ಸದಸ್ಯ:Sanalis153318
ಹೊಸಗನ್ನಡ ಹತ್ತೊಂಬತ್ತನೆಯ ಶತಮಾನದ ನಂತರದ ಕನ್ನಡ ಕೃತಿಗಳ ಭಾಷೆಯಲ್ಲಿ ಗಮನಾರ್ಹ ವ್ಯತ್ಯಯ ಕಂಡುಬಂದಿತು. ಈ ಬಗೆಯಲ್ಲಿ ರೂಪುಗೊಂಡ ಕನ್ನಡ ಭಾಷೆಯನ್ನು ಹೊಸಗನ್ನಡ ಎಂದು ಕರೆಯುತ್ತೇವೆ. ಹೊಸಗನ್ನಡ ಬರಹಗಾರರಲ್ಲಿ ಅತ್ಯಂತ ಪ್ರಮುಖನಾದವನು ಮುದ್ದಣ ಎಂಬ ಕಾವ್ಯನಾಮದೊಂದಿಗೆ ಪ್ರಸಿದ್ಧನಾದ ನಂದಳಿಕೆ ಲಕ್ಷ್ಮಿನಾರಣಪ್ಪ. ಮುದ್ದಣನ ಕಾವ್ಯ ಕನ್ನಡದಲ್ಲಿ ಹೊಸದೊಂದು ಪರಂಪರೆಗೆ ನಾಂದಿಯಾಗಿದ್ದರೂ ಭಾಷಾವಿದಗ್ಧರು ಗುಲ್ವಾಡಿ ವೆಂಕಟರಾಯರು ಬರೆದ ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯವು ಎಂಬ ಕೃತಿಯನ್ನು ಹೊಸಗನ್ನಡದ ಮೊದಲ ಕೃತಿಯನ್ನು ಗುರುತಿಸುತ್ತಾರೆ. ೧೮೧೭ರಲ್ಲಿ ವಿಲಿಯಂ ಕಾರಿ ರಚಿಸಿ ಶ್ರೀರಾಮಪುರದಿಂದ ಪ್ರಕಾಶನಗೊಂಡ ಕಾನರೀಸ್ ವ್ಯಾಕರಣ ಎಂಬ ಕೃತಿ ಕನ್ನಡದಲ್ಲಿ ಮೊದಲ ಬಾರಿಗೆ ಅಚ್ಚುಗೊಂಡ ಕೃತಿಯೆಂಬ ಅಗ್ಗಳಿಕೆಗೆ ಪಾತ್ರವಾಗಿದೆ. ೧೮೨೦ರಲ್ಲಿ ಜೋನ್ ಹಾನ್ಸ್ ಬೈಬಲಿನ ಕನ್ನಡದ ಅನುವಾದವನ್ನು ಪ್ರಕಟಿಸಿದರು. ಅಚ್ಚುಗೊಂಡ ಮೊದಲ ಕಾದಂಬರಿ ಪಿಲ್‍ಗ್ರಿಂಸ್ ಪ್ರೋಗ್ರೆಸ್ ಎಂಬ ಕೃತಿಯಾಗಿದೆ. ಕಾನರೀಸ್ ಪ್ರೋವರ್ಬ್ಸ್ (ಕನ್ನಡ ಗಾದೆಗಳು) ಎಂಬ ಕೃತಿಯೂ ಮೇರಿ ಮಾರ್ತ್ ಷೆರ್ವುಡ್ ಬರೆದ ದ ಹಿಸ್ಟರಿ ಆಫ್ ಹೆನ್ರಿ ಅಂಡ್ ಹಿಸ್ ಬೇರರ್ ಎಂಬ ಕೃತಿಯೂ ಕ್ರಿಸ್ತಿಯನ್ ಗೋತ್ಲೋವ್ ಬಾರ್ತನು ಬರೆದ ಬೈಬಲ್ ಸ್ಟೋರೀಸ್ ಮತ್ತು ಕನ್ನಡ ಸ್ತೋತ್ರ ಪುಸ್ತಕ ಇಲ್ಲಿ ಪ್ರಕಾಶನಗೊಂಡವು. ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಹಲ ಬಗೆಯ ಚಳುವಳಿಗಳಿಂದ ಪ್ರಭಾವಗೊಂಡಿದೆ. ಇವುಗಳಲ್ಲಿ ಪ್ರಮುಖವಾದುವು ನವೋದಯ. ನವ್ಯ, ನವ್ಯೋತ್ತರ, ದಲಿತ, ಬಂಡಾಯ ಎಂಬಿವುಗಳಾಗಿವೆ. ಪ್ರಸ್ತುತ ಕನ್ನಡ ಸಾಹಿತ್ಯ ಸಮಾಜದ ಎಲ್ಲಾ ವರ್ಗಗಳನ್ನೂ ತಲುಪುತ್ತಲಿದೆ. ಅಷ್ಟಲ್ಲದೆ ಕನ್ನಡದಲ್ಲಿ ಪ್ರಸಿದ್ಧರೂ ಶ್ರೇಷ್ಠರೂ ಆದ ಕುವೆಂಪು, ದ.ರಾ.ಬೇಂದ್ರೆ, ವಿ.ಕೃ. ಗೋಕಾಕ್ ಮುಂತಾದ ಕವಿಗಳೂ ಸಾಹಿತಿಗಳೂ ಬಾಳಿ ಬದುಕಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಎಂಟು ಸಾರಿ ಜ್ಞಾನಪೀಠ ಪುರಸ್ಕಾರ ದೊರೆತಿದೆ. ಭಾರತೀಯ ಭಾಷೆಗಳ ಕೃತಿಗಳಿಗೆ ದೊರಕುವ ಜ್ಞಾನಪೀಠ ಪುರಸ್ಕಾರವು ಎಂಟು ಬಾರಿ ಕನ್ನಡ ಭಾಷೆಗೆ ದೊರೆಯಿತು. ಹಲವು ಬಾರಿ ಕೇಂದ್ರ ಸಾಹಿತ್ಯ ಅಕಾದೆಮಿ ಪುರಸ್ಕಾರಗಳೂ ಕನ್ನಡ ಭಾಷೆಗೆ ಲಭ್ಯವಾಗಿವೆ. ದಿಲ್ಲಿಯ ಕೆ. ಕೆ. ಬಿರ್ಲಾ ಫೌಂಡೇಷನ್ ಕೊಡಮಾಡುವ ಸರಸ್ವತಿ ಸಮ್ಮಾನವೂ ಕನ್ನಡ ಭಾಷೆಗೆ ಲಭ್ಯವಾಗಿದೆ. ಎಸ್. ಎಲ್. ಭೈರಪ್ಪನವರ ಮತ್ತು ಶಿವರಾಮ ಕಾರಂತರ ಕೃತಿಗಳು ಭಾರತದ ಹದಿನಾಲ್ಕು ಭಾಷೆಗಳಲ್ಲಿ ಅನುವಾದಗೊಂಡಿವೆ.