕಳಿ, ಅಭಿಮತ,ಕುಡಿನೋಟ, ಆಂತ:ಕರಣ ಅನುಸಂಧಾನ, ಅನುವಾಸು ಮುಂತಾದ ವಿಮರ್ಶಾ ಸಂಕಲನಗಳನ್ನು ಹೊರತಂದಿದ್ದಾರೆ. ಪ್ರಕ್ಷಬ್ದ ಅಲೆಗಳು ಕತಾಸಂಕಲನಕ್ಕೆ ಚದುರಂಗ ಪ್ರಶಸ್ತಿ, ಮನದ ಮುಂದಣ ಮಾಯೆ ಕತಾ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಅಂತರ್ಗತ ವಿಮರ್ಶಾ ಕೃತಿಗೆ ಎಂ.ಜಿ ರಂಗನಾಥನ್ ಬಹುಮಾನ, ಸಾಹಿತ್ಯ ಸಾಧನೆಗೆ ವಾರಂಬಳ್ಳಿ ದಶಮಾನೋತ್ಸವ ಪ್ರಶಸ್ತಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ರಾಜ್ಯೋತ್ಸವ ಧೀಮಂತ ಪ್ರಶಸ್ತಿ, ಬೆಂಗಳೂರಿನ ವಿದ್ಯುತ್ ನಿಗಮದ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.