ವಿಷಯಕ್ಕೆ ಹೋಗು

ಸದಸ್ಯ:Shilpa Rachel AR

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

320PXpx|thumbnail|right|Shilpa Rachel AR

ನನ್ನ ಹೆಸರು ಶಿಲ್ಪ ರೇಚಲ್. ನಾನು ಕ್ರ್ಯೆಸ್ಟ್ ಯೂನಿವರ್ಸಿಟಿಯಲ್ಲಿ ಪ್ರಥಮ ವರ್ಷದ ಬಿ.ಎಸ್.ಸಿ.ಯನ್ನು ಓದುತಿದ್ದೇನೆ. ನನಗೆ ಈ ಕಾಲೇಜಿನಲ್ಲಿ ಓದಬೇಕೆಂಬ ಆಸೆ ನಾನು ಹೈಸ್ಕೂಲಿನಲ್ಲಿ ಇರುವಾಗಲೆ ಮೂಡಿತ್ತು. ಈ ನನ್ನ ಆಸೆಗೊಸ್ಕರ ನಾನು ನನ್ನ ಹತ್ತನೆ ತರಗತಿಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿ ನಂತರ ಪದವಿ ಪೂರ್ವ ಕಾಲೇಜಿಗೆ ಸೇರಿದೆ.

ನನ್ನ ಕುಟುಂಬ

[ಬದಲಾಯಿಸಿ]

ನನ್ನ ತಂದೆ-ತಾಯಿಗೆ ಮೂರು ಮಂದಿ ಮಕ್ಕಳು. ಮೊದಲನೆಯವಳು ನಾನು,ಎರಡನೆಯವಳು ನನ್ನ ತಂಗಿ ಸ್ನೇಹ, ಈಕೆ ಈಗ ಒಂಬತ್ತನೆಯ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದಾಳೆ. ಮೂರನೆಯವನು ನನ್ನ ತಮ್ಮ ಇಸ್ರಾಯೆಲ್ ರೋಶನ್ ಈತ ಕಿಂಡರ್ ಗಾರ್ಟೆನ್ನಲ್ಲಿ ಓದುತಿದ್ದಾನೆ.ನನ್ನ ಅಪ್ಪ ಮೂಲತಹ ಕರ್ನಾಟಕದ ಕೊಡಗಿನವರು. ನನ್ನ ತಾಯಿ ಎಸ್.ಎಫ್.ಎಸ್ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತಿದ್ದಾರೆ..

ನನ್ನ ಹುಟ್ಟು ಮತ್ತು ಶಿಕ್ಷಣ

[ಬದಲಾಯಿಸಿ]

ನಾನು ೧೯೯೭ರ ಎಪ್ರಿಲ್ ೨ರಂದು ಬೆಂಗಳೂರಿನ ವಿಮಲಾಲಯ ಆಸ್ಪತ್ರೆಯಲ್ಲಿ ಹುಟ್ಟಿದೆ. ನಂತರ ನಾನು ಎಸ್.ಎಫ್.ಎಸ್ ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದೆ. ನನ್ನ ಹತ್ತನೆ ತರಗತಿಯವರೆಗು ನಾನು ಅಲ್ಲಿಯೆ ಓದಿದೆ. ನನ್ನ ತಾಯಿ ಅಲ್ಲಿಯೆ ಶಿಕ್ಷಕಿಯಾಗಿದ್ದರಿಂದ ನಾನು ಬೇರೆ ಎಲ್ಲಾ ಶಿಕ್ಷಕರಿಗು ಪರಿಚಿತಳಾಗಿದ್ದೆ. ನನ್ನ ಬರಹವು ಎಲ್ಲರಿಗು ಮೆಚ್ಚಿಕೆ ಯಾಗಿತ್ತು.

ಸ್ನೇಹಿತರ ಜೊತೆ ಕೇರಳಕ್ಕೆ ಭೇಟಿ

[ಬದಲಾಯಿಸಿ]
ನನ್ನ ಹತ್ತನೆ ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಕೂಡಿ ಕೇರಳ ರಾಜ್ಯಕ್ಕೆ ೩ ದಿವಸಗಳ ಕಾಲ ಟೂರ್ ಹೋಗಿದ್ದೆವು.ಒಂದು ಕೋಣೆಯಲ್ಲಿ ಗೆಳತಿಯರೆಲ್ಲರು ಒಂದು ರಾತ್ರಿಯನ್ನು ಕಳೆದೆವು. ಮಾರನೆ ದಿನ ಅರಬ್ಬಿ ಸಮುದ್ರವನ್ನು ಒಂದು ಚಿಕ್ಕ ಹಡಗಿನಲ್ಲಿ ಸುತ್ತಿದೆವು... ಇದೊಂದು ಮರೆಯಲಾರದ ಅನುಭವ.ಮೂರು ದಿವಸ ಕಳೆದದ್ದೆ ತಿಳಿಯಲಿಲ್ಲ. ಈ ಸಂಭ್ರಮದ ಜೊತೆಗೆ ನಾವು ಓದುವುದರ ಮೇಲೆಯೂ ಗಮನ ಕೊಡಬೇಕಿತ್ತು. 

ಪೋಷಕರ ಕನಸು

[ಬದಲಾಯಿಸಿ]

ನಾನು ಚೆನ್ನಗಿ ಓದಿ ನನ್ನ ಹೆತ್ತವರ ಕನಸನ್ನು ಪೂರ್ತಿ ಮಾಡಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.೯೨% ಅಂಕವನ್ನು ಗಳಿಸಿದೆ.

ನಂತರ ಪಿ.ಯು.ಸಿ. ಮಾಡಲು ಕ್ರ್ಯೆಸ್ಟ್ ಜೂನಿಯರ್ ಕಾಲೇಜಿಗೆ ಸೇರಿದೆ . ಇದರಲ್ಲು ಸಹ ನಾನು ಓದಿನಲ್ಲಿ ಉತ್ತಮವಾಗಿ ಮಾಡಲು ಸಾಧ್ಯವಾಗದಿದ್ದರು ತಕ್ಕ ಮಟ್ಟಿಗೆ ಮಾಡಿ ಒಳ್ಳೆಯ ಅಂಕವನ್ನು ಗಳಿಸಿದೆ. ಪ್ರಸ್ತುತವಾಗಿ ಮೊದಲೆ ಹೇಳಿದಂತೆ ಕ್ರ್ಯೆಸ್ಟ್ ಯೂನಿರ್ವಸಿಟಿ ಯಲ್ಲಿ ಡಿಗ್ರಿ ಮಾಡುತಿದ್ದೆನೆ.

ನನ್ನ ಊರು

[ಬದಲಾಯಿಸಿ]

ನನ್ನ ಊರು ಕೊಡಗು ಆದ್ದರಿಂದ ಅಲ್ಲಿನ ಪ್ರಕೃತಿಯ ವಿಷಿಷ್ಟತೆ ಅದ್ವಿತೀಯವದದ್ದು. ಚಳಿಯ ವಾತಾವರಣ. ಸದಾ ಕಣ್ಣಿಗೆ ತಂಪು ನೀಡುವ ಹಸಿರು. ಕಾಫಿ ಮತ್ತು ಮೆಣಸಿನ ಗಿಡಗಳು.ಎಲ್ಲವು ಮನಸ್ಸಿಗೆ ಮುದವನ್ನು ನೀಡುತ್ತವೆ.

ನನ್ನ ಆಸಕ್ತಿಗಳು

[ಬದಲಾಯಿಸಿ]

ನನಗೆ ರಾತ್ರಿಯಲ್ಲಿ ಪ್ರಯಾಣ ಮಾಡುವುದು ಬಹಳ ಇಷ್ಟ. ಹಾಗೆಯೆ ನನ್ನ ತಮ್ಮನೊಂದಿಗೆ ಕಾಲ ಕಳೆಯುವುದು ಇಷ್ಟ. ನನಗೆ ಮನೆಯನ್ನು ಸ್ವಚ್ಛಗೊಳಿಸುವುದರಲ್ಲಿ ತುಂಬಾ ಆಸಕ್ತಿ. ಮನೆಯ ಎಲ್ಲ ಕೆಲಸವನ್ನು ನಾನು ನನ್ನ ತಂಗಿ ಹಂಚಿಕೊಂಡು ಮಾಡುತ್ತೇವೆ. ಹಾಗಾಗಿ ನಮ್ಮ ತಾಯಿಗೆ ಹೆಚ್ಚು ಕೆಲಸವನ್ನು ಕೊಡುವುದಿಲ್ಲ.ಅವರು ನನ್ನ ತಮ್ಮನ ಬರವಣಿಗೆಯನ್ನು ಗಮನಿಸುತ್ತಾರೆ.

ಕ್ರಿಸ್ಮಸ್

[ಬದಲಾಯಿಸಿ]

ನಮ್ಮದು ಕ್ರ್ಯೆಸ್ತ ಕುಟುಂಬವಾದ್ದರಿಂದ ಕ್ರಿಸ್ಮಸ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ಮನೆಯನ್ನು ಶೃಂಗರಿಸಿ ರುಚಿಯಾದ ಅಡುಗೆಯನ್ನು ಮಾಡಿ ಸ್ನೇಹಿತರನ್ನು ಬಂಧು-ಮಿತ್ರರನ್ನು ಕರೆಯುತ್ತೇವೆ.

ನಾನು ಮುಂದೆ ಒಬ್ಬ ಒಳ್ಳೆಯ ಮಗಳಾಗಿ, ದುಡಿಯುವ ಸ್ತ್ರಿಯಾಗಿರಲು ಇಚ್ಛಿಸುತ್ತೇನೆ.