ಸದಸ್ಯ:Iniha
ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ (ರಿ.) ಪದ್ಮುಂಜ.
[ಬದಲಾಯಿಸಿ]ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ (ರಿ.) ಪದ್ಮುಂಜ.
ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಪದ್ಮುಂಜ ಎನ್ನುವ ಸ್ಥಳದಲ್ಲಿ ಫೆಬ್ರವರಿ 11, 2016 ರಲ್ಲಿ ಸ್ಥಾಪನೆಗೊಂಡ ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ (ರಿ.) ಭಾರತ ಸರಕಾರದ ಎಮ್.ಎಸ್.ಎಮ್.ಇ ಅಡಿಯಲ್ಲಿ ನೊಂದಣಿಸಲ್ಪಟ್ಟಿದೆ. (Reg No: KR11D0004600) ತನ್ನ ವಿಶಿಷ್ಟ ಕಂಪ್ಯೂಟರ್ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳ ಕಂಪ್ಯೂಟರ್ ಶಿಕ್ಷಣ ಅಭಿವೃದ್ಧಿಗೆ ಒಂದು ಜವಾಬ್ದಾರಿಯುತ ಸೇವೆಯನ್ನು ನೀಡುತ್ತಿದೆ.
Founded: 11-02-2016 |
Founder: Kumaresh Kaniyooru |
---|
Location: Padmunja, Kaniyooru Post, Belthangady Taluk D.K-574217 |
Managing Director: Kumaresh Kaniyooru |
Assistant Computer Teacher: Meghashree |
PW: Lavanya, Dhanya |
Supervisor: Shivakumar |
Committee: ECM (Examination Committee and Management) |
ಬೇಸಿಕ್ ಕಂಪ್ಯೂಟರ್, ಡಿಟಿಪಿ, ಡಿಡಿಟಿಪಿ, ಡಿಸಿಎ, ಪಿಜಿಡಿಸಿಎ, ಡಿಸಿಎಂ, ಡಿಓಎಮ್ ಕೋರ್ಸ್‍ಗಳಲ್ಲದೆ, ಮಲ್ಟಿಮೀಡಿಯಾ ಕೋರ್ಸ್‍ಗಳಾದ ಫೋಟೋ ಎಡಿಟಿಂಗ್, ಆಡಿಯೋ ಎಡಿಟಿಂಗ್ ಹಾಗೂ ವೀಡಿಯೋ ಎಡಿಟಿಂಗ್ ನ್ನು ಸಹ ವಿಶೇಷವಾಗಿ ಕಲಿಸಲಾಗುತ್ತದೆ.
ಕುಮಾರೇಶ್ ಕಣಿಯೂರು ಸಂಸ್ಥೆಯ ಮುಖ್ಯಸ್ಥರಾಗಿ ಹಾಗೆ ಮುಖ್ಯ ಕಂಪ್ಯೂಟರ್ ಶಿಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಮೇಘಶ್ರೀ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿವಕುಮಾರ್ ಉಮ್ಮತ್ತೂರು ಸಾಂಸ್ಕøತಿಕ ಚಟುವಟಿಕೆಗಳ ಸಲಹೆಗಾರರಾಗಿ ಮತ್ತು ಲಾವಣ್ಯ ಪಿಡಬ್ಯ್ಲೂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಂಪ್ಯೂಟರ್ ತರಬೇತಿಯನ್ನು ಇಂಟರ್‍ನೆಟ್ ಸಂಪರ್ಕದೊಂದಿಗೆ ಟಾಸ್ಕ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
ಕಂಪ್ಯೂಟರ್ ಕಲಿಕೆಯ ಪ್ರತೀ ಹಂತದಲ್ಲೂ “ಇಂಟರ್‍ನೆಟ್” ನ ಸಹಾಯದೊಂದಿಗೆ ಕಲಿಸಿಕೊಡಲಾಗುತ್ತದೆ.
ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ ಕಂಪ್ಯೂಟರ್ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆಗಳಿಗೂ ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ.
2017 ಮಾಚ್ 22 ರಂದು ಇನಿಹಾ ನೆಟ್ ವಿದ್ಯಾರ್ಥಿನಿಯರಾದ ಅಕ್ಷತಾ, ಮೇಘಶ್ರೀ, ಧನ್ಯ ರಮ್ಯ ಮತ್ತು ಯಶಸ್ವಿ “ಪ್ರೇರಣಾ ಬಿಂಬ” ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಾಗೆ 2018 ಜನವರಿ 16 ರಂದು “ಬಣ್ಣದ ಬೃಂದಾವನ” ಎನ್ನುವ ವಿಶೇಷ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಜಯಶ್ರೀ, ಅನುಶ್ರೀ ಮತ್ತು ಅಶ್ವಿತಾ ರೇಡಿಯೋ ಸಾರಂಗ್ 107.8ಎಫ್‍ಎಮ್ ನಲ್ಲಿ ನೀಡುವುದರ ಜೊತೆಗೆ ಮತ್ತು ರೇಡಿಯೋ ಸಾರಂಗ್ ಸಹಯೋಗದಲ್ಲಿ ದಿನಾಂಕ 22 ಮೇ 2018 ರಂದು ನಡೆಸಿದ "ಚಿತ್ತ ವಿಸ್ತಾರ (ಭಾರತೀಯ ಯೋಧರಿಗೆ ನಮನ)" ವಿಶೇಷ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ “ಪ್ರಾರ್ಥನಾ, ಲಾವಣ್ಯ ಕೆ ರಾವ್ ಮತ್ತು ದಿಶಾ ಹೆಚ್.ವಿ” ನಡೆಸಿಕೊಡುವ ಮೂಲಕ ನಮ್ಮ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಘಟಕ ಆಯೋಜಿಸಿದ್ದ, "ಸ್ವಚ್ಛತಾ ಘೋಷವಾಕ್ಯ" ಸ್ಪರ್ಧೆಯಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿನಿ "ಜಯಶ್ರೀ" ಪ್ರಥಮ ಸ್ಥಾನ ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿಯನ್ನು ತಂದುಕೊಟ್ಟಿರುತ್ತಾಳೆ.
ಅಲ್ಲದೆ, ಮಂಗಳೂರಿನ ಪುರಭವನದಲ್ಲಿ ದಿನಾಂಕ 09-02-2017 ರಂದು ನಡೆದ “ಟೀಂ ಬ್ಲ್ಯಾಕ್ ಆಂಡ್ ವೈಟ್ ಮಂಗಳೂರು” ಆಯೋಜನೆಯ “ಹಾಡು ಹುಟ್ಟುವ ಸಮಯ”ಮತ್ತು ದಿನಾಂಕ 20-08-2017 ರಂದು ನಡೆದ “ಅಮರ್ ಜವಾನ್” ದಕ್ಷಿಣ ಕನ್ನಡ ಹುತಾತ್ಮ ವೀರಯೋಧರಿಗೆ ನಮನ ಕಾರ್ಯಕ್ರಮಕ್ಕೆ ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಯೂ ಸಹಕಾರವನ್ನು ನೀಡಿರುತ್ತದೆ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.
ವಾರ್ಷಿಕವಾಗಿ ವಿದ್ಯಾರ್ಥಿಗಳ ಜೊತೆ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಲಾಗುತ್ತದೆ. ಪ್ರವಾಸದಲ್ಲಿ ವಿದ್ಯಾರ್ಥಿಗಳ ಪೋಷಕರೂ ಭಾಗವಹಿಸುತ್ತಾರೆ.
2016 ಅಕ್ಟೋಬರ್ 23 ರಂದು ಚಿತ್ರದುರ್ಗಕ್ಕೆ ಶೈಕ್ಷಣಿಕ ಪ್ರವಾಸವನ್ನು ಕೈಗೊಂಡು, ಚಿತ್ರರ್ದು ಕೋಟೆ, ಆಡುಮಲೇಶ್ವರ, ಚಂದ್ರವಳ್ಳಿ, ವಾಣಿವಿಲಾಸ್ ಸಾಗರ, ಹಾಲುಮಲೇಶ್ವರಪ್ರದೇಶಗಳಿಗೆ ಬೇಟಿನೀಡಲಾಗಿದೆ.
ಹಾಗೆ 2017 ನವೆಂಬರ್ 26 ರಂದು ಶಿವಮೊಗ್ಗ-ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು, ಜೋಗ್‍ಫಾಲ್ಸ್, ಬನವಾಸಿ, ಶಿರಸಿ, ಯಾಣ ಮತ್ತು ಮುರುಡೇಶ್ವರ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗಿದೆ. ಈ ಪ್ರವಾಸದಲ್ಲಿ ಕನ್ನಡ ಕಿರುತೆರೆ ನಟಿ “ಹರಿಣಿ” ವಿಶೇಷ ಅಥಿತಿಯಾಗಿ ಆಗಮಿಸಿದ್ದರು.
ಸ್ಥಳಿಯವಾಗಿರುವ ಸರಕಾರಿ ಪ್ರೌಢಶಾಲೆ ಪದ್ಮುಂಜ ಇಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಬ್ಬರಿಗೆ ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಯಿಂದ ಡಿ.ಸಿ.ಎ ಕೋರ್ಸ್‍ನ್ನು ಉಚಿತವಾಗಿ ನೀಡಲಾಗುತ್ತದೆ ಮತ್ತು ಉಳಿದ ಹೆಚ್ಚು ಅಂಕ ಪಡೆದವರಿಗೆ ಅಭಿನಂದನೆಯನ್ನು ಸಲ್ಲಿಸಲಾಗುತ್ತದೆ.
ಈ ಯೋಜನೆಯಡಿಯಲಿ 2015-16 ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಸಾಧಕ ವಿದ್ಯಾರ್ಥಿಗಳಾದ 'ಮೇಘಶ್ರೀ', 'ಲಾವಣ್ಯ', 2016-17 ನೇ ಸಾಲಿನಲ್ಲಿ 'ನುಶ್ರತ್' ಹಾಗೆ 'ಸಾತ್ವಿಕ'ಉಚಿತವಾಗಿ ಕಂಪ್ಯೂಟರ್ ಶಿಕ್ಷಣ ಪಡೆದಿರುತ್ತಾರೆ. ಹಾಗೆ 2017-18 ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಸಾಧಕ ವಿದ್ಯಾರ್ಥಿಗಳಾದ 'ಸೌಂದರ್ಯ' ಮತ್ತು 'ವಿಭಾ' ಉಚಿತ ಕಂಪ್ಯೂಟರ್ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಹೀಗೆ ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ ಕಂಪ್ಯೂಟರ್ ಶಿಕ್ಷಣವನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗಳಿಗೂ ವಿಶೇಷ ಮಾನ್ಯತೆಯನ್ನು ನೀಡುತ್ತಾ ಹತ್ತು ಹಲವು ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತಾ ಎಲ್ಲರ ವಿಶ್ವಾಸಕ್ಕೆ ಅಭಿಮಾನಕ್ಕೆ ಪಾತ್ರವಾಗಿದೆ. ಇದಕ್ಕೆ ಇನಿಹಾ ನೆಟ್ ಸಂಸ್ಥೆ ಆಭಾರಿಯಾಗಿರುತ್ತದೆ. ಮುಂದೆಯೂ ಸಂಸ್ಥೆಯ ಬೆಳವಣಿಗೆಗೆ ಎಲ್ಲರ ಪ್ರೋತ್ಸಾಹ-ಸಹಕಾರ ಹಾಗೆ ಸಲಹೆಗಳನ್ನು ಸಂಸ್ಥೆ ಬಯಸುತ್ತದೆ.