ಸದಸ್ಯ:Sandeep u s
ಸಂದೀಪ್ ಯು | |
---|---|
ಜನನ | ೧೫/೦೭/೧೯೯೭ ಸಿರಿಗೆರೆ |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ಅರ್ಥಶಾಸ್ತ್ರ ಸಂಶೋಧನಾ ವಿದ್ವಾಂಸ |
ವೃತ್ತಿ | ವಿದ್ಯಾರ್ಥಿ |
ಪರಿಚಯ
[ಬದಲಾಯಿಸಿ]ಸಂದೀಪ್ ಯು ನಾನು ದಿನಾಂಕ ೧೫-೦೭-೧೯೯೭ ರಂದು ಚಿತ್ರದುರ್ಗ ಜಿಲ್ಲೆ, ಸದರಿ ತಾಲ್ಲೂಕಿನ ಸೀಗೆಹಳ್ಳಿಯಲ್ಲಿ ಜನಿಸಿರುತ್ತೇನೆ. ನನ್ನ ತಂದೆ ಹೆಸರು ಉಜ್ಜಪ್ಪ, ತಾಯಿ ನಿರ್ಮಲ ಇವರ ದ್ವಿತೀಯ ಪುತ್ರ. ಮೂಲತಃ ವ್ಲವಸಾಯ ಕುಟುಂಬದಿಂದ ಬಂದಿರುವೆನು.ನಮ್ಮದು ಹಿಂದೂ ಅವಿಭಕ್ತ ಕುಟುಂಬ. ನನಗೆ ವ್ಯವಸಾಯದಲ್ಲಿ ಹೆಚ್ಚು ಆಸಕ್ತಿ.
ವಿದ್ಯಾಭ್ಯಾಸ
[ಬದಲಾಯಿಸಿ]ನನ್ನ ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಸೀಗೆಹಳ್ಳಿಯಲ್ಲಿ ಅಭ್ಯಾಸ ಮಾಡಿ, ನಂತರ ಹಿರಿಯ ಪ್ರಾಥಮಿಕ ಶಿಕ್ಷಣ, ಫ್ರೌಡ ಶಿಕ್ಷಣ ಮತ್ತು ಪಿಯುಸಿಯನ್ನು ಸಿರಿಗೆರೆಯಲ್ಲಿ ಅಭ್ಯಾಸ ಮಾಡಿರುತ್ತೇನೆ. ಆ ಸಮಯದಲ್ಲಿ ನಾನು ಬಹಳ ತರಲೆಮಾಡುತಿದ್ದೆ. ನಾನು ಕ್ರಿಡೆಗಳಲ್ಲಿ ಆಸಕ್ತಿಯಿಂದ ಭಾಗವಯಿಸುತ್ತಿದ್ದೆ. ಜಿಲ್ಲಾ ಮಟ್ಟದ ಖೋ-ಖೋ ಕ್ರಿಡೆಯಲ್ಲಿ ಭಾಗವಹಿಸಿ ನಮ್ಮ ಶಾಲೆಗೆ ದ್ವಿತೀಯ ಬಹುಮಾನವನ್ನು ತಂದುಕೊಟ್ಟಿದ್ದೇನೆ. ನಮ್ಮ ಉಪಪ್ರಾಚಾರ್ಯರಿಂದ ನಾನು ಪ್ರಾಮಾಣಿಕತೆಯಿಂದ ವರ್ತನೆ ಮಾಡುವುದನ್ನು ಮನದಟ್ಟು ಮಾಡಿಕೊಂಡೆ.
ಚಟುವಟಿಕೆಗಳು
[ಬದಲಾಯಿಸಿ]ಆ ನಂತರ ನನ್ನ ಪಿಯು ಶಿಕ್ಷಣವನ್ನು 'ಬಿ ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿ'ನಲ್ಲಿ ಪೂರೈಯಿಸಿದ್ದೇನೆ. ಪಿಯುಸಿಯಲ್ಲಿ ನನ್ನ ಜೀವನಕ್ಕೆ ಉಪಯೋಗವಾಗುವ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡೆ. ನಮ್ಮ ಕಾಲೇಜಿನ ಉಪನ್ಯಾಸಕರು ಬಹಳ ಒಳ್ಳೆಯವರು ಮಕ್ಕಳಿಗೆ ಯಾವ ಸಮಯದಲ್ಲಿ ಏನು ಬೇಕು ಎಂಬ ವಿಷಯಗಳನ್ನು ತಿಳಿಸಬಲ್ಲರು ಮತ್ತು ನಮ್ಮ ಭವಿಷ್ಯದ ಜೀವನದ ಬಗ್ಗೆ ಅರಿವುಮೂಡಿಸಿದರು. ನಾನು "ಎನ್.ಸಿ.ಸಿ" ಮತ್ತು "ಎನ್.ಎಸ್.ಎಸ್" ಚಟುವಟಿಕೆಯಲ್ಲಿ ಭಾಗವಿಸಿ, ಎನ್.ಸಿ.ಸಿಯಲ್ಲಿ ಒಂದು ಕ್ಯಾಂಪ್ ಮತ್ತು ಎನ್.ಎಸ್,ಎಸ್ ನಲ್ಲಿ ಎರಡು ಕ್ಯಾಂಪ್ ಮಾಡಿದ್ದೇನೆ, ಇವುಗಳಿಂದ ಸಿಕ್ಕ ಅನುಭವ ನಾನು ಎಂದಿಗೂ ಮರಿಯಲಾರೆ ಒಳ್ಳೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಪ್ರಮಾಣ ಪತ್ರವನ್ನು ತೆಗೆದುಕೊಂಡೆನು. ಇದಲ್ಲದೆ ಜಿಲ್ಲಾ ಮಟ್ಟದ ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಚರ್ಚಾ ಸ್ಪರ್ಧೆಯಲ್ಲಿ ನಮ್ಮ ಕಾಲೇಜಿಗೆ ಪ್ರಥಮ ಬಹುಮಾನವನ್ನು, ಸಹಕಾರ ಇಲಾಖೆಯಿಂದ ನಡೆಸಿದ ಚರ್ಚಾ ಸ್ಪರ್ಧೆಯಲ್ಲಿ ಭಾಗವಸಿ ಸಮಾಧಾನಕರ ಬಹುಮಾನವನ್ನು ತೆಗೆದುಕೊಳ್ಳುವ ಮೂಲಕ ಕಾಲೇಜಿಗೆ ಒಳ್ಳೆಯ ಕೀರ್ತಿಯನ್ನು ತಂದಿರುತ್ತೇನೆ. ಹಾಗೂ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಅಂಗವಾಗಿ ನಡೆಸಿದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದೇನೆ. ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇಕಡಾ ೮೬%ಗಳಿಸಿ ಪರಮಪೂಜ್ಯರ ಬೆಳ್ಳಿ ಪದಕವನ್ನು ಪಡೆದಿದ್ದೇನೆ.
ನಂತರ ನನ್ನ ಪದವಿ ಶಿಕ್ಷಣವನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಇದು ಒಳ್ಳೆಯ ಹೆಸರಾಂತ ಕಾಲೇಜು, ನಾನು ಇಲ್ಲಿ ಅಭ್ಯಾಸ ಮಾಡುತ್ತಿರುವುದು ನನ್ನ ಪುಣ್ಯ. ನನಗೆ ಇಲ್ಲಿ ಭಾಷಾ ಕೌಶಲ್ಯ ಬೆಳೆಯುತ್ತದೆ, ಒಳ್ಳೆಯ ಸ್ನೇಹಿತರಿದ್ದಾರೆ ಹಾಗೂ ನಮ್ಮ ತರಗತಿ ಶಿಕ್ಷಕರ ಪ್ರೋತ್ಸಾಹ ಚೆನ್ನಾಗಿದೆ. ಈ ಕಾಲೇಜಿನಲ್ಲಿ ಓದುತ್ತಿರುವುದರಿಂದ ಮುಂದೆ ಒಳ್ಳೆಯ ಭವಿಷ್ಯವಿದೆ. ನಾನು ಇಲ್ಲಿ ನನ್ನ ಮೂರನೇ ವರ್ಷದ ಎನ್.ಸಿ.ಸಿ ಯನ್ನು ಮುಂದುವರೆಸುತ್ತಿದ್ದೇನೆ. ನಾನು ವಿಜಯನಗರದ ಜಗಜ್ಯೋತಿ ಬಸವೇಶ್ವರ ಉಚಿತ ವಿದ್ಯಾರ್ಥಿ ನಿಲಯದಲ್ಲಿದ್ದೇನೆ. ನಮಗೆ ಪ್ರತಿದಿನ ಪ್ರಾರ್ಥನೆ, ಯೋಗ ಮತ್ತು ವ್ಯಾಯ್ಯಾಮವಿರುತ್ತದೆ. ನಾನು ಸ್ನೇಹಿತರೊಂದಿಗೆ ಖುಷಿಯಾಗಿದ್ದೇನೆ.
ನನ್ನ ಹವ್ಯಾಸ
[ಬದಲಾಯಿಸಿ]ನನಗೆ ದೇವರ ಬಗ್ಗೆ ನಂಬಿಕೆ ಕಡಿಮೆ. ನನ್ನ ದೇವರು "ಶ್ರೀ ತರಳಬಾಳು ಗುರುಪರಂಪರೆ". ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿಗಳು ಬರೆಯುವ ಬಿಸಿಲು ಬೆಳೆದಿಂಗಳು ಪುಸ್ತಕಗಳನ್ನು ಓದುವ, ಅವರ ಮಾತುಗಳನ್ನು ಕೇಳುವ ಅವ್ಯಾಸ ಹೆಚ್ಚು. ಹಾಗೂ ರವಿಬೆಳೆಗೆರೆಯವರ ಪುಸ್ತಕಗಳನ್ನು ಓದುತ್ತೇನೆ, ಅದರಲ್ಲಿ 'ಇದು ಜೀವ, ಇದುವೇ ಜೀವನ' ಯಂಬ ಪುಸ್ತಕವನ್ನು ಓದಲು ಬಹಳ ಇಷ್ಟ. ಇದಲ್ಲದೆ ಸಾಧಕರ ಸುದ್ದಿಗಳನ್ನು ಅವರ ಸಂಭಾಷಣೆಯನ್ನು ವೀಕ್ಷಿಸುವ ಅವ್ಯಾಸ ಹೆಚ್ಚು. ನಾನು ಹೆಚ್ಚು ವಾರ್ತೆಯನ್ನು ನೋಡುತ್ತೇನೆ.
ಗುರಿ
[ಬದಲಾಯಿಸಿ]ಆಸೆ 'ನನ್ನ ತಂದೆ-ತಾಯಿಗಳಿಗೆ ಒಳ್ಳೆಯ ಹೆಸರನ್ನು ಕೊಡುವುದು'. ಸಮಾಜದಲ್ಲಿರುವ ನಿರ್ಗತಿಕರಿಗೆ ಸಹಾಯ ಮಾಡುವುದು, ಅವರಿಗೆ ಅರಿವನ್ನು ಮೂಡಿಸಿ ಮುಂದೆ ತರಬೇಕೆನ್ನುವ ಉದ್ದೇಶ ಇದೆ. "ಪಾನಿ ರಕ್ಷತಿ ರಕ್ಷತಃ" ಎಂಬ ವೇದ ವಾಕ್ಯದಂತೆ ನಾನು ನೀರನ್ನು ರಕ್ಷಣೆ ಮಾಡುತ್ತೇನೆ. ಇದು ನನ್ನ ಬಗ್ಗೆ ಕುರಿತು ಒಂದು ಸಣ್ಣ ವಿಮರ್ಷ, ಇದನ್ನು ಅಂಚಿಕೊಳ್ಳಲು ಅನುವು ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು....
This user is a member of WikiProject Education in India |