ಚರ್ಚೆಪುಟ:ಕೋಣರಾಯ ಪಾಪ....ಪಾಪ.....ಪಾಪ......
ಕೋಣರಾಯ ಪಾಪ....ಪಾಪ.....ಪಾಪ......
ಗೆಳೆಯರೆ ನಾನು ನಿಮಗೆ ತಿಳಿಸಲು ಹೋಗುತ್ತಿರುವುದು ನ್ನನ ಜೀವನದ ಕಹಿಯಾದ ಘಟನೆಯಾಗೆದೆ. ನಮ್ಮ ಅತ್ತೆ ಊರಿನಲ್ಲಿ ಒಂಬತ್ತು ವರ್ಷಕ್ಕೆ ಒಮ್ಮೆ ನಡೆಯುವ ಮಾರಮ್ಮನ ಉತ್ಸವಕ್ಕೆ ನೀವು ಬರಬೇಕೆಂದು ತಿಂಗಳುಗಳ ಹಿಂದೆಯೇ ಅರ್ಜಿ ಹಾಕಿದರು. ಆ ಸಮಯಕ್ಕೆ ರಜಾದಿನವಿದುದ್ದರಿಂದ ಹಬ್ಬದ ಸಂಭ್ರಮಕ್ಕೆ ನಾವು ಸೇರುವಂತೆ ಯೋಜನೆಯನ್ನು ಹಾಕಿದ್ದೆವು. ಮೊದಲ ಎರಡು ದಿನವನ್ನು ನಮ್ಮ ಊರಿನಲ್ಲಿ ಕಳೆದೆವು. ಮೂರನೇ ದಿನದಂದು ಬೆಳಗ್ಗೆಯೇ ನಾವು "ಹೀರೆಕೆರೆನಳ್ಳಿ" ಎಂಬ ನಮ್ಮ ಅತ್ತೆಯ ಊರಿಗೆ ಹೋರೆಟೆವು. ಮಧ್ಯನ ಸುಮಾರು ಒಂದು ಗಂಟೆ ಆ ಊರನ್ನು ತಲ್ಲುಪಿದೆವು. ಆ ಊರಿನಲ್ಲಿ ಹಬ್ಬದ ಸಂಭ್ರಮ ಬಗ್ಗೆ ಎಳ್ಳಷ್ಟು ತಿಳಿದಿರಲ್ಲಿಲ, ಮನದಲ್ಲಿ ಹೀಗಿರುತ್ತದೆ ಇಲ್ಲ ಇಲ್ಲ... ಹಾಗಿರುತ್ತದೆ ಎಂಬ ಲೆಕ್ಕಾಚಾರದಲ್ಲಿ ಬರೀ ಕಲ್ಪನೆಯೊಂದಿಗೆ ಆಗಸದೆತ್ತರದ ಕನಸ್ಸುಗಳನ್ನು ಕಾಣುತ್ತೆದೆ. ಮಧ್ಯನ ಮೂರು ಗಂಟೆ ಸುಮಾರಿಗೆ ನೂರಾರು ಜನರ ಗುಂಪೊಂದು ತಮ್ಮ ಬೆನಿನ ಮೇಲೆ ರಾಗಿ ಮೋಟೆಯನ್ನು ಹೊತ್ತುಕೊಂಡು ಡೋಲುಗಳ ಸದ್ದಿಗೆ ಯಜ್ಜಿಯನ್ನು ಹಾಕುತ್ತಾ ದೇವಾಲಯದ ಹೊರಟ್ರು. ಸ್ವಲ್ಪ ಹೊತ್ತಿನ ನಂತರ ಆ ಗುಂಪಿನ ಜನ ಕೈಗಳಲ್ಲಿ ಉದ್ದನೆಯ ಕೊಲು ಅದಕ್ಕೆ ಟೋಪಿಯಂತೆ ಒಂದು ಬುಟ್ಟಿಯನ್ನು ಸಿಗ್ಗಿಸಿಕೊಂಡು ಟಮಟೆಯ ಸದ್ದಿಗೆ ಕುಣಿಯುತ್ತಾ ದೇವಾಲಯದ ಕಡೆ ನಡೆದರು. ಆ ಕೊಲು ಮತ್ತು ಬುಟ್ಟಿಯ ಅವಶ್ಯಕತೆ ನಾನು ನಮ್ಮ ಅಣ್ಣನನ್ನು ಕೇಳಿದಾಗ, ಆತ ಊರಿನ ಶುಭ್ರತೆಗೆ ಇವು ಅವಶ್ಯಕವೆಂದು ತಿಲಿಸಿದ ಅಸ್ಪಷ್ಟ ನೆನಪು. ರಾತ್ರಿ ನಮ್ಮಣ್ಣನ ಮನೆಯ ಹತ್ತಿರದಲ್ಲೇ ಮರಕ್ಕೆ ಕಟ್ಟಿ ಹಾಕಿದ್ದ ಕೋಣವನ್ನು ತೊರಿಸಿದರು. ನನ್ನ ಹಿಂದೆಯೇ ನಿಂತಿದ್ದ ನನ್ನ ಮಾವ ಆ ಜೀವಿಯನ್ನು ಕಂಡು ಒಲ್ಲದ ಮನಸ್ಸಿನಿಂದ, "ಪಾಪ.....ಪಾಪ.....ಪಾಪ.. ಎರಡು ವಾರದಿಂದ್ದ ಹೊಟ್ಟೆಗೆ ಹಿಟ್ಟಿಲ್ಲದೆ ಕುಂತೈತೆ ಪಾಪ"ಎಂದು ಹೇಳಿದರು. ನಾನು ಆ ಅಸ್ಪಷ್ಟ ಮಾತನ್ನು ತಿಳಿಯದೆ. ನಾನು ಈ ವಿಚಾರವನ್ನು ಕುರಿತು ನನ್ನ ಅಣ್ಣನನ್ನು ಕೇಳಿದಾಗ ಆತ ಕೋಣವನ್ನು ಓ ಊರಿನೆಲ್ಲದೆ ಮಾಡುತ್ತಾರೆ ಎನ್ನುತ್ತಿರುವಾಗ ಅವರನ್ನು ಕೋಗಿ ಯಾರೋ ಕರೆದರು. ಸ್ವಲ್ಪ ಹೊತ್ತಿನ ನಂತರ ಭೋಜನ ಮಾಡಿದಿವು, ಅಷ್ಟರಲ್ಲಿ ಆ ವಿಷಯದ ಮೇಲಿದ್ದ ಕುತೊಹಲ ಕೊಡ ಕಡಿಮೆಯಾಗಿತ್ತು. ಇದೇ ದಾರಿಯಲ್ಲಿ ನಾಳೆ ಕೋಣದ ಮೆರವಣಿಗೆ ಹೋಗುತ್ತದೆ ನೀನು ಅದನ್ನು ನೋಡಲು ಬೇಗನೆ ಎಳಬೇಕು ಎಂದು ನನ್ನ ತಂದೆ ತಾಯಿ ತಿಳಿಸಿದರು. ನಾನು ರತ್ರಿ ಕಾರಿನಲ್ಲಿ ಮಲಗ್ಗಿದೆ. ರಾತ್ರಿಯಲ್ಲಾ ಟಮಟೆಯ ಸದ್ದಿಗೆ ನಿದಿಯೇ ಬರಲ್ಲಿಲ. ನಾನು ಸ್ವಲ್ಪವಾದರು ನಿದ್ದಿ ಮಾಡಿದೆ ಎಂದು ಅರಿತ್ತಿದ್ದು ನನ್ನ ತಂದೆ ಮುಂಜಾನೆ ನಿದ್ದಿ ಬಾರದೆ ನನನ್ನು ಎಬ್ಬಿಸಿದಾಗಲೆ. ಸುಮಾರು ಒಂದು ಗಂಟೆ ಬೀದಿಯಲ್ಲಿ ಹಾಕ್ಕಿದ ಹಾಡನ್ನು ಕೇಳುತ್ತಾ ಅದಕ್ಕೆ ನರ್ತಿಸುತ್ತಾ ಕಾಲವನ್ನು ಕಳೆದೆವು. ನಂತರ ಆ ದೇವಾಲಯಕ್ಕೆ ಹೋರಟೆವು.
ದೇವರ ದರ್ಶನಮಾಡಿ ಹೊರಬಂದೆವು. ನನ್ನ ಕಣ್ಣು ಒಂದು ಅತ್ಯಂತ ದೊಡ್ಡ ಪಾತ್ರಯಮೇಲೆ ಗಮನವರಿಸಿತು. ಆ ಪಾತ್ರೆಯಲ್ಲಿ ಜನರು ರಾಗಿ ಹಿಟ್ಟನ್ನು ಕುದಿಯುವ ನೀರಿಗೆ ಹಾಕಿರುತ್ತಾರೆ ಎಂದು ನನ್ನ ಅಣ್ಣ ಹೇಳಿದರು. ಆ ಕೋಣವನ್ನು ಸಾಯಿಸಿ ಅದರ ತಲೆ ಭಾಗ ಮಾತ್ರ ದೇವಿಯ ಸನಿಧಿಯ ಮುಂದೆ ಹೀಡಲಾಗುತ್ತದೆ ಮತ್ತೆ ಉಳಿದ ಭಾಗವನ್ನು
ಈ ಪಾತ್ರೆಗೆ ಹಾಕುತ್ತಾರೆ, ಜನರು ಅವರವರ ಬುಟ್ಟಿಗಿ ಆ ರಸವನ್ನು ತುಂಬಿಸಿಕೊಂಡು ಊರಿನೆಲ್ಲಡೆ ಎರಚಿ ಶುಭ್ರಮಾಡುತ್ತಾರೆ. ಮನೆಗೆ ಬೇಗ ಹಿಂತಿರುಗಿದೆವು.
ಕಟ್ಟಿಯ ಮೇಲೆ ನಂತ್ತಿದ ನನಗೆ ಎಲ್ಲಾ ದೃಶಗಳು ನನ್ನ ಕಣಿಗಿ ಸರಿಯಾಗಿ ಕಂಡಿದವು. ಸುಮಾರು ಕಾಲು ಗಂಟೆ ನಿಂತ್ತಿದ ನಮಗೆ ಸಾವಿನ ಹಂಚಿನಲ್ಲಿದ ಆ ಕೋಣರಾಯನು ದುಃಖದ ಮನಸ್ಸಿನಿಂದ ದರ್ಶನ ಕೊಟ್ಟನು. ಆ ಕೋಣರಾಯನನ್ನು ಸುಮಾರು ಐವತ್ತು ಜನರಿಂದ ಕೂಡಿದ್ದ ಗುಂಪು, ಕೊಲ್ಲುಗಳಿಂದ ಜನ ನರಕದಲ್ಲಿ ನೀಡುವ ಶಿಕ್ಷಿಯನ್ನು ಭೂಮಿಯಲ್ಲೇ ಆ ಪಾಪ ಜೀವಿಯು ಕಾಣುತ್ತಿತ್ತು. ಆ ಕೋಣರಾಯ ಪ್ರತಿ ಕಾಲಿಗೆ ಎರಡು ಹಗ್ಗ ವೆಂಬಂತೆ ಒಟ್ಟು ಎಂಟು ಹಗ್ಗಗಳಿಂದ ನಾಲ್ಕು ಮೋಲೆಗಳಿಂದ ಆ ರಕ್ಷಸರು ಎಳೆಯುತ್ತಿದ್ದರು. ಈ ಎಲ್ಲಾ ದೃಶಗಳನ್ನು ನೋಡುತ್ತಿದ ನನಗೆ ಜನರ ಮೇಲೆ ತುಂಬಾ ಆಕ್ರೋಶ ಬಂದಿತ್ತು ಅವರಲ್ಲಿ ನಾನು ಒಬ್ಬನಿಂದು ಸುಮ್ಮನಾದೆನು. ಪಾಪ ಆ ಕೋಣರಾಯನ ಸಾವು ನನಗೆ ಬೇಡವೆಂದರೂ ರಕ್ಷಸ ಸ್ವಭಾವದ ಮಾನವ ತನ್ನ ಕರುಣೆ, ಅನುಕಂಪವನ್ನು ಪುಸ್ತಕದಲ್ಲಿ ಬಚ್ಚಿಟ್ಟು ತನ್ನ ಅಟ್ಟಹಾಸವನ್ನು ಆ ಬಡ ಕೋಣನ ಮೇಲೆ ತೋರಿಸಿದನ್ನು. ಆ ಕೋಣರಾಯನನ್ನು ಎರಡು ವಾರ ಊಟವಿಲ್ಲದೆ ನರಳಿಸಿ ಸಾಯಿಸುವುದು ವಿಪರಿಯಸವೆ ಸರಿ. ಇದು ಪೌರುಶವಿಲ್ಲದವರು ಮಾಡುವ ಕೆಲಸವಾಗಿದೆ. ಈ ಎಲ್ಲಾ ದೃಶ್ಯಗಳು ನನ್ನ ಮನದಲ್ಲಿ ಅಚ್ಚಿಯಂತೆ ಉಳಿದ್ದಿವೆ. ನಂತರ ನಾನು ಮಧ್ಯಕ್ಕೆ ನಿಲ್ಲಿಸಿದ್ದ ನಿದ್ದೆಯ ನೆನಪಾಗಿ ನಿದ್ದಿಗೆ ಜಾರಿದೆ, ಆ ಗುಂಪು ಹಿಂಸಿಸುತ್ತಾ ಬಡ ಜೀವಿಯನ್ನು ದೇವತೆಯ ಮುಂದೆಯೇ ಪಾಪದ ಕಾರ್ಯವನ್ನು ಮಾಡಿದರೆಂದು ಯಾರಿದಲೋ ಕಳಿದೆ. ಬೆಳಗ್ಗೆ ಜನರು ಬುಟ್ಟಿಯಲ್ಲಿ ರಾಗಿ ಮತ್ತು ಕೋಣದ ಮಾಂಸವನ್ನು ಊರಿನೆಲ್ಲೆಡೆ ಎರಚಿ ಶುಭ್ರಮಾಡಿ ಕಾಲಿಯಾದ ಬುಟ್ಟಿಯಿಂದ ಟಮಟೆಯ ಸದ್ದಿಗೆ ಕುಣಿಯುತ್ತಾ ದೇವಾಲಯದ ಕಡೆ ನಡೆದರು. ಆ ದೇವಸ್ಥಾನಕ್ಕೆ ನನಗೆ ಹೋಗಲು ಇಷ್ಟವಿರಲ್ಲಿಲ
ಆದರೂ ಹೋಗುವ ಸಂಧರ್ಭ ಬಂದಿತ್ತು. ದೇವರ ಮುಂದೆ ಆ ಕೋಣೆಶ್ವರನ ತಲೆಯ ಭಾಗವನ್ನು ಪ್ರದರ್ಶನಕ್ಕೆ ಇಟ್ಟಿದರು. ನಂತರ ಮಧ್ಯನ ಆ ಊರಿನಲ್ಲಿದ್ದ ಪ್ರತಿ ಒಂದೊಂದು ಮನೆಯಿಂದ ಒಂದು ಕೋಣ ಮತ್ತು ಕುರಿಗಳು ಆ ಸಾವಿನ ಮನೆಗೆ ಪ್ರಾಯಣವನ್ನು ಮಾಡಿದೆವು.
ಈ ಎಲ್ಲಾ ದೃಶ್ಯವನ್ನು ನನ್ನ ಮನ ತಿಂಬಾನೊಂದಿದೆ. ಮನುಷ್ಯರಿಗೆ ಭೋಮಿ ಮೇಲೆ ಹೇಗೆ ಬದುಕಲು ಹಕ್ಕು ವಿರುಹುದೋ, ಅಷ್ಟೇ ಹಕ್ಕು ಎಲ್ಲಾ ಪ್ರಾಣಿಸಂಕುಲಕ್ಕೂ ಇದೆ. ನಮ್ಮ ಸಿಲಿಕಾನ್ ನಗರ ಬೆಂಗಳೊರಿನಲ್ಲಿ. ಈ ಹಿಂಸಿಯನ್ನು ಎರಡು ಗೊಡೆಗಳ ನಡುವೆ ನಡೆಯುವುದರಿಂದ ನಮ್ಮ ಮುಗ್ದ ಜನರು ಹಿಂಸೆಯನ್ನು ನೋಡಿಲ್ಲ, ನೋಡಿದರೆ ಮಾಂಸರಾದ ಊಟವನ್ನು ಶೈಲಿಯನ್ನು ಕಂಡಿತವಾಗಿ ಸ್ವಲ್ಪ ಜನರಾದರೂ ತ್ಯಜಿಸುತ್ತಾರೆ. ಈ ನನ್ನ ಅನುಭವವನ್ನು ಓದಿ ಸಸ್ಯಹಾರಿಗಳಾಗಿ ಬಾಳಿ ಗೋವು, ಕುರಿಗಳು ಹತ್ಯ ಕಡಿಮೆ ಯಾಗುತ್ತದೆ ಎಂದು ಭಾವಿಸುತ್ತೇನೆ. ತಿನ್ನುವುದನ್ನು ಬಿಡದಿದ್ದರೂ ಯೋಜನೆಯಿಲ್ಲ, ತಿಂಗಳಲ್ಲಿ ಒಂದು ಭಾರಿ ಮಾತ್ರಾ ಮಾಂಸ ಸೇವೆವನ್ನು ಮಾಡಿ. ಮಾಡಬೇಕೆಂಬ ಛಲವಿದ್ದರೆ, ಆ ಛಲವೇ ನಿಮ್ಮಿಂದ ಅದ್ಭುತ ಕೆಲಸವನ್ನು ಮಾಡಿಸುತ್ತದೆ.
ಈ ಲೇಖನವನ್ನು ಬರೆದ ಕೆಲವು ದಿನಗಳ ನಂತರ ನನ್ನ ಮನಸ್ಸಿಗೆ ತೋರಿದು, "ಇಲ್ಲಾ ಮನುಷ್ಯು ಪೂರ್ತಿ ಸಸ್ಯಹಾರಿಯಾಗಿ ಬಾಳಿದರೆ ಜಗತ್ತು ತಲೆಕಳಗಾಗುತ್ತದೆ ". ಹೌದು ಲೋಕದಲ್ಲಿ ತರಗತವಾಗಿ ಬಂದ ಈ ಪದ್ಧತಿಯನ್ನು ಬೆಡಲ್ಲು ಸಾಧ್ಯವಿಲ್ಲ. ಬಿಟರೇ ಕುರಿ, ಕೋಳಿ, ಮತ್ತಿತರ ವನ್ಯ ಪ್ರಾಣಿಗಳದ್ದೇ ರಾಜ್ಯವಾಗುತ್ತದೆ. ನನ್ನ ಒಂದು ಮನವಿ ಗೋವುಗಳು, ಹಸುಗಳು, ಕೋಣಗಳನ್ನು ಈ ರೀತಿಯಾದ ಅಮಾಯರ ರಕ್ತಪಾತ ಬೇಡ.
Start a discussion about ಕೋಣರಾಯ ಪಾಪ....ಪಾಪ.....ಪಾಪ......
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಕೋಣರಾಯ ಪಾಪ....ಪಾಪ.....ಪಾಪ.......