ಸದಸ್ಯ:Vishal reddy
ಎಂ ಎಸ್ ಧೊನಿ
[ಬದಲಾಯಿಸಿ]ಬಾಲಿವುಡ್ ನಲ್ಲಿ ಈಗ ಕ್ರೀಡಾಪಟುಗಳ ಕುರಿತ ಜೀವನ ಚರಿತ್ರೆ ಚಿತ್ರಗಳಿಗೆ ಭಾರಿ ಬೇಡಿಕೆ ಹುಟ್ಟಿದೆ. ಬಾಕ್ಸರ್ ಮೇರಿ ಕೋಮ್ ಆಗಿ ಪ್ರಿಯಾಂಕಾ ಛೋಪ್ರಾ ಕಾಣಿಸಿಕೊಂಡು ಗೆದ್ದಿರುವುದು ಇದಕ್ಕೆ ಕಾರಣ ಎನ್ನಬಹುದು. ಟೀಂ ಇಂಡಿಯಾದ ಸ್ಟೈಲಿಶ್ ನಾಯಕ ಎಂಎಸ್ ಧೋನಿ ಅವರ ಜೀವನ ಕುರಿತಂತೆ ಯಾರಿಗೂ ತಿಳಿಯದ ಕಥೆ ಆಧಾರಿಸಿದ ಚಿತ್ರ ತೆರೆಗೆ ಬರಲಿದ್ದು, ಚಿತ್ರದ ಮೊದಲ ಪೋಸ್ಟರ್ ಗುರುವಾರ ಹೊರ ಬಂದಿದೆ.
ಈ ವಿಷಯವನ್ನು ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ಅವರು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಚಿತ್ರದ ಫಸ್ಟ್ ಲುಕ್ ನೋಡಿ, ಚಿತ್ರದ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆಯುವ ಕಾಲ ಬಂದಿದೆ ಎಂದಿದ್ದಾರೆ. ಧೋನಿ ಅವರ ಪಾತ್ರಧಾರಿಯಾಗಿ ಸುಶಾಂತ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಸ್ಟೇಡಿಯಂ ಹಿನ್ನೆಲೆಯಲ್ಲಿ ಬ್ಯಾಟ್ ಅನ್ನು ಗದೆ ರೀತಿ ಹಿಡಿದುಕೊಂಡು ನಿಂತಿರುವ ಸುಶಾಂತ್ ಥೇಟ್ ಧೋನಿ ರೀತಿಯಲ್ಲೇ ಪೋಸ್ ಕೊಟ್ಟಿದ್ದಾರೆ. ಧೋನಿ ಕುರಿತ ಸಿನಿಮಾ ಫಸ್ಟ್ ಪೋಸ್ಟರ್ ನೋಡಿ
ಸುಶಾಂತ್ ಅವರು ಧೋನಿ ಅವರ ಲಕ್ಕಿ ನಂಬರ್ 7 ಇರುವ ಜರ್ಸಿಯನ್ನೇ ಧರಿಸಿದ್ದಾರೆ.7/7/1981 ರಲ್ಲಿ ಜನಿಸಿದ ಧೋನಿ ಅವರಿಗೆ ಏಳನೇ ಸಂಖ್ಯೆ ಅದೃಷ್ಟಕಾರಿಯಂತೆ. ಧೋನಿ ಕುರಿತ ಈ ಚಿತ್ರವನ್ನು ನೀರಜ್ ಪಾಂಡೆ ನಿರ್ದೇಶಿಸುತ್ತಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಸಕತ್ ಕಿಕ್ ನೀಡುವ ಚಿತ್ರ ಇದಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಧೋನಿ ಅವರ ವೃತ್ತಿ ಬದುಕಿಗೆ ಹಾನಿಯಾಗದಂತೆ ಚಿತ್ರವನ್ನು ನಿರ್ಮಾಣ ಮಾಡಬೇಕೆಂದು ಬಿಸಿಸಿಐ ತಾಕೀತು ಮಾಡಿದೆ. ಎಂಎಸ್ ಧೋನಿ-ದಿ ಅನ್ ಟೋಲ್ಟ್ ಸ್ಟೋರಿ ಹೆಸರಿನ ಚಿತ್ರ ತೆರೆ ಮೇಲೆ ನೋಡಲು 2015ರ ತನಕ ಕಾಯಬೇಕು. ಈ ಚಿತ್ರಕ್ಕೆ ಒಪ್ಪಿಗೆ ನೀಡುವುದಕ್ಕೆ ಧೋನಿ ಅವರು ಸುಮಾರು 40 ಕೋಟಿ ರು ಪಡೆದುಕೊಂಡಿದ್ದಾರೆ ಎಂಬ ಸುದ್ದಿಯೂ ಇದೆ. ಅಂದ ಹಾಗೆ 2015ರಲ್ಲಿ ಧೋನಿ ನಿವೃತ್ತಿಯಾಗುತ್ತಾರಾ? ಎಂಬ ಸಂಶಯವೂ ಮೂಡುತ್ತಿದೆ.