ವಿಷಯಕ್ಕೆ ಹೋಗು

ಸದಸ್ಯ:Kayyar kasim

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


                                                                ಆಪ್ಟಿಕಲ್‌ ಫೈಬರ್

ಆಪ್ಟಿಕಲ್ ಫೈಬರ್‌ಗಳ ಕಟ್ಟು ಎ ಟೋಸ್‌ಲಿಂಕ್ ಫೈಬರ್ ಆಪ್ಟಿಕ್ ಒಂದು ತುದಿಯಲ್ಲಿ ಪ್ರಕಾಶಿಸುವ ಶ್ರವ್ಯ ತಂತಿ

ಆಪ್ಟಿಕಲ್‌ ಫೈಬರ್ (ದ್ಯುತಿ ಎಳೆಗಳು) ಎನ್ನುವುದು ಗಾಜಿನ ಅಥವಾ ಪ್ಲಾಸ್ಟಿಕ್‌ನಿಂದ ಮಾಡಿದ, ತನ್ನ ಉದ್ದಕ್ಕೂ ಬೆಳಕನ್ನು ಒಯ್ಯಬಲ್ಲ ಒಂದು ತಂತು. ಫೈಬರ್ ಆಪ್ಟಿಕ್ಸ್‌ ಎನ್ನುವುದು ಆಪ್ಟಿಕಲ್‌ ಫೈಬರ್‌ಗಳ ವಿನ್ಯಾಸ ಮತ್ತು ಉಪಯೋಗಗಳಿಗೆ ಸಂಬಂಧಿಸಿದ ಅನ್ವಯಿತ ವಿಜ್ಞಾನ ಮತ್ತು ಇಂಜಿನಿಯರಿಂಗ್‌ನ ವಿಸ್ತರಣೆ. ಆಪ್ಟಿಕಲ್‌ ಫೈಬರ್‌ಗಳನ್ನು ಫೈಬರ್‌-ಆಪ್ಟಿಕ್‌ ಸಂವಹನಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದು ಇತರ ಸಂವಹನ ವಿಧಾನಗಳಿಗೆ ಹೋಲಿಸಿದಾಗ ಹೆಚ್ಚು ದೂರದವರೆಗೂ ಮತ್ತು ಹೆಚ್ಚಿನ ಬ್ಯಾಂಡ್‌ವಿಡ್ತ್‌ಗಳಲ್ಲಿಯೂ (ಡೇಟಾ ಪ್ರಸಾರದ ವೇಗ) ಪ್ರಸಾರ ಮಾಡಲು ಅವಕಾಶ ಕೊಡುತ್ತದೆ. ಲೋಹದ ಬದಲಿಗೆ ಫೈಬರ್‌ಅನ್ನು ಬಳಸಲಾಗುತ್ತದೆ ಏಕೆಂದರೆ ಇವುಗಳಲ್ಲಿ ಸಿಗ್ನಲ್‌ಗಳು ಚಲಿಸುವಾಗ ಕಡಿಮೆ ವ್ಯಯವಾಗುತ್ತದೆ, ಮತ್ತು ಅವುಗಳು ವಿದ್ಯುದಯಸ್ಕಾಂತೀಯ ಹಸ್ತಕ್ಷೇಪವನ್ನು ನಿರೋಧಿಸುವ ಶಕ್ತಿಯನ್ನು ಹೊಂದಿರುತ್ತವೆ. ಬೆಳಕಿನ ಅಲಂಕಾರಕ್ಕೂ ಸಹ ಫೈಬರ್‌ಗಳನ್ನು ಬಳಸಲಾಗುತ್ತದೆ, ಮತ್ತು ಚಿತ್ರಗಳನ್ನು ರವಾನಿಸಲು ಸಾಧ್ಯವಾಗುವಂತೆ ಕಟ್ಟುಗಳಲ್ಲಿಯೂ ಸುತ್ತಿಡಲಾಗುತ್ತದೆ, ಇದರಿಂದ ಒತ್ತಾದ ಕ್ಷೇತ್ರದಲ್ಲಿ ಕೂಡ ವೀಕ್ಷಣೆ ಸಾಧ್ಯವಾಗುತ್ತದೆ. ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಫೈಬರ್‌ಗಳನ್ನು ಸಂವೇದಕಗಳು ಮತ್ತು ಫೈಬರ್‌ ಲೇಸರ್‌ಗಳು ಒಳಗೊಂಡಂತೆ ಇನ್ನೂ ಅನೇಕ ಬೇರೆ ಬೇರೆ ಉಪಯೋಗಗಳಿಗಾಗಿ ಬಳಸಲಾಗುತ್ತದೆ. ಬೆಳಕನ್ನು ಸಂಪೂರ್ಣ ಆಂತರಿಕ ಪ್ರತಿಬಿಂಬದ ಸಹಾಯದಿಂದ ಆಪ್ಟಿಕಲ್‌ ಫೈಬರ್‌ನ ಅತ್ಯಂತ ಒಳಗಿನ ಪದರದಲ್ಲಿ ಇಡಲಾಗುತ್ತದೆ. ಇದು ಫೈಬರ್‌ ವೇವ್‌ಗೈಡ್‌‌ನಂತೆ ಕೆಲಸ ಮಾಡಲು ಕಾರಣವಾಗುತ್ತದೆ. ಹಲವು ಪ್ರಸಾರ-ಪಥಗಳನ್ನು ಅಥವಾ ಹಾಯ್ದುಹೋಗುವ ಮಾರ್ಗಗಳಿಗೆ ಆಧಾರ ಒದಗಿಸುವ ಫೈಬರ್‌ಗಳನ್ನು ಬಹು-ಮಾರ್ಗ ಫೈಬರ್‌ಗಳು ಎಂದು ಕರೆಯುತ್ತಾರೆ, ಹಾಗೂ ಒಂದೇ ಒಂದು ಮಾರ್ಗಕ್ಕೆ ಆಧಾರ ಒದಗಿಸುವ ಫೈಬರ್‌ಗಳನ್ನು ಏಕ-ಮಾರ್ಗ ಫೈಬರ್‌ಗಳೆಂದು ಕರೆಯುತ್ತಾರೆ. ಬಹು-ಮಾರ್ಗ ಫೈಬರ್‌ಗಳ ಅತ್ಯಂತ ಒಳಗಿನ ಪದರವು ಸಾಮಾನ್ಯವಾಗಿ ದೊಡ್ಡ ವ್ಯಾಸವನ್ನು ಹೊಂದಿರುತ್ತದೆ, ಮತ್ತು ಇವುಗಳನ್ನು ಕಡಿಮೆ ದೂರದ ಸಂವಹನ ಸಂಪರ್ಕಗಳಿಗೆ ಮತ್ತು ಅಧಿಕ-ವಿದ್ಯುಚ್ಛಕ್ತಿಯನ್ನು ರವಾನಿಸಬೇಕಾದಾಗ ಬಳಸಲಾಗುತ್ತದೆ. ಏಕ-ಮಾರ್ಗ ಫೈಬರ್‌ಗಳನ್ನು 550 meters (1,800 ft)ಗಿಂತ ಹೆಚ್ಚಿನ ಉದ್ದದ ಎಲ್ಲಾ ಸಂವಹನ ಸಂಪರ್ಕಗಳಲ್ಲಿ ಬಳಸಲಾಗುತ್ತದೆ. ಆಪ್ಟಿಕಲ್‍‌ ಫೈಬರ್‌ನ ಕೊನೆಗಳನ್ನು ಜೋಡಿಸುವ ಕೆಲಸ ವಿದ್ಯುತ್‌ ತಂತಿ ಅಥವಾ ಕೇಬಲ್‌ಗಳನ್ನು ಜೋಡಿಸುವ ಕೆಲಸಕಿಂತ ಹೆಚ್ಚು ಸಂಕೀರ್ಣ. ಫೈಬರ್‌ನ ತುದಿಗಳನ್ನು ಜಾಗ್ರತೆಯಿಂದ ಸೀಳಬೇಕು, ಆಮೇಲೆ ಯಾಂತ್ರಿಕವಾಗಿ ಇಲ್ಲವೇ ವಿದ್ಯುತ್‌ ಆರ್ಕ್‌ನ ಸಹಾಯದಿಂದ ಅವುಗಳನ್ನು ಬೆಸುಗೆ ಹಾಕಿ ಸೇರಿಸಬೇಕು. ಬಿಚ್ಚಬಹುದಾದ ಸಂಪರ್ಕಗಳನ್ನು ಮಾಡಲು ವಿಶಿಷ್ಟ ಕನೆಕ್ಟರ್‌ಗಳನ್ನು ಬಳಸಲಾಗುತ್ತದೆ.