ಸದಸ್ಯ:ರವಿರಾಜ್ ಸಾಗರ್
ಭೂಮಣ್ಣಿ ಬುಟ್ಟಿ ಚಿತ್ತಾರ
ಮಲೆನಾಡಿನ ಸಾಗರ ಸೊರಬ ತೀರ್ಥಹಳ್ಳಿ ,ಸಿದ್ದಾಪುರ ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ಮಾತ್ರ ಕಂಡು ಬರುವ ವಿಶಿಷ್ಟ ಜಾನಪದ ಚಿತ್ರ ಕಲೆ .ಇದು ಹಸೆ ಗೋಡೆ ಚಿತ್ತಾರ ಕಲೆಯಂತೆಯೇ ಹೆಚ್ಚು ರೇಖೆಗಳಲ್ಲಿ ಚಿತ್ರಿಸುವ ಹಲವು ಜ್ಯಾ ಮಿತಿಯ ಅಂಶಗಳನ್ನು ಒಳಗೊಂಡ ರೇಖಾ ಚಿತ್ತಾರವಾಗಿದೆ. ಬಹುತೇಕ ದೀವರು ಜನಾಂಗ ಇಂದಿಗೂ ಭೂಮಿ ಹುಣ್ಣಿಮೆಯಂದು ಆಚರಿಸುವ '' ಭೂಮಣ್ಣಿ ಹಬ್ಬಕ್ಕೆ ಎರಡು ಬುಟ್ಟಿಗಳಿಗೆ ಕೆಮ್ಮಣ್ಣು ಮೆತ್ತಿ , ಅಕ್ಕಿ ಹಿಟ್ಟಿನಿಂದ ಮಾಡಿದ ಬಿಳಿ ಬಣ್ಣ ಹಾಗು ಗುರಿಗೆ ಎಳ್ಳಿನಿಂದ ಮಾಡಿದ ಹಳದಿ ಬಣ್ಣದಿಂದ ಬಿವಿಸುತ್ತಾರೆ . ಇದು ಅತಿ ವಿಶಿಷ್ಟ ಚಿತ್ರ ಕಲಾ ಪ್ರಕಾರವಾಗಿದ್ದು ಇದರ ಬಗ್ಗೆ ,ಮೂಲದ ಬಗ್ಗೆ ಹೆಚ್ಚು ಅಧ್ಯಯನ ಆಗಬೇಕಿದೆ. ಮಲೆನಾಡಿನ ಹಸೆ ಚಿತ್ತಾರವು ಸಹ ಇದೆ ಪ್ರಕಾರದ ಚಿತ್ರ ಕಲೆಯಾಗಿದೆ .ಆದರೆ ಇದನ್ನು ನೋವಿದವ್ರು ವರ್ಲಿ ಕಲೆಯೆಂದು ಪರಿಗಣಿಸುತ್ತಿರುವುದು ಕಂಡುಬರುತ್ತಿದೆ. ಆದರೆ ಇದು ಪುರಾತನ ಆಚರಣೆಯ ಭಾಗವಾಗಿ ಈ ಕಲಾ ಪ್ರಕಾರ ನಡೆದುಕೊಂಡು ಬಂದಿದ್ದು ಅಲ್ಲಿನ ವರ್ಲಿ ಕಲೆಗಿಂತ ಕೊಂಚ ಭಿನ್ನವಾಗಿದೆ.ಹಸೆ ಗೋಡೆ ಚಿತ್ತಾರ ಹಾಗು ಭೂಮಿ ಬುಟ್ಟಿ ಚಿತ್ತಾರ ಕುರಿತು ಇನ್ನಷ್ಟು ಅಧ್ಯಯನ ಮಾಡಿ ಕರ್ನಾಟಕದ ವಿಶಿಷ್ಟ ಜಾನಪದ ಚಿತ್ರಕಲೆಯ ಮೂಲದ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿದೆ.ಇದೆ ರೀತಿಯ ಚಿತ್ತಾರ ಹೋಲುವಂತೆ ಕುಣಬಿಯವರು ,ದೀವರು ,ಮದುವೆ ಶಾಸ್ತ್ರಕ್ಕೆ ಹಸೆ ಚಿತ್ತಾರವನ್ನು ಬಿಡಿಸುವುದು ಗಮನಿಸಬೇಕಾದ ಅಂಶವಾಗಿದೆ.ಹಾಗಾಗಿ ವರ್ಲಿ ಕಲೆಗಿಂತ ಇದು ಭಿನ್ನವಾಗಿದೆ.ಅಲ್ಲಿನ ಚಿತ್ತಾರದ ಸಾಂಪ್ರದಾಯಿಕ ಉದ್ದೇಶಗಳು ಬೇರೆ ಬೇರೆ ಇವೆ.