ಸದಸ್ಯ:Monica d prasad
ಮೋನಿಕ.ಡಿ.ಪ್ರಸಾದ್ | |
---|---|
https://commons.wikimedia.org/wiki/File:Monica_d_prasad.jpg | |
Born | ಮೋನಿಕ.ಡಿ.ಪ್ರಸಾದ್ ಬೆಂಗಳೂರು |
Nationality | ಭಾರತೀಯ |
Other names | ಮೋನು |
Education | ಬಿ.ಬಿ.ಎ ಟೂರಿಸಂ |
Occupation | ವಿಧ್ಯಾರ್ತಿ |
Monica d prasad,1513067,Monica d prasad,(ಚರ್ಚೆ) ೪:೫೨, ೧೫ ಜನವರಿ ೨೦೧೬ (UTC)
ಪರಿಚಯ
[ಬದಲಾಯಿಸಿ]ನನ್ನ ಹೆಸರು ಮೋನಿಕ.ಡಿ.ಪ್ರಸಾದ್.ನಾನು ಹುತಟ್ಟಿದ ದಿನಾಂಕ ೧೫ ಮೇ ೧೯೯೭.ನಾನು ಮೂಲತಃ ಬೆಂಗಳೂರಿನವಳು.ನನ್ನ ತಂದೆಯ ಹೆಸರು ದಯಾನಂದ್ ಪ್ರಸಾದ್.ನನ್ನ ತಾಯಿಯ ಹೆಸರು ಸವಿತ.ನನಗೆ ಒಬ್ಬ ತಮ್ಮನಿದ್ದಾನೆ,ಅವನ ಹೆಸರು ಮರ್ವಿನ್.ಡಿ.ಪ್ರಸಾದ್.ಅವನು ಎಂಟನೇ ತರಗತಿ ಒದುತಿದ್ದಾನೆ.ನಾನು ಬಾಲ್ಯದಿಂದ ಬೆಂಗಳೂರಿನಲ್ಲೆ ಹುಟ್ಟಿ ಬೆಳೆದವಳು,ಹಾಗಾಗಿ ನನ್ನ ನೆಲ,ಜಲ,ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಅಪಾರವಾದ ಅಭಿಮಾನ ಇದೆ.
ವಿಧ್ಯಾಬ್ಯಸ
[ಬದಲಾಯಿಸಿ]ನಾನು ಸೇಕ್ರೆಡ್ ಹಾರ್ಟ್ ಬಾಲಕಿಯರ ಪ್ರೌಡ ಶಾಲೆಯಲ್ಲಿ ಶಿಕ್ಷಣವನ್ನು ಮುಗಿಸಿ, ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದೆ.ಈಗ ಕ್ರೈಸ್ಟ್ ವಿಶ್ವವಿದ್ವಾನಿಲಯದಲ್ಲಿ ಬಿಬಿಎ ಟ್ರಾವಲ್ ಮತ್ತು ಟೂರಿಸಮ್ ನಲ್ಲಿ ಡಿಗ್ರೀ ಓದುತಿದ್ದೇನೆ.
ಹವ್ಯಾಸಗಳು
[ಬದಲಾಯಿಸಿ]ನನ್ನ ಹವ್ಯಾಸಗಳು ಚಿತ್ರ ಬಿಡಿಸುವುದು,ಕರ ಕುಶಲ ಕಲೆ,ಹಾಡು ಕೇಳುವುದು,ಚಲನಚಿತ್ರ ನೋಡುವುದು,ಇತ್ಯಾದಿ.ನನಗೆ ಹೊಸ ಜಾಗಗಳನ್ನು ಭೇಟಿಮಾಡುವುದು,ಹೊಸ ವಿಷಯಗಳನ್ನು ತಿಳಿದುಕೊಳ್ಳುವುದೆಂದರೆ ತುಂಬ ಇಷ್ಟ.ನನಗೆ ನೃತ್ಯ ಮಾಡುವುದೆಂದರೆ ತುಂಬ ಇಷ್ಟ.ನನಗೆ ನನ್ನ ನೆಲ,ಜಲ,ಭಾಷೆ,ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ.ನನಗೆ ಹಳೆ ಕನ್ನಡ ಚಿತ್ರ ನೋಡುವುದು,ಹಳೆ ಕನ್ನಡ ಹಾಡು ಕೇಳುವುದು,ಹಾಗು ಕನ್ನಡ ಸಾಹಿತ್ಯ,ಅದರಲ್ಲು ಕೆ.ಎಸ್.ನರಸಿಂಹಸ್ವಾಮಿ,ಕುವೆಂಪು ಹಾಗು ಪೂರ್ಣಚಂದ್ರ ತೇಜಸ್ವಿಯವರ ಪದ್ಯಗಳು ಹಾಗು ಕಥೆಗಳ ಬಗ್ಗೆ ವಿಶೇಷ ಆಸಕ್ತಿ.ನನಗೆ ಎಲ್ಲಾ ತರಹದ ತಿಂಡಿಗಳು ತಿನ್ನುವುದಕ್ಕೆ ಇಷ್ಟ,ಅದರಲ್ಲು ಕಾರದ ಹಾಗು ಹುಳಿಯ ತಿನಿಸುಗಳೆಂದರೆ ಪಂಚಪ್ರಾಣ.ನನಗೆ ಪ್ರಾಣಿಗಳೆಂದರೆ ತುಂಬ ಇಷ್ಟ, ಅದರಲ್ಲು ನಾಯಿಯೆಂದರೆ ಇನ್ನೂ ಇಷ್ಟ.
ಕುಟುಂಬ
[ಬದಲಾಯಿಸಿ]ನನ್ನದು ಒಂದು ತುಂಬು ಕುಟುಂಬ,ನಮ್ಮ ಮನೆಯಲ್ಲಿ ಏಳು ಸದಸ್ಯರಿದ್ದಾರೆ,ನಾನು,ನನ್ನ ಅಮ್ಮ,ತಮ್ಮ,ಅಜ್ಜಿ,ಮಾವ,ಅತ್ತೆ ಮತ್ತು ತಂಗಿ.ಇವರ ಜೊತೆ ನನ್ನ ಚಿಕ್ಕಮ್ಮ ಮತ್ತು ನನ್ನ ಅತ್ತೆಯ ಕುಟುಂಬದವರು ಹೆಚ್ಚು ಆಪ್ತರು.ರಜಾ ದಿನಗಳಲ್ಲಿ ಎಲ್ಲರು ನಮ್ಮ ಮನೆಯಲ್ಲಿ ಸೇರುತ್ತೇವೆ.ಈ ದಿನಗಳಲ್ಲಿ ನಮ್ಮ ಅಜ್ಜಿ ಮಾಡುವ ವಿಶೇಷ ಅಡುಗೆಗಾಗಿ ಕಾಯುತ್ತೇವೆ.ಎಲ್ಲರು ಬಂದಾಗ ನಮ್ಮ ಮನೆ ಸಂತೋಶದಿಂದ ತುಂಬಿ ತುಳುಕಾಡುತ್ತಿರುತ್ತದೆ.ಕುಟುಂಬದ ನಂತರದ ಸ್ಥಾನ ನನ್ನ ಗೆಳತಿಯರಿಗೆ.ಮೊದಲಿಗೆ ಬರುವವರು ನನ್ನ ಶಾಲೆಯ ಗೆಳತಿಯರು,ಸಮಂತ,ಮರಿಯಾ ಹಾಗು ಕ್ಯಾತ್ರಿನ್.ಈ ಮೂವರು ನನ್ನ ಶಾಲಾ ದಿನಗಳ ಒಡನಾಡಿಗಳು. ಸಂಜನ,ಶ್ರದ್ದ,ಶ್ರವಂತಿ,ಮಧುರ,ಸಿಲ್ವಾನ,ರಿತು,ಧರ್ಥಿ,ಸಾಕ್ಷಿ,ಸೃಷ್ಟಿ ಇವರೆಲ್ಲರು ನನ್ನ ಆಪ್ತ ಗೆಳತಿಯರು.
ಗುರಿ
[ಬದಲಾಯಿಸಿ]ನನ್ನ ಗುರಿಯ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲದಿದ್ದರು,ಕನಸುಗಳು,ಆಸೆಗಳಿಗೇನು ಕಡಿಮೆ ಇಲ್ಲ.ನನ್ನ ದೊಡ್ಡ ಕನಸೆಂದರೆ,ನನ್ನ ಸ್ವಂತ ದುಡಿಮೆಯಲ್ಲಿ,ಒಂದು ದೊಡ್ಡ, ಸುಂದರವಾದ ಮನೆ ಕಟ್ಟಿಸುವುದು ಹಾಗು ನನ್ನದೇ ಆದ ಸ್ವಂತ ವ್ಯಕ್ತಿತ್ವ ರೂಪಿಸಿ ಕೊಳುವುದು ಕೊನೆಯಲ್ಲಿ ನನ್ನ ಕುಟುಂಬವನ್ನು ಚನ್ನಾಗಿ ಯಾವುದೇ ಕೊರತೆ ಬಾರದ್ಂತೆ ನೋಡಿಕೊಳ್ಳುವುದು.ಹಾಗು ಒಂದು ದೊಡ್ಡ ಸಾದನೆ ಮಾಡುವುದು.