ವಿಷಯಕ್ಕೆ ಹೋಗು

ಸದಸ್ಯ:1810250 Amith

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮಿತ್
ಅಮಿತ್
Born
ಅಮಿತ್

೦೮-೦೩-೨೦೦೦
ಬ್ಯಾಂಗಲೋರ್,ಇಂಡಿಯಾ .




ಬಾಲ್ಯದ ಜೀವನ ನನ್ನ ಹೆಸರು ಅಮಿತ್. ನಾನು 18 ವರ್ಷ ವಯಸ್ಸಿನ ಹುಡುಗನಾಗಿದ್ದು ದೊಡ್ಡ ಕನಸುಗಳೊಂದಿಗೆ ನನ್ನ ಗುರಿಗಳನ್ನು ಸಾಧಿಸಲು ಶ್ರಮಿಸುತ್ತಿದ್ದೇನೆ. ನಮ್ಮ ಕುಟುಂಬವು ನಾಲ್ಕು ಸದಸ್ಯರನ್ನು ಒಳಗೊಂಡಿದೆ.ನನ್ನ ತಂದೆ ಉದ್ಯಮಿ ಆಗಿದ್ದಾರೆ ಹಾಗು ನನ್ನ ತಾಯಿ ಒಬ್ಬ ಗೃಹಿಣಿ. ಅಮೆರಿಕದಲ್ಲಿ ಓದುವ ನನ್ನ ಅಕ್ಕ ನನಗೆ ಇದ್ದಾಳೆ. ಮನೆಯಲ್ಲಿ ನಮ್ಮ ಎಲ್ಲಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಸುಂದರವಾದ  ವಾತಾವರಣವಿದೆ.ನಾನು ಹುಟ್ಟಿದ್ದು ಮಲೆನಾಡಿನ ಪರಿಸರದಲ್ಲಿರುವ ಹಾಸನದಲ್ಲಿ. ನನ್ನ ಬಾಲ್ಯ ಮತ್ತು ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ನಡೆಯುತ್ತಿದೆ. ನಾನು ನರ್ಸರಿಯನ್ನು ಗ್ರೀನ್ ಉಡ್ ಹೈ ನಲ್ಲಿ ಹಾಗೂ ಒಂದರಿಂದ ಹತ್ತನೇ ತರಗತಿಯವರೆಗೆ ಫ್ರೀಡಂ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕಲಿತಿದ್ದೇನೆ. ನನ್ನ ಶಾಲೆಯಲ್ಲಿ ನಾನು ಫುಟ್ಬಾಲ್ ತಂಡದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೆ. ನನ್ನ ಶಾಲೆಯ ಸ್ನೇಹಿತರ ಜೊತೆಯಲ್ಲಿ ಈಗಲೂ ಸಿಹಿಯಾದ ಗೆಳೆತನ ಇದೆ. ರಜ ಸಮಯದಲ್ಲಿ ನಾವೆಲ್ಲರೂ ಸೈಕ್ಲೀಂಗ್ ಹಾಗೂ ಸಣ್ಣ ಸಣ್ಣ ಚಾರಣಗಳನ್ನೂ ಕೈಗೊಳ್ಳುತ್ತೇವೆ.ಈ ಕಾರಣದಿಂದಾಗಿ ನನ್ನ ಸ್ನೇಹಿತರು ಮತ್ತು ನಾನು ದೈಹಿಕ ವ್ಯಾಯಾಮವನ್ನು ಪಡೆಯುತ್ತೇವೆ. ನಾನು ನನ್ನ ಮೊದಲ ಮತ್ತು ಎರಡನೆಯ  ವರ್ಷದ ಪಿ.ಯು. ಟ್ರಾನ್‌ಸೆಂಡ್ ಪಿ ಯು ಕಾಲೇಜ್‌ನಲ್ಲಿ ಮುಗಿಸಿದೆ.ಅಲ್ಲಿ ಒಳ್ಳೆಯ ಸ್ನೇಹಿತರ ಜೊತೆಗೆ ನಮಗೆ  ತಿಳುವಳಿಕೆ ನೀಡುವ ಗುರುಗಳನ್ನು ಮರೆಯಲು ಸಾಧ್ಯವಿಲ್ಲ.

ಹವ್ಯಾಸಗಳು ಚಲನಚಿತ್ರಗಳನ್ನು ನೋಡುವಲ್ಲಿ ನಾನು ಸಾಕಷ್ಟು ಆಸಕ್ತಿಯನ್ನು ತೋರಿಸುತ್ತೇನೆ. ನಾನು ಹಳೆಯ ಕನ್ನಡ ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟ. ಕನ್ನಡ ಚಿತ್ರಗಳಲ್ಲಿ ನನ್ನ ನೆಚ್ಚಿನ ನಟ ಡಾ.ರಾಜಕುಮಾರ್. ಅವರ ಚಲನಚಿತ್ರಗಳು ಸಮಾಜಕ್ಕೆ ನೈತಿಕ ಸಂದೇಶವನ್ನು ನೀಡುತ್ತದೆ. ನಾನು ಸಾಕಷ್ಟು ಇಂಗ್ಲೀಷ್ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುತ್ತೇನೆ. ಅವುಗಳಲ್ಲಿ ನನ್ನ ಮೆಚ್ಚಿನ ನಟರು ಜಾನಿ ಡೆಪ್, ರಯಾನ್ ರೆನಾಲ್ಡ್ಸ್ ಮತ್ತು ವಿಲ್ ಸ್ಮಿತ್. ಇದರಲ್ಲಿರುವ ಸ್ರಜನಶೀಲತೆ ಮತ್ತು ತಂತ್ರಜ್ಞಾನ ಬಹಳ ಆಶ್ಚರ್ಯವಾಗುತ್ತದೆ. ನನಗೆ ದೊಡ್ಡ ಸ್ನೇಹಿತರ ಬಳಗವಿದೆ. ನಾನು ಯೂತ್ ಫಾರ್ ಸೇವ ಎಂಬ ಯನ್.ಜಿ.ಒದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ. ಇಲ್ಲಿ ಸಮಾಜಕ್ಕೆ ನಮ್ಮಿಂದಾಗುವ ಸಹಾಯ ಮಾಡುವ ಗುಂಪು ಇದೆ. ನನ್ನ ರಜಾ ದಿನಗಳನ್ನು ಹಾಗೂ ವಿರಾಮದ ವೇಳೆಯನ್ನು ಸದುಪಯೋಗವಾದಂತಾಗುತ್ತದೆ. ಅದು ನನಗೆ ತೃಪ್ತಿ ನೀಡುತ್ತದೆ.ನಾನು ಹೊಸ ಜನರನ್ನು ಭೇಟಿಯಾಗಲು ಮತ್ತು ಅಭಿಪ್ರಾಯಗಳನ್ನು ಮತ್ತು ಆಲೋಚನೆಗಳನ್ನು ವಿನಿಮಯ ಮಾಡಲು ಇಷ್ಟಪಡುತ್ತೇನೆ.

ಸಾಧನೆಗಳು ರೋಯಿಂಗ್ ಮತ್ತು ಈಜು ನನ್ನ ಹವ್ಯಾಸಗಳಾಗಿವೆ. ನಾನು ರಾಷ್ಟ್ರೀಯ ಮಟ್ಟದಲ್ಲಿ ರೊಯಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ಬೆಂಗಳೂರು, ಚೆನ್ನೈ , ಕೊಲ್ಲಂ ಮುಂತಾದ ಸ್ಥಳದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ಈ ಆಟಗಳಿಂದ ಸ್ಪರ್ಧಾತ್ಮಕತೆಯನ್ನು ನಾವು ಕಲಿಯಬಹುದು. ಹೊಸ ಜಾಗ ಹೊಸ ಪರಿಸರ ಇವುಗಳಿಂದ ಸಾಕಷ್ಟು ವಿಷಯಗಳನ್ನು ಕಲಿಯಬಹುದು.ನನ್ನ ಶಾಲೆ ಮತ್ತು ಕಾಲೇಜುಗಳಲ್ಲಿ ನಡೆಸಿದ ಎಲ್ಲಾ ಉತ್ಸವಗಳಲ್ಲಿ ನಾನು ಸಕ್ರಿಯವಾಗಿ ಪಾಲ್ಗೊಂಡಿದ್ದೇನೆ. ಇದರಿಂದ ಜನರಲ್ಲಿ ಬೇರೆಯುವ ಮತ್ತು ನಾಯಕತ್ವದ ಗುಣಗಳನ್ನು ಕಲಿತಿದ್ದೇನೆ. ನಾನು 5 ನೇ ತರಗತಿಯಲ್ಲಿದ್ದಾಗ ನನಗೆ ಸ್ಮರಣೀಯ ಅನುಭವವೇನಂದರೆ ಜಿಗಣಿ ಸ್ವಾಮಿ ವಿವೇಕಾನಂದ ಬೇಸಿಗೆ ಶಿಬಿರ. ನಾನು ನನ್ನ ತಾಯಿ ತಂದೆಯರನ್ನು ಬಿಟ್ಟು 10 ದಿನಗಳ ಕಾಲ ಮೊದಲನೇ ಬಾರಿ ಈ ಶಿಬಿರದಲ್ಲಿ ಭಾಗವಹಿಸಿದ್ದೆ. ನಾನು ಇಲ್ಲಿ ಸ್ವತಂತ್ರವಾಗಿರಲು ಕಲಿತೆ. ನಾನು ಅನೇಕ ಸ್ನೇಹಿತರನ್ನು ಕೂಡ ಮಾಡಿದೆನನಗೆ ಓದುವ ಹವ್ಯಾಸ ನನ್ನ ತಾಯಿ ಯಿಂದ ಬಂದಿದೆ. ಬಹಳ ವರ್ಷಗಳಿಂದ ನಮ್ಮ ಮನೆಯಲ್ಲಿ ಪುಸ್ತಕ ಗಳನ್ನು ಸಂಗ್ರಹಿಸಿದ್ದಾರೆ. ನಮ್ಮ ಮನೆಯಲ್ಲಿ ಒಂದು ಸಣ್ಣ ಗ್ರಂಥಾಲಯವಿದೆ. ಇದರಲ್ಲಿ ಪೌರಾಣಿಕ,ಹಾಸ್ಯ, ಸಾಹಿತ್ಯ ಮತ್ತು ವಿವಿಧ ರೀತಿಯ ಪುಸ್ತಕ ಇದೆ.

ಮುಂದಿನ ಆಸಕ್ತಿಯ ಕ್ಷೇತ್ರಗಳು ನಾನು ವಿದೇಶದಲ್ಲಿ ನನ್ನ ಉನ್ನತ ಶಿಕ್ಷಣವನ್ನು ಮಾಡಲು ಯೋಜಿಸುತ್ತಿದ್ದೇನೆ. ಅದರ ನಂತರ ನಾನು ನನ್ನ ದೇಶಕ್ಕಾಗಿ ಕೆಲಸ ಮಾಡಲು ಬಯಸುತ್ತೇನೆ. ಅದಕ್ಕಾಗಿ ನಾನು ಉತ್ತಮ ಅಂಕಗಳನ್ನು ಪಡೆಯಲು ಮತ್ತು ಈ ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತೇನೆ. ನಾನು ವಿಧೇಯ ವಿದ್ಯಾರ್ಥಿಯಾಗಿ ಒಳ್ಳೆಯ ಹೆಸರುಗಳಿಸಲು ಶ್ರಮಿಸುತ್ತೇನೆ.