ಸದಸ್ಯ:ಸಗುಸಂತೋಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಳಗದ ಸದಸ್ಯರಿಗೆ ನಮಸ್ಕಾರಗಳು. ಕನ್ನಡಕ್ಕಾಗಿ ನುಡಿಸೇವೆ ಸಲ್ಲಿಸುತಿರುವ ಬಳಗದೊಂದಿಗೆ ಕೈ ಜೋಡಿಸುತ್ತಿರುವುದು ಸಂತಸ ತಂದಿದೆ.

ನನ್ನ ಸ್ವಂತ ಸ್ಥಳ ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ ಸಖರಾಯಪಟ್ಟಣ. ಹೆಚ್ಚಿನ ವರ್ಷಗಳು ಇದ್ದುದು ಮಾತ್ರ ಮೈಸೂರಿನಲ್ಲಿ. ಓದು ಹಾಸನ, ಮೈಸೂರು, ಹೈದರಾಬಾದುಗಳಲ್ಲಿ ನಡೆದವು. ಎನ್.ಐ.ಇ ಕಾಲೇಜಿನಲ್ಲಿ ಬಿ.ಇ ಪದವಿ ಪಡೆದೆ. ಕಳೆದ ೧೯ ವರ್ಷದಿಂದ ಬಾಷ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.

ಕನ್ನಡದ ಕಲಿಕೆ ತಾಯಿ ತಂದೆಯ ಅನುಗ್ರಹದಿಂದ ನೆಚ್ಚಿನ ವಿಷಯವಾಗಿತ್ತು. ಓದುವ ಹವ್ಯಾಸ ಚಂದಮಾಮ, ಬಾಲಮಿತ್ರದೊಂದಿಗೆ ಮೊದಲಾಯಿತು. ಇದು ಹೆಚ್ಚಿನ ಹರವು ಕಂಡದ್ದು ಹೈದರಾಬಾದಿನಲಿ. ಹಾಗೆ ಮುಂದುವರೆದ ಆಸಕ್ತಿ ಎಲ್ಲಾ ಬಗೆಯ ಕನ್ನಡ ಸಾಹಿತ್ಯದ ಓದಿನೆಡೆಗೂ ಹರಿಯಿತು. ಕಾವ್ಯಗಳ ಬಗ್ಗೆ ನನಗೆ ವಿಶೇಷ ಒಲವು. ಕೆಲವು ಕವನಗಳನ್ನು ಬರೆದಿರುವೆ.

ಕನ್ನಡ ಭಾಷೆಗೆ ನೀಡಬಹುದಾದ ಯಾವುದೆ ರೀತಿಯ ಸೃಜನಾತ್ಮಕ ಸೇವೆಗೆ ನಾನು ಸಿದ್ಧ. ಸಿರಿಗನ್ನಡಂ ಗೆಲ್ಗೆ.