ಸದಸ್ಯ:ನರಸಿಂಹಪ್ಪ ಡಿ
ಗೋಚರ
ನೆಲ ಮಾಲಿನ್ಯ''ವು ಮಾನವನು ಬಳಸಿ ಎಸೆದ ಅಥವಾ ಉಪಯೋಗಿಸಿದ ರಸಾಯನಿಕಗಳು ನೈಸರ್ಗಿಕ ಮಣ್ಣಿನಲ್ಲಿ ಸೇರಿಕೊಂಡಾಗ,ಮಣ್ಣು ತನ್ನ ನೈಜ ಗುಣವನ್ನು ಕಳೆದುಕೊಳ್ಲುವುದಕ್ಕೆ ನೆಲ ಮಾಲಿನ್ಯ ಎನ್ನುತ್ತಾರೆ. ನೆಲ ಮಾಲಿನ್ಯವು ಅತಿ ಹೆಚ್ಚಾಗಿ ಕೈಗಾರಿಕೆಗಳ ತ್ಯಾಜ್ಯದಿಂದ,ಕೃಷಿಯಲ್ಲಿ ಅತಿ ಹೆಚ್ಚು ರಸಾಯನಿಕಗಳ ಬಳಕೆಯಿಂದ ಹಾಗೂ ವಿವಿಧ ರೀತಿಯ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದಿರುವುದರಿಂದ ಉಂಟಾಗುತ್ತದೆ. ನೆಲ ಮಾಲಿನ್ಯ ಉಂಟು ಮಾಡುವ ಪ್ರಮುಖ ರಸಾಯನಿಕಗಳೆಂದರೆ,ಪೆಟ್ರೋಲಿಯಂ ಉತ್ಪನ್ನಗಳು,ಕ್ರಿಮಿ ನಾಶಕಗಳು,ಸೀಸ,ಪಾಲಿಥೀನ್ ಇತ್ಯಾದಿಗಳು. ನೆಲ ಮಾಲಿನ್ಯದಿಂದ ಮಾನವ ಹಾಗೂ ಎಲ್ಲಾ ಜೀವಿಗಳ ಮೇಲೆ ನೇರ ಮತ್ತು ಪರೋಕ್ಷ ಪರಿಣಾಮ ಬೀರುತ್ತದೆ. ನೆಲ ಮಾಲಿನ್ಯವು ಜಲ ಮಾಲಿನ್ಯ,ವಾಯು ಮಾಲಿನ್ಯಗಳಿಗೂ ನೇರ ಮತ್ತು ಪರೋಕ್ಷ ಕಾರಣವಾಗಿದೆ.