ಸದಸ್ಯ:Aishu manju
ಕುಟುಂಬ
[ಬದಲಾಯಿಸಿ]ನನ್ನ ಹೆಸರು ಐಶ್ವರ್ಯ.ಎಂ.ನಮ್ಮದು ಒಂದು ಚಿಕ್ಕ ಕುಟುಂಬ.ನನ್ನ ತಂದೆಯ ಹೆಸರು ಮಂಜುನಥ್.ಡಿ.ಎಲ್ ಹಾಗು ನನ್ನ ತಾಯಿಯ ಹೆಸರು ಶೈಲಜ.ಎಂ.ನನ್ನ ತಂದೆತಾಯಿಯವರಿಗೆ ಇಬ್ಬರು ಮಕ್ಕಳು.ನಾನು ಮತ್ತು ನನ್ನ ತಂಗಿ. ನನ್ನ ತಂಗಿಯ ಹೆಸರು ಅಕ್ಷಯ.ಎಂ.ನನ್ನ ತಂದೆಯವರು ಸರ್ಕಾರಿ ಉದ್ಯೋಗಿ ಮತ್ತು ನನ್ನ ತಾಯಿ ಮನೆಯ ಗೃಹಿಣಿ.ನನ್ನ ತಂದೆಯವರು ಕವಿಕ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.ನನ್ನ ತಂದೆ ಮತ್ತು ನನ್ನ ತಾಯಿಯೆಂದರೆ ತುಂಬ ಇಷ್ಟ ಮತ್ತು ಅವರೆಂದರೆ ಗೌರವ ಸಹ ಇದೆ.ನನಗೆ ನನ್ನ ತಂಗಿಯೆಂದರೆ ಬಹಳ ಇಷ್ಟ.ಇಂತಹ ತಂಗಿಯನ್ನು ಇರುವುದು ನನ್ನ ಅದ್ರುಷ್ಟ.ನಮ್ಮಿಬ್ಬರ ನಡುವೆ ಯಾವುದೇ ಮುಚ್ಚು ಮರೆ ಇಲ್ಲ.ನಾನು ಮತ್ತು ನನ್ನ ತಂಗಿ ಬಹಳ ಜಗಳವಾದಡುತ್ತೆವೆ.ಇದುವರೆಗೆ ನಾವು ಎಷ್ಟೇ ಜಗಳವಾಡಿದರೂ ನಾವು ಯಾವಾಗಲೂ ಒಟ್ಟಿಗೆ ಇರುತ್ತೇವೆ.ನಾನು ಅವಳಿಗೆ ಒಂದು ಒಳ್ಳೆಯ ಸ್ನೇಹಿತೆಯಾಗಿರಲು ಬಯಸುತ್ತೇನೆ.
ವಿದ್ಯಾಭ್ಯಾಸ
[ಬದಲಾಯಿಸಿ]ನಾನು ನನ್ನ ಶಾಲಾಭ್ಯಾಸವನ್ನು ಕ್ರೈಸ್ಟ್ ಶಾಲೆಯಲ್ಲಿ.ನನ್ನ ಹತ್ತನೇ ತರಗತಿಯಲ್ಲಿ ಶೇಕಡಾ ೭೯.೦೪ರಷ್ಟು ಸಿಕ್ಕಿತು.ಹತ್ತನೇ ತರಗತಿ ಮುಗಿದ ಮೇಲೆ ನನ್ನ ಮುಂದಿನ ವಿದ್ಯಾಭ್ಯಾಸವನ್ನು ಎನ್.ಎಂ.ಕೆ.ಆರ್.ವಿ ಪಿಯು ಕಾಲೇಜಿನಲ್ಲಿ ಮಾಡಿದೆ.ನಾನು ಶೇಕಡಾ ೭೮ ರಷ್ಟು ಫಲಿತಾಂಶದಿಂದ ನನ್ನ ಎರಡನೇ ಪಿಯುಸಿ ಪೂರ್ಣಗೊಳಿಸಿದೆ.ಅದಾದ ನಂತರ ನನ್ನ ಮುಂದಿನ ಅಧ್ಯಯನವನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ತೆಗೆದುಕೊಂಡು ಓದುತ್ತಿದ್ದೇನೆ.
ಪ್ರವಾಸ
[ಬದಲಾಯಿಸಿ]ಹತ್ತನೇ ತರಗತಿಯಲ್ಲಿ ನಮ್ಮ ಶಾಲೆಯಿಂದ ಪ್ರವಾಸಕ್ಕೆ ದೆಹಲಿ, ಆಗ್ರಾ, ಜೈಪುರಿಗೆ ಕರೆದುಕೊಂಡುಹೋಗಿದ್ದರು.ಹೋಗುವಾಗ ನಮ್ಮನ್ನು ರೈಲಿನಲ್ಲಿ ಕರೆದುಕೊಂಡು ಹೋದರು.ಅವರು ನಮಗೆ ಅನೇಕ ಸ್ಥಳಗಳನ್ನು ತೋರಿಸಿದರು.ದೆಹಲಿಯಲ್ಲಿ ಅವರು ಸಂಸತ್ ಭವನಕ್ಕೆ ಕರೆದುಕೊಂಡೋಗಿದ್ದರು.ಅಲ್ಲಿಂದ ಆಗ್ರಾದಲ್ಲಿ ತಾಜ್ ಮಹಲ್ಲಿಗೆ ಹೂದೆವು.ನನ್ನ ಸ್ನೇಹಿತರ ಜೊತೆ ಸಂತೋಷದಿಂದಿದ್ದೆ.ಬೆಂಗಳೂರಿಗೆ ಮರಳಿ ಬರುವಾಗ ನಾವು ವಿಮಾನದಲ್ಲಿ ಬಂದೆವು.ಅದೇ ಮೊದಲ ಭಾರಿ ವಿಮಾನದಲ್ಲಿ ಪ್ರಯಾಣಿಸಿದ್ದು.ನನಗೆ ತುಂಬ ಸಂತೋಷವಾಯಿತು,ಅಷ್ಟೇ ಭಯವೂ ಪಟ್ಟುಕೊಂಡೆನು.ಪ್ರವಾಸದಲ್ಲಿ ಪ್ರತಿದಿನವು ನನಗೆ ಹೊಸ ಹೊಸ ಅನುಭವಗಳಾಗುತ್ತಿದ್ದವು.ಆ ದಿನಗಳನ್ನು ನಾನು ಎಂದಿಗೂ ಮರೆಯಲಾರೆ.
ಜೀವನ
[ಬದಲಾಯಿಸಿ]ಎಲ್ಲೆ ಹೋದರು ನಾನು ನಾನಾಗಿರಲು ಬಯಸುತ್ತೇನೆ.ನನನೆ ಅವಿಭಕ್ತ ಕುಟುಂಬ ಇಷ್ಟ.ನಾನು ಯಾವಾಗಲು ಸಂತೋಷವಾಗಿರಲು ಬಯಸುತ್ತೆನೆ.ನಾನು ದುಃಖವಾಗಿರುವಾಗಲು ಸಂತೋಷದಿಂದ ಇರಲು ಬಯಸುತ್ತೇನೆ.ಆದರೆ ಅದು ನನ್ನಿಂದ ಆಗುತ್ತಿಲ್ಲ.ನಾನು ತುಂಬ ಅಳುತ್ತೇನೆ.ಯಾರಾದರು ನನ್ನ ಬಗ್ಗೆ ಕೆಟ್ಟದಾಗಿ ಹೇಳಿದರೆ ನನಗೆ ಬೆಸರವಾಗುತ್ತದೆ.ಆ ವಿಷಯವನ್ನಿಟ್ಟುಕೊಂಡು ಬಹಳ ದಿನಗಳು ಯೋಚಿಸುತ್ತೇನೆ.ಅದನ್ನು ಮರೆಯಬೇಕೆಂದು ಎಷ್ಟೇ ಪ್ರಯತ್ನ ಮಾಡಿದರೂ ಅದನ್ನು ಮರೆಯಲು ನನ್ನಿಂದ ಆಗುವುದಿಲ್ಲ.ನನ್ನ ಪೋಷಕರೇ ನನ್ನ ಮಾರ್ಗದರ್ಶಿಗಳು.ಅವರ ಮಾರ್ಗದರ್ಶಣದಿಂದ ನಾನು ಒಳ್ಳೆಯ ದಾರಿಯಲ್ಲಿ ನಡೆಯುತ್ತಿದ್ದೆನೆ.ನನ್ನ ಹವ್ಯಾಸಗಳು ಸಂಗೀತ ಕೇಳುವ,ನೃತ್ಯ ಮಾಡುವುದು ಮತ್ತು ಚಿತ್ರ ಬಿಡಿಸುವುದು.ನನ್ನ ನೆಚ್ಚಿನ ವಿಷಯ ಗಣಿತ.ನಾನು ಬಿಡುವು ಸಿಕ್ಕಾಗೆಲ್ಲ ಚಿತ್ರಗಳನ್ನು ಬಿಡಿಸುತ್ತೇನೆ.ನಾನು ಅತೀ ತಾಳ್ಮೆಯಿಂದ ನನ್ನ ಜೀವನವನ್ನು ಸಾಗಿಸಲು ಬಯಸುತ್ತೇನೆ.ಬಡವರಿಗೆ ನನ್ನ ಕೈಲಾದಷ್ಟು ಸಹಯ ಮಾಡುತ್ತೇನೆ.ನನಗೆ ಊರಿಗೆ ಹೋಗಲು ಬಹಳ ಇಷ್ಟ.ನಾನು ಚಿಕ್ಕಮಕ್ಕಳ ಜೊತೆ ಚಿಕ್ಕಮಗುವಾಗಿ ಆಟವಾಡುತ್ತೇನೆ.ನನಗೆ ರಹಸ್ಯಗಳನ್ನು ಮುಚ್ಚಿಡಲಾಗುವುದಿಲ್ಲ.ಎಲ್ಲವನ್ನು ನನ್ನ ಸ್ನೇಹಿತರ ಜೊತೆ ಹಂಚಿಕೊಳ್ಳುತ್ತೇನೆ.ಎಲ್ಲಾ ವಿಷಯಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳುವುದರಿಂದ ಮನಸ್ಸಿಗೆ ಏನೋ ಒಂದು ತರ ತೃಪ್ತಿ.ನನ್ನ ಮನಸ್ಸಿಗೆ ಏನು ಹೊಳಿಯುವುದೋ ಅದನ್ನು ಮಾಡುತ್ತೇನೆ.ನನಗೆ ಒಳ್ಳೆಯ ಸ್ನೇಹಿತರು ಸಿಕ್ಕಿದ್ದಾರೆ.ನನ್ನ ಬಾಲ್ಯದ ಗೆಳತಿ ಗ್ಲೋರಿ.ಸಿ.ಒಬ್ಬರಿಗೆ ಒಳ್ಳೆಯ ಗೆಳೆಯರು ಸಿಗುವುದು ತುಂಬ ಕಷ್ಟ ಹಾಗು ಒಳ್ಳೆಯ ಗೆಳೆಯರು ಸಿಗಬೇಕೆಂದರೆ ಅದ್ರುಷ್ಟವಿರಬೇಕು.ಅಂತಹ ಅದ್ರುಷ್ಟವು ನನಗೆ ಸಿಕ್ಕಿದೆ.ಒಂದು ಒಳ್ಳೆಯ ಗೆಳತಿ ನಮ್ಮ ಕಷ್ಟ,ಸುಖ,ದುಃಖ ಎಲ್ಲದರಲ್ಲು ನಮ್ಮ ಜೊತೆ ಇರುತ್ತಾರೆ.ನಮಗೆ ಧೈರ್ಯ ನೀಡುತ್ತಾರೆ.ಅಂತಹ ಸ್ನೇಹಿತೆ ಗ್ಲೋರಿ.ಎಲ್ಲ ಕಷ್ಟ ಮತ್ತು ಸುಖದ ಸಮಯದಲ್ಲಿ ನನ್ನ ಒಡತಿಯಾಗೆರುವಳು.ಇದೆಲ್ಲಾದಕ್ಕು ಮೇಲೆ ನನ್ನ ತಂದೆ ತಾಯಿ ಹಾಗು ನನ್ನ ತಂಗಿ.ಎಲ್ಲಾರು ನನ್ನ ಎಲ್ಲಾ ಪ್ರಗತಿಗೆ ಕಾರಣರಾಗಿದ್ದಾರೆ.
This user is a member of WikiProject Education in India |