ಸದಸ್ಯ:Vasudha Pailoor
ಅಡಿಕೆಯ ಕೊಳೆರೋಗ ಅಡಿಕೆ ನಮ್ಮ ದೇಶದ ಒಂದು ವಾಣಿಜ್ಯ ಬೆಳೆಯಾಗಿದೆ.ಕರ್ನಾಟಕದಲ್ಲಿ ಉತ್ತರಕನ್ನಡ ಮತ್ತು ದಕ್ಶಿಣಕನ್ನಡದಲ್ಲಿ ಅಡಿಕೆ ಹೆಚ್ಚಾಗಿ ಬೆಳೆಯುತ್ತಾರೆ. ದಕ್ಶಿಣಕನ್ನಡದ ಪ್ರಮುಖ ಬೆಳೆ ಅಡಿಕೆಯೇ ಆಗಿದೆ. ಅಡಿಕೆಮರ ಕವಲುಗಳಿಲ್ಲದ ಮರ. ೪ರಿಂದ ೫ವರುಶದಲ್ಲಿ ಸಾಮನ್ಯ ಅಡಿಕೆಮರ ಫಸಲು ಕೊಡಲು ಆರಂಭಿಸುತ್ತದೆ. ದೆಸೆಂಬರ್-ಜನವರಿಯಲ್ಲಿ ಸಿಂಗಾರ ಬಿಡಲು ಆರಂಭಿಸುರತ್ತದೆ.ಮೇ-ಜುನ್ ತಿಂಗಳಾಗುವಾಗ ಸದಾರಣ ಕಾಯಿ ಆಗುತ್ತದೆ.ಜುನ್ ತಿಂಗಳಿಂದ ಮಳೆ ಆರಂಭವಾಗುತ್ತದೆ.ನಿರಂತರ ಮಳೆ ಬಿದ್ದಾಗ ಜುಲೈ ತಿಂಗಳಿಂದ ಅಡಿಕೆಗೆ ಕೊಳೆರೋಗದ ಭಾದೆ ಉಂಟಾಗುತ್ತದೆ.ಸತತವಾಗಿ ಬಿರುವ ಮಳೆಯಿಂದ ಅಡಿಕೆ ಗೊಂಚಲಲ್ಲಿ ನೀರಿನ ಶೇಖರಣೆಯಿಂದಾಗಿ ರೋಗ ಬಹು ಬೇಗ ಬರುವ ಸಾಧ್ಯತೆಗಳಿವೆ.ಅಡಿಕೆ ತೋಟದಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯು ರೋಗ ಬರಲು ಪ್ರಮುಖ ಕಾರಣವಾಗುತ್ತದೆ.ಎಳೆ ಅಡಿಕೆಗೆ ರೋಗ ಬೇಗನೆ ತಗಲುತ್ತದೆ.ರೋಗ ಬಂದ ಅಡಿಕೆಯಗೊನೆ ಕಪ್ಪಾಗಿ ಕೊಳೆತು ಅಡಿಕೆ ಬೀಳಲು ಆರಂಭವಾಗುತ್ತದೆ.ಮರದ ಒಂದು ಗೊನೆಗೆ ರೋಗ ಬಂದರೆ ಅದು ಬಹು ಬೇಗನೆ ಆ ಮರ ಇತರ ಗೊನೆಗಳಿಗೂ ಪಸರಿಸುತ್ತದೆ.ಹಾಗೆಯೇ ಒಂದು ಮರದಿಂದ ಇನ್ನೊಂದು ಮರಕ್ಕೂ ರೋಗ ಭಾದೆ ಅಂಟುತ್ತದೆ.ಕೆಲವೇ ದಿನಗಳಲ್ಲಿ ರೋಗ ಬಹುಪಾಲು ಮರದ ಅಡಿಕೆಯನ್ನು ಭಾದಿಸುತ್ತದೆ. ಅಡಿಕೆಯ ಕೊಳೆರೋಗ ನಿಯಂತ್ರಣ ಬಹಳ ಕಶ್ಟಕವಾದದು.ಮಳೆಗಾಲ ಅರಂಭವಾಗುವ ಮೊದಲೇ ಅಡಿಕೆ ಮಿಡಿಯಾಗಿರುವಾಗಲೆ ಅದಕ್ಕೆ ಔಷದಿ ಸಿಂಪಡಿಸಬೇಕಾಗುತ್ತದೆ.೨:೨ರ ಪ್ರಮಾಣದಲ್ಲಿ ಬೊರ್ಡೋ ಮಿಕ್ಸರ್ ಸಿಂಪಡಿಸುತ್ತಾರೆ.ಒಂದು ಸಲ ಸಿಂಪಡಿಸಿದರೆ ಅದರ ಅವದಿ ೩೦ರಿಂದ ೩೫ದಿನಗಳು.೩೫ದಿನಗಳು ಕಳೆದ ನಂತರ ಪುನಃ ೨:೨ರ ಪ್ರಮಾಣದಲ್ಲಿ ಸಿಂಪಡಿಸಬೇಕು. ಎಡವಿಡದೆ ಸುರಿವ ಮಳೆಯಿಂದಾಗಿ ಸಕಾಲದಲ್ಲಿ ಸಿಂಪಡಣೆ ಮಡಲಾಗದೇ ಇದ್ದರೆ ರೋಗ ಬರುವ ಸಂಭವ ಹೆಚ್ಚು. ಇತ್ತಿಚೆಗಿನ ದಿನಗಳಲ್ಲಿ ಅನೇಕ ಹೊಸ ಹೊಸ ಔಷದಿಗಳು ಮಾರುಕಟ್ಟೆಗೆ ಬಂದಿದೆ.ಆದರೂ ಅಡಿಕೆಯ ಕೊಳೆರೋಗ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ರೋಗ ಪೀಡಿತ ಅಡಿಕೆಮರಗಳು ಕೆಲವು ಸಲ ಸತ್ತು ಹೂಗುತ್ತದೆ. ಹೀಗೆ ಮಳೆಗಾಲದಲ್ಲಿ ಬರುವ ಅಡಿಕೆಯ ಕೊಳೆರೋಗದಿಂದ ಅಡಿಕೆಯನ್ನು ರಕ್ಶಸುವುದು ರೈತರಿಗೆ ಬಹಳ ಕಸ್ಟವಾಗಿದೆ.ಹಲವು ಪ್ರಯೋಗಗಳು ನಡೆದು ಕೊಳೆರೋಗದಿಂದ ಅಡಿಕೆ ಉಳಿಯುವಂತಾದರೆ ವಾಣಿಜ್ಯ ಬೆಳೆ ಹಾಗು ಅದನ್ನು ಬೆಳೆದ ರೈತನು ಉಳಿಯುತ್ತಾನೆ.
ಈ ಸದಸ್ಯರ ಊರು ಮಂಗಳೂರು. |
ಈ ಸದಸ್ಯರ ಊರು ಮಂಗಳೂರು. |