ಸದಸ್ಯ:Sangeetha-2015

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
10-01-2016
ಚಿತ್ರ:ಸಂಗೀತ.ಎಸ್
ಸಂಗೀತ.ಎಸ್

ಕುಟುಂಬ ಮತ್ತು ಶಿಕ್ಷಣ[ಬದಲಾಯಿಸಿ]

ನನ್ನ ಹೆಸರು ಸಂಗೀತ.ಎಸ್. ನನ್ನ ಹೆಸರಿನ ಅರ್ಥ ಈ ಭೂಮಿಯಲ್ಲಿ ಎಲ್ಲೆಲ್ಲೂ ಗಾಳಿಯ ಮೂಲಕ ಹೊರ ಬರುವ ಮಧುರವಾದ ಧ್ವನಿ ಎಂದು ಹೇಳ ಬಹುದು. ನಾನು ನನ್ನ ತಂದೆ ತಾಯಿಗೆ ಒಬ್ಬಳೇ ಮಗಳಾಗಿದ್ದೇನೆ.ನನ್ನ ತಾಯಿಯ ಹೆಸರು ಪರಿಮಳ.ಎಸ್ ಮತ್ತು ನನ್ನ ತಂದೆಯ ಹೆಸರು ಸೆಲ್ವರಾಜ್.ಸಿ. ನಾನು ಈಗ 'ಕ್ರೈಸ್ಟ್ ಯೂನಿವರ್ಸಿಟಿ'ಯಲ್ಲಿ ಮೊದಲನೆಯ ವರುಷದಲ್ಲಿ ಬಿ.ಎಸ್.ಸಿ ಶಿಕ್ಷಣ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ನಾನು ಈ ಮೊದಲು 'ಜ್ಯೋತಿ ನಿವಾಸ್' ಕಾಲೇಜಿನಲ್ಲಿ ನನ್ನ ೧೧ನೇ ಮತ್ತು ೧೨ನೇ ತರಗತಿಯನ್ನು ಯಶಸ್ವಿಯಾಗಿ ಮುಗಿಸಿದ್ದೇನೆ. ೧೧ ಹಾಗೂ ೧೨ನೇ ತರಗತಿಯಲ್ಲಿ ನನಗೆ ಇಷ್ಟವಾದ ಹಾಗೂ ಆಸಕ್ತಿಯುಳ್ಳ ವಿಜ್ಞಾನ ವಿಷಯವನ್ನೇ ಆಯ್ಕೆ ಮಾಡಿಕೊಂಡೆನು.ಅದರಲ್ಲಿ ಭೌತಶಾಸ್ತ್ರ,ರಾಸಾಯನಶಾಸ್ತ್ರ,ಗಣಿತ ಮತ್ತು ಜೀವಶಾಸ್ತ್ರ ಗುಂಪನ್ನು ಆರಿಸಿಕೊಂಡೆನು.೧೨ನೇ ತರಗತಿಯಲ್ಲಿ ೮೮ ಶೇಕಡದೊಂದಿಗೆ ಉತ್ತೀರ್ಣಳಾಗಿದ್ದೇನೆ.ನನಗೆ ರಮ್ಯಾ ಎನ್ನುವ ಹೆಸರಿನಲ್ಲಿರುವ ಒಳ್ಳೆಯ ಗೆಳತಿಯು ಸಹ ಇದ್ದಳು.ಆಕೆ ತನ್ನ ಹೆಸರಿಗೆ ತಕ್ಕ ಹಾಗೆ ರಮ್ಯಾವಾಗಿಯು ಮತ್ತು ಒಳ್ಳೆ ಗುಣ ಉಳ್ಳ ವ್ಯಕ್ತಿಯೂ ಸಹ ಹೌದು ಎಂದು ಹೇಳಲು ಇಚ್ಛಿಸುತ್ತೇನೆ.

ಶಾಲೆ[ಬದಲಾಯಿಸಿ]

ನಂತರ ನನ್ನ ಜೀವನದಲ್ಲಿ ನಾನು ಎಂದೂ ಮರೆಯದ ಶಾಲೆಯ ಹೆಸರು 'ಸಾಯಿ ಆಂಗ್ಲ ಪ್ರೌಢ ಶಾಲೆ'. ನನ್ನ ಶಾಲೆಯ ದಿನಗಳು ನನಗೆ ಬಹು ಅಮುಲ್ಯವಾದ ದಿನಗಳಾಗಿದ್ದವು ಎಂದು ಭಾವಿಸುತ್ತೇನೆ. ಏಕೆಂದರೆ ಇದೇ ಶಾಲೆಯಲ್ಲಿ ನಾನು ಒಂಬತ್ತು ವರುಷಗಳ ಕಾಲ ವಿದ್ಯಭ್ಯಾಸ ಮಾಡಿದ್ದೇನೆ. ನನ್ನ ಎಲ್ಲಾ ತುಂಟತನದ ಸ್ನೇಹಿತರನ್ನು ಮರೆಯುವುದು ಅಸಾಧ್ಯಾ. ಭವ್ಯ,ಅಂಕಿತ,ಗೇಬ್ರಿಯಲ್,ಹರ್ಷಿತ,ಐಶ್ವರ್ಯ,ಹೇಮಲತ,ಸಂತೋಷ್,ಮಂಜುನಾತ್,ಪ್ರದೀಪ್,ಸುಜೀತ್, ಶರತ್,ಸತೀಶ್,ವಿಘ್ನೇಶ್, ಹೀಗೆ ಇನ್ನೂ ಮುಂತಾದ ಸ್ನೇಹಿತರ ಹೆಸರುಗಳನ್ನು ಹೇಳಬಹುದು. ಆದರೆ ಈಗ ನಾವೆಲ್ಲರೂ ಒಂದೊಂದು ದಿಕ್ಕಿನಲ್ಲಿದ್ದೇವೆ. ಇದು ನನ್ನ ಮನಸ್ಸಿಗೆ ಬಹಳ ಬೇಸರವನ್ನುಂಟು ಮಾಡುವ ಸಂಗತಿಯಾಗಿದೆ.

   ನನಗೆ ನೃತ್ಯದಲ್ಲಿ ಆಸಕ್ತಿ ಇದ್ದ ಕಾರಣ, ೩ನೇ ತರಗತಿಯಿಂದ ೧೦ನೇ ತರಗತಿಯವರೆಗೂ ಶಾಲೆಯಲ್ಲಿ ನಡೆದ ಎಲ್ಲಾ ವರುಷದ ವಾರ್ಷಿಕ ಸಮಾರಂಭದಲ್ಲಿನ ನೃತ್ಯದಲ್ಲಿ ಪಾಲ್ಗೊಂಡಿದ್ದೇನೆ. ಆ ದಿನವು ನನಗೆ ಅತ್ಯಂತ ಸಂತೋಷಕರವಾದ ದಿನವಾಗಿರುತಿತ್ತು.ನನಗೆ ಶಾಲೆಯ ದಿನಗಳಲ್ಲಿ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ ಶಿಕ್ಷಕರೆಂದರೆ, ೯ನೇ ತರಗತಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಳ್ಳುತ್ತಿದ್ದಂತಹ 'ಅರ್ಜುನ್' ಎನ್ನುವ ಶಿಕ್ಷಕ. ಅವರಿಂದಲೇ ನಾನು ಈಗ ವಿಜ್ಞಾನ ವಿಷಯದಲ್ಲಿ ಇಷ್ಟೊಂದು ಆಸಕ್ತಿಯಿಂದಿರಲು ಕಾರಣ. ಅವರಂತಹ ಶಿಕ್ಷಕರನ್ನು ನನ್ನ ಜೀವನದಲ್ಲಿ ಬೇಟಿಯಾಗಿದ್ದು ನನ್ನ ಪುಣ್ಯ ಎಂದು ಭಾವಿಸುತ್ತೇನೆ.

ಹವ್ಯಾಸಗಳು[ಬದಲಾಯಿಸಿ]

   ನನ್ನ ಹವ್ಯಾಸಗಳ ಸಾಲಿನಲ್ಲಿ ಬರುವ ಮೊದಲನೆಯದೆಂದರೆ,ದೂರದರ್ಶನ ನೋಡುವುದು,ಮಧುರವಾದ ಸಂಗೀತವನ್ನು ಕೇಳುವುದು, ನೃತ್ಯವನ್ನು ಮಾಡುವುದು, ಒಳ್ಳೆಯ ನಡವಳಿಕೆಯ ಬಗ್ಗೆ ತಿಳಿಸುವ ಪುಸ್ತಕಗಳನ್ನು ಓದುವುದೆಂದರೆ ನನಗೆ ಎಲ್ಲಿಲ್ಲದ ಆಸಕ್ತಿ. ಹಾಗೆಯೆ ವಿಸ್ಮಯಕಾರಿಯಾದ ವಿಷಯಗಳನ್ನು ಒಳಗೊಂಡ ಪುಸ್ತಕಗಳು ಹೀಗೆ ಹಲವಾರು ರೀತಿಯ ಪುಸ್ತಕಗಳನ್ನು ಓದುವುದು ನನ್ನ ಹವ್ಯಾಸವಾಗುತ್ತದೆ. ಒಳ್ಳೆಯ ರೀತಿಯ ಸಂದೇಶ ನೀಡುವ, ರೋಮಾಂಚಕವಾದ ಪ್ರೀತಿಯ ಕತೆಯನ್ನು ಒಳಗೊಂಡ ಚಲನಚಿತ್ರಗಳನ್ನು ನೋಡುವುದು ನನ್ನ ಹವ್ಯಾಸ.

ಸಂತೋಷ vs ಬೇಸರ[ಬದಲಾಯಿಸಿ]

   ನನ್ನ ಜೀವನದಲ್ಲಿ ನನಗೆ ಅತ್ಯಂತ ಸಂತೋಷವನ್ನುಂಟು ಮಾಡುವ ಹಾಗು ನಾನು ಒಬ್ಬ ಪುಣ್ಯವಂತಳೆಂದು ಭಾವಿಸಲು ಒಂದು ಕಾರಣವೆಂದರೆ, ದೇವರಾಗಿ ಬಂದ ನನ್ನ “ತಾಯಿ”. ಆದರೆ ಅದಕ್ಕೆ ತದ್ವಿರುದ್ದವಾಗಿ ನನ್ನ ಜೀವನದಲ್ಲಿ ನನಗೆ ಬೇಸರವನ್ನುಂಟುಮಾಡುವ ವಿಷಯವೆಂದರೆ, ನಾನು ನನ್ನ ತಂದೆ ತಾಯಿಗೆ ಒಬ್ಬಳೇ ಮಗಳಾಗಿ ಹುಟ್ಟಿದ್ದು. ಏಕೆಂದರೆ, ಚಿಕ್ಕವಳಿನಿಂದಲೂ ಸದಾ ಜಗಳವಾಡಲು,ತಿನ್ನುವುದನ್ನು ಹಂಚಿಕೊಳ್ಳಲು,ಪ್ರೀತಿಯಿಂದ ಮುದ್ದಾಡಲು,ಅಣ್ಣ,ತಮ್ಮ,ಅಕ್ಕ,ತಂಗಿ ಇಲ್ಲದೆ ಒಬ್ಬಳೇ ಕಾಲವನ್ನು ಕಳಿಯುವುದು ಬೇಸರವಾದ ವಿಷಯವಾಗಿದೆ. ಆದರೆ ಇನ್ನು ಮುಂದೆ ನನ್ನ ಜೀವನದಲ್ಲಿ ಎಂದಿಗೂ ಈಡೇರದ ಆಸೆಯೆಂದರೆ ನನಗೆ ಒಬ್ಬ ‘ಅಣ್ಣ’ ಇಲ್ಲದಿರುವುದು....

ಕನಸುಗಳು[ಬದಲಾಯಿಸಿ]

   ನನ್ನ ಜೀವನದಲ್ಲಿ ನನಗೆ ಲೆಕ್ಕವಿಲ್ಲದಷ್ಟು ಹಲವಾರು ಕನಸುಗಳಿವೆ.ಅದರಲ್ಲಿ ಮೊದಲನೆಯದಾಗಿ ನಾನು ಒಳ್ಳೆಯ ಗುಣವುಳ್ಳ ವ್ಯಕ್ತಿಯಾಗಿ,ಎಂದೂ ಕಾಣದಂತ ಬಹುದೊಡ್ಡ ಬದಲಾವಣೆಯನ್ನು ನನ್ನಲ್ಲಿ ನಾನು ಕಾಣಬೇಕು ಹಾಗೂ ಮತ್ತೊಬ್ಬರ ಬಾಳನ್ನು ಉಜ್ವಲಿಸುವ ಪ್ರಯತ್ನವನ್ನು ಮಾಡಬೇಕು ಎಂಬುದು ನನ್ನ ಬಹು ದೊಡ್ಡ ಕನಸ್ಸಾಗಿದೆ. ಆನಂತರ ವಿಧ್ಯಾಭ್ಯಾಸದಲ್ಲಿ ನಾನು ಜೈವಿಕ ತಂತ್ರಜ್ನಾನ ಸಂಶೋದಕಿಯಾಗಿ ಅದರಲ್ಲಿ ಉನ್ನತ ಮಟ್ಟಕ್ಕೇರಿ ಈ ಸಮಾಜಕ್ಕೆ ಒಳ್ಲೆಯ ಕೊಡುಗೆಯನ್ನು ನೀಡಬೇಕು. ನನ್ನದೇ ಶ್ರಮದಿಂದ ನನ್ನ ತಾಯಿಯ ಹೆಸರಿನಲ್ಲಿ ಒಂದು ಸುಂದರವಾದ ಮನೆಯನ್ನು ಉಡುಗೊರೆಯಾಗಿ ನನ್ನ ತಾಯಿಗೆ ನೀಡಬೇಕು ಎಂಬುದು ನನ್ನ ಒಳ ಮನಸ್ಸಿಗೆ ತಟ್ಟುವ ಕನಸ್ಸಾಗಿದೆ. ಹೀಗೆ ನೂರಾರು ಕನಸ್ಸುಗಳು ನನ್ನ ಮನಸ್ಸಿನಲ್ಲಿದೆ.....
This user is a member of WikiProject Education in India



ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Sangeetha-2015