ವಿಷಯಕ್ಕೆ ಹೋಗು

ಸದಸ್ಯ:Dr Mallikarjun B Manpade

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಳಿವಿನಂಚಿನಲ್ಲಿ ಸುಡಗಾಡು ಸಿದ್ದರ ಪಾರಂಪರಿಕ ಕೈಚಳಕ ಪ್ರದರ್ಶನ_ಕಲೆ

[ಬದಲಾಯಿಸಿ]

ಪ್ರವೇಶ

[ಬದಲಾಯಿಸಿ]

ಸುಡಗಾಡು ಸಿದ್ದ ಸಮುದಾಯದವರ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ದಂತಕಥೆಗಳೇ ಇವೆ. ನಾವು ಚಿಕ್ಕವರಿದ್ದಾಗ ಸುಡಗಾಡು ಸಿದ್ದ ಸಮುದಾಯದವರು ಹಳ್ಳಿಗೆ ಪ್ರವೇಶ ಮಾಡಿದರೆ ಹಳ್ಳಿಯ ಹೆಣ್ಣುಮಕ್ಕಳು ಮನೆ ಬಿಟ್ಟು ಹೊರಬರುತ್ತಿರಲಿಲ್ಲ. ಅದಕ್ಕೆ ನಮ್ಮ ಹಳ್ಳಿ ಹೆಣ್ಣುಮಕ್ಕಳು ಕೊಡುವ ಕಾರಣವೆಂದರೆ ಯಾರಾದರೂ ಚಂದ ಇರುವ ಹೆಣ್ಣುಮಕ್ಕಳನ್ನು ನೋಡಿದರೆ ಇವರು ನಾಯಿ, ಗಿಣಿ ಮಾಡಿ ಕರೆದುಕೊಂಡು ಹೋಗಿಬಿಡುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಹಳ್ಳಿಯ ಹೆಣ್ಣುಮಕ್ಕಳು ಸುಡಗಾಡು ಸಿದ್ದರನ್ನು ಅತಿಮಾನುಷರು, ಪವಾಡ ಪುರುಷರೆಂದೇ ನಂಬುತ್ತಿದ್ದರು. ಇವರ ವೇಷಭೂಷಣಗಳು ತುಂಬಾ ವಿಶೇಷವಾಗಿರುತ್ತವೆ. ಇವರು ತಲೆಯಲ್ಲಿ ನವಿಲು ಗರಿ ಇಟ್ಟುಕೊಂಡು ತಲೆಗೆ ಕಾವಿ ರೂಮಾಲು ಅಥವಾ ಶವಣ ಪೇಟ ಸುತ್ತಿಕೊಂಡಿರುತ್ತಾರೆ. ಮೈಮೇಲೆ ಕಾವಿಯ ನಿಲುವಂಗಿ ಮತ್ತು ಚಿತ್ತಾರದ ಬಟ್ಟೆ ಹಾಕಿಕೊಂಡಿರುತ್ತಾರೆ. ಹಣೆಗೆ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ, ಲಿಂಗ ಧರಿಸಿರುತ್ತಾರೆ. ಬಗಲಲ್ಲಿ ಜೋಳಿಗೆ ಹಾಕಿಕೊಂಡಿರುತ್ತಾರೆ. ಒಂದು ಕೈಯಲ್ಲಿ ಜಿಂಕೆಯ ಚರ್ಮದಂತೆ ಕಾಣುವ ಸುರುಳಿ ಸುತ್ತಿದ ಚರ್ಮ, ಮತ್ತೊಂದು ಕೈಯಲ್ಲಿ ಬೆತ್ತ ಹಿಡಿದಿರುವ ಇವರನ್ನು ನೋಡಲು ಆಕರ್ಷಣೀಯವಾಗಿ ಅತಿಮಾನುಷ ವ್ಯಕ್ತಿಗಳಾಗಿ ಕಂಡುಬರುತ್ತಾರೆ. ಅವರ ಕೈಚಳಕ ಪ್ರದರ್ಶನ ಮತ್ತು ಆ ಸಂದರ್ಭದಲ್ಲಿ ಅವರು ಮಾತನಾಡುವ ಶೈಲಿ, ಬಳಸುವ ಭಾಷೆ ಎಂತವರಿಗೂ ಬೆರಗುಗೊಳಿಸುತ್ತದೆ. ಮಂತ್ರಮುಗ್ದರನ್ನಾಗಿಸುತ್ತದೆ. ಇವರು ತಮ್ಮ ಕೈಚಳಕ ಪ್ರದರ್ಶನದಲ್ಲಿ ಪವಾಡ ಸದೃಶ್ಯದಂತೆ ಬೂದಿ, ಊಂಗುರ, ಚೈನ್ ಕೊಡುವ ವಿದ್ಯೆಯೂ ಇವರಿಗೆ ಕರಗತವಾಗಿದೆ. ಬಾಯಲ್ಲಿ ಹಿಡಿಸುವ ಗಾತ್ರದ ೫-೬ ಕಲ್ಲುಗಳನ್ನು ಏಕಕಾಲಕ್ಕೆ ನುಂಗಿ ನಂತರ ಒಂದೊAದಾಗಿ ಹೊರ ತೆಗೆಯುವ ದೃಶ್ಯ ಪ್ರೇಕ್ಷಕರಲ್ಲಿಯೇ ಒಂದು ರೀತಿ ದುಗುಡ, ಆತಂಕವನ್ನುAಟು ಮಾಡುತ್ತದೆ. ಆ ರೀತಿಯಲ್ಲಿ ಇವರ ಕೈಚಳ ಪ್ರದರ್ಶನವಿರುತ್ತದೆ. ಆದರೆ ಇವರು ಎಲ್ಲಿಯೂ ಕೂಡ ತಾವು ಮಾಡುವ ಕೈಚಳಕ ಪ್ರದರ್ಶನವನ್ನು ಪವಾಡವೆಂದು ಹೇಳುವುದಿಲ್ಲ. ಇದು ಕೇವಲ ಕೈಚಳಕ ವಿದ್ಯೆ ಮಾತ್ರವೆಂದು, ತಾತ ಮುತ್ತಾತನ ಕಾಲದಿಂದ ನಮಗೆ ಈ ವಿದ್ಯೆ ಕರಗತವಾಗಿರುವುದರಿಂದ ನಮಗೆ ಮಾಡಲು ಸುಲಭವಾಗುತ್ತದೆಂದು ಹೇಳುತ್ತಾರೆ. ಆದರೆ ಇಂತಹ ಕೈಚಳಕ ವಿದ್ಯೆಯನ್ನೇ ಪವಾಡವೆಂದು ನಂಬಿಸಿ ಮೋಸ ಮಾಡುತ್ತಿರುವ ಬೂದಿ ಬಾಬಾಗಳ ಹತ್ತಿರ ದೊಡ್ಡ ದೊಡ್ಡ ರಾಜಕಾರಣಿಗಳು, ಅಧಿಕಾರಿಗಳು ಡೊಗ್ಗಿ ಸಲಾಮು ಹೊಡೆದು ಲಕ್ಷಾಂತರ ರೂಪಾಯಿ ಕೊಟ್ಟು ಬೂದಿ, ಚೈನು, ಊಂಗುರು ಪಡೆಯುತ್ತಾರೆ. ಅದರಿಂದ ಬೂದಿ ಬಾಬಾಗಳು ಕೋಟ್ಯಾಧೀಶರಾಗಿದ್ದಾರೆ. ಹೊಟ್ಟೆಪಾಡಿಗೆ ಸಿದ್ದರಾಟ ಮಾಡುತ್ತಿದ್ದೇವೆ ಎಂದು ಸತ್ಯ ಹೇಳಿದ ಸುಡಗಾಡು ಸಿದ್ದರು ಬೀದಿಯ ಮೇಲಿದ್ದಾರೆ. ಸಿದ್ದರಾಟ ಭೀಕ್ಷಾಟನೆಯ ಕಲೆಯಾಗಿ ಪರಿಗಣಿಸಲಾಗುತ್ತದೆ. ಇವರು ಜಾತ್ರೆಯಲ್ಲಿ, ಸಂತೆ ಮೈದಾನದಲ್ಲಿ, ಬೀದಿ ಬದಿಯಲ್ಲಿ ತಮ್ಮ ಕೈಚಳಕ ವಿದ್ಯೆ ಪ್ರದರ್ಶನ ಮಾಡಿ ಜನರಿಗೆ ಮನರಂಜಿಸಿ ಅಲ್ಲಿ ಯಾರೋ ಕೆಲವರು ಕೊಡುವ ಬಿಡಿಗಾಸಿನಿಂದ ಹೊಟ್ಟೆ ಹೊರೆದುಕೊಳ್ಳಬೇಕಾದ ಸ್ಥಿತಿಯಲ್ಲಿದ್ದಾರೆ. ಇಂತಹ ಪ್ರಸಿದ್ದ ಕಲೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದವರಲ್ಲಿ ಪ್ರಮುಖವಾಗಿ ಹೊಸಪೇಟೆಯ ಸುಡಗಾಡು ಸಿದ್ದರ ವಿರೂಪಾಕ್ಷಪ್ಪನವರು. ಈ ಹಿಂದೆ ಇವರ ಕಲೆಯನ್ನು ಗುರುತಿಸಿದ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಸುಡಗಾಡು ಸಿದ್ದ ಸಮುದಾಯದಲ್ಲಿ ಇಂತಹ ಬಹುಮುಖ ಪ್ರತಿಭಾವಂತ ಕಲಾವಿದರು ಎಲೆಮರೆಯ ಕಾಯಿಯಂತೆ ಹಲವು ಜನರಿದ್ದಾರೆ.

ವಿವಿಧ ವೇಷಭೂಷಣ

[ಬದಲಾಯಿಸಿ]

ದಕ್ಷಿಣ ಕರ್ನಾಟಕದ ಹಾಸನ, ಚಿಕ್ಕಮಗಳೂರು ಇತ್ಯಾದಿ ಜಿಲ್ಲೆಗಳಲ್ಲಿರುವ ಸುಡಗಾಡು ಸಿದ್ದರು ಕಾಯಕದಲ್ಲಿ ತೊಡಗಿಸಿಕೊಂಡಾಗ ಮೈಮೇಲೆ ಕಾವಿಯ ನಿಲುವಂಗಿ, ತಲೆಗೆ ಕಾವಿಯ ರೂಮಾಲು, ಕೊರಳಲ್ಲಿ ರುದ್ರಾಕ್ಷಿಯ ಸರಗಳು, ಲಿಂಗ, ಹಣೆಗೆ ವಿಭೂತಿ ಹಚ್ಚಿಕೊಂಡು ಧಾರ್ಮಿಕ ಭಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇವರನ್ನು ಕೆಲವು ಕಡೆ ಸಾರಪಂತು ಎಂದು ಸಹ ಕರೆಯಲಾಗುತ್ತದೆ.

ಶೈವಪರಂಪರೆಯ ಆರಾಧಕರು

[ಬದಲಾಯಿಸಿ]

ಸುಡುಗಾಡುಸಿದ್ದರು ಆಂಧ್ರ ಮೂಲದವರಿದ್ದು ಕ್ರಮೇಣವಾಗಿ ಕರ್ನಾಟಕ. ಮಹಾರಾಷ್ಟç ರಾಜ್ಯಗಳಿಗೆ ವಲಸೆ ಬಂದವರಾಗಿದ್ದಾರೆ. ಪಾçಯಶಃ ೧೨ನೇ ಶತಮನದಿಂದೀಚೆಗೆ ಸಂಚರಿಸುತ್ತಾ ಬಂದಿರಬಹುದೆAದು ಉಹಿಸಲಾಗಿದೆ. ಶೈವ ಪರಂಪರೆಯಲ್ಲಿ ಕಾಳಾಮುಖ, ಕಾಪಾಲಿಕ ಎನ್ನುವ ಶೈವಪಂಥಗಳು ಕಂಡುಬರುತ್ತವೆ. ಈ ಪರಂಪರೆಗೆ ಸೇರಿದ ಸಾಧಕರು ಸ್ಮಶಾನಗಳಲ್ಲಿದ್ದು ಸಾಧನೆ ಮಾಡುವ ವಿಚಾರಗಳು ತಿಳಿದುಬರುತ್ತವೆ. ವಾಮಪಂಥ, ನಾಗಪಂಥಗಳ ಸಾಧಕರೂ ಈ ರೀತಿಯ ಸಾಧನೆಗಳಲ್ಲಿ ತೊಡಗಿರುವುದರ ಬಗ್ಗೆ ತಿಳಿದುಬರುತ್ತದೆ(ರಹಮತ್ ತರೀಕೇರೆ:ನಾಥಪಂಥ:೨೦೦೬). ಸುಡುಗಾಡು ಸಿದ್ಧರು ಸಹ ಮೂಲ ಶೈವ ಪರಂಪರೆಗೆ ಸೇರಿದ ಸಮುದಾಯವಾಗಿರಬೇಕು. ಪುರಾಣಗಳ ಅಧ್ಯಯನದಿಂದ ಸಿದ್ದರು ಪರ್ವತವಾಸಿಗಳಾದ ಸಮುದಾಯದವರಾಗಿರಬೇಕೆಂದು ಊಹಿಸಲಾಗಿದೆ. ಇಲ್ಲೆಲ್ಲ “ಸಿದಿ”, ಒಂದು ಸಮುದಾಯವೆಂದು ತೋರುತ್ತದೆ. ಪ್ರಾಚೀನ ಕಾಲದಲ್ಲಿ ಹಲವಾರು ಜಾತಿ ಸಮುದಾಯಗಳನ್ನೊಳಗೊಂಡ ಒಂದು ಪಂಥವಾಗಿದ್ದೂ ಕಾಲಾಂತರದಲ್ಲಿ ಅದೇ ಒಂದು ಪ್ರತ್ಯೇಕವಾದ ಸಮುದಾಯವಾಗಿ ರೂಪುಗೊಂಡಿರಬೇಕು ಎನಿಸುತ್ತದೆ.

ಪರ್ಯಾಯ ಪದಗಳು

[ಬದಲಾಯಿಸಿ]

ಸುಡುಗಾಡು ಸಿದ್ಧರನ್ನು ಸುಡುಗಾಡು ಸಿದ್ಧರು, ಕಾಡುಸಿದ್ದರು, ಮಸಣದ ಒಡೆಯರು, ಸಿದ್ದಯ್ಯಗಳು, ನಿರಂಜಯ್ಯಗಳು, ಕಾಟಿ ಪಾಪುಲಿ (ಆಂಧ್ರ ತೆಲುಗು), ಸ್ಮಶಾನದ ಜೋಗಿಗಳು, ಕಾಡುಪಾಪರು, ತೆಲುಗು ಜಂಗಮರು, ಬಿsP್ಷÁಗಾಳ್ಳು, ಜಂಗಮದೇವರ, ಕಟೀರಿ ಪಾಲಾಯಚಕ (ಆಂಧ್ರ ತೆಲುಗು), ವಲ್ಲಕಾ ಟೋಳ (ತೆಲುಗು) ಎಂದು ಗುರುತಿಸಲಾಗುತ್ತದೆ.

ಜಾತಿ ಪಂಚಾಯಿತಿ

[ಬದಲಾಯಿಸಿ]

ಇವರಲ್ಲಿ ಜಾತಿಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಜಾತಿ ಪಂಚಾಯಿತಿಗೆ ಹರಪನಹಳ್ಳಿ ಕಟ್ಟೆಯೇ ಮೂಲಕಟ್ಟೆಯಾಗಿದೆ. ಇವರ ಮನೆಮಾತು ತೆಲಗು ಭಾಷೆಯಾಗಿದೆ.

ಜನಸಂಖ್ಯೆ

[ಬದಲಾಯಿಸಿ]

thumb|ಅಳಿವಿನಂಚಿನಲ್ಲಿ ಸುಡಗಾಡು ಸಿದ್ದರ ಕಲೆ ಸುಡಗಾಡು ಸಿದ್ದರ ಜನಸಂಖ್ಯೆಯು ೨೦೧೧ರ ಜನಗಣತಿಯ ಪ್ರಕಾರ ಒಟ್ಟು ೨೯,೪೫೭ ಇದ್ದು, ಇದರಲ್ಲಿ ಗಂಡು ೧೪೪೫೯ ಹಾಗೂ ಹೆಣ್ಣು ೧೪೫೦೫ರಷ್ಟಿದ್ದಾರೆ. ಸಾಕ್ಷರತೆಯು ೨೦೧೧ರ ಜನಗಣತಿಯ ಒಟ್ಟು ೧೨,೩೯೭ಜನ, ಪುರುಷರು ೭,೮೧೩ಜನ ಮತ್ತು ಮಹಿಳೆಯರು ೪,೫೮೪ಜನ ಸಾಕ್ಷರತೆ ಪಡೆದಿರುವುದು ದಾಖಲಾಗಿದೆ.

ಆರ್ಥಿಕ ಜೀವನ

[ಬದಲಾಯಿಸಿ]

ಸುಡಗಾಡು ಸಿದ್ಧರು ಊರ ಮಧ್ಯದ ಚಾವಡಿ ಧರ್ಮಶಾಲೆ, ಗುಡಿ ಗುಂಡಾರ ಇಲ್ಲವೆ ಊರ ಹೊರಗೆ ತಮ್ಮದೇ ಆದ ಡೇರೆಗಳಲ್ಲಿ ಇವರು ವಾಸಮಾಡುತ್ತಾರೆ. ಇವರು ನೆಲೆ ನಿಲ್ಲಲು ಸ್ಥಿರವಾದ ನೆಲ ಮತ್ತು ನೆಲೆ ಇಲ್ಲದೆ ಪರದಾಡುವ ಸ್ಥಿತಿಯಲ್ಲಿದ್ದಾರೆ. ಕ್ರಮೇಣವಾಗಿ ಇವರು ತಮ್ಮ ಕುಲಕಸುಬು ಸುಡುಗಾಡು ಸಿದ್ದ ಹಾಗೂ ನಿರಂಜಯ್ಯನ ಕಾಯಕವನ್ನು ಮಾಡುವುದು ಕಡಿಮೆಗೊಳಿಸಿದ್ದಾರೆ. ಕಾರಣ ಇವರ ಕೈಚಳಕ ವಿದ್ಯೆ ಪ್ರದರ್ಶನಕ್ಕೆ ಪ್ರೊತ್ಸಾಹ ಸಿಗುತ್ತಿಲ್ಲ ಮತ್ತು ಈ ವೃತ್ತಿ ಮಾಡುವವರನ್ನು ಜನರು ಕಿಳಾಗಿ ಕಾಣುತ್ತಿದ್ದಾರೆ. ಹೀಗಾಗಿ ಇಂದಿನ ಯುವÀ ಪೀಳಿಗೆಯು ಈ ವೃತ್ತಿ ಮಾಡಲು ಹಿಂಜರಿಯುತ್ತಿದ್ದಾರೆ. ಅಲೆಮಾರಿ ಜೀವನ ತ್ಯಜಿಸಿ ಒಂದುಕಡೆ ವಾಸವಾಗಿರಲು ಪ್ರಯತ್ನಿಸುತ್ತಿದ್ದಾರೆ. ಕುಟುಂಬದ ನಿರ್ವಹಣೆಗಾಗಿ ಕೃಷಿಕೂಲಿ, ಪ್ಲಾಸ್ಟಿಕ್ ಸಾಮಾನುಗಳನ್ನು ಮಾರುವುದು ಫೋಟೊಗಳಿಗೆ ಕಟ್ಟು ಹಾಕುವುದು, ಕ್ಯಾಲೆಂಡರ್ ಮಾರಾಟ ಮಾಡುವುದು. ಅಲ್ಲದೇ ಹೆಣ್ಣು ಮಕ್ಕಳು ಮನೆಯ ಕೆಲಸದ ಜೊತೆಗೆ ಚಾಪೆ ಹೆಣೆಯುವುದು ಕೌದಿ ಹೊಲಿಯುವುದು ಮಾಡುತ್ತಾರೆ. ಹೀಗೆ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಅಳಿವಿನಂಚಿನಲ್ಲಿರುವ ಇವರ ಪಾರಂಪರಿಕ ಕಲೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸುವುದರ ಜೊತೆಗೆ ಇವರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕೊಡುವುದರ ಕಡೆ ಸರ್ಕಾರ ಗಮನ ಹರಿಸಬೇಕಿದೆ.