ಸದಸ್ಯ:ಭವ
ಸ್ವ ಪರಿಚಯ
[ಬದಲಾಯಿಸಿ]ನಾನು ೧೯೯೮ ಜನವರಿ ೨೭ರಂದು ಪಾವಂಜೆಯ ಸಿರಿ ಮನೆಯಲ್ಲಿ ಜನಿಸಿದೆ. ನನ್ನೊಂದಿಗೆ ಜೊತೆಯಾಗಿ ಹುಟ್ಟಿದವಳು ನನ್ನ ಅಕ್ಕ ಅನು. ನನ್ನ ತಂದೆ ಡಾ.ಗಣೇಶ್ ಅಮೀನ್ ಹಾಗು ತಾಯಿ ಜಯಂತಿ. ತಂದೆ ಕನ್ನಡ ಉಪನ್ಯಾಸಕರು,ತಾಯಿ ಆಂಗ್ಲ ಭಾಷಾ ಉಪನ್ಯಾಸಕಿ. ತಂದೆಯವರದು ಕೃಷಿಕ ಕುಟುಂಬ.ಗದ್ದೆ,ತೋಟ ಎಲ್ಲಾ ಇರುವ ಕಾರಣ ಆ ಕೆಲಸಗಳ ಮಧ್ಯೆಯೇ ನಾನು ಬೆಳೆದೆ. ನಮ್ಮ ಮನೆಯಲ್ಲಿ ಯಾವಾಗಲು ಸಾಹಿತ್ಯದ ಕಾರ್ಯಕ್ರಮಗಳು ನಡೆಯುತ್ತಾ ಇದ್ದವು.ಹಾಗಾಗಿ ನನಗೂ ಸಾಹಿತ್ಯದ, ಸಂಗೀತದ, ಭರತನಾಟ್ಯದ, ಯಕ್ಷಗಾನದ ಹವ್ಯಾಸ ಬೆಳೆಯಿತು. ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಕ್ಕದ ಹೋಲಿ ಸ್ಪರಿಟ್ ಶಾಲೆಯಲ್ಲಿ ಮುಗಿಸಿ ಸುರತ್ಕಲ್ ನ ವಿದ್ಯಾದಾಯಿನಿಯಲ್ಲಿ ಪ್ರೌಢಶಾಲೆಗೆ ಸೇರಿದೆ. ಎರಡೂ ಕಡೆಯಲ್ಲಿಯೂ ಉತ್ತಮ ವಿದ್ಯಾಭ್ಯಾಸ ದೊರಕಿತು.ಪ್ರಾಥಮಿಕ ಶಾಲೆಯಲ್ಲಿ ಇರುವಾಗಲೇ ಭರತನಾಟ್ಯ ಜೂನಿಯರ್ ಪರೀಕ್ಷೆ ಹಾಗು ಪ್ರೌಢಶಾಲೆಯಲ್ಲಿ ಇರುವಾಗಲೇ ಭರತನಾಟ್ಯ ಸೀನಿಯರ್ ಪರೀಕ್ಷೆ ಬರೆದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದೆ.ಸಾಹಿತ್ಯ ಸಮ್ಮೇಳನಗಳ ಸಂದರ್ಭಗಳಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದೆ. ಹಾಗಾಗಿ ಪ್ರಾಥಮಿಕ ಹಂತದಲ್ಲಿಯೇ 'ಅನುಭವ' ಎಂಬ ಕವನ ಸಂಕಲನವನ್ನು ನಾವಿಬ್ಬರು ಜೊತೆಯಾಗಿ ಬರೆದು ಪ್ರಕಟಿಸಿದ್ದೆವು.
ನನ್ನ ಕಾಲೇಜು ಜೀವನ ಆರಂಭವಾದದು ಸುರತ್ಕಲ್ನ ಗೋವಿಂದದಾಸ ಕಾಲೇಜಿನಲ್ಲಿ.ಅಲ್ಲಿ ಎರಡು ಎರಡು ವರ್ಷದ ಪಿ.ಯು.ಸಿ ಸಂದರ್ಭದಲ್ಲಿ ಚೆನ್ನಾಗಿ ಓದುವ ಅವಕಾಶ ದೊರೆಯಿತು.ಅದೇ ಹೊತ್ತಿಗೆ ನಾನು ಭರತನಾಟ್ಯ ಸೀನಿಯರ್ ಹಾಗು ವಿದ್ವತ್ ಪೂರ್ವ ಪರೀಕ್ಷೆಗಳನ್ನು ಮುಗಿಸಿದ್ದೆ.ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡ ೯೬.೬ ಫಲಿತಾಂಶ ಬಂದಿರುತ್ತದೆ.ನಮಗಿಬ್ಬರಿಗೂ ಕಲೆಯಲ್ಲಿ,ಸಾಹಿತ್ಯದಲ್ಲಿ ಆಸಕ್ತಿ ಇದ್ದ ಕಾರಣ ತಂದೆ ತಾಯಿ ನಮ್ಮನ್ನು ವ ಶಿಕ್ಷಣಕ್ಕೆ ಒತ್ತಾಯ ಮಾಡದೆ ಪದವಿ ಕಾಲೇಜಿಗೆ ಸೇರಿಸಿದರು.ನನಗೂ ಅದೇ ಇಷ್ಟವಾಯಿತು.
ಈಗ ನಾನು ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ.ನನಗೆ ಅಲೋಶಿಯಸ್ ಪದವಿ ತರಗತಿಗಳು ತುಂಬಾನೆ ಇಷ್ಟವಾಗುತ್ತಿದೆ.ಮುಂದೆ ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸಿ ಬಿ.ಎಸ್ಸಿ ಮುಗಿಸಿ ಸ್ನಾತಕೋತ್ತರ ಪದವಿ ಗಳಿಸಿ ಉಪನ್ಯಾಸಕಿ ಆಗಬೇಕೆಂದಿದ್ದೇನೆ.ಅದರೊಂದಿಗೆ ಈಗಿನ ಹವ್ಯಾಸಗಳನ್ನು ಮುಂದುವರಿಸಬೇಕೆಂದಿದ್ದೇನೆ.