ಸದಸ್ಯ:MAMATHA NAGENDRA
ನನ್ನ ಹೆಸರು ಮಮತ. ೨೪-೦೩-೧೯೯೬ರಂದು ಬೆಂಗಳೂರಿನಲ್ಲಿ ನನ್ನ ಜನನವಾಯಿತು.ನನಗೆ ಜನ್ಮ ಕೊಟ್ಟ ದಂಪತಿಗಳು ಗೀತ ಮತ್ತು ಮುನಿರಾಜ್.ನಾನು ೧೦ನೇ ತರಗತಿಯವರೆಗಿನ ವಿಧ್ಯಾಭ್ಯಾಸವನ್ನು ಮನೆಯ ಹತ್ತಿರದ ಒಂದು ಪ್ರೌಢಶಾಲೆಯಲ್ಲಿ ಮುಗಿಸಿದೆ. ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದೆ.ಪದವಿಪೂರ್ವ ಶಿಕ್ಷಣದ ನಂತರ ತಂದೆ ತಾಯಿಯರ ಒತ್ತಡದಿಂದ ನನಗೆ ನಾಗೇಂದ್ರ ಎಂಬುವರೊಡನೆ ವಿವಾಹವಾಯಿತು.ಜೀವನವು ಯಾವಗ ಹೇಗೆ ಪರಿವರ್ತನೆಗೊಳ್ಳುತ್ತದೆ ಎಂಬುದು ತಿಳಿಯಲಾಗಲಾರದ್ದು. ಮದುವೆಯನಂತರ ಅಧ್ಯಯನವನ್ನು ಮುಂದುವರಿಸುವ ಅದೃಷ್ಟ ನನಗೆ ಸಿಕ್ಕಿತು.ಬೆಂಗಳೂರನ್ನು, ತಂದೆ ತಾಯಿಯನ್ನು ಬಿಟ್ಟು ಎಲ್ಲಿಗೂ ಹೋಗದಿರದ ನಾನು ವಿವಾಹವಾದ ನಂತರ ಕಾಲಿಟ್ಟ ಹೊಸ ಪ್ರಪಂಚ ಮಂಗಳೂರು.
"ಎಂಜಿನಿಯರಿಂಗ್" ಮಾಡುವುದು ನನಗೆ ಇಷ್ಟವಿರಲಿಲ್ಲ.ವೈದ್ಯಕೀಯ ಕ್ಷೇತ್ರಕ್ಕೆ ಹೋಗುವ ಆಲೋಚನೆ ನನ್ನ ತಲೆಯಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ.ನನಗೆ ಬಿ.ಎಸ್ಸಿ ಅಧ್ಯಯನ ಮಾಡುವ ಇಚ್ಚೆ ಶಾಲಾದಿನಗಳಿಂದಲೆ ಇತ್ತು.ಇದಕ್ಕೆ ಕಾರಣ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾದ ರಾಘವಾಚಾರ್ ಸರ್.ನಾನು ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಧಿ.
ಬೆಂಗಳೂರಿನಿಂದ ಬಂದ ನನಗೆ ಮಂಗಳೂರಿನ ಹಚ್ಚ ಹಸಿರು,ಇಲ್ಲಿಯ ಮಳೆಗಾಲ,"ಟ್ರಾಫಿಕ್" ಇಲ್ಲದ ರೋಡುಗಳು ಸೂರೆಗೊಂಡವು.ಮಂಗಳೂರಿನ ಅತ್ಯಂತ ಪುರಾತನ ಕಾಲದಿಂದ ಇರುವ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಯಾಗಿರುವುದು ನನಗೆ ಹೆಮ್ಮೆಯ ವಿಶಯ.ಸಮಾಜ ಸೇವೆಯಲ್ಲಿ ನನ್ನನ್ನು ನಾನು ಹೇಗಾದರೂ ತೊಡಗಿಸಿಕೊಳ್ಲಬೇಕೆಂಬ ಆಸೆ ಹಿಂದಿನಿಂದಲೂ ಇತ್ತು.ಆದ್ದರಿಂದ ನಾನು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ(ಎನ್ಎಸ್ಎಸ್) ನನ್ನ ಹೆಸರನ್ನು ನೊಂದಣಿಸಿಕೊಂಡೆ.ಎನ್ಎಸ್ಎಸ್ನ ವಾರ್ಷಿಕ ಶಿಬಿರ ನನಗೆ ನೀಡಿದ ಅನುಭವ ಅತ್ಯಂತ ಸ್ಮರಣೀಯ.
ಕಲೆ ಮತ್ತು ಕರಕುಶಲ ನನಗೆ ಇರುವ ಹವ್ಯಾಸಗಳಲ್ಲಿ ಒಂದು.ಇಂಗ್ಲಿಷ್ ಹಾಗು ಕನ್ನಡದ ಕಾದಂಬರಿಗಳನ್ನು ಓದುವುದು ನಾನು ಇತ್ತೀಚಿಗೆ ಬೆಳೆಸಿಕೊಂಡ ಹವ್ಯಾಸ.ಹೆಚ್ಚಿನ ಅನುಭವ ಇಲ್ಲದಿದ್ದರೂ ಅವಕಾಶ ದೊರೆತಾಗ ನೃತ್ಯ ಮತ್ತು ಗಾಯನವನ್ನು ಮಾಡುವುದು ಕೂಡ ನನ್ನ ಹವ್ಯಾಸ.ಬಿಎಸ್ಸಿಯ ಮೊದಲ ವರ್ಷದ ರಜೆಗಳಲ್ಲಿ ರಸಾಯನಶಾಸ್ತ್ರದಲ್ಲಿ "ಬೆಂಸೋಪೈರೀನ್"(benzopyrene) ಎಂಬ ವಿಷಯವನ್ನು ಕುರಿತು ರಸಾಯನಶಾಸ್ತ್ರದ ಪ್ರಾಧ್ಯಾಪಕರಾದ ಜೋಯಲ್ ಸರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಮುಗಿಸಿದೆ. ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ಇಲಾಖೆ ಸೃಷ್ಟಿದ ಯೋಜನೆಯಿಂದ ವಿಕೀಪೀಡಿಯದಲ್ಲಿ ಕೆಲಸಮಾಡುತ್ತಿರುವ ನಾನು ಇದನ್ನು ಹವ್ಯಾಸವನ್ನಾಗಿ ಮಾಡಿಕೊಳ್ಳಲು ಯತ್ನಿಸುತ್ತೇನೆ.
ಧನ್ಯವಾದಗಳು