ವಿಷಯಕ್ಕೆ ಹೋಗು

ಸದಸ್ಯ:Sushmareddyn

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೩೨೦ಪಿಎಕ್ಸ್px|thumbnail|right|ಸುಷ್ಮ.ನ್

ನನ್ನ ಹೆಸರು ಸುಷ್ಮ. ನಾನು ಹುಟ್ಟಿದ್ದು ಬೆಂಗಳೂರಿನಲ್ಲಿ. ನನ್ನ ತಂದೆಯ ಹೆಸರು ನಾರಾಯಣರೆಡ್ಡಿ ಹಾಗೂ ತಾಯಿಯ ಹೆಸರು ಮಮತ. ನನ್ನ ತಂದೆ ಒಬ್ಬ ನಿರ್ವಾಹಕ ಹಾಗು ತಾಯಿ ಗೃಹಿಣಿ. ನನ್ನ ತಂದೆ ತಾಯಿಗೆ ಇಬ್ಬರು ಮಕ್ಕಳು, ಮೊದಲನೆಯವನು ನನ್ನ ಅಣ್ಣ ಸಾಗರ್,ಅವನು ಈಗ ಬಹು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಎರಡನೆ ಅವಳು ನಾನು. ನಾನು ೧೯೯೭ ಮೇ ೨೧ ರಂದು ಜನಿಸಿದೆನು.

ನನ್ನ ಬಾಲ್ಯ

[ಬದಲಾಯಿಸಿ]

ನಾನು ನನ್ನ ಬಾಲ್ಯವನ್ನು ತಮಿಳುನಾಡಿನಲ್ಲಿ ಕಳೆದೆನು. ಆನಂತರ ನನ್ನನ್ನು ಶಾಲೆಗೆ ಸೇರಿಸ ಬೇಕಾಗಿದ್ದಿದ್ದರಿಂದ ನಾವು ಕುಟುಂಬ-ಸಮೇತರಾಗಿ ಬೆಂಗಳೂರಿಗೆ ಬಂದೆವು. ಆಗ ನನಗೆ ೨ವರ್ಷ.ನಾನು ಆಗಿನಿಂದಲೂ ತುಂಬಾ ತುಂಟ ಹುಡುಗಿ. ಮನೆಯಲ್ಲಿ ತುಂಬಾ ಗಲಾಟೆ ಮಾಡುತ್ತಿದ್ದೆನು. ನನ್ನ ಅಣ್ಣನಿಗೆ ತುಂಬಾ ತೊಂದರೆ ಕೊಡುತ್ತಿದ್ದೆನು.ಈ ಕಾರಣಕ್ಕಾಗಿ ಅಮ್ಮ ಯಾವಾಗಲೂ ನನ್ನನ್ನು ಬೈಯುತ್ತಿದ್ದರು. ಈ ನನ್ನ ಅತಿಯಾದ ತುಂಟುತನದಿಂದಾಗಿ ನನ್ನ ಅಪ್ಪ ನನ್ನನ್ನು ೨ವರ್ಷಕ್ಕೆ ಶಾಲೆಗೆ ಸೇರಿಸಿದರು. ಶಾಲೆಗೆ ಸೇರಿದ ನಂತರ ನನ್ನ ತುಂಟುತನವೂ ಕಡಿಮೆ ಆಯಿತು.

ನನ್ನ ಶಿಕ್ಷಣ

[ಬದಲಾಯಿಸಿ]

ನನ್ನ ತಂದೆ-ತಾಯಿ ನನ್ನನ್ನು ಸಂತ-ಜೋಸೆಫರ ಶಾಲೆಗೆ ಸೇರಿಸಿದರು. ನಾನು ನನ್ನ ಪ್ರಾರ್ಥಮಿಕ ಹಾಗು ಪ್ರೌಡ ಶಿಕ್ಷಣವನ್ನು ಇದೇ ಶಾಲೆಯಲ್ಲಿ ಮುಗಿಸಿದೆನು. ನಾನು ಸುಮಾರು ಹತ್ತು ವರ್ಷಗಳ ಕಾಲ ಈ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದ್ದೇನೆ. ನನಗೆ ಈ ಶಾಲೆ, ಇಲ್ಲಿಯ ವಾತಾವರಣ, ಶಿಕ್ಷಕರು ಹಾಗು ಅವರು ಪಾಠವನ್ನು ತಿಳಿಸುವ ರೀತಿ ನನಗೆ ತುಂಬ ಇಷ್ಟ. ನಾನು ಹತ್ತನೇ ತರಗತಿಯಲ್ಲಿ ಶೇಕಡ ೯೨% ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾದೆನು.ಹತ್ತನೇ ತರಗತಿ ಮುಗಿದ ನಂತರ ನಾನು ನನ್ನ ಪದವಿ ಪೂರ್ವ ಶಿಕ್ಷಣಕ್ಕೆ ಬೆಂಗಳೂರಿನ ಕ್ರೈಸ್ಟ್ ಜ್ಯುನಿಯರ್ ಕಾಲೇಜಿಗೆ ಸೇರಿಕೊಂಡೆನು.ನನಗೆ ಮೊದಲಿನಿಂದಲೂ ವಿಜ್ನಾನ, ಜೀವಶಾಸ್ತ್ರ,ಗಣಿತದಲ್ಲಿ ಆಸಕ್ತಿ ಇದ್ದಿದ್ದರಿಂದ ನಾನು ಪಿ.ಯು.ಸಿ ಯಲ್ಲಿ ವಿಜ್ನಾನ ಕ್ಷೇತ್ರವನ್ನು ಆಯ್ಕೆಮಾಡಿದೆನು. ನನಗೆ ಇಲ್ಲಿನ ಅಡಿವ್ಯವಸ್ಥೆ ತುಂಬ ಇಷ್ಟ . ಇಲ್ಲಿನ ವಾತವರಣದಲ್ಲಿ ಬೆಳೆಯುವುದೆಂದರೆ ಅದು ನಮ್ಮ ಪುಣ್ಯ ಎಂದರೆ ತಪ್ಪಾಗಲಾರದು. ನನ್ನ ಪ್ರತಿಬೆಯನ್ನು ಹೊರತಂದದ್ದು ಇದೇ ಕಾಲೇಜು. ನನಗೆ ನೃತ್ಯ ಮಾಡುವುದು, ಚೆಸ್ಸ್ ಆಡುವುದೆಂದರೆ ಬಹಳ ಆಸಕ್ತಿ. ಕ್ರೈಸ್ಟ್ ಪದವಿ ಪೂರ್ವ ಕಾಲೇಜು ಎಂದರೆ ಒಂದು ರೀತಿಯ ಪ್ರೀತಿ ಏಕೆಂದರೆ ಈ ಕಾಲೇಜು ನನ್ನ ಪ್ರತಿಬೆಯನ್ನು ಹೊರತಂದಿದೆ, ಆದುದರಿಂದಲೆ ನನ್ನ ಪ್ದವಿ ಪೂರ್ವ ಶಿಕ್ಷಣ ಮುಗಿದ ನಂತರ ನಾನು ಅದೇ ಕಾಲೇಜಿನಲ್ಲಿ ಬಿ.ಎಸ್ಸ್.ಸಿ ಗೆ ಸೇರಿಕೊಂಡೆನು, ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ನನ್ನ ವಿದ್ಯಾಬ್ಯಾಸ ಬಹಳ ಚೆನ್ನಾಗಿ ನಡಿಯುತ್ತಿದೆ. ನಾನು ಇಲ್ಲಿ ರಾಸಾಯನಿಕ ಶಾಸ್ತ್ರ ಹಾಗು ಜೀವಶಾಸ್ತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಪುಸ್ತಕಗಳನ್ನು ಓದುವುದು,ನೃತ್ಯ ಮಾಡುವುದು ನನ್ನ ಹವ್ಯಾಸಗಳು.

ನಂತರದ ಗುರಿ

[ಬದಲಾಯಿಸಿ]
ನಾನು ರಾಸಾಯನಿಕ-ಶಾಸ್ತ್ರದಲ್ಲಿ ನನ್ನ ಮಾಸ್ಟ್ರರ್ ಡಿಗ್ರಿ ಮಾಡಬೇಕೆಂದುಕೊಂಡಿದ್ದೇನೆ. ಇದಾದನಂತರ ನಾನು ಒಂದು ಒಳ್ಳೆಯ ಸಂಶೋಧನಾ ಕೇಂದ್ರಕ್ಕೆ ಸೇರಿಕೊಂಡು ಒಬ್ಬ ದೊಡ್ಡ ವಿಜ್ನಾನಿಯಾಗಬೇಕೆಂಬುದು ನನ್ನ ಬಹುದೊಡ್ಡ ಕನಸು. ಈ ಕನಸಿಗೆ ಡಾ!!ಆಬ್ದುಲ್ ಕಲಾಂ ಆವರೇ ಸ್ಪೂರ್ತಿ ಎಂದು ಹೇಳಿದರೆ ತಪ್ಪಾಗಲಾರದು.
This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Sushmareddyn