ಸದಸ್ಯ:Dinesh Bangera Irvathur

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಿನೇಶ್ ಬಂಗೇರ ಇರ್ವತ್ತೂರು. ಮೂಲತಃ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಇರ್ವತ್ತೂರು ಗ್ರಾಮದ ದಿ. ಸಂಕಪ್ಪ ಮೂಲ್ಯ - ಲಿಂಗಮ್ಮ ಮೂಲ್ಯ ದಂಪತಿಗಳ ಪುತ್ರ. ಬಿಕಾಂ ಪದವೀಧರ. ಮಂಗಳೂರಿನಲ್ಲಿ ಪತ್ರಕರ್ತನಾಗಿ ಹತ್ತು ವರ್ಷ ದುಡಿದ ಅನುಭವ. ಪ್ರಸ್ತುತ ದೋಹಾ ಕತಾರ್ ನ ಖಾಸಗಿ ಸಂಸ್ಥೆಯ ಉದ್ಯೋಗಿ. ಕನ್ನಡ, ತುಳು ಭಾಷೆಯಲ್ಲಿ ಕಥೆ, ಲೇಖನ ಬರೆಯುವ ಹವ್ಯಾಸ. ಕುಲಾಲ್ ವರ್ಲ್ಡ್ ಡಾಟ್ ಕಾಮ್ ಎಂಬ ವೆಬ್ ಸೈಟ್ ಸಂಪಾದಕನಾಗಿ ಹಲವು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.