ವಿಷಯಕ್ಕೆ ಹೋಗು

ಸದಸ್ಯ:Meghana11.v

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
meghana

ಎಲ್ಲಾ ವಿದ್ಯಾರ್ಥಿಗಳಿಗು ನಮ್ಮ ಬಗ್ಗೆಯೇ ಒಂದು ಟಿಪ್ಪಣಿಯನ್ನು ಸೃಷ್ಟಿಸುವುದಕ್ಕೆ ಹೇಳಿದಾಗ ನಾನು ಮೊದಲು ಎಲ್ಲಿಂದ ಶುರು ಮಾಡುವುದೆಂದು ಬಹಳ ಯೋಚಿಸಿದೆ.ನಂತರ ನನ್ನ ೧೮ ವರ್ಷಗಳಲ್ಲಿ ನಾನು ಕಂಡ ಮತ್ತು ಅನುಭವಿಸಿದ ವಿಶೇಷವಾದ ಸಂಗತಿಗಳ ಬಗ್ಗೆ ಹೇಳಬೇಕೆಂದು ನಿರ್ಧರಿಸಿದೆ.ನನ್ನ ಹೆಸರು ಮೇಘನಾ.ವಿ.ಜೈನ್. ನನ್ನ ಹುಟ್ಟೂರು ತುಮಕೂರು ಆದರೂ ನನಗೆ ೧ ವರ್ಷ ತುಂಬುವುದರೊಳಗೆ ನಾನು ಮತ್ತು ನನ್ನ ತಾಯಿ ಬೆಂಗಳೂರಿಗೆ ಬಂದೆವು.ಆದ್ದರಿಂದ ನಾನು ಬೆಂಗಳೂರಿನ ಜೊತೆ ಒಂದು ವಿಶೇಶವಾದ ಸಂಬಂಧ ಬೆಳೆಸಿಕೊಂಡೆ.

ಕುಟುಂಬ

[ಬದಲಾಯಿಸಿ]

ನನ್ನ ಪ್ರಪಂಚ ತುಂಬಾ ಚಿಕ್ಕದು.ನಾನು ಮತ್ತು ನನ್ನ ತಾಯಿ. ನನ್ನ ತಂದೆಯ ಮುಖವನ್ನು ಇದುವರೆಗೂ ನೋಡಿಲ್ಲ.ಆದರೆ ನನ್ನ ತಾಯಿ ನನಗೆ ತಂದೆ ಇಲ್ಲ ಎನ್ನುವ ಕೊರತೆಯನ್ನು ಮರೆಯುವಂತೆ ನನ್ನನ್ನು ಪ್ರೀತಿಯಿಂದ ಬೆಳೆಸಿದ್ದಾರೆ.ಬಂಧುಗಳು ಕೇವಲ ನಮ್ಮ ಸುಖದಲ್ಲಿ ಭಾಗಿಯಾಗುತ್ತಾರೆ ಎನ್ನುವುದನ್ನು ಅಕ್ಷರ ಸಹ ಸತ್ಯವಾದ ಮಾತು.ನಾನು ಮತ್ತು ನನ್ನ ತಾಯಿ ಕಷ್ಟದಲ್ಲಿದ್ದಾಗ ಸಹಾಯಕ್ಕೆ ಬಂದವರು ನನ್ನ ಬಂಧುಗಳಲ್ಲ,ಆದರೆ ನಮ್ಮ ಸ್ನೇಹಿತರು.ನಾನು ನನ್ನ ತಾಯಿ ಇಂದು ಇಷ್ಟು ಖುಷಿಯಾಗಿ ಇರುವುದಕ್ಕೆ ಕಾರಣ ಸ್ನೇಹಿತರು.

ಹವ್ಯಾಸ

[ಬದಲಾಯಿಸಿ]

ನನಗೆ ಹಾಡುವುದೆಂದರೆ ಪಂಚ ಪ್ರಾಣ.ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಅನುಭವವೂ ಇದೆ.ನಾನು ಶಾಸ್ತ್ರೀಯ ಸಂಗೀತದಲ್ಲಿ ಕೆಲ ಕಾಲ ಅಭ್ಯಾಸವನ್ನು ಮಾಡಿದ್ದೇನೆ.ನಾನು ಚಿತ್ರ ಗೀತೆಗಳನ್ನು ಶುಧ್ಧ ಗಾಯಕರು ಹಾಡಿರುವ ಹಾಗೆ ಹಾಡಲು ಪ್ರಯತ್ನಿಸುತ್ತೇನೆ.ಅದರಲ್ಲಿ ತಕ್ಕ ಮಟ್ಟಿಗೆ ಯಶಸ್ಸನ್ನು ಕಂಡಿದ್ದೇನೆ. ಶ್ರೇಯಾ ಘೋಷಾಲ್ ಅವರು ನನಗೆ ಒಂದು ರೀತಿಯಲ್ಲಿ ಮಾದರಿ ಎಂದು ಹೇಳಬಹುದು.ಭಾಷೆಯ ಬಗ್ಗೆ ಅರಿವಿಲ್ಲದಿದ್ದರೂ ಅವರ ಸುಮಧುರವಾದ ಕಂಠ, ಹಾಡುಗಾರಿಕೆಯಲ್ಲಿರುವ ಸ್ಪಷ್ಟತೆಯಿರುವ ಗೀತೆಗಳು ನನ್ನನ್ನು ಸ್ವರ್ಗದ ಲೋಕಕ್ಕ ಕರೆದೊಯ್ಯುತ್ತದೆ.ನಾನು ಅವರ ಕಂಠಕ್ಕೆ ಮಾರಿಹೋಗಿದ್ದೇನೆ.

ಶಿಕ್ಷಣ

[ಬದಲಾಯಿಸಿ]

ನಾನು ೧೦ನೇ ತರಗತಿಯವರೆಗಿನ ವಿದ್ಯಾಭ್ಯಾಸವನ್ನು ಬೆಂಗಳೂರಿನ ರಾಜಾಜಿನಗರದ 'ಕೆ.ಎಲ್.ಇ ಸೊಸೈಟಿ ಸ್ಕೂಲ್' ಎಂಬ ಶಾಲೆಯಲ್ಲಿ ಮುಗಿಸಿದೆ.ಈ ಶಾಲೆಯ ಮುಖ್ಯ ಶಾಖೆ ಬೆಳಗಾವಿಯಲ್ಲಿ ನೆಲೆಸಿದೆ. ೫ನೇ ತರಗತಿಯವರೆಗು ಸಾಮಾನ್ಯ ವಿದ್ಯಾರ್ಥಿನಿಯಾಗಿದ್ದಾಗ ನನಗೆ,ನಂತರ ಅತ್ಯಂತ ಶ್ರಧ್ಧೆಯಿಂದ ಅಭ್ಯಾಸ ಮಾಡುವುದಕ್ಕೆ ಶುರು ಮಾಡಿದೆ. ಶ್ರಮದ ಫಲವಾಗಿ ನಾನು ಮೊದಲನೆಯ ಬಾರಿಗೆ ತರಗತಿಗೆ ೫ನೇ ಸ್ಥಾನವನ್ನು ಪಡೆದೆ.ಅಂದು ಮೊದಲನೆ ಬಾರಿಗೆ ನನ್ನ ತಾಯಿ ಮನಸ್ಪೂರ್ತಿಯಾಗಿ ನಕ್ಕಿದರು.ಆ ದಿನದ ನಂತರ ಹಿಂದಿರುಗಿ ನೋಡಲೇ ಇಲ್ಲ. ಪ್ರತಿ ವರ್ಷವು ಶ್ರಮವಿಟ್ಟು ಅಭ್ಯಾಸ ಮಾಡಿದೆ. ೧೦ನೇ ತರಗತಿಯಲ್ಲಿ ಶೇಖಡ ೯೦ ಅಂಕಗಳನ್ನು ಪಡೆದೆ.ನನ್ನ ಜೇವನದ ಅತ್ಯಂತ ಸಂತೋಷ ಪಟ್ಟ ದಿನ ಎಂದರೇ ಅಂದೇ. ಬೇಸಿಗೆ ರಜೆಯಲ್ಲಿ ನಾನು ,ನನ್ನ ತಾಯಿ ಮತ್ತು ಅವಳ ಸ್ನೇಹಿತರೊಂದಿಗೆ ಮಡಿಕೇರಿಗೆ ಹೋದೆವು.ನಾನು ಕರ್ನಾಟಕದಲ್ಲಿ ಇಷ್ಟಪಡುವ ಮೊದಲ ಪ್ರವಾಸ ಸ್ಥಳ ಮಡಿಕೇರಿ.ಅಲ್ಲಿನ ಹಸಿರು ವಾತಾವರಣ,ತಂಪು ಹವಾಮಾನ ನನ್ನನ್ನು ಯಾವಾಗಲೂ ಸೆಳೆಯುತ್ತದೆ.

ಪದವಿ ಪೂರ್ಣ ಶಿಕ್ಷಣ

[ಬದಲಾಯಿಸಿ]

ನಂತರ ಪಿಯುಸಿ ಪೂರೈಸಲೆಂದು ಬೆಂಗಳೂರಿನ ಮಲೇಶ್ವರದ ಎಮ್.ಇ.ಎಸ್ ಕಿಶೋರ್ ಕೇಂದ್ರ ಕಾಲೇಜಿಗೆ ಸೇರಿದೆ.ಬಹುಶಃ ಇದು ನನ್ನ ಜೇವನದ ಒಂದು ಪ್ರಮುಖವಾದ ಘಟ್ಟವೆಂದೇ ಹೇಳಬಹುದು.ಇದಕ್ಕೆ ಕಾರಣ ಹಲವಾರು. ಪಿಯುಸಿ ಮುಗಿಸುವ ೨ ವರ್ಷಗಳ ಒಳಗೆ ನಾನು ಸಂಪಾದಿಸಿದ ಮನಸುಗಳು,ಕಳೆದುಕೊಂಡ ಮನಸುಗಳು ಹಲವಾರು. ಈ ಕಾಲೇಜು ನನಗೆ ಜೀವನದ ಪಾಠಗಳನ್ನು ಕಲಿಸಿಕೊಟ್ಟತು.

ಸ್ನೇಹಿತರು

[ಬದಲಾಯಿಸಿ]

ನಾನು ಕಾಲೇಜಿನಲ್ಲಿ ಭೇಟಿ ಮಾಡಿದ ಮೊದಲನೆ ವ್ಯಕ್ತಿ ಪ್ರಗತಿ.ಆದರೆ ಪ್ರಗತಿ ನನ್ನ ಜೇವನದ ಅತ್ಯಂತ ಮುಖ್ಯವಾದ ವ್ಯಕ್ತಿಯಾಗಿ ಪ್ರಭಾವ ಬೀರುತ್ತಾಳೆ ಎಂದು ನಾನು ಎಂದಿಗೂ ಎಣಿಸಿರಲಿಲ್ಲ.ನಾನು ಪ್ರಗತಿ ಬಹಳ ಸುಲಭವಾಗಿ ಹೊಂದಿಕೊಂಡೆವು. ಅವಳ ಜೊತೆಯಲ್ಲೇ ನಿವೇದಿತ,ಸನಲ್,ರಶ್ಮಿ,ನಂದಿನಿ,ಪವಿತ್ರ,ನೀತು,ಇನ್ನು ಎಷ್ಟೋ ಸ್ನೇಹಿತರನ್ನು ಕಂಡೆ. ಆದರೆ ಪ್ರಗತಿ,ಸನಲ್ ಮತ್ತು ನಿವೇದಿತ ನನಗೆ ಹತ್ತಿರವಾದಷ್ಟು ಬೇರೆ ಯಾರೂ ಆಗಲಿಲ್ಲ.ಒಂದು ವರ್ಷ ಮುಗಿಯುವುದರೊಳಗೆ ನಾವೆಲ್ಲಾ ತುಂಬಾ ಹೊಂದಿಕೊಂಡೆವು.ಅಂದಿನಿಂದ ನಮ್ಮ ಒಗ್ಗಟ್ಟನ್ನು ಕಂಡು ಅನ್ಯರು ಅಸೂಯೆ ಪಟ್ಟಿದ್ದೂ ಉಂಟು.ನಮ್ಮಷ್ಟು ಸಂತೋಷವಾಗಿ ಇದ್ದವರೂ ಬೇರೆ ಯಾರೂ ಇರಲಿಲ್ಲ ಅನಿಸುತ್ತದೆ. ಮಿತಿ ಮೀರಿ ಸಂತೋಷ ಪಟ್ಟರೆ ಅದರ ನಂತರ ದುಃಖ ಕಾದಿರುತ್ತೆ ಎಂಬುದು ನಮ್ಮೆಲ್ಲರ ಅನುಭವಕ್ಕೂ ಬಂತು.ಅದು ಅಕ್ಟೋಬರ್ ೪ ೨೦೧೪. ದ್ವಿತೀಯ ಪಿ.ಯು.ಸಿಯಲ್ಲಿ ಅರ್ಧ ವರ್ಷದ ಪರೀಕ್ಷೆಯನ್ನು ಮುಗಿಸಿ ಪರಿವಾರದ ಜೊತೆ ಪ್ರವಾಸಕ್ಕೆಂದು ಹೋದ ಪ್ರಗತಿ ತಿರುಗಿ ಬಂದಿದ್ದು ಹೆಣವಾಗಿ. ರಸ್ತೆ ಅಪಘಾತದಿಂದಾಗಿ ಇವಳು ಚಲಿಸುತ್ತಿದ್ದ ವಾಹನ ಕರ್ನಾಟಕದ ಗೋಕರ್ಣದ ಪ್ರಪಾತದಲ್ಲಿ ಬಿದ್ದಿತು.ದುರಂತ ಎಂದರೆ ಪ್ರವಾಸಕ್ಕೆ ಹೋದ ೧೨ ಜನರಲ್ಲಿ ಸತ್ತವಳು ಪ್ರಗತಿಯೊಬ್ಬಳೆ. ದೇವಾಲಯಗಳಿಗೆ ಹೋಗಿ ಹಿಂದಿರುಗಬೇಕಿದ್ದ ಪ್ರಗತಿ ದೇವರ ಬಳಿಯೇ ಹೋಗಿ ಸೇರಿದಳು. ಅವಳನ್ನು ಕಳೆದುಕೊಂಡಿದ್ದು ನನ್ನ ಮೇಲೆ ಅತೀವವಾಗಿ ಪರಿಣಾಮ ಬೀರಿತು,ಏಕೆಂದರೆ ನಾನು ನನ್ನ ಜೀವನದಲ್ಲಿ ಕಂಡ ಮೊದಲನೆ ಸಾವು ಪ್ರಗತಿಯದಗಿತ್ತು.ಅವಳನ್ನು ಕಳೆದುಕೊಂಡ ನಂತರ ನಾನು ಬದುಕನ್ನು ನೋಡುವ ದೃಷ್ಟಿ ಬದಲಾಯಿತು.ನಾನು ಹೊಸಬರ ಜೊತೆ ತೀವ್ರ ಸನಿಹವಾಹುವುದಕ್ಕೆ ಹೆದರುವುದಕ್ಕೆ ಶುರು ಮಾಡಿದೆ.ಅದು ಯಾವ ಕಾರಣಕ್ಕಗಿ ಎಂಬುದು ನನಗೆ ಇಂದಿಗೂ ತಿಳಿದಿಲ್ಲ. ಬಹುಶಃ ನನಗೆ ಹತ್ತಿರವಾಗಿರುವ ಇನ್ನು ಯಾರನ್ನೂ ಕಳೆದುಕೊಳ್ಳಲು ನಾನು ಹೆದರಿದೆ.ಆ ಹೆದರಿಕೆ ಈಗಲೂ ನನ್ನಲ್ಲಿದೆ. ಈಗ ನಾನು ಬೆಂಗಳೂರಿನ ಅತ್ಯಂತ ಪ್ರತಿಷ್ಠವಾದ ಕ್ರೈಸ್ಟ್ ಕಾಲೇಜಿನಲ್ಲಿ ಬಿ.ಎ. ವ್ಯಾಸಂಗ ಮಾಡುತ್ತಿದ್ದೇನೆ.ಮಾಧ್ಯಮ ಜಗತ್ತಿನಲ್ಲಿ ಒಬ್ಬಳಾಗಬೇಕೆಂಬುದೇ ನನ್ನ ಜೀವನದ ಗುರಿ ಮತ್ತು ಕನಸು. ನಾನು ಯಾವಾಗಲೂ ಪುಟ್ಟ ಪುಟ್ಟ ಆಸೆಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತೇನೆ.ಏಕೆಂದರೆ ಪುಟ್ಟ ಆಸೆಗೆಳಿಂದ ಸಿಗುವ ಸಂತೃಪ್ತಿ ಹತ್ತು ಪಟ್ಟು ಹೆಚ್ಚಾಗಿರುತ್ತದೆ ಎಂಬುದು ನನ್ನ ಭಾವನೆ.ಚಳಿಗಾಲದಲ್ಲಿ ನನಗೆ ಪಾನಿಪೂರಿ ತಿನ್ನುವ ಆಸೆ.ಮಳೆಯಲ್ಲಿ ನೆನೆಯಬೇಕೆಂಬ ಆಸೆ.

  ಒಟ್ಟಿನಲ್ಲಿ ನಾನು ಇಲ್ಲಿಯವರೆಗೆ ಅರ್ಧ ಭಾಗ ಖುಷಿಯನ್ನು ಹಾಗು ಅರ್ಧ ಭಾಗ ದುಃಖವನ್ನು ಕಂಡಿದ್ದೇನೆ.
This user is a member of WikiProject Education in India

ಉಪಪುಟಗಳು

[ಬದಲಾಯಿಸಿ]