ಸದಸ್ಯ:ಈರಣ್ಣ ಮೂಲೀಮನಿ
ಗೋಚರ
ಜಯ ಜಯ ಜಯ ಕನ್ನಡದೇವಿಯೇ//ಪ//
ಜಯ ಜಯ ಜಯ ಕನ್ನಡದೇವಿಯೇ ನಿನಗಿದೋ ಕನ್ನಡವುಲಿವ ಪುಷ್ಪ ಸಂತಸ ಹರಿಸುತ ಹಾಡುತ ವೈಭವ ಕಂಗಳು ಸುರಿಸಿದೆ ಆನಂದ ಭಾಷ್ಪ//೧//
ಶಿಲೆಯರಳಿಸಿತೋ ಬಾಲೆಯ ನರ್ತನ ಅಮರತ್ವದ ಕಲೆ ವಿಶ್ವದಿ ಮಾನ್ಯ ಪಾವನವೀ ನೆಲ ಸಿರಿ ಸಂಪದ ಜಲ ಕೃಷ್ಣೆ ತುಂಗೆ ಕಾವೇರಿಗೆ ಜನ್ಯ//೨//
ಕನ್ನಡ ದೀವಿಗೆ ಬೆಳಗಿದೆ ಭುವಿಗೆ ಕೋಗಿಲೆ ಹಾಡಿದೆ ಕವಿನುಡಿ ಧಾಟಿಗೆ ರಸ ಋಷಿ ನೀಡಿದ ಕಾವ್ಯದ ಕೊಡುಗೆ ಅಂದ ಚಂದ ಕನ್ನಡನುಡಿ ಸೃಷ್ಠಸೃಷ್ಠಿಗೆ//೩//
ಗುಡಿ ಗೋಪುರಗಳ ಸುಂದರ ಮಂದಿರ ಪುನರುತ್ಥಾನದ ಪುಣ್ಯದ ಆಗರ ಹಸಿರಿನ ಹೂಬನ ಮಲೆನಾಡಿನ ವನ ಸಾಗರದಲೆಗಳ ತೀರದ ತಾಣ//೪//
ಕನ್ನಡ ಕಸ್ತೂರಿಯ ಪರಿಮಳ ಹರಡಿದೆ ಎಲ್ಲೆಡೆ ಕನ್ನಡ ಸುಧೆಯ ಜಯ ಜಯ ಕನ್ನಡತಾಯ ಚರಣಕೆ ನಿನಗಿದೋ ಅರ್ಪಿತ ಕನ್ನಡ ಪುಷ್ಪ//೫//
ಕವಿ:ಈರಣ್ಣ ಮೂಲೀಮನಿ.